ವಾಷಿಂಗ್ಟನ್:
ಪ್ರೇಮಿಗಳ ದಿನಾಚರಣೆಗೆ ಏನೆಲ್ಲಾ ಸ್ಪರ್ಧೆಗಳನ್ನು ಆಯೋಜಿಸಬಹುದು ಎಂಬ ನಿಮ್ಮ
ಆಲೋಚನೆಗಳಿಗೆ ಸ್ವಲ್ಪ ಬ್ರೇಕ್ ಹಾಕಿ. ಏಕೆಂದರೆ ನಿಮ್ಮ ಯೋಚನೆಗೂ ಮೀರಿದ ಸ್ಪರ್ಧೆಯೊಂದು
ವಾಷಿಂಗ್ಟನ್ನ ಪ್ಲಾನೆಟ್ ಡಾಗ್ ಕಂಪೆನಿ ಆಯೋಜಿಸಿತ್ತು.
ಸ್ವಲ್ಪ ತರಲೆ ಎನಿಸುವ ''ಕೆನೈನ್ ಕಿಸ್ಸಿಂಗ್'' ಹೆಸರಿನ ಈ ಸ್ಪರ್ಧೆಯಲ್ಲಿ ನಾಯಿ ಹಾಗೂ ಮಾಲೀಕರ ಧೀರ್ಘ ಅದರ ಚುಂಬನವನ್ನು ಸವಾಲಾಗಿ ನೀಡಲಾಗಿತ್ತು. ಅತಿ ಹೆಚ್ಚು ಕಾಲ ಚುಂಬಿಸುವ ಮಾಲಿಕರಿಗೆ 75 ಅಮೆರಿಕನ್ ಡಾಲರ್ ಹಾಗೂ ಪ್ರಶಸ್ತಿ ಪತ್ರವನ್ನು ಬಹುಮಾನವಾಗಿ ನಿಗದಿಪಡಿಸಲಾಗಿತ್ತು.
45 ಸೆಕೆಂಡುಗಳ ಕಾಲ ಚುಂಬಿಸಿದ ಬಿಯು ಮತ್ತು ಆತನ ನಾಯಿ ಈ ವರ್ಷದ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು. ಮತ್ತೊಬ್ಬ ಬಹುಮಾನಿತರು ತಮ್ಮ ನೆಚ್ಚಿನ ಶ್ವಾನವನ್ನು 11 ಸೆಕೆಂಡುಗಳ ಕಾಲ ಚುಂಬಿಸಿದರು. ಅಂದಹಾಗೆ ವಿಶ್ವ ಪ್ರೇಮಿಗಳ ದಿನಾಚರಣೆ ದಿನದ ಅಂಗವಾಗಿ ಈ ಸ್ಪರ್ಧೆ ಆಯೋಜಿಸಲಾಗಿತ್ತು. ನೂರಾರು ಮಂದಿ ಈ ತುಂಟ ಚುಂಬಕ್ಕೆ ಸಾಕ್ಷಿಯಾದರು.

ಕೃಪೆ : ವಿಜಯ ಕರ್ನಾಟಕ