Showing posts with label ಆರೋಗ್ಯ. Show all posts
Showing posts with label ಆರೋಗ್ಯ. Show all posts

Saturday, March 8, 2014

ರಕ್ತಸಂಬಂಧಿಗಳೊಳಗಿನ ಮದುವೆಗೆ ಚಿಂತೆ ಬೇಡ !

ನೀವು ಸಾಮಾಜಿಕ ಕಾರಣಕ್ಕಾಗಿ ರಕ್ತಸಂಬಂಧಿಗಳೊಳಗಿನ ವಿವಾಹಕ್ಕೆ 'ಬೇಡ' ಅನ್ನಬಹುದು. ಆದರೆ ಇವರೊಳಗಿನ ವಿವಾಹ, ವಿಜ್ಞಾನಿಗಳ ಪ್ರಕಾರ ಯಾವುದೇ ತಪ್ಪಲ್ಲ.
ಒಂದುಕಾಲದಲ್ಲಿ ಇಂತಹ ವಿವಾಹ ಯುರೋಪ್‌ನಲ್ಲಿ ಸಹಜ ಎಂಬಂತಿತ್ತು. ಅದು ಸಹ ಕುಲೀನ ಮನೆತನಗಳಲ್ಲಿ ಇಂತಹ ವಿವಾಹಗಳು ಹೆಚ್ಚು ನಡೆಯುತ್ತಿದ್ದವು. ಚಾರ್ಲ್ಸ್ ಡಾರ್ವಿನ್ ತನ್ನ ಮಾವನ ಮಗಳು ಎಮ್ಮಾ ವೆಜ್‌ವುಡ್‌ರನ್ನು ವಿವಾಹವಾಗಿದ್ದರು. ಆದರೆ 19ನೆ ಶತಮಾನದಲ್ಲಿ ಈ ಚಿತ್ರಣ ಬದಲಾಯಿತು. ಇವರಲ್ಲಿ ಜನಿಸುವ ಮಕ್ಕಳು ದೈಹಿಕ ನ್ಯೂನ್ಯತೆ ಹೊಂದಿರುತ್ತಿದ್ದ ಕಾರಣ ಇಂತಹ ವಿವಾಹಗಳ ಸಂಖ್ಯೆ ಕುಸಿಯತೊಡಗಿತು.
ಆದರೆ ಈ ಕುರಿತು ಅಧ್ಯಯನ ನಡೆಸಿರುವ ಅಂತಾರಾಷ್ಟ್ರೀಯ ತಂಡ ಒಂದು, ಇಂತಹ ದಂಪತಿಗಳಿಗೆ ಜನಿಸುವ ಮಕ್ಕಳಲ್ಲಿ ನ್ಯೂನ್ಯತೆಯ ಅಪಾಯವು ನಲ್ವತ್ತರ ಹರೆಯದಲ್ಲಿ ಗರ್ಭವತಿಯಾಗುವ ಮಹಿಳೆಯರಿಗೆ ಜನಿಸುವ ಮಕ್ಕಳಿಗಿಂತ ಕಡಿಮೆ ಪ್ರಮಾಣದ್ದಾಗಿದೆ ಎಂದು 'ಪಬ್ಲಿಕ್ ಲೈಬ್ರರಿ ಆಫ್ ಸೈನ್ಸ್' ಎಂಬ ಜರ್ನಲ್ ವರದಿ ಮಾಡಿದೆ.
ನಲ್ವತ್ತರ ಹರೆಯದ ಮಹಿಳೆಯರು ಮಗು ಹಡೆಯುವುದಕ್ಕೆ ಪಶ್ಚಾತ್ತಾಪ ಪಡುವುದಿಲ್ಲವೆಂದಾದರೆ, ರಕ್ತಸಂಬಂಧಿಗಳು ವಿವಾಹವಾಗುವುದಕ್ಕೂ ಇದೇ ಅನ್ವಯವಾಗುತ್ತದೆ ಎಂದು ಮೆಸಾಚುಸೆಟ್ಸ್ ವಿಶ್ವವಿದ್ಯಾನಿಲಯದ ಪ್ರೊ. ಡೀನ್ ಪೌಲ್ ಹೇಳಿದ್ದಾರೆ. ಅವರು ಈ ಅಧ್ಯಯನ ತಂಡದ ನೇತೃತ್ವ ವಹಿಸಿದ್ದರು.
ರಕ್ತಸಂಬಂಧಿಗಳಲ್ಲಿ ಜನಿಸುವ ಮಕ್ಕಳಲ್ಲಿ ನ್ಯೂನ್ಯತೆಯ ಸಂಭಾವ್ಯತೆಯು ಶೇ.2ರಷ್ಟು ಹೆಚ್ಚಿದೆ. ಆದರೆ 40ರ ಹರೆಯದ ಮೇಲಿನ ಮಹಿಳೆಯರಲ್ಲಿ ಜನಿಸುವ ಮಕ್ಕಳಲ್ಲಿ ಈ ಅಪಾಯದ ಸಂಭಾವ್ಯತೆಯು ಶೇ 4.4ರಷ್ಟಿದೆ.
ನಲ್ವತ್ತು ವಯಸ್ಸಿನ ಮಹಿಳೆಯರು ಮಕ್ಕಳು ಹಡೆಯುವಲ್ಲಿ ಇಂತಹುದೇ ಅಪಾಯವನ್ನು ಎದುರಿಸುತ್ತಿರುವಾಗ, ಅಂತಹವರು ಮಕ್ಕಳನ್ನು ಹಡೆಯಬಾರದು ಎಂದು ಯಾರೂ ಸಲಹೆ ನೀಡುವುದಿಲ್ಲ ಎಂದು ತಂಡದ ಸದಸ್ಯ ನ್ಯೂಜಿಲ್ಯಾಂಡಿನ ಒಟಾಗೊ ವಿಶ್ವವಿದ್ಯಾನಿಲಯದ ಪ್ರೋ. ಹಮೀಶ್ ಸ್ಪೆನ್ಸರ್ ಅವರು ಹೇಳಿದ್ದಾರೆ.
ರಕ್ತಸಂಬಂಧಿಗಳಲ್ಲಿ ಹುಟ್ಟುವ ಮಕ್ಕಳು ದೈಹಿಕ ನ್ಯೂನತೆಗಳನ್ನು ಹೊಂದುತ್ತವೆ ಎಂಬ ಹಿನ್ನೆಲೆಯಲ್ಲಿ ರಕ್ತಸಂಬಂಧಿಗಳಲ್ಲಿ ಮದುವೆ ಸೂಕ್ತವಲ್ಲ ಎಂಬ ಹಿನ್ನೆಲೆಯಲ್ಲಿ ಇಂತಹ ವಿವಾಹಗಳಿಗೆ ಉತ್ತೇಜನ ನೀಡಲಾಗುತ್ತಿರಲಿಲ್ಲ. 
ಕೃಪೆ : ವೆಬ್ ದುನಿಯಾ ಕನ್ನಡ : 17 ಸೆಪ್ಟೆಂಬರ್ 2013

Saturday, July 6, 2013

ಒಪ್ಪಿಗೆ ಎಂಬ ಕೆಟ್ಟ ಚಟಕ್ಕೆ ಬಲಿಯಾಗಿದ್ದೀರಾ?


ಒಪ್ಪಿಗೆ ಎಂಬ ಕೆಟ್ಟ ಚಟಕ್ಕೆ ಬಲಿಯಾಗಿದ್ದೀರಾ?
Written by: ಮಾಧವ, ಮೈಸೂರು
 
 
ಕೆಲವರಿರುತ್ತಾರೆ. ತಮ್ಮ ಇಡೀ ಜೀವನವನ್ನು ಮೂರು ಅಕ್ಷರಗಳ ಸೆರೆಮನೆಯಲ್ಲಿ ಕಳೆದಿರುತ್ತಾರೆ. ಆ ಸೆರೆಮನೆಯೇ ಒಪ್ಪಿಗೆ! ನಮ್ಮ ಸಮಾಜದಲ್ಲಿ ನಾವು ಸ್ವಾಭಾವಿಕವಾಗಿ ಸಂತೋಷವಾಗಿರುವ ಪುಟಾಣಿಗಳನ್ನು ಮೆಚ್ಚುಗೆಗಾಗಿ ಚಡಪಡಿಸುವ ಯಂತ್ರಗಳನ್ನಾಗಿ ಸಾಕುತ್ತೇವೆ. ಇಂತಹ ಮಕ್ಕಳು ದೊಡ್ಡವರಾದ ಮೇಲೆ ಈ ಮೆಚ್ಚುಗೆಯ ಚಪಲ ವಿಕಾರವಾದ ರೂಪವನ್ನು ತೆಗೆದುಕೊಳ್ಳುತ್ತದೆ.
ರಾಜೇಶನಿಗೆ ಭೂಮಿಯ ಮೇಲಿರುವ ಎಲ್ಲಾ ವಿಷಯಗಳ ಬಗ್ಗೆ ಒಂದು ಅಭಿಪ್ರಾಯವಿದೆ. ಆದರೆ ಭಿನ್ನಾಭಿಪ್ರಾಯವಿರುವ ಒಬ್ಬ ವ್ಯಕ್ತಿ ಅವನಿಗೆ ಸಿಗಲಿ! ಥಟ್ಟನೆ ತನ್ನ ಅಭಿಪ್ರಾಯವನ್ನು, ಅವರನ್ನು ಸಮಾಧಾನಗೊಳಿಸುವುದಕ್ಕಾಗಿ, ಬದಲಿಸುತ್ತಾನೆ. ಅಂದರೆ ರಾಜೇಶನೆಂಬ ವ್ಯಕ್ತಿಯು ಇಲ್ಲವೇ ಇಲ್ಲ. ಇರುವುದು ಅನ್ಯರ ಕ್ಷಣಿಕ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವ ಕನ್ನಡಿ ಮಾತ್ರ! ರಾಜೇಶನು ಸಂತೋಷವಾಗಿರುವನೆ? ಊಹುಂ. ಭಯ, ನಾಚಿಕೆ ಮತ್ತು ಹೇಡಿತನ ಅವನ ಶಾಶ್ವತ ಸ್ನೇಹಿತರು.
ಸುಮಂತನು ಯಾವ ಕೆಲಸವನ್ನೂ ಅದರಿಂದ ಸಿಗುವ ಸಂತೋಷಕ್ಕಾಗಿ ಮಾಡುವುದಿಲ್ಲ. ಒಂದು ಕೆಲಸದಿಂದ ತನಗೆ ಪರರಿಂದ ಎಷ್ಟು ಒಪ್ಪಿಗೆ ಅಂಕಗಳು ಸಿಗುತ್ತವೆ ಎಂದು ಲೆಕ್ಕ ಹಾಕಿಕೊಂಡು ಕೆಲಸಕ್ಕಿಳಿಯುತ್ತಾನೆ. ವೈಯಕ್ತಿಕ ಜೀವನದಲ್ಲಂತೂ ಸುಮಂತನು ಮೆಚ್ಚುಗೆ ಚಟದ ಅರಸ. ತಂದೆ-ತಾಯಿಗೆ ಅವನು ಶರಣಪುತ್ರ, ಗೆಳತಿಗೆ ಶ್ರೀರಾಮಚಂದ್ರ, ಮತ್ತು ಬಂಧುಗಳಿಗೆ ಧರ್ಮರಾಜ! ಇವುಗಳು ನಟನಾ ಭಯಂಕರ ಸುಮಂತನು ಒಪ್ಪಿಗೆಗಾಗಿ ನಿರ್ವಹಿಸುವ ಪಾತ್ರಗಳೇ ಹೊರತು, ಹೃದಯಪೂರ್ವಕ ಸಂಬಂಧಗಳಲ್ಲ. ಸುಮಂತನಿಗೆ ಮನಸ್ಸಿನಲ್ಲಿ ಅಶಾಂತಿ ಮತ್ತು ಮೆಚ್ಚುಗೆ ಸಿಗದಿದ್ದಾಗ ಅಗಾಧವಾದ ಹತಾಶೆ ಅನುಭವಿಸುತ್ತಾನೆ.

ಸ್ನೇಹಿತರೇ, ನೀವೂ ಕೂಡ ಒಪ್ಪಿಗೆ ಎಂಬ ಕೆಟ್ಟ ಚಟಕ್ಕೆ ಬಲಿಯಾಗಿದ್ದೀರಾ? ಹಾಗಾದರೆ ಎಚ್ಚೆತ್ತುಕೊಳ್ಳಿ. ಈ ಕೆಳಗಿನ ತಂತ್ರಗಳು ನಿಮ್ಮನ್ನು ಮಂಜೂರಾತಿಯ ಚಕ್ರವ್ಯೂಹದಿಂದ ಹೊರಬರುವ ವಿಧಾನವನ್ನು ತೋರುತ್ತವೆ:
* ಮೊದಲನೆಯದಾಗಿ, ಕೂತಲ್ಲಿ ನಿಂತಲ್ಲಿ ಕ್ಷಮಾಪಣೆ ಕೇಳುವುದನ್ನು ಬಿಟ್ಟು ಬಿಡಿ. ಅತಿಯಾದ ಕ್ಷಮೆಯಾಚಿಸುವಿಕೆ ಒಪ್ಪಿಗೆ ಚಟದ ನೀಚಾವತಾರ. ಕೆಲವು ಸಂದರ್ಭಗಳಲ್ಲಿ ನಿಮ್ಮ ವರ್ತನೆ ನಿಮಗೇ ಹಿಡಿಸದಿರಬಹುದು. ಆಗ, "ನನ್ನ ನಡವಳಿಕೆ ಸರಿಯಾಗಿರಲಿಲ್ಲ. ನನ್ನ ವರ್ತನೆಯನ್ನು ನಾನು ಸರಿಪಡಿಸುತ್ತೇನೆ" ಎಂದು ಘೋಷಿಸಿ, ಆ ದಿಕ್ಕಿನಲ್ಲಿ ಕ್ರಮ ತೆಗೆದುಕೊಳ್ಳಿ.
* ಮುಂದಿನ ಬಾರಿ ಯಾರಾದರು ನಿಮ್ಮನ್ನು ವೈಯಕ್ತಿಕವಾಗಿ ನಿಂದಿಸಿದಲ್ಲಿ, "ಏನೊಲೈ.... ", ಎಂದು ಪಂಚೆ ಕಟ್ಟಿಕೊಂಡು ಜಗಳಕ್ಕಿಳಿಯುವ ಮುನ್ನ, ಏನೂ ಹೇಳದೆ ಸುಮ್ಮನ್ನಿರುವುದನ್ನು ಪ್ರಯತ್ನಿಸಿ ನೋಡಿ. ನಿಂದನೆಯ ಸಮ್ಮುಖದಲ್ಲಿ ನೀವು ವಾಗ್ಯುದ್ಧಕ್ಕೆ ಇಳಿದರೆ, ನೀವು ನಿಮ್ಮ ಅಭಿಪ್ರಾಯಕ್ಕಿಂತ ಅನ್ಯರ ಅನಿಸಿಕೆಗಳಿಗೆ ಹೆಚ್ಚು ಪ್ರಾಮುಖ್ಯತೆ ಕೊಡಿತ್ತೀರಿ ಎಂದರ್ಥ.
* ಕೆಲವು ಕುಟುಂಬ ಸದಸ್ಯರು ಶುಭಕಾರ್ಯಗಳಿಗೆ ಬರುವವರ "ಅಟೆಂಡೆನ್ಸ್" ಹಾಕುವುದರಲ್ಲಿ ನಿಸ್ಸೀಮರು. ನೀವು ಹೋಗದಿದ್ದರೆ, ನಿಮ್ಮ ಆಯ್ಕೆ-ಸಂದರ್ಭಗಳನ್ನು ಲೆಕ್ಕಿಸದೆ, ಕೊಂಕಾಗಿ ಮಾತಾಡುತ್ತಾರೆ. ಇಂತಹ ಜನರ ಸಂಬಂಧ ನಿಮಗೆ ನಿಜವಾಗಿಯೂ ಬೇಕಾ? ಯೋಚಿಸಿ.
* ಉಡುಪು ಅಥವಾ ಇತರ ಖಾಸಗಿ ವಸ್ತುಗಳನ್ನು ಖರೀದಿಸುವ ಮುನ್ನ ಸರ್ವಾಧಿಕಾರಿಗಳನ್ನು ಕೇಳಬೇಡಿ. ನಿಮ್ಮ ಆಯ್ಕೆಯ ವಸ್ತುವನ್ನು ಜಯ್ ಎಂದು ಬುಟ್ಟಿಗೆ ಹಾಕಿಕೊಳ್ಳಿ. ಆರ್ಥಿಕ ಅವಲಂಬನದಿಂದ ನೀವು ಇದನ್ನು ಮಾಡಲಾಗದಿದ್ದರೆ, ನಿಮಗೆ ಇಷ್ಟವಾದ ಒಂದು ಸೃಜನಾತ್ಮಕ ವೃತ್ತಿಯ ಮೂಲಕ ಹಣ ಸಂಪಾದನೆ ಪ್ರಾರಂಭಿಸಿ. ಇದಲ್ಲದೆ, ಯೋಚಿಸೋಕೆ, ಮಾತನಾಡೋಕೆ, ಕುಳಿತುಕೊಳ್ಳೋಕೆಲ್ಲಾ ಅನುಮತಿ ಕೇಳಬೇಡಿ. ಮಾನವೀಯ ಹಕ್ಕುಗಳನ್ನು ತ್ಯಜಿಸಿದ ಗುಲಾಮರು ಮಾತ್ರ ಹಣಕ್ಕೆ ಮತ್ತು ಅನುಮತಿಗೆ ಬೇಡಬೇಕು.
* ಮುಂದಿನ ಬಾರಿ ಒಂದು ಸಂವಾದದಲ್ಲಿ ನೀವು ಎಷ್ಟು ಬಾರಿ ಬಡಾಯಿ ಕೊಚ್ಚಿಕೊಳ್ಳುತ್ತೀರಿ ಎಂಬುದನ್ನು ಪರಿಶೀಲಿಸಿ. ಹೆಮ್ಮೆಯಾಗುವ ನಿಮ್ಮ ಒಂದು ಸಾಧನೆಯ ಅನುಭವವನ್ನು ಬೇರೆಯವರೊಂದಿಗೆ ಹಂಚಿಕೊಳ್ಳಬೇಕೆಂದರೆ, ಖಂಡಿತ ಅದನ್ನು ಹಂಚಿಕೊಳ್ಳಿ. ಆದರೆ, ಒಮ್ಮೊಮ್ಮೆ ನಿಮ್ಮ ಸಾಧನೆಯನ್ನು ಬೇರೆಯವರು ಹೊಗಳಬೇಕೆಂಬ ಕೆಟ್ಟ ಚಡಪಡಿಕೆ ಮೈಮೇಲೆ ಬಂದುಬಿಡುತ್ತದೆ. ಇಂತಹ ಸಂದರ್ಭದಲ್ಲಿ, ನೀವು ಅನಿವಾರ್ಯವಾಗಿ ಕೊಚ್ಚಿಕೊಳ್ಳಲೇಬೇಕಾದ ವಿಷಯವನ್ನು ಅರ್ಧ ಗಂಟೆ ಯಾರಿಗೂ ಹೇಳಬೇಡಿ. ದೇಹದ ಬಡಾಯಿಯ ಅಬ್ಬರ ಸಾಮಾನ್ಯವಾಗಿ ಸ್ವಲ್ಪ ಸಮಯದ ನಂತರ ಕ್ಷೀಣಿಸುತ್ತದೆ.
* "ವಿಶ್ವದಲ್ಲಿರುವ ಎಲ್ಲಾ ಜೀವಿಗಳೂ ನನ್ನನ್ನು ಅರ್ಥ ಮಾಡಿಕೊಳ್ಳಬೇಕು!" ಎಂಬ ಹಾಸ್ಯಾಸ್ಪದ ಆಸೆಗೆ ಇಂದೇ ವಿದಾಯ ಹೇಳಿ ಹೊರಗೋಡಿಸಿ. ಒಂದು ಸರಳ ಸತ್ಯವೆಂದರೆ ಅನೇಕ ಜನರು ನಿಮ್ಮ ಭಾವನೆ, ವರ್ತನೆ, ಕಲ್ಪನೆಗಳನ್ನು ಅರ್ಥ ಮಾಡಿಕೊಳ್ಳುವುದಿಲ್ಲ. ಪ್ರತ್ಯೇಕ ಅಸ್ತಿತ್ವವನ್ನು ಅನುಭವಿಸುವ ಮಾನವ ಜಾತಿಯಲ್ಲಿ ಇದು ಸಹಜ. ಈ ಸತ್ಯವನ್ನು ನೀವು ಎಷ್ಟು ಬೇಗ ಅರ್ಥ ಮಾಡಿಕೊಳ್ಳುವಿರೋ, ಅಷ್ಟು ಪ್ರಮಾಣದ ನೆಮ್ಮದಿ ನಿಮ್ಮದಾಗುವುದು.
ಹೀಗೆಲ್ಲಾ ಅಂದ ಮಾತ್ರಕ್ಕೆ ನಿಮ್ಮೆಡೆಗೆ ಬರುವ ಮೆಚ್ಚುಗೆಯನ್ನು ನೀವು ತಿರಸ್ಕರಿಸಬೇಕು ಎಂದರ್ಥವಲ್ಲ. ಹಿತೈಷಿಗಳ ಪ್ರಶಂಸೆಗೆ ನೀವು ಒಳಗಾದಾಗ ಒಂದು ಪುಟ್ಟ ಧನ್ಯವಾದದ ಮೂಲಕ ಅವರ ಪ್ರೀತಿಯ ಮಾತುಗಳನ್ನೂ ಸ್ವೀಕರಿಸಿ. ಸಂತೋಷ ಪಡಿ. ಒಪ್ಪಿಗೆ ಮತ್ತು ಮೆಚ್ಚುಗೆ ಜೀವನದ ಸಿಹಿತಿಂಡಿಗಳು ಎಂಬುದನ್ನು ಇಲ್ಲಿ ನಿರಾಕರಿಸಲಾಗಿಲ್ಲ. ಆದರೆ, ಇವುಗಳು ನಿಮ್ಮ ಜೀವನದ ಸ್ತಂಭಗಳಾಗಿ ಬಿಟ್ಟರೆ, ನಿಮ್ಮ ಆತ್ಮಶಕ್ತಿ ಬಹುಬೇಗ ಕುಸಿದು ಬೀಳುತ್ತದೆ. ಆತ್ಮವಿಶ್ವಾಸಿಗಳಾದ ನೀವು ಇದಕ್ಕೆ ಅವಕಾಶ ಮಾಡಿಕೊಡುವುದಿಲ್ಲ, ಅಲ್ಲವೇ?
ಕೃಪೆ : ಒನ್ ಇಂಡಿಯಾ

Sunday, December 16, 2012

ಪಿತ್ಥಕೋಶದಲ್ಲಿರುವ ಕಲ್ಲಿನಿಂದ ಮುಕ್ತಿ ಹೇಗೆ ?

 
Posted by: Reena        : Tuesday, December 11, 2012,
 
ಪಿತ್ಥಕೋಶದಲ್ಲಿ ಬೆಳೆಯುವ ಕಲ್ಲುಗಳು ಸಣ್ಣದಾಗಿರುತ್ತವೆ ಹಾಗೂ ಇವು ಕಾಲಕಾಲಕ್ಕೆ ಬೆಳೆಯುತ್ತವೆ. ಇದು ಬೆಳೆಯಲು ತುಂಬಾ ವರ್ಷಗಳೇ ಬೇಕು. ಪಿತ್ಥಕೋಶದಲ್ಲಿ ಕಲ್ಲು ಬೆಳೆಯುವುದು ಬಹುತೇಕ ಸಾಮಾನ್ಯ ಸಂಗತಿ. ಬಹುತೇಕವಾಗಿ ಪಿತ್ಥಕೋಶದಲ್ಲಿ ಕಲ್ಲು ಬೆಳೆದಾಗ ಯಾವುದೇ ದೈಹಿಕ ಚಿಹ್ನೆ ಕಾಣಿಸಿಕೊಳ್ಳುವುದಿಲ್ಲ. ಸರಾಸರಿ ಶೇಕಡಾ ೧೦ರಷ್ಟು ಮಾತ್ರ ಪಿತ್ಥಕೋಶದಲ್ಲಿ ಕಲ್ಲು ಬೆಳೆದಾಗ ಸಿಸ್ಟಿಕ್‌ನ್ನು ಅಥವಾ ಸಾಮಾನ್ಯ ಪಿತ್ಥರಸ ನಾಳದ ಚಲನೆಯನ್ನು ನಿಲ್ಲಿಸುತ್ತದೆ. ಇದರಿಂದಾಗಿ ಕಿಬ್ಬೊಟ್ಟೆಯ ನೋವು, ಜಾಂಡಿಸ್‌, ವಾಕರಿಕೆ ಮತ್ತು ಜ್ವರ ಬರುವ ಸಾಧ್ಯತೆಗಳಿರುತ್ತವೆ. ಈ ಲಕ್ಷಣಗಳು ಕಂಡುಬಂದಾಗಿ ಪಿತ್ಥಕೋಶದಲ್ಲಿನ ಕಲ್ಲುಗಳನ್ನು ಸರ್ಜರಿ ಮೂಲಕ ತೆಗೆಯುವುದು ಅಗತ್ಯವಾಗುತ್ತದೆ.
ಬಹುತೇಕ ಜನರಲ್ಲಿ ಕಿಬ್ಬೊಟ್ಟೆಯ ಅಲ್ಟ್ರಾಸೌಂಡ್‌ ಪರೀಕ್ಷೆ ನಡೆಸಿದಾಗ ಕಲ್ಲುಗಳು ಕಾಣಿಸಿಬಿಡುತ್ತವೆ. ಹೀಗೆ ತಿಳಿದು ಬಂದಾಗ ಯಾವ ಆಹಾರವನ್ನು ಅವರು ದೂರವಿಡಬೇಕು ಮತ್ತು ನೈಸರ್ಗಿಕವಾಗಿ ಆಹಾರದಲ್ಲಿ ನಿಯಂತ್ರಣ ಸಾಧಿಸಿ ಪಿತ್ಥಕೋಶದ ಕಲ್ಲನ್ನು ನಿವಾರಿಸಿಕೊಳ್ಳಬೇಕು ?

ಸೂಚನೆಗಳು

1. ಪ್ರಾಣಿಗಳ ಉತ್ಪನ್ನವನ್ನು ತಿನ್ನಬೇಡಿ. ಮಾಂಸ, ಬೆಣ್ಣೆ ಮತ್ತು ಸಂಸ್ಕರಿತ ಕೊಬ್ಬಿನಂಶವನ್ನು ಹೊಂದಿರುವ ಹಾಲಿನ ಎಲ್ಲಾ ಉತ್ಪನ್ನಗಳನ್ನೂ ದೂರವಿಡಿ. ಇದು ಪಿತ್ಥಕೋಶದಲ್ಲಿ ಕಲ್ಲು ಬೆಳೆಯಲು ಮತ್ತು ಪಿತ್ಥಕೋಶದ ಸಮಸ್ಯೆಗೆ ಕಾರಣವಾಗುತ್ತದೆ.

2. ಕೊಬ್ಬಿನಂಶ ಹೊಂದಿರುವ ಆಹಾರವನ್ನು ಮುಟ್ಟಲೂಬೇಡಿ. ಪಿತ್ಥಕೋಶದಲ್ಲಿ ಈಗಾಗಲೇ ಕಲ್ಲುಗಳು ಕುಳಿತಿದ್ದರೆ ಎಣ್ಣೆ ಮೆತ್ತಿದ, ಕರಿದ ಆಹಾರವನ್ನು ಸೇವಿಸಬೇಡಿ. ಇದರಿಂದಾಗಿ ನಿಮ್ಮ ಸಿಸ್ಟಿಕ್‌ ನಾಳವು ಬಿಗಿದುಕೊಳ್ಳಬಹುದು.

 3. ಏಕಪರ್ಯಾಪ್ತ ಕೊಬ್ಬಿನಂಶಗಳಾದ ಕನೋಲಾ ಮತ್ತು ಆಲಿವ್‌ ಎಣ್ಣೆಯನ್ನು ಬಳಸಿ. ಬೇಳೆಕಾಳುಗಳೂ ಕೂಡಾ ಉತ್ತಮವಾದ ಆಹಾರ. ಈ ಆಹಾರ ಮತ್ತು ಎಣ್ಣೆಯು ಪಿತ್ಥಕೋಶದ ಕಲ್ಲುಗಳನ್ನು ಕರಗಿಸುವ ಸಾಮರ್ಥ್ಯವನ್ನು ಹೊಂದಿವೆ.

4. ನೀವು ಮಾಂಸಾಹಾರಿಯಾಗಿದ್ದರೆ, ಕೋಲ್ಡ್‌ ವಾಟರ್‌ ಮೀನುಗಳಾದ ಟ್ಯೂನ, ಬಂಗಡೆ ಮತ್ತು ಸಾಲ್ಮನ್‌ ಮೀನುಗಳನ್ನು ತಿನ್ನಿ. ಓಮೆಗಾ-೩ ಮೀನೆಣ್ಣೆಯು ಪಿತ್ಥಕೋಶದಲ್ಲಿನ ಕಲ್ಲನ್ನು ಕರಗಿಸಲು ಸಹಾಯ ಮಾಡುತ್ತದೆ.

 5. ಸಂಸ್ಕರಿತ ಸಕ್ಕರೆಯನ್ನು ದೂರವಿಡಿ ಮತ್ತು ಗ್ಲೈಸೆಮಿಕ್‌ ಕಾರ್ಬೋಹೈಡ್ರೇಟ್ಸ್‌ನ್ನು ಮುಟ್ಟಲೂಬೇಡಿ. ಬಟಾಟೆ, ಅಕ್ಕಿ ಮತ್ತು ಇತರ ಪಾಸ್ತಾ ಪದಾರ್ಥಗಳನ್ನು ಸೇವಿಸಿದ ನಂತರ ನಮ್ಮ ದೇಹವು ಅವುಗಳನ್ನು ಸಕ್ಕರೆಯನ್ನಾಗಿ ಪರಿವರ್ತಿಸುತ್ತದೆ. ದೇಹದಲ್ಲಿ ಸಕ್ಕರೆ ಪ್ರಮಾಣದಲ್ಲಿ ಹೆಚ್ಚಳವು ನೇರವಾಗಿ ಡಯಾಬಿಟೀಸ್‌ಗೆ ಮತ್ತು ಪಿತ್ಥಕೋಶದಲ್ಲಿ ಕಲ್ಲು ಬೆಳೆಯುವುದಕ್ಕೆ ಸಂಬಂಧವನ್ನು ಹೊಂದಿರುತ್ತದೆ.

6. ದಿನದಲ್ಲಿ ಒಮ್ಮೆ ಮಾತ್ರ ಸ್ವಲ್ಪವೇ ಕಾಫಿ ಕುಡಿಯಿರಿ. ಇದರಿಂದಾಗಿ ಪಿತ್ಥಕೋಶದಲ್ಲಿನ ಕೊಬ್ಬಿನ ಅಂಶಗಳು ಹೊರಹೋಗುವುದಕ್ಕೆ ಸಹಾಯವಾಗುತ್ತದೆ. ಹೀಗಾಗಿ ಅಲ್ಲಿ ಕಲ್ಲು ರೂಪುಗೊಳ್ಳುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.

7. ಸಿಕ್ಕಷ್ಟೂ ಹಣ್ಣು ಹಂಪಲುಗಳನ್ನು ತಿನ್ನಿ. ಬರಿ ವಿಟಾಮಿನ್‌ಗಳಿಗಷ್ಟೇ ಈ ಹಣ್ಣುಗಳು ಸಹಾಯ ಮಾಡುವುದಿಲ್ಲ ಬದಲಾಗಿ ಪಿತ್ಥಕೋಶದಲ್ಲಿ ಕಲ್ಲು ಬೆಳೆಯವುದನ್ನು ಇವು ತಡೆಯುತ್ತವೆ.

8. ಕಾಳುಗಳು ಮತ್ತು ಸೆರೀಲ್‌ಗಳನ್ನು ಬಳಸಿ ನಿಮ್ಮ ಪಥ್ಯವನ್ನು ಮಾಡಿ. ಇದರಿಂದಾಗಿ ಕೊಲೆಸ್ಟ್ರಾಲ್‌ನ್ನು ದೇಹದಲ್ಲಿ ಕಡಿಮೆ ಮಾಡುವುದಷ್ಟೇ ಅಲ್ಲ, ಪಿತ್ಥಕೋಶದಲ್ಲಿನ ಕಲ್ಲನ್ನು ಕೂಡಾ ಕಡಿಮೆ ಮಾಡುತ್ತದೆ.

ಎಚ್ಚರಿಕೆ ಮತ್ತು ಸಲಹೆಗಳು:

* ಪಿತ್ಥಕೋಶದಲ್ಲಿ ಕಲ್ಲು ಬೆಳೆಯುವುದಕ್ಕೆ ಆನುವಂಶಿಕ ಅಂಶಗಳೂ ಕಾರಣವಾಗಬಹುದು.

* ನಿಮ್ಮ ಸಮಸ್ಯೆಗೆ ಪಿತ್ಥಕೋಶದ ಕಲ್ಲುಗಳು ಕಾರಣವಾಗಿರದಿದ್ದರೆ ಆಗ ಕೆಲವು ವೈದ್ಯಕೀಯ ಸಮಸ್ಯೆಯನ್ನು ಹೊರಗಿಡಬೇಕಾಗಬಹುದು.

* ಬೊಜ್ಜು ತುಂಬಿಕೊಳ್ಳುವುದು ಅಥವಾ ಅತಿವೇಗವಾಗಿ ತೂಕ ಇಳಿಯುವುದು, ನೇರವಾಗಿ ಪಿತ್ಥಕೋಶದಲ್ಲಿನ ಕಲ್ಲು ಬೆಳವಣಿಗೆಗೆ ಸಂಬಂಧಿಸಿದೆ. ತೂಕವನ್ನು ನಿಧಾನವಾಗಿ ಕಡಿಮೆ ಮಾಡಿಕೊಂಡು ಅದೇ ತೂಕವನ್ನು ಆರೋಗ್ಯಯುತವಾಗಿ ಕಾಯ್ದುಕೊಳ್ಳಿ, ಇದು ಪಿತ್ಥಕೋಶದ ಕಲ್ಲಿನ ಸಮಸ್ಯೆಗೆ ಪರಿಹಾರವೂ ಆಗಬಲ್ಲದು.
 
ಕೃಪೆ : ಒನ್ ಇಂಡಿಯಾ


Monday, August 13, 2012

ಮನಸ್ಸಿನ ಗಾಯ ದೇಹಕ್ಕೆ ಅಪಾಯ

ಮನಸ್ಸಿನ ಗಾಯ ದೇಹಕ್ಕೆ ಅಪಾಯ
                      ಡಾ. ಕೆ. ರಾಮಚಂದ್ರ

ಒತ್ತಡದ ಬದುಕು ಮಾನಸಿಕ ಆರೋಗ್ಯದ ಮೇಲೆ ಮಾರಕ ಪರಿಣಾಮ ಬೀರುತ್ತಿದೆ. ಹಲವು ಮಾನಸಿಕ ಸಮಸ್ಯೆಗಳಿಗೂ ಇದೇ ಒತ್ತಡ ದಾರಿ ಮಾಡುತ್ತದೆ.


ಎಷ್ಟೋ ಬಾರಿ ಮಾನಸಿಕ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸುವುದೇ ಇಲ್ಲ. ಆದರೆ ಇದೇ ದೀರ್ಘಕಾಲದ ರೋಗವಾಗಿ ಕಾಡಬಹುದು. ಮಾನಸಿಕ ಒತ್ತಡದಿಂದ ದೈಹಿಕ ಬದಲಾವಣೆಗಳು ಕೂಡ ಕಾಣಿಸುತ್ತವೆ.


ದೇಹದ ಮೇಲೆ ಪರಿಣಾಮ

ಮಾನಸಿಕ ಒತ್ತಡದಿಂದ ಉಂಟಾಗುವ ಸಮಸ್ಯೆಗಳೆಂದರೆ ಕೂದಲು ಉದುರುವಿಕೆ, ಬಾಯಿ ಒಣಗುವಿಕೆ, ಪದೇ ಪದೇ ಬಾಯಿ ಹುಣ್ಣು, ಕಾರಣವಿಲ್ಲದೆ ಕೆರಳುವಿಕೆ, ಹೆಚ್ಚು ಹೃದಯಬಡಿತ, ರಕ್ತದೊತ್ತಡ ಹೆಚ್ಚುವಿಕೆ, ಅಂಗೈ ಮತ್ತು ಮುಖದಲ್ಲಿ ಬೆವರುವಿಕೆ, ಮಾಂಸಖಂಡಗಳ ಸೆಳೆತ, ಲೈಂಗಿಕ ಆಸಕ್ತಿ ಕುಂದುವಿಕೆ, ಉಸಿರಾಟದ ತೊಂದರೆ, ಮೈಕೈಯಲ್ಲಿ ಹೆಚ್ಚು ನೋವು, ಮಾಂಸಖಂಡಗಳ ಬಿಗುವು, ಜೀರ್ಣಶಕ್ತಿ ಕುಂದುವಿಕೆ, ಹಸಿವಿಲ್ಲದಿರುವುದು, ಕರಳು ಮರುವರ್ತಿಕ, ಜಠರದಲ್ಲಿ ಉರಿ, ಹೆಚ್ಚು ಬೆವರುವಿಕೆ ಉಂಟಾದಾಗ ಎಚ್ಚರ ವಹಿಸುವುದು ಹಾಗೂ ಪರಿಹಾರ ಕಂಡುಕೊಳ್ಳುವುದು ಉತ್ತಮ.

ಪರಿಹಾರ

ದಿನನಿತ್ಯ ಜೀವನವನ್ನು ಯೋಜನಾಬದ್ಧವಾಗಿ ರೂಪಿಸಲು ಪ್ರಯತ್ನಿಸಿ.ಕುಟುಂಬದ ಸದಸ್ಯರ ಜತೆ ನಿಮ್ಮ ಭಾವನೆಗಳನ್ನು ಹಂಚಿಕೊಳ್ಳಿ. ಉತ್ತಮ ಬಾಂಧವ್ಯ ಬೆಳೆಸಲು ಪ್ರಯತ್ನಿಸಿ. ನಿಮ್ಮ ಕೆಲಸದಲ್ಲಿ ಶ್ರದ್ಧೆ ಮತ್ತು ಪ್ರಾಮಾಣಿಕತನವಿರಲಿ. ಮೂಢನಂಬಿಕೆ ಇದ್ದರೆ ಬಿಡಿ, ಭಗವಂತನಲ್ಲಿ ನಂಬಿಕೆ ಇಡಿ. ಬಾಬಾ, ಯೋಗಿಗಳು ಹಾಗೂ ಸ್ವಾಮೀಜಿಗಳ ಸಹವಾಸದಿಂದ ದೂರವಿರಿ.ದಿನನಿತ್ಯ ಯೋಗ, ಧ್ಯಾನ, ಪ್ರಾಣಾಯಾಮ, ದೇವಸ್ಥಾನಗಳಿಗೆ ಭೇಟಿ, ಉತ್ತಮರ ಸಹವಾಸ, ಉತ್ತಮ ಸಂಗೀತ, ಕುಟುಂಬ ಸದಸ್ಯರ ಜತೆ ಪ್ರವಾಸ, ವಿಹಾರ, ಉತ್ತಮ ಸ್ನೇಹಿತರ ಜತೆ ಹರಟೆ, ಹಾಸ್ಯ ಇವುಗಳನ್ನು ರೂಢಿಸಿಕೊಳ್ಳಲು ಪ್ರಯತ್ನಿಸಿ. ಕ್ರಮಬದ್ಧ ಆಹಾರ ಪದ್ಧತಿ, ವ್ಯಾಯಾಮ ಅಳವಡಿಸಿಕೊಳ್ಳಿ.ಅತಿ ಶೀಘ್ರ ಶ್ರೀಮಂತನಾಗಬೇಕೆಂಬ ಹುಚ್ಚು ಹಂಬಲ ಹಾಗೂ ಅಡ್ಡದಾರಿ ಹಿಡಿಯಲು ಪ್ರಯತ್ನಿಸಬೇಡಿ. ನಿಮ್ಮ ಮೇಲೆ ನಂಬಿಕೆ ಹಾಗೂ ಆತ್ಮವಿಶ್ವಾಸ ಬೆಳೆಸಿಕೊಳ್ಳಿ. ಕ್ರಮಬದ್ಧ ಜೀವನದ ಅಳವಡಿಕೆ ಹಾಗೂ ನಿಮ್ಮ ನಂಬಿಕಸ್ಥ ವೈದ್ಯರ ಸಲಹೆ ಪಡೆದು ದೀರ್ಘಕಾಲ ಉತ್ತಮ ಆರೋಗ್ಯದಿಂದ ಬಾಳಲು ಪ್ರಯತ್ನಿಸಿ.
 
ಕೃಪೆ : ವಿಜಯ ಕರ್ನಾಟಕ

Sunday, July 8, 2012

ಬಿಯರ್ ಕುಡಿದವರ ಎಲುಬು ಬಲಿಷ್ಠ !

Beer Helps To Strengthen Bones
ಮದ್ಯ ಆರೋಗ್ಯವನ್ನು ಹಾಳು ಮಾಡುವುದಾದರೂ, ಕೆಲವೊಂದು ಮದ್ಯ ಆರೋಗ್ಯವನ್ನು ಹೆಚ್ಚಿಸಲು ಸಹಕಾರಿಯಾಗಿದೆ. ಅದರಲ್ಲೂ ವೈನ್ ಕುಡಿದರೆ ಹೃದಯಕ್ಕೆ ತುಂಬಾ ಒಳ್ಳೆಯದೆಂದು ವೈಜ್ಞಾನಿಕವಾಗಿ ಸಾಬೀತಾಗಿದೆ. ಬೀರ್ ಅನ್ನು ಮಿತಿಮೀರಿ ಕುಡಿದರೆ ಹೊಟ್ಟೆ ಬರುತ್ತದೆ, ಆದರೆ ಅದೇ ಬೀರನ್ನು ಮಿತಿಯಲ್ಲಿ ಕುಡಿದರೆ ದೇಹ ಫಿಟ್ ನೆಸ್ ಸಿಗುತ್ತದೆ, ಮೂಳೆಗಳು ಬಲಿಷ್ಠವಾಗುತ್ತದೆ ಎಂದು ಬೀರ್ ನ ಪ್ರಯೋಜನಗಳ ಬಗ್ಗೆ ಇತ್ತೀಚಿಗೆ ನಡೆಸಿದ ಸಂಶೋಧನೆಯಲ್ಲಿ ಹೇಳಲಾಗಿದೆ.
ಮಿತಿಮೀರಿ ಬೀರ್ ಕುಡಿದರೆ ದೇಹದ ಮೇಲೆ ನಮ್ಮ ನಿಯಂತ್ರಣ ತಪ್ಪಿ ತೂರಾಡುವುದು, ವಾಂತಿ ಮಾಡುವುದು ಸಹಜ. ಅದೇ ಬೀರ್ ಅನ್ನು ಸ್ವಲ್ಪ ಪ್ರಮಾಣದಲ್ಲಿ ಕುಡಿದರೆ ಮೂಳೆ ಬಲವಾಗುತ್ತದೆ! ಬೀರ್ ನಲ್ಲಿ ಸಿಲಿಕಾನ್ ಪೋಷಕಾಂಶವಿದೆ. ಮೂಳೆಗಳನ್ನು ಬಲಪಡಿಸುವಲ್ಲಿ ಸಿಲಿಕಾನ್ ಅವಶ್ಯಕವಾದ ಪೋಷಕಾಂಶವಾಗಿದೆ. ಆದ್ದರಿಂದ ಬೀರ್ ಕುಡಿದರೆ ಮೂಳೆಗಳು ಬಲವಾಗುತ್ತದೆ.
ಆದರೆ ಎಷ್ಟು ಪ್ರಮಾಣದ ಸಿಲಿಕಾನ್ ಅಂಶ ದೇಹಕ್ಕೆ ಒಳ್ಳೆಯದು ಎಂಬ ಅಂಶದ ಬಗ್ಗೆ ನಿಖರ ಮಾಹಿತಿ ಇಲ್ಲವಾಗಿದ್ದು , ಇದರ ಬಗ್ಗೆ ವಿಜ್ಞಾನಿಗಳು ಸಂಶೋಧನೆಯನ್ನು ನಡೆಸುತ್ತಿದ್ದಾರೆ. ಬೀರ್‌ನಲ್ಲಿ ಎಷ್ಟರ ಮಟ್ಟಿಗೆ ಸಿಲಿಕಾನ್ ಇದೆ ಎಂಬ ಅಂಶ ಅದನ್ನು ತಯಾರಿಸಲು ಬಳಸುವ ವಸ್ತುಗಳನ್ನು ಆಧರಿಸಿದೆ. ಬೀರ್‌ಗಳ ತಯಾರಿಯಲ್ಲಿ ದವಸ ಧನ್ಯಗಳನ್ನು ಉಪಯೋಗಿಸಲಾಗುವುದು. ಈ ದವಸ ಧಾನ್ಯಗಳಲ್ಲಿ ಸಿಲಿಕಾನ್ ಅಂಶವಿರುವುದರಿಂದ ಇದರಿಂದ ತಯಾರಿಸುವ ಬೀರ್ ಆರೋಗ್ಯಕರವಾಗಿದೆ. ಅಲ್ಲದೆ ಬೀರ್ ಕುಡಿಯುವುದರಿಂದ ಶೇ.31%ರಷ್ಟು ಹೃದಾಯಘಾತವಾಗುವುದನ್ನು ತಪ್ಪಿಸಬಹುದು ಎಂಬ ಅಂಶ ಕೂಡ ದೃಢಪಟ್ಟಿದೆ.
ಬೀರ್ ಕುಡಿದರೆ ಮೂಳೆ ಬಲವಾಗುತ್ತದೆ, ಆದ್ದರಿಂದ ಒಂದು ಪೆಗ್ ಜಾಸ್ತಿಯೇ ಹಾಕುತ್ತೇನೆ ಎಂದು ಯೋಚಿಸುವ ಮುನ್ನ ಒಂದು ವಿಷಯ ತಿಳಿದುಕೊಳ್ಳಿ,  ಬೀರ್ ಅನ್ನು ಮಿತಿಯಲ್ಲಿ ಕುಡಿದರೆ ಮಾತ್ರ ಆರೋಗ್ಯವಾಗಿರಬಹುದು. ಅದೇ ಬಾಟಲಿಗಟ್ಟಲೆ ಬೀರ್ ಕುಡಿದರೆ,  ಇದೇ ಬೀರ್  ಆರೋಗ್ಯದ ಮೇಲೆ ತುಂಬಾ ಕೆಟ್ಟ ಪರಿಣಾಮ ಬೀರುವುದು.
ಒಂದು ವೇಳೆ ನಿಮಗೆ ಬೀರ್ ಕುಡಿಯುವ ಅಭ್ಯಾಸವಿದ್ದರೆ ಈ ವೀಕೆಂಡ್ ಪಾರ್ಟಿಯಲ್ಲಿ ಬೀರ್ ಕೈಯಲ್ಲಿ ಹಿಡಿದಾಗ ಇದರಿಂದ ಉಪಯೋಗ ಪಡೆಯಬೇಕೊ, ಬೇಡ್ವಾ? ಅನ್ನುವುದನ್ನು ನೀವೆ ತೀರ್ಮಾನಿಸಿ.

ಕೃಪೆ : ಒನ್ ಇಂಡಿಯಾ

Saturday, May 12, 2012

ಸರ್ವರೋಗಕ್ಕೂ ಸಂಪೂರ್ಣ ಸರಳ ಸೆಕ್ಸ್ ಮದ್ದು !

ಸೆಕ್ಸ್ ಆನಂದಮಯವಾಗಿದ್ದಷ್ಟು ಹೆಚ್ಚಿನ ಆರೋಗ್ಯ ಕೊಡುತ್ತದೆ. ದೇಹಕ್ಕೆ ಅಗತ್ಯವಾದ ಹಾರ್ಮೋನ್ ಗಳು ಸಂಭೋಗ ಮಾತ್ರದಿಂದ ಲಭ್ಯವಾಗಲಿದೆ ಎಂದು ಐರ್ಲೆಂಡ್ ನ ಸಂಶೋಧಕರು ಹೇಳುತ್ತಾರೆ.

ಆದರೆ, ಅತಿಯಾದರೆ ಅಮೃತವೂ ವಿಷ ಎಂಬಂತೆ ನಿಯಮಿತವಾಗಿ ಸೆಕ್ಸ್ ಮಾಡುವುದರಿಂದ ನಮ್ಮ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ತಲೆ ನೋವು, ಅರೆ ತಲೆನೋವು, ಸ್ಥೂಲಕಾಯ ಸಮಸ್ಯೆ, ಮೂಳೆ ನೋವು, ಮಾನಸಿಕ ಒತ್ತಡ, ಪ್ರಜ್ಞೆ ಹೆಚ್ಚಳ, ಚುರುಕುತನಕ್ಕೆ ಸಂಭೋಗ ಸಹಕಾರಿ.


* ಹಲವಾರು ದೈಹಿಕ ಸಮಸ್ಯೆಗಳಿಗೆ ಮಾನಸಿಕ ಒತ್ತಡ ಹಾಗೂ ಅಶಾಂತಿ ಕಾರಣವಾಗಿರುತ್ತದೆ. ವೈಯಕ್ತಿಕ ಕೀಳರಿಮೆ, ಭಯ, ಹಿಂಜರಿಕೆಯನ್ನು ದೂರಾಗಿಸಲು ಬೇಕಾದ ಹಾರ್ಮೋನ್ ಅನ್ನು ಸೆಕ್ಸ್ ನಂತರ ಪಡೆಯಬಹುದಾಗಿದೆ.


endorphins ಹಾರ್ಮೋನ್ ಹೊರ ಹಾಕುವ ಮೆದುಳು ಮಾನಸಿಕ ಒತ್ತಡವನ್ನು ಕಡಿಮೆ ಮಾಡಿ ಮನಸ್ಸು ಉಲ್ಲಾಸವಾಗಿರುವಂತೆ ಮಾಡುತ್ತದೆ. ಇದು ಕೆಲ ಕಾಲದ ಸ್ಥಿತಿಯಾದರೂ ಇದರಿಂದ ಸಂತೋಷ ಉಲ್ಬಣಿಸುವ ಸಾಧ್ಯತೆ ಹೆಚ್ಚಾಗಿದೆ.


* ಸೆಕ್ಸ್ ನಿಂದ ಸೌಂದರ್ಯ ವರ್ಧನ ಸಾಧ್ಯವೇ? ಖಂಡಿತಾ ಸಾಧ್ಯ. ಸೆಕ್ಸ್ ನಿಂದ ಹೆಚ್ಚಿನ ಲಾಭ ಪಡೆಯುವುದು ಸ್ತ್ರೀ ಎಂಬುದು ನೆನಪಿರಲಿ. ನಿಯಮಿತ ಸಂಭೋಗದ ನಂತರ ಮಹಿಳೆಯ ದೇಹದಲ್ಲಿ estrogen ಪ್ರಮಾಣ ಡಬಲ್ ಆಗುತ್ತದೆ. ಕೂದಲು ಮಿರಿ ಮಿರಿ ಮಿಂಚುತ್ತದೆ. ತ್ವಚೆ ಕೂಡಾ ಹೊಳೆಪು ಪಡೆಯುತ್ತದೆ. ಜೊತೆಗೆ ಅಂಗಾಂಗಗಳು ಕೂಡಾ ಬಿಗಿತ್ವ ಪಡೆಯುತ್ತದೆ.


* ಸುಮಾರು 1000ಕ್ಕೂ ಅಧಿಕ ಮಧ್ಯವಯಸ್ಕರ ಮೇಲೆ 10 ವರ್ಷಕ್ಕೂ ಅಧಿಕ ಕಾಲ ಸಂಶೋಧನೆ ನಡೆಸಿದ ಕ್ವೀನ್ಸ್ ವಿವಿಯ ವರದಿ ಪ್ರಕಾರ, ಪುರಷರ ಆಯುಷ್ಯವೃದ್ಧಿಗೆ ಸೆಕ್ಸ್ ಸಹಕಾರಿಯಂತೆ.


ಮಾನಸಿಕ ಒತ್ತಡ ನಿವಾರಣೆ ಬೇಕಾದ ಹಾರ್ಮೋನ್ ಉತ್ಪಾದನೆಯಿಂದ ಪುರುಷರು ಹೆಚ್ಚು ಲವಲವಿಕೆಯಿಂದ ಜೀವನ ಸಾಗಿಸಬಹುದಾಗಿದೆ. ಜೀವನ ವಿಕಾಸಕ್ಕೆ ಆಯುಷ್ಯ ವೃದ್ಧಿಗೆ ದೀರ್ಘಕಾಲ ಜೀವಿಸಲು ಸಂಭೋಗ ಸಹಕಾರಿ ಎನ್ನುತ್ತದೆ ಸಂಶೋಧನೆ.


* ಸೆಕ್ಸ್ ನಿಂದ ಆರಾಮವಾಗಿ ಕ್ಯಾಲೋರಿ ಕರಗಿಸಿ ಸಣ್ಣಗಾಗಬಹುದು. ರೋಮ್ಯಾಂಟಿಕ್ ಡಿನ್ನರ್ ಮೂಲಕ ಮೈಗೆ ತುಂಬಿಕೊಂಡ ಕೊಬ್ಬನ್ನು ಸೆಕ್ಸ್ ಮೂಲಕ ಕರಗಿಸಬಹುದು.


120 ಕಿ.ಮೀ ಜಾಗಿಂಗ್ ಮಾಡುವುದೂ ಒಂದೇ 20 ನಿಮಿಷದ ಹಾರ್ಡ್ ಕೋರ್ ಸಂಭೋಗವೂ ಒಂದೇ. ವಾರ್ಷಿಕವಾಗಿ 7500 ಕ್ಯಾಲೋರಿ ಕಡಿಮೆ ಮಾಡಿಕೊಳ್ಳಬಹುದು.


ಒಂದು ಸೆಕ್ಸ್ ಸೆಷನ್ ನಿಂದ 200 ಕ್ಯಾಲೋರಿ ಸುಡಬಹುದಾದರೆ ಟ್ರೆಡ್ ಮಿಲ್ ಮೇಲೆ 15 ನಿಮಿಷ ಓಡುವುದು ಯಾಕೆ.


* ನೋವು ನಿವಾರಕವಾಗಿ ಕೂಡಾ ಸೆಕ್ಸ್ ಅನುಕೂಲಕರ. ಪೇನ್ ಕಿಲ್ಲರ್ ಗಳಿಗಿಂತ ಹತ್ತು ಪಟ್ಟು ನೋವು ನಿವಾರಕ ಗುಣವನ್ನು ಸಂಭೋಗ ಕ್ರಿಯೆ ಹೊಂದಿದೆ. Oxycontin ಹಾರ್ಮೋನ್ ಅಧಿಕಗೊಂಡು ನೋವು ನಿವಾರಣೆಗೆ ಪೂರಕವಾಗುತ್ತದೆ.


ತಲೆನೋವು, ಆರ್ಥೈಟೀಸ್, ಮೈಗ್ರೇನ್ ನಿವಾರಣೆಗೂ ಸಹಕಾರಿ ಎಂಬುದು ಸಾಬೀತಾಗಿದೆ. ಸೆಕ್ಸ್ ಸಂದರ್ಭದಲ್ಲಿ ರಕ್ತ ಧಮನಿಗಳ ಮೇಲೆ ಒತ್ತಡ ಕಮ್ಮಿಯಾಗುವುದರಿಂದ ತಲೆನೋವು ಬರುವುದು ಕಮ್ಮಿ.


ಹಾಗಂತ ತಲೆನೋವು ಬಂದಾಗಲೆಲ್ಲ ಸೆಕ್ಸ್ ಗೆ ಮೊರೆ ಹೋದರೆ ಅಪಾಯ ಕಟ್ಟಿಟ್ಟ ಬುತ್ತಿ. ಒತ್ತಡ ನಿವಾರಣೆಗೆ ಆನಂದಕ್ಕೆ ರಹದಾರಿ ತೋರುವ ಸೆಕ್ಸ್ ನಿರಂತರವಾಗಿ ಆಚರಿಸಿ, ಆನಂದಿಸಿ !

ಕೃಪೆ : ಒನ್ ಇಂಡಿಯಾ