Thursday, February 2, 2012

ಡೇಟಿಂಗ್‌ಗೆ ವಯಸ್ಸಿನ ಹಂಗೇಕೆ ?



 
`ನ ಉಮ್ರ ಕಿ ಸೀಮಾ ಹೋ, ನ ಜನ್ಮ್ ಕಾ ಹೋ ಬಂಧನ್`
ಜೆನ್ನಿಫರ್ ಲೋಪೆಜ್‌ನೊಂದಿಗೆ ಡೇಟ್‌ನಲ್ಲಿ ನಿರತನಾಗಿರುವ 24ರ ಹುಡುಗ ಕ್ಯಾಸ್ಪರ್ ಸ್ಮಾರ್ಟ್ ಸದ್ಯ ಇದೇ ಹಾಡನ್ನು ಗುನುಗುವಂತಿದೆ. 42ರ ಹರೆಯದ ಜೆನ್ನಿಫರ್ ಜೊತೆಗಿನ ಬಾಂಧವ್ಯಕ್ಕೆ ವಯಸ್ಸು ತೊಡಕಲ್ಲವೇ ಅಲ್ಲ ಎಂದು ಅವನು ಟ್ವೀಟ್ ಮಾಡಿದ್ದಾನೆ. ಇವರಿಬ್ಬರ ವಯಸ್ಸಿನ ಅಂತರದ ಬಗ್ಗೆ ಸ್ಮಾರ್ಟ್‌ಗೆ ಅನೇಕ ಟೀಕೆಗಳು ಬಂದೆರಗಿವೆ. `ನಮ್ಮಿಬ್ಬರ ಪ್ರೀತಿಗೆ ವಯಸ್ಸು, ಅಂತಸ್ತು ಹಾಗೂ ಇತರರ ಅಭಿಪ್ರಾಯಗಳ ಹಂಗಿಲ್ಲ. ಆತ್ಮ ಸಾಂಗತ್ಯದಲ್ಲಿ ನಮ್ಮ ಹೃದಯಗಳು ಒಂದಾಗಿವೆ` ಎಂದು ಕ್ಯಾಸ್ಪರ್ ಅಂಥ ಟೀಕೆಗಳಿಗೆಲ್ಲಾ ಸ್ಮಾರ್ಟಾಗಿ ಪ್ರತಿಕ್ರಿಯಿಸಿದ್ದಾನೆ.
ಕೃಪೆ : ಪ್ರಜಾವಾಣಿ

Monday, January 30, 2012

ಚೆನ್ನಾಗಿ ತಿನ್ನಿ: ದೇಹ ಸೌಂದರ್ಯ ಕಾಪಾಡಿಕೊಳ್ಳಿ !




ನಾನು ಯಾವತ್ತೂ ಉಪವಾಸವಿರಲಿಲ್ಲ. ಹಸಿವಿನಿಂದ ಕೊರಗಲಿಲ್ಲ. ತಶ್ನ್ ಸಿನಿಮಾಗಾಗಿ ಸೈಜ್ ಜೀರೊ ಇದ್ದಾಗಲೂ ಚೆನ್ನಾಗಿ ತಿಂತಾ ಇದ್ದೆ. ಹೀಗೆನ್ನುವ ಕರೀನಾ ಕಪೂರ್ ಯುವತಿಯರಿಗೆ ತಮ್ಮ ಸಪೂರ ದೇಹದ ದೇಖರೇಖಿಯ ಕುರಿತು ಹೇಳಿಕೊಂಡಿದ್ದಾರೆ.
`ಚೆನ್ನಾಗಿ ತಿನ್ನಿ. ಉಪವಾಸದಿಂದ ದೇಹ ಕೃಶವಾಗುತ್ತದೆಯೇ ಹೊರತು ಸೌಂದರ್ಯ ಉಳಿಸಿಕೊಳ್ಳುವುದಿಲ್ಲ. ಪಂಜಾಬಿ ಯುವತಿಯಾಗಿ ನಾನು ತಿಂಡಿಪೋತಿ ಎಂದೇ ಹೇಳಬಲ್ಲೆ. ಪ್ರತಿದಿನವೂ ನಾನು ಪರಾಠಾಗಳನ್ನು ಸೇವಿಸುತ್ತೇನೆ. ಆಲೂ, ಗೋಬಿ ಮುಂತಾದ ಪರಾಠಾಗಳು ನನ್ನಿಷ್ಟದ ತಿಂಡಿ. ತಿನ್ನುವುದು ಮುಖ್ಯವಲ್ಲ. ಸರಿಯಾದ ಸಮಯದಲ್ಲಿ ತಿನ್ನುವುದು, ನಂತರದ ದೇಹದಂಡನೆ ಮುಖ್ಯ. ಸದ್ಯಕ್ಕೆ ಸೈಜ್ ಜೀರೊ ಲೊಲೊಗೆ ಸಲ್ಲಬೇಕು. ಅವಳೀಗ ಸಪೂರ ಸುಂದರಿ` ಎಂದು ತಮ್ಮ ಸಹೋದರಿ ಕರಿಶ್ಮಾಳನ್ನು ಹೊಗಳುತ್ತಾರೆ.