Showing posts with label ಹದಿ ಹರೆಯ. Show all posts
Showing posts with label ಹದಿ ಹರೆಯ. Show all posts

Saturday, November 23, 2013

2ನೇ ಬಾರಿ 10 ಕೋಟಿಗೆ ಕನ್ಯತ್ವ ಹರಾಜು !

    • ಬ್ರೆಜಿಲ್‌ :ಕಳೆದ ವರ್ಷ ತನ್ನ ಕನ್ಯತ್ವವನ್ನು ಹರಾಜಿಗೆ ಇಟ್ಟಿದ್ದ ಬ್ರೆಜಿಲ್‌ ಮೂಲದ ವಿದ್ಯಾರ್ಥಿನಿ ಮಿಗ್ಲಿಯೋರೋನಿ ಮತ್ತೆ ಈ ವರ್ಷ ಅದನ್ನು ಹರಾಜಿಗೆ ಇಡಲು ನಿರ್ಧರಿಸಿದ್ದಾಳೆ. ಅದೇನು ಈಕೆ ಎರಡು ಬಾರಿ ಕನ್ಯತ್ವ ಕಳೆದುಕೊಳ್ಳಲು ಸಾಧ್ಯವೇ ಎಂದು ಅಚ್ಚರಿ ಪಡಬೇಡಿ. ಕಳೆದ ಬಾರಿ ಹರಾಜು ಪ್ರಕ್ರಿಯೆ ನಡೆಸಿದ್ದ ಆಸ್ಟ್ರೇಲಿಯಾ ಮೂಲದ ವ್ಯಕ್ತಿಯೊಬ್ಬ ಈಕೆಗೆ ಮತ್ತು ಹರಾಜು ಗೆದ್ದ ವ್ಯಕ್ತಿಗೆ ವಂಚಿಸಿದ್ದನಂತೆ. ಹೀಗಾಗಿ ಹರಾಜು ನಡೆದರೂ, ಈಕೆಗೆ ಹಣವೂ ಸಿಕ್ಕಿರಲಿಲ್ಲ, ಜೊತೆಗೆ ಕನ್ಯತ್ವವೂ ನಷ್ಟವಾಗಿರಲಿಲ್ಲ. ಹೀಗಾಗಿ ಈ ಯುವತಿ ಮತ್ತೂಮ್ಮೆ ಆನ್‌ಲೈನ್‌ನಲ್ಲಿ ತನ್ನ ಕನ್ಯತ್ವವನ್ನು ಹರಾಜಿಗೆ ಇಡಲು ನಿರ್ಧರಿಸಿದ್ದಾಳೆ. ಇನ್ನು ಈ ಬಾರಿಯ ವಿಶೇಷವೆಂದರೆ ಹರಾಜು ದರ ದುಪ್ಪಟ್ಟಾಗಿದೆ. ಕಳೆದ ವರ್ಷ ಅಂದಾಜು 5 ಕೋಟಿ ರೂ. ಇದ್ದ ಬೆಲೆ ಈ ವರ್ಷ 10 ಕೋಟಿ ರೂ.ಗೆ ಏರಿದೆ.
    • ಕೃಪೆ : Udayavani | Nov 23, 2013


Wednesday, January 2, 2013

ದೆಹಲಿ ರೇಪ್: ನೂತನ ಕಾಯ್ದೆಗೆ ಪುತ್ರಿ ಹೆಸರಿಟ್ಟರೆ ಆಕೆ ಆತ್ಮಕ್ಕೆ ಶಾಂತಿ



ಕೇಂದ್ರ ಸರ್ಕಾರ ಅತ್ಯಾಚಾರಿಗಳ ವಿರುದ್ದ ತರಲು ನಿರ್ಧರಿಸಿರುವ ನೂತನ ಕಾಯ್ದೆಗೆ ತಮ್ಮ ಮಗಳ ಹೆಸರು ಇಟ್ಟರೆ ಆಕೆಯ ಆತ್ಮಕ್ಕೆ ಶಾಂತಿ ಸಿಕ್ಕಂತಾಗುತ್ತದೆ ಎಂದು ಇತ್ತೀಚೆಗೆ ದೆಹಲಿಯ ಚಲಿಸುತ್ತಿದ್ದ ಬಸ್‌ನಲ್ಲಿ ದುಷ್ಕರ್ಮಿಗಳಿಂದ ಸಾಮೂಹಿಕ ಆತ್ಯಾಚಾರಕ್ಕೀಡಾದ ಯುವತಿಯ ತಂದೆ ಹೇಳಿದ್ದಾರೆ.

ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತಮ್ಮ ಪುತ್ರಿ ಈ ಸಮಾಜದಲ್ಲಿ ಗೌರವಯುತವಾಗಿ ಬಾಳಲು ತೀರ್ಮಾನಿಸಿದ್ದಳು. ಆಕೆ ವೈದ್ಯಳಾಗಿ ಸಮಾಜದ ಸೇವೆ ಮಾಡಲು ನಿರ್ಧರಿಸಿ ವೈದ್ಯಕೀಯ ಶಿಕ್ಷಣಕ್ಕೆ ಸೇರ್ಪಡೆಗೊಂಡಿದ್ದಳು ಎಂದು ದುಃಖದಿಂದ ನುಡಿದರು.

ತಮ್ಮ ಮಗಳ ಪ್ರಕರಣದಲ್ಲಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗುವಂತಾಗಬೇಕು ಎಂದು ಹೇಳಿದ ಅವರು, ತಮ್ಮ ಪುತ್ರಿಗಾದ ದುಃಸ್ಥಿತಿ ದೇಶದ ಇನ್ಯಾವ ಹೆಣ್ಣು ಮಕ್ಕಳಿಗೂ ಬರಬಾರದೆಂದರಲ್ಲದೆ ಈ ನಿಟ್ಟಿನಲ್ಲಿ ಸರ್ಕಾರ ಅತ್ಯಾಚಾರಿಗಳ ವಿರುದ್ದ ಕಠಿಣ ಶಿಕ್ಷೆ ವಿಧಿಸುವ ಕಾಯ್ದೆ ಜಾರಿಗೆ ತರಬೇಕೆಂದು ಹೇಳಿದರು.

ಕೇಂದ್ರ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ನೂತನ ಕಾಯ್ದೆಗೆ ಮೃತಪಟ್ಟ ಯುವತಿಯ ಹೆಸರಿಡಬೇಕೆಂದು ಸಚಿವ ಶಶಿ ತರೂರ್ ಟ್ವೀಟ್ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.
ಕೃಪೆ : ವೆಬ್ ದುನಿಯಾ