Showing posts with label Family. Show all posts
Showing posts with label Family. Show all posts

Saturday, March 8, 2014

ರಕ್ತಸಂಬಂಧಿಗಳೊಳಗಿನ ಮದುವೆಗೆ ಚಿಂತೆ ಬೇಡ !

ನೀವು ಸಾಮಾಜಿಕ ಕಾರಣಕ್ಕಾಗಿ ರಕ್ತಸಂಬಂಧಿಗಳೊಳಗಿನ ವಿವಾಹಕ್ಕೆ 'ಬೇಡ' ಅನ್ನಬಹುದು. ಆದರೆ ಇವರೊಳಗಿನ ವಿವಾಹ, ವಿಜ್ಞಾನಿಗಳ ಪ್ರಕಾರ ಯಾವುದೇ ತಪ್ಪಲ್ಲ.
ಒಂದುಕಾಲದಲ್ಲಿ ಇಂತಹ ವಿವಾಹ ಯುರೋಪ್‌ನಲ್ಲಿ ಸಹಜ ಎಂಬಂತಿತ್ತು. ಅದು ಸಹ ಕುಲೀನ ಮನೆತನಗಳಲ್ಲಿ ಇಂತಹ ವಿವಾಹಗಳು ಹೆಚ್ಚು ನಡೆಯುತ್ತಿದ್ದವು. ಚಾರ್ಲ್ಸ್ ಡಾರ್ವಿನ್ ತನ್ನ ಮಾವನ ಮಗಳು ಎಮ್ಮಾ ವೆಜ್‌ವುಡ್‌ರನ್ನು ವಿವಾಹವಾಗಿದ್ದರು. ಆದರೆ 19ನೆ ಶತಮಾನದಲ್ಲಿ ಈ ಚಿತ್ರಣ ಬದಲಾಯಿತು. ಇವರಲ್ಲಿ ಜನಿಸುವ ಮಕ್ಕಳು ದೈಹಿಕ ನ್ಯೂನ್ಯತೆ ಹೊಂದಿರುತ್ತಿದ್ದ ಕಾರಣ ಇಂತಹ ವಿವಾಹಗಳ ಸಂಖ್ಯೆ ಕುಸಿಯತೊಡಗಿತು.
ಆದರೆ ಈ ಕುರಿತು ಅಧ್ಯಯನ ನಡೆಸಿರುವ ಅಂತಾರಾಷ್ಟ್ರೀಯ ತಂಡ ಒಂದು, ಇಂತಹ ದಂಪತಿಗಳಿಗೆ ಜನಿಸುವ ಮಕ್ಕಳಲ್ಲಿ ನ್ಯೂನ್ಯತೆಯ ಅಪಾಯವು ನಲ್ವತ್ತರ ಹರೆಯದಲ್ಲಿ ಗರ್ಭವತಿಯಾಗುವ ಮಹಿಳೆಯರಿಗೆ ಜನಿಸುವ ಮಕ್ಕಳಿಗಿಂತ ಕಡಿಮೆ ಪ್ರಮಾಣದ್ದಾಗಿದೆ ಎಂದು 'ಪಬ್ಲಿಕ್ ಲೈಬ್ರರಿ ಆಫ್ ಸೈನ್ಸ್' ಎಂಬ ಜರ್ನಲ್ ವರದಿ ಮಾಡಿದೆ.
ನಲ್ವತ್ತರ ಹರೆಯದ ಮಹಿಳೆಯರು ಮಗು ಹಡೆಯುವುದಕ್ಕೆ ಪಶ್ಚಾತ್ತಾಪ ಪಡುವುದಿಲ್ಲವೆಂದಾದರೆ, ರಕ್ತಸಂಬಂಧಿಗಳು ವಿವಾಹವಾಗುವುದಕ್ಕೂ ಇದೇ ಅನ್ವಯವಾಗುತ್ತದೆ ಎಂದು ಮೆಸಾಚುಸೆಟ್ಸ್ ವಿಶ್ವವಿದ್ಯಾನಿಲಯದ ಪ್ರೊ. ಡೀನ್ ಪೌಲ್ ಹೇಳಿದ್ದಾರೆ. ಅವರು ಈ ಅಧ್ಯಯನ ತಂಡದ ನೇತೃತ್ವ ವಹಿಸಿದ್ದರು.
ರಕ್ತಸಂಬಂಧಿಗಳಲ್ಲಿ ಜನಿಸುವ ಮಕ್ಕಳಲ್ಲಿ ನ್ಯೂನ್ಯತೆಯ ಸಂಭಾವ್ಯತೆಯು ಶೇ.2ರಷ್ಟು ಹೆಚ್ಚಿದೆ. ಆದರೆ 40ರ ಹರೆಯದ ಮೇಲಿನ ಮಹಿಳೆಯರಲ್ಲಿ ಜನಿಸುವ ಮಕ್ಕಳಲ್ಲಿ ಈ ಅಪಾಯದ ಸಂಭಾವ್ಯತೆಯು ಶೇ 4.4ರಷ್ಟಿದೆ.
ನಲ್ವತ್ತು ವಯಸ್ಸಿನ ಮಹಿಳೆಯರು ಮಕ್ಕಳು ಹಡೆಯುವಲ್ಲಿ ಇಂತಹುದೇ ಅಪಾಯವನ್ನು ಎದುರಿಸುತ್ತಿರುವಾಗ, ಅಂತಹವರು ಮಕ್ಕಳನ್ನು ಹಡೆಯಬಾರದು ಎಂದು ಯಾರೂ ಸಲಹೆ ನೀಡುವುದಿಲ್ಲ ಎಂದು ತಂಡದ ಸದಸ್ಯ ನ್ಯೂಜಿಲ್ಯಾಂಡಿನ ಒಟಾಗೊ ವಿಶ್ವವಿದ್ಯಾನಿಲಯದ ಪ್ರೋ. ಹಮೀಶ್ ಸ್ಪೆನ್ಸರ್ ಅವರು ಹೇಳಿದ್ದಾರೆ.
ರಕ್ತಸಂಬಂಧಿಗಳಲ್ಲಿ ಹುಟ್ಟುವ ಮಕ್ಕಳು ದೈಹಿಕ ನ್ಯೂನತೆಗಳನ್ನು ಹೊಂದುತ್ತವೆ ಎಂಬ ಹಿನ್ನೆಲೆಯಲ್ಲಿ ರಕ್ತಸಂಬಂಧಿಗಳಲ್ಲಿ ಮದುವೆ ಸೂಕ್ತವಲ್ಲ ಎಂಬ ಹಿನ್ನೆಲೆಯಲ್ಲಿ ಇಂತಹ ವಿವಾಹಗಳಿಗೆ ಉತ್ತೇಜನ ನೀಡಲಾಗುತ್ತಿರಲಿಲ್ಲ. 
ಕೃಪೆ : ವೆಬ್ ದುನಿಯಾ ಕನ್ನಡ : 17 ಸೆಪ್ಟೆಂಬರ್ 2013

Sunday, January 27, 2013

ಭಾರತದಲ್ಲಿ ಹೆಚ್ಚುತ್ತಿದೆ ಸೆಕ್ಸ್ ಗೀಳು : ಸಂಸಾರಗಳು ಹಾಳು

ಆತನ ಹೆಸರು ನಿರ್ಮಲ್‌, 38 ವರ್ಷ, ದೆಹಲಿ ಮೂಲದ ಕಂಪನಿಯೊಂದರಲ್ಲಿ ಎಕ್ಸಿಕ್ಯೂಟಿವ್‌. ಆತನಿಗೆ ಮದುವೆಯಾಗಿದ್ದು, ಇಬ್ಬರು ಮಕ್ಕಳೂ ಇದ್ದಾರೆ. ಅವನ ವೈವಾಹಿಕ ಜೀವನ ಸುಗಮವಾಗಿ ಸಾಗುತ್ತಿದೆ. ಆದರೆ ಆತ ವಿವಾಹಕ್ಕೂ ಮುನ್ನ ಸೆಕ್ಸ್‌ ಸುಖ ಅನುಭವಿಸಿದ್ದು 922 ಸಂಗಾತಿಗಳ ಜೊತೆ. ಇದರಲ್ಲಿ ಗಂಡಸರೂ ಸೇರಿದ್ದಾರೆ ಎನ್ನುವುದೊಂದು ಅಚ್ಚರಿ.

'ನಾನು ಆಗ ಒಂಭತ್ತನೇ ತರಗತಿಯಲ್ಲಿದ್ದೆ. ಆಗಲೇ ನನಗೆ ಸೆಕ್ಸ್‌ ಬಗೆಗಿನ ಸೆಳೆತ ಇತ್ತು. ಅಲ್ಲಿಂದ ಆರಂಭವಾದ ಸೆಳೆತದಿಂದ ಸ್ವಲ್ಪ ದಿನಗಳಲ್ಲೇ ನಾನು ಸೆಕ್ಸ್‌ ಎಂಬ ಗೀಳಿಗೆ ಬಿದ್ದಿದ್ದೆ. ಇಷ್ಟರಲ್ಲೇ ಒಂದು ದಿನ ನನ್ನ ಸ್ನೇಹಿತರು ಒಂದು ಹುಡುಗಿಯನ್ನು ಗೊತ್ತು ಮಾಡಿ ನನಗೆ ಮದುವೆ ಮಾಡಿಸಿದರು. ಆಗ ನನಗೆ 35 ವರ್ಷ ವಯಸ್ಸಾಗಿತ್ತು. ನಾನು ಸುಮಾರು 6500 ಹುಡುಗಿ/ಮಹಿಳೆಯರ ಜೊತೆ ಚಾಟ್‌ ಮಾಡಿದ್ದೇನೆ. ಆನ್‌ಲೈನ್‌ನಲ್ಲಿ ನನ್ನ ಮೊಬೈಲ್‌ ನಂಬರ್‌ ಹಾಕುತ್ತಿದ್ದೆ. ಆಗ ಯಾರಾದರೂ ನನ್ನ ಬಲೆಗೆ ಬೀಳುತ್ತಿದ್ದರು. ಆದರೆ ಯಾವುದೋ ಒಂದು ಹಂತದಲ್ಲಿ ನನಗೆ ಮಾನಸಿಕವಾಗಿ ಹಿಂಸೆ ಅನುಭವಿಸಿದ ಅನುಭವವಾಯಿತು. ಜಿಗುಪ್ಸೆಯಾಯಿತು. ನನ್ನ ಚಾಳಿಯನ್ನು ನಿಲ್ಲಿಸಲು ನಿರ್ಧರಿಸಿದೆ. '

ಇದು ಸೆಕ್ಸ್‌ ಗೀಳಿಗೆ ಬಿದ್ದ ವ್ಯಕ್ತಿಯ ಒಂದು ಉದಾಹರಣೆ ಅಷ್ಟೆ. ದೇಶದಲ್ಲಿ ಇಂತಹ ಲಕ್ಷಾಂತರ ಮಂದಿಯಿದ್ದಾರೆ. ಭಾರತದಲ್ಲಿ ಲೈಂಗಿಕ ಗೀಳಿಗೆ ಬೀಳುತ್ತಿರುವವರ ಸಂಖ್ಯೆ ಹೆಚ್ಚುತ್ತಿದ್ದು, ಮೊಬೈಲ್‌, ಟಿವಿ, ಇಂಟರ್ನೆಟ್‌ಗಳ ಮುಕ್ತ ಪ್ರವೇಶ ಸೆಕ್ಸ್‌ ಗೀಳು ಹೆಚ್ಚಲು ಕಾರಣವಾಗಿದೆ. ರಾಜಕಾರಣಿಗಳು, ಅಧಿಕಾರಿಗಳು, ಸಿನಿಮಾ ನಟರು, ಡಾಕ್ಟರ್‌ಗಳು ಹಾಗೂ ವಿದ್ಯಾರ್ಥಿಗಳು ಹೆಚ್ಚಾಗಿ ಇಂಥ ಗೀಳಿಗೆ ಬೀಳುತ್ತಿದ್ದಾರೆ. ಕುಟುಂಬಗಳನ್ನು, ದೇಶದಲ್ಲಿ ಕೆಲವೇ ಕೆಲವು ಕ್ಲಿನಿಕ್‌ಗಳು ಮನುಷ್ಯನ ಬದುಕನ್ನೇ ಹಾಳು ಮಾಡುವ ಇಂತ ಚಟವನ್ನು ಗುರ್ತಿಸಿ ಚಿಕಿತ್ಸೆ ನೀಡುತ್ತಿವೆ.

ಹಾರ್ವರ್ಡ್‌ನ ಸೈಕಾಲಜಿ ಪ್ರೊಫೆಸರ್‌ ಸ್ಟೀವನ್‌ ಪಿಂಕರ್ ಹೇಳುವ ಪ್ರಕಾರ, 'ಸಾಮಾನ್ಯವಾಗಿ ಪುರಷರೇ ಮಹಿಳೆಯನ್ನು ಓಲೈಸಿ ಅವರನ್ನು ತಪ್ಪು ದಾರಿಗೆ ಎಳೆಯುತ್ತಾರೆ. ಒಂದು ವೇಳೆ ತಾವು ಬಯಸಿದ್ದು ಸಿಗದೆ ಹತಾಶರಾದಾಗ ಲೈಂಗಿಕ ಕಿರುಕುಳ ಮತ್ತು ಅತ್ಯಾಚಾರಕ್ಕೆ ಮುಂದಾಗುತ್ತಾರೆ'.

ಬೆಂಗಳೂರು ಮೂಲದ ರಾಜೀವ್‌, 11 ವರ್ಷದಿಂದಲೇ ಈ ಸೆಕ್ಸ್‌ ಗೀಳಿಗೆ ಬಿದ್ದವರು. 'ಪ್ರತಿ ತಿಂಗಳು ಹತ್ತಾರು ಸೆಕ್ಸ್‌ ಮ್ಯಾಗಝಿನ್‌, ಸೆಕ್ಸ್‌ ಸಿಡಿಗಳನ್ನು ಖರೀದಿಸುತ್ತಿದ್ದೆ. ಹೀಗೆ ಆರೇ ತಿಂಗಳಲ್ಲಿ ಖರೀದಿಸಿದ್ದು 20ಕೆ.ಜಿ ಮ್ಯಾಗಝಿನ್ ಮತ್ತು ಸಿ.ಡಿ.' ಎನ್ನುವುದು ಎಂಜಿನಿಯರ್‌ ರಾಜೀವ್‌ ಅವರ ಮಾತು. 'ನಾನು ನಾಲ್ಕು ವರ್ಷಗಳ ಕಾಲ ಹೆಂಡತಿಯಿಂದ ದೂರವಿದ್ದೆ. ಆ ಸಮಯದಲ್ಲಿ ಸೆಕ್ಸ್‌ಗಾಗಿ ಎಸ್ಕಾರ್ಟ್‌ ಸೇವೆ ಬಳಸಿಕೊಂಡೆ. ಇದಕ್ಕಾಗಿ ನಾನು ವ್ಯಯಿಸಿದ್ದು 10 ಲಕ್ಷ. ನಾನು ವಿದೇಶಕ್ಕೆ ಹೋಗಿ ಚಿಕಿತ್ಸೆ ಪಡೆದು ಬಂದೆ. ಭಾರತದಲ್ಲೂ ಅಂತಹ ಚಿಕಿತ್ಸಾ ಕೇಂದ್ರಗಳ ಅಗತ್ಯವಿದೆ' ಎನ್ನುತ್ತಾರೆ ರಾಜೀವ್‌.

ಸಿನಿಮಾಗಳು, ಟಿವಿ ಕಾರ್ಯಕ್ರಮಗಳು ಜನರಲ್ಲಿ ಸೆಕ್ಸ್‌ ಗೀಳು ಹಚ್ಚುತ್ತಿವೆ. ಇಂಟರ್ನೆಟ್‌ ಬಳಕೆ ತೀರಾ ಸಲೀಸಾಗಿರುವುದರಿಂದ ಲಕ್ಷಾಂತರ ಸೆಕ್ಸ್‌ ವೆಬ್‌ಸೈಟ್‌ಗಳು ಸುಲಭದಲ್ಲೇ ವೀಕ್ಷಣೆಗೆ ಸಿಗುತ್ತವೆ. ಇನ್ನು ಇಂಟರ್ನೆಟ್‌ ಸುಲಭವಾಗಿ ಹುಡುಗ/ಹುಡುಗಿಯರ ನಡುವೆ ಮಧ್ಯವರ್ತಿಯಂತೆ ಕೆಲಸ ಮಾಡುತ್ತಿದೆ. ಹೆಚ್ಚಿರುವ ಸೋಷಿಯಲ್‌ ನೆಟ್‌ವರ್ಕಿಂಗ್‌ ಬಳಕೆ ಬೇಕಾದವರನ್ನು ಬೇಕೆಂದಾಗ ಸಂಪರ್ಕಿಸುವ ಸುಲಭ ಮಾರ್ಗವನ್ನು ತೆರೆದಿದೆ. ದೂರಸಂಪರ್ಕದಲ್ಲಾಗಿರುವ ಕ್ರಾಂತಿ, ಕಡಿಮೆ ದರದಲ್ಲಿ ಮೊಬೈಲ್ ಲಭ್ಯತೆ ಜರನ ಸಂಪರ್ಕವನ್ನು ಸುಲಭ ಸಾಧ್ಯವಾಗಿಸಿದೆ. ಇದು ಅಕ್ರಮ ಚಟುವಟಿಕೆಗಳಿಗೆ ನಾಂದಿಯಾಗುತ್ತಿದೆ. ಈ ಎಲ್ಲ ಕಾರಣಗಳಿಂದ ಭಾರತದಲ್ಲಿ ಸೆಕ್ಸ್‌ ಗೀಳಿಗೆ ಬೀಳುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ.

ಕೃಪೆ : ವಿಜಯ ಕರ್ನಾಟಕ