ಹೆಂಗಸರ
ವಾಸನೆ ಬಂದರೆ ಸಾಕು, ಪುರುಷರ ಮನಸ್ಸು ಅಲ್ಲೋಲ ಕಲ್ಲೋಲವಾಗುತ್ತದೆ, ತಲೆ
ತಿರುಗಿದವರಂತೆ ಆಡುತ್ತಾರೆ ಎನ್ನುವುದು ಪುರುಷರ ಮೇಲಿನ ಸಾಮಾನ್ಯ ಆರೋಪ. ಇದು ಸತ್ಯವೂ
ಹೌದು. ಅದೇ ಪುರುಷರು ಸೆಕ್ಸ್‌ಗಾಗಿ ಏನು ಮಾಡಲೂ ಸಿದ್ಧವಾಗಿರುತ್ತಾರೆ ಎಂದು
ಸಮೀಕ್ಷೆಯೊಂದು ಹೇಳಿದೆ.
-
ಲಂಡನ್ ಮೂಲದ ವೆಬ್‌ಸೈಟ್ ಈ ಸಮೀಕ್ಷೆ ನಡೆಸಿದ್ದು, ಮಿಲನ ಮಹೋತ್ಸವಕ್ಕೆ ಹಾತೊರೆಯುವ ಪುರುಷರನ ಮನಸ್ಥಿತಿಯನ್ನು ಬಿಚ್ಚಿಟ್ಟಿದೆ. ಈ ವಿಚಾರದಲ್ಲಿ ಸಮೀಕ್ಷೆ ನಡೆಸುವಾಗ ಮಹಿಳೆಯರನ್ನೂ ಗಣನೆಗೆ ತೆಗೆದುಕೊಳ್ಳಲಾಗಿದೆ. ಆ ಪ್ರಕಾರ ಪುರುಷರು ಮಹಿಳೆಗಾಗಿ, ಏನನ್ನೂ ಮಾಡಲು ಸಿದ್ಧರಿದ್ದರೆ, ಅಂತಹ ಪುರುಷರ ಸಂಬಂಧ ಮುರಿದುಬೀಳುವುದು ಕಡಿಮೆ. ಆದರೆ ಮಹಿಳೆಯರು ಹಾಗಿಲ್ಲ. ತನಗೆ ನಿರ್ದಿಷ್ಟ ಪುರುಷನ ಸಾಮೀಪ್ಯ ಸಮಾಗಮ ಬೇಕೆಂದರೆ, ಪುರುಷರಷ್ಟು ಹೋರಾಟಕ್ಕೆ, ಪರಿಸ್ಥಿತಿ ನಿಭಾಯಿಸಲು ಸಜ್ಜಾಗುವುದಿಲ್ಲವಂತೆ. ಪ್ರಮುಖವಾಗಿ ಪುರುಷರು ಮಹಿಳೆಯರನ್ನು ಒಲಿಸಿ ಕೊಳ್ಳಲು ಏನು ಬೇಕಾದರೂ ಎದುರು ಹಾಕಿಕೊಳ್ಳುಲು ಸಿದ್ದರಿರುತ್ತಾರೆ. ಇದು ಅವರ ಮನಸ್ಥಿತಿಯಲ್ಲೇ ಅಡಕವಾಗಿರುತ್ತದೆ. ಇಂಥವರನ್ನೇ ಮಹಿಳೆಯರೂ ಹೆಚ್ಚು ಇಷ್ಟ ಪಡುತ್ತಾರೆ.ಸೆಕ್ಸ್‌ನಲ್ಲೂ ಪುರುಷರು, ಇದೇ ಜಾಯಮಾನ ಹೊಂದಿರುತ್ತಾರೆ. ಇದಕ್ಕಾಗಿ ಯಾವುದೇ ಅಡೆತಡೆಗಳನ್ನು ಭೇದಿಸಲೂ ಪುರುಷರು ಸಿದ್ಧರಿರುತ್ತಾರೆ. ಮುಂದುವರಿದ ರಾಷ್ಟ್ರಗಳಲ್ಲಿ ಇದು ಹೆಚ್ಚು ಎಂದು ಸಮೀಕ್ಷೆ ಹೇಳಿದೆ.
ಫಲಿತಗಳು...
* ಸೆಕ್ಸ್‌ಗಾಗಿ ಯಾವುದೇ ಅಡೆತಡೆಗಳನ್ನು ಎದುರಿಸಲು ಪುರುಷರು ಸಿದ್ಧ
* ಮಹಿಳೆಯರನ್ನು ಒಲಿಸಿಕೊಳ್ಳಲು ಕಷ್ಟಗಳನ್ನು ಎದುರುಹಾಕಿಕೊಳ್ಳುವ ಪುರುಷರದು
* ನಮಗಾಗಿ ಏನು ಬೇಕಾದರೂ ಮಾಡಬಲ್ಲ ಪುರುಷರೆಂದರೆ ನಮಗೆ ಇಷ್ಟ - ಮಹಿಳೆಯರು
ಕೃಪೆ : Udayavani | Aug 10, 2013