Wednesday, February 8, 2012

ಕುರಿಗಳಾರೋ ... ಕತ್ತೆಗಳಾರೋ ..... !


                                                                                                                        By: Manjunath Hiremath

ಯಾರಾದ್ರೂ ನಮ್ ಬಿಜೆಪಿ ಪಾರ್ಟಿನ ಬೋದ್ರೆ ನಾನ್ ಸುಮ್ಮನೆ ಇರಲ್ಲ.. !


ಯಾರಾದ್ರೂ ನಮ್ ಬಿಜೆಪಿ ಪಾರ್ಟಿನ ಬೋದ್ರೆ ನಾನ್ ಸುಮ್ಮನೆ ಇರಲ್ಲ.. ಏನ್ರೀ ಅಂಥದ್ದು ಯಾರೂ ಮಾಡದೆ ಇರೋದು ನಮ್ಮೋರು ಮಾಡಿರೋದು.. ಹಾಲಪ್ಪ ಫ್ರೆಂಡ್ ಹೆಂಡತೀ ಮೇಲೆ ಅತ್ಯಾಚಾರ ಮಾಡಿದ.. ಏನ್ ಜಗತ್ತೆಲ್ಲೂ ಅತ್ಯಾಚಾರನೇ ಆಗಲ್ವಾ.. ಏನೋ ನಮ್ ರೇಣುಕ, ನರ್ಸ್ ಚೆನಾಗಿದಾಳಲ್ಲ ಅಂತ ಮುತ್ ಕೊಟ್ಟಿದ್ದು ದೊಡ್ಡ ತಪ್ಪಾ..? ಭಾರತಾಂಬೆಯ ನೆಲವನ್ನು ಕಂಡಕಂಡವರಿಗೆ ಸುಳ್ಳು ದಾಖಲೆ ಸೃಷ್ಟಿಸಿ ಕಟ್ಟಾ ಜಗ್ಗ ಕೊಟ್ಟನಪ್ಪ.. ನಮ್ ದೇಶಾನ ನಾವ್ ಮಾರಕಂಡು ತಿನ್ನದೆ ಇನ್ನೇನು ಉಗಾಂಡದೋರು ಮಾರಬೇಕ ? ಬಳ್ಳಾರಿ ಗಣಿ ಅಂತರೆ.. ಭೂಮಿತಾಯಿ ನಮ್ಮ ಆಸ್ತಿ,ಅದನ್ನ ಕಂಡಾಪಟ್ಟೆ ಸುಲಿಗೆ ಮಾಡಿದ್ದು ತಪ್ಪ? ಮೆಡಿಕಲ್ ಕಾಲೇಜಿಗೆ ಸೀಟ್ ಕೊಡಕ್ಕೆ ಲಂಚ ತಗಂಡನಪ್ಪ ರಾಮಚಂದ್ರೇಗೌಡ.. ಏನ್ ನೀವ್ಯಾರೂ ಮೋಸನೇ ಮಾಡಲ್ವಾ.. ರೆಡ್ಡಿಗಳು ಹೋಗಿ ಚಂಚಲಗುಡ ಜೈಲಲ್ಲಿ ಹಳಸಿದ ಮುದ್ದೆ ಮುರಕಂಡು ಕುಂತಿರೋದು ನಮಗೆಷ್ಟು ನೋವಾಗ್ತಾ ಇದೆ ಗೊತ್ತ.. ನಮ್ ಮುಖ್ಯಮಂತ್ರಿನೇ

ನಾಚಿಕೆ ಮಾನ ಮರ್ಯಾದೆ ಇಲ್ಲದಂಗೆ ಜೈಲಿಗೋಗಿ ಬಂದನಪ್ಪ.. ಗಾಂಧಿತಾತ ಅದೆಷ್ಟು ಸಲ ಹೋಗಿ ಬಂದಿಲ್ಲ... ? ಸುಮ್ ಸುಮ್ಮನೆ ಹಂಗೆಲ್ಲ ನಮ್ ಬಿಜೆಪಿ ಲಂಗೋಟಿನ ಎಳೀಬಾರದು

ನೋಡಿ.. ಉಳಿದಿರೋದು ಅದೊಂದೇ.. ಅದನ್ನೂ ನೀವ್ ಕಿತಗಂಡ್ರೆ ನಾವ್ ಬಿಜೆಪಿಯೋರು ಕೆರೆಗೋ ಬಾವಿಗೋ ಹೋಗಿ ಬೀಳಬೇಕಾಯ್ತದೆ.. ಬಿಜೆಪಿನ ಬೈಯಬೇಡಿ ಪ್ಲೀಸ್... !

ಕವಡೆ ಶಾಸ್ತ್ರದ ಚಿನ್ನಪ್ಪ

By: Dayanand TK

Sunday, February 5, 2012

ನೀವು ನಗುವಾಗ ದೈವಿಕತೆ ಉಕ್ಕುತ್ತದೆ !


                                                          ಭರತ್ ಮತ್ತು ಶಾಲನ್ ಸವೂರ್

ಸಾವಿತ್ರಿ ಎಂಬ ಯಾತ್ರಿಯೊಬ್ಬಳು ಹಿಮಾಲಯದ ತಪ್ಪಲಿನಲ್ಲಿ ನಡೆದು ಹೋಗುತ್ತಿರುವಾಗ ಸ್ಫಟಿಕ ಶುದ್ಧ ತೊರೆಯ ಬಳಿ ಅಪರೂಪದ ಕಲ್ಲೊಂದು ಸಿಕ್ಕಿತು. ಅದೊಂದು ಅಮೂಲ್ಯ ರತ್ನ. ಹಾಗೆ ಹೋಗುತ್ತಿರುವಾಗ ಮತ್ತೊಬ್ಬ ಯಾತ್ರಿ ಆಕೆಗೆ ಜತೆಯಾದ. ಆತ ಹಸಿದಿದ್ದ. ಸಾವಿತ್ರಿ ತನ್ನ ಚೀಲ ತೆರೆದು ಊಟ ಹಂಚಿಕೊಂಡಳು.ಆಕೆಯ ಚೀಲದಲ್ಲಿದ್ದ ರತ್ನವನ್ನು ನೋಡಿದ ಯಾತ್ರಿ ಅದನ್ನು ತನಗೆ ನೀಡುವಂತೆ ಕೇಳಿದ. ಯಾವುದೇ ಹಿಂಜರಿಕೆ ಇಲ್ಲದೇ ಆಕೆ ಅದನ್ನು ಆತನಿಗೆ ನೀಡಿದಳು.ಯಾತ್ರಿಗೆ ಬಲು ಆಶ್ಚರ್ಯವಾಯಿತು. ಆ ಹರಳಿನಿಂದ ಆತ ಜೀವಮಾನ ಇಡೀ ಆರಾಮಾಗಿ ಜೀವನ ಸಾಗಿಸಬಹುದಿತ್ತು.
ಎರಡು ದಿನ ನಂತರ ಆತ ವಾಪಸು ಬಂದು ಆ ಹರಳನ್ನು ಸಾವಿತ್ರಿಗೆ ಹಿಂದಿರುಗಿಸಿದ. ಈ ಹರಳು ಅಮೂಲ್ಯವಾದುದ್ದು. ಇದನ್ನು ಮಾರಿದಲ್ಲಿ ಭಾರಿ ಸಂಪತ್ತು ಬರಲಿದೆ. ಆದರೆ, ನೀನು ಇದಕ್ಕಿಂತ ಅಮೂಲ್ಯವಾದುದ್ದು ನೀಡುತ್ತೀಯ ಎಂಬ ಭರವಸೆಯಿಂದ ಇದನ್ನು ನಿನಗೆ ಹಿಂದಿರುಗಿಸುತ್ತಿದ್ದೇನೆ. ಈ ಹರಳು ನನಗೆ ದಾನ ಮಾಡುವಂತಹ ಗುಣ ಹೇಗೆ ಹುಟ್ಟಿತು ಎಂದು ಆ ಯಾತ್ರಿ ಪ್ರಶ್ನಿಸಿದ.
***
ಸಾವಿತ್ರಿಯ ಬಳಿ ಇರುವುದು ದೈವಿಕ ಗುಣ. ಪ್ರತಿಯೊಬ್ಬರಲ್ಲೂ ಇಂತಹ ದೈವಿಕ ಗುಣ ಇರುತ್ತದೆ. ತಾವು ನೀಡುತ್ತಿದ್ದೇವೆ ಎಂಬುದು ಅರಿವಾಗದಂತಹ ಈ ಗುಣ ಒಮ್ಮಮ್ಮೆ ಪ್ರಕಟಗೊಳ್ಳುತ್ತದೆ. ನಾವು ನಮ್ಮ ಮಕ್ಕಳಿಗೆ ಊಟ ನೀಡುವಾಗ ಬೇರೊಬ್ಬರಿಗೆ ಊಟ ಕೊಡುತ್ತಿದ್ದೇವೆ ಎಂಬ ಭಾವವೇ ನಮ್ಮ ಬಳಿ ಸುಳಿಯುವುದಿಲ್ಲ. ಸ್ವತಃ ನಮಗೆ ನಾವೇ ಏನನ್ನೋ ಮಾಡಿಕೊಂಡಂತೆ ಅನಿಸುತ್ತದೆ. ನಾವು ಚಿನ್ನದ ಬಳೆ ಹಾಕಿಕೊಂಡಾಗ ನನ್ನ ದೇಹಕ್ಕೆ ಏನೋ ಉಪಕಾರ ಮಾಡಿಕೊಂಡಿದ್ದೇನೆ ಎಂದು ಅನ್ನಿಸುವುದಿಲ್ಲ. ಹಾಗೆಯೇ ಬೇರೆಯವರಿಗೆ ಏನನ್ನೋ ಕೊಡುವಾಗ ಅವರನ್ನೂ ನಮ್ಮಂತೆ ಪರಿಗಣಿಸಿದಾಗ ಅದು ದಾನ ಕೊಟ್ಟಿದ್ದು, ಅನ್ಯರಿಗೆ ಮಾಡಿದ್ದು ಎಂಬ ಭಾವ ಬರುವುದಿಲ್ಲ.
ಇಂತಹ ಮನೋಭಾವ ಬೆಳೆಸಿಕೊಳ್ಳಲು ನಾವು ಸಣ್ಣದೊಂದು ಪ್ರಯತ್ನ ಮಾಡಬಹುದು. ಜಗತ್ತನ್ನೇ ಒಂದು ದೈವಿಕ ಕಾಲೋನಿ ಎಂದು ಪರಿಗಣಿಸಿ ಎಲ್ಲರೂ ಉತ್ತಮವಾಗಿ ಜೀವನ ಸಾಗಿಸಲು ಯತ್ನಿಸುತ್ತಿದ್ದಾರೆ ಎಂದುಕೊಳ್ಳಬಹುದು. ರಸ್ತೆಯ ಆ ಪಕ್ಕ ನಡೆದು ಹೋಗುತ್ತಿರುವ ಹೆಂಗಸು ನಿಮ್ಮಂತೆಯೇ ಉಸಿರಾಡುತ್ತಿದ್ದಾಳೆ ಎಂಬುದನ್ನು ನೀವು ಗಮನಿಸಬಹುದು. ಬಸ್ಸಿನಲ್ಲಿ ಪಕ್ಕದಲ್ಲಿ ಕುಳಿತ ವ್ಯಕ್ತಿ ನೀವು ಯೋಚಿಸಿದಂತೆಯೇ ಯೋಚಿಸುತ್ತಿದ್ದಾನೆ. ಜಗತ್ತಿನೆಲ್ಲೆಡೆ ನಮ್ಮ ಹೃದಯ ಒಂದೇ ಸಮಯಕ್ಕೆ ಬಡಿಯುತ್ತದೆ ಎಂಬುದನ್ನು ಅರಿತುಕೊಳ್ಳಬಹುದು.
ದಲಾಯ್ ಲಾಮ ಹೇಳುವಂತೆ ಯಾರೂ ಸಹ ಅಪರಿಚಿತರಲ್ಲ. ಹೌದು, ಒಂದೇ ಪಯಣದಲ್ಲಿ ಜತೆಯಾಗಿರುವ ಪ್ರವಾಸಿಗರು ನಾವು. ಕೆಲವೊಮ್ಮೆ ನಾವು ಕಣ್ಣೊಳಗೆ ಕಣ್ಣಿಟ್ಟು ನೋಡಿ ನಗು ವಿನಿಮಯ ಮಾಡಿಕೊಳ್ಳುತ್ತೇವೆ. ಕುಹಕವಿಲ್ಲದ ಶುಭ್ರ ನಗು ನಮ್ಮಳಗಿನ ದೈವಿಕತೆಯ ಲಕ್ಷಣ. ಅದಕ್ಕಾಗಿ ಅದು ಅಷ್ಟು ಸುಂದರವಾಗಿರುತ್ತದೆ. ನಮ್ಮ ಆತ್ಮದಿಂದ ಅದು ಹುಟ್ಟುತ್ತದೆ. ಇದು ಒಂದು ದೇಹ ಮತ್ತೊಂದು ದೇಹದೊಂದಿಗೆ ನಗುವ ಪ್ರಕ್ರಿಯೆಯಲ್ಲ. ಒಂದು ಆತ್ಮ ಮತ್ತೊಂದು ಆತ್ಮದೊಂದಿಗೆ ಸಂತಸ ಹಂಚಿಕೊಳ್ಳುವ ಸಂಭ್ರಮ.
ಇದು ಅರಿವಿನ ನಗು. ಇದು ನಮ್ಮನ್ನು ವಿಚಿತ್ರ ರೀತಿಯಲ್ಲಿ ರಹಸ್ಯವಾಗಿ ಬಂಧಿಸುತ್ತದೆ. ಹಲೋ..! ಒಟ್ಟಿಗೆ ಬದುಕಿರುವುದು ಎಷ್ಟು ಅರ್ಥಪೂರ್ಣ, ಎಷ್ಟು ಸಂತಸಕರ ಎಂದು ಒಂದು ಆತ್ಮ ಮತ್ತೊಂದು ಆತ್ಮಕ್ಕೆ ಹೇಳುತ್ತದೆ.
ಇಂತಹ ನಗು ನಮಗೆ ಬಲ ತಂದುಕೊಡುತ್ತದೆ ಎಂದು ತಿಳಿದವರು ಹೇಳುತ್ತಾರೆ. ನೀವು ಯಾರನ್ನಾದರೂ ನೋಡಿ ನಕ್ಕಾಗ ಉತ್ತಮ ಗುಣಮಟ್ಟದ ಶಕ್ತಿಯ ಧಾರೆಯನ್ನು ಆಕೆಯೆಡೆ ಕಳುಹಿಸುತ್ತೀರಿ. ನೀವು ನಗುವುದಕ್ಕಿಂತ ಮುನ್ನ ಆ ವ್ಯಕ್ತಿ ಯಾವುದೋ ಯೋಚನೆಯಲ್ಲಿ, ಚಿಂತೆಯಲ್ಲಿ ಮುಳುಗಿರಬಹುದು. ಆದರೆ, ನಿಮ್ಮ ನಿಷ್ಕಳಂಕ ನಗು ಆ ವ್ಯಕ್ತಿಯ ಹೃದಯದಲ್ಲಿ ಅಡಗಿರುವ ಕತ್ತಲನ್ನು ಓಡಿಸುತ್ತದೆ. ಹೊಸ ಬಲ, ಉತ್ಸಾಹದೊಂದಿಗೆ ಆ ವ್ಯಕ್ತಿ ನಿಮ್ಮೆಡೆ ತಿರುಗಿ ನಗುತ್ತಾರೆ.
ನೀವು ನಕ್ಕಾಗ ನಿಮ್ಮಲ್ಲಿನ ಗೊಂದಲ, ನೋವು ಮರೆಯಾಗುತ್ತದೆ. ನಿಮಗೆ ಸ್ಪಂದಿಸಿ ನಗುವ ವ್ಯಕ್ತಿಯ ನೋವೂ ಗುಣವಾಗುತ್ತದೆ. ಒಬ್ಬರನ್ನೊಬ್ಬರು ಪರಿವರ್ತನೆ ಮಾಡಲು ನೀವು ಸಹಕರಿಸಿರುತ್ತೀರಿ. ನಗು ಎಂಬುದು ನಿಮ್ಮಳಗೆ ಹರಿಯುತ್ತಿರುವ ಪರಿಶುಭ್ರ ದೈವಿಕ ತೊರೆಯೊಳಗಿನ ಅಮೂಲ್ಯ ರತ್ನವಿದ್ದಂತೆ.
ನಿಶ್ಶಬ್ದದ ಮಾಂತ್ರಿಕತೆ
ಹಾಗೆಯೇ ನಿಶ್ಶಬ್ದ ಸಹ. ನಿಶ್ಶಬ್ದ ಎಂಬುದು ಶಬ್ದದ ನಗುವಾಗಿರುತ್ತದೆ. ಅದಕ್ಕಾಗಿಯೇ ನಿಶ್ಶಬ್ದದಲ್ಲಿ ಒಂದು ಮಾಂತ್ರಿಕತೆ ಇದೆ. ಹತ್ತಾರು ಆಲೋಚನೆ, ನಿರಾಸೆ, ಚಿಂತೆಗಳಿಂದ ದಣಿದ ಮನಸ್ಸಿಗೆ ನಿಶ್ಶಬ್ದ ತಂಪಾದ ಓಯಸಿಸ್. ಈ ನಿಶ್ಶಬ್ದ ನಮ್ಮನ್ನು ನಾವು ಅರಿತುಕೊಳ್ಳಲು ಸಹಕಾರಿಯಾಗಿರುತ್ತದೆ. ನಾವು ಒಬ್ಬರಿಂದ ಒಬ್ಬರು ಬೇರೆಯಾದಾಗ ನಿಶ್ಶಬ್ದವನ್ನು ಜೊತೆಗೆ ತೆಗೆದುಕೊಂಡು ಹೋಗುತ್ತೇವೆ.
ನೀವು ಈ ಜಗತ್ತಿನ ಮೇಲೆ ಮಾಡುವ ಪರಿಣಾಮ ಕಡಿಮೆಯದಲ್ಲ. ನೀವು ನಕ್ಕಾಗ ಇಡೀ ವಿಶ್ವ ಆ ನಗುವನ್ನು ಹೀರಿಕೊಳ್ಳುತ್ತದೆ. ನೀವು ಮಾಡುವ ಆಲೋಚನೆಗಳೂ ಅಲ್ಲಿ ದಾಖಲಾಗುತ್ತವೆ. ನೀವು ನಡೆಯುವ ಪ್ರತಿ ಹೆಜ್ಜೆಯ ಕಂಪನವನ್ನೂ ಭೂಮಿ ಹೀರಿಕೊಳ್ಳುತ್ತದೆ. ಹಾಗಾಗಿ ನೀವು ನಡೆಯುವಾಗ ಗೌರವದಿಂದ, ಅರಿವಿನಿಂದ ನಡೆಯಿರಿ. ಆ ಭೂಮಿಗೆ ಕೃತಜ್ಞತೆ ಸಲ್ಲಿಸಿ. ಎಲ್ಲೋ ತುರ್ತಾಗಿ ಹೋಗುವ ಸಂದರ್ಭ ಹೊರತುಪಡಿಸಿ ನಿಧಾನವಾಗಿ ನಡೆಯಿರಿ.
ದೊಡ್ಡದಾಗಿ ನಕ್ಕು ನಿಮ್ಮ ನಗು ಹಂಚಿಕೊಳ್ಳಿ. ಮೌನದಿಂದ ಇದ್ದು ಆ ಮೌನ ಹಂಚಿಕೊಳ್ಳಿ. ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ಎಲ್ಲವನ್ನೂ ಹಂಚಿಕೊಳ್ಳಿ. ಕೋಟ್ಯಂತರ ವರ್ಷಗಳಿಂದ ಯಾವುದೇ ಅಪೇಕ್ಷೆ ಇಲ್ಲದೇ ಸೂರ್ಯ ಭೂಮಿಯತ್ತ ನೋಡಿ ಮುಗುಳ್ನಗುತ್ತಾನೆ. ಅದರ ಫಲಿತಾಂಶ ನೋಡಿ, ಆ ನಗುವಿನಿಂದ ಇಡೀ ಜಗತ್ತು ಬೆಳಗುತ್ತದೆ. 
ಕೃಪೆ : ಪ್ರಜಾವಾಣಿ

ಸ್ನೇಹಿತರ ಸಂಖ್ಯೆ ಮಿದುಳಿನ ಗಾತ್ರ ಅವಲಂಬಿಸಿದೆ.. !

ವಾಷಿಂಗ್ಟನ್(ಪಿಟಿಐ): ನಿಮ್ಮ ಸ್ನೇಹಿತರ ಬಳಗ ದೊಡ್ಡದೇ ? ಫೇಸ್‌ಬುಕ್, ಟ್ವಿಟರ್‌ಗಳಲ್ಲಿ ನಿಮ್ಮನ್ನು ಅನುಸರಿಸುವವರ ಸಂಖ್ಯೆ ಹೆಚ್ಚಿದೆಯೇ?ಹಾಗಿದ್ದಲ್ಲಿ ನಿಮ್ಮ ಮಿದುಳಿನ ಗಾತ್ರ ದೊಡ್ಡದಿರಬಹುದು. ಇತರರ ಮನಸ್ಸನ್ನು ಅರ್ಥ ಮಾಡಿಕೊಳ್ಳುವ ಮಿದುಳು ದೊಡ್ಡದಿರಬಹುದೆನ್ನುತ್ತಾರೆ ವಿಜ್ಞಾನಿಗಳು.
 ಕಣ್ಣುಗುಡ್ಡೆಯ ಮೇಲ್ಭಾಗದಲ್ಲಿರುವ ಮಿದುಳಿನ `ಆರ್ಬಿಟಲ್ ಫ್ರಂಟಲ್ ಕಾರ್ಟೆಕ್ಸ್` ಭಾಗ ದೊಡ್ಡದಿದ್ದಷ್ಟೂ ವ್ಯಕ್ತಿಯ  ಸ್ನೇಹಿತರ ದಂಡು ದೊಡ್ಡದಾಗಿರುತ್ತದೆ ಎಂಬ ಅಂಶವನ್ನು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಸಂಶೋಧಕರು ಪತ್ತೆ ಹಚ್ಚಿದ್ದಾರೆ.
 ಅಲ್ಲದೇ ಹೆಚ್ಚಿನ ಸಂಖ್ಯೆಯಲ್ಲಿ ಫೇಸ್‌ಬುಕ್ ಸ್ನೇಹಿತರನ್ನು ಹೊಂದಿರುವವರಲ್ಲಿ ಸಾಮಾಜಿಕ ಸಂದೇಶ ಹಾಗೂ ಮುಖ ಭಾವವನ್ನು ಗ್ರಹಿಸುವ ಮಿದುಳಿನ ಭಾಗವೂ ದೊಡ್ಡದಾಗಿರುತ್ತದೆ ಎಂದು ಈ ವಿಜ್ಞಾನಿಗಳು ಹೇಳುತ್ತಾರೆ.
ಕೃಪೆ : ಪ್ರಜಾವಾಣಿ

Saturday, February 4, 2012

ಕುಳ್ಳರಿಗಿಂತ ಆಳೆತ್ತರ ಇರುವವರ ಆಯಸ್ಸು ಹೆಚ್ಚು !

ಕೇವಲ ನಾಲ್ಕೂವರೆ ಅಡಿ ಎತ್ತರ ಇರುವ ಹುಡುಗಿಯೂ 6 ಅಡಿ ಎತ್ತರದ ಸುಂದರ ಹಾಗೂ ದೃಢಕಾಯ ವರನನ್ನೇ ವರಿಸಲು ಇಚ್ಛಿಸುತ್ತಾಳೆ. ಇದಕ್ಕೆ ಕಾರಣ ಏನು ಗೊತ್ತೆ? ಎತ್ತರ ಇರುವವರು ಕುಬ್ಜರಿಗಿಂತಲೂ ಹೆಚ್ಚು ಕಾಲ ಬದುಕುತ್ತಾರೆ ಎನ್ನುವ ನಂಬಿಕೆ. ಹಾಗಾದರೆ ಆಳೆತ್ತರದ ವ್ಯಕ್ತಿಗಳು ದೀರ್ಘಾಯುಗಳೆ?

ಹೌದು ಎನ್ನುತ್ತದೆ ಇತ್ತೀಚಿನ ಒಂದು ಅಧ್ಯಯನ. ಈವರೆಗೆ ಹುಡುಗಿಗಿಂತ ಹುಡುಗ ಎತ್ತರ ಇರಬೇಕು ಎಂಬುದು ಕೇವಲ ಸಂಪ್ರದಾವಾಗಿತ್ತು. ಎತ್ತರದ ವ್ಯಕ್ತಿಗಳು ದೀರ್ಘಾಯುಗಳು ಎಂಬ ನಂಬಿಕೆ ಇತ್ತು. ಈ ನಂಬಿಕೆಗೆ ಇತ್ತೀಚೆಗೆ ಬ್ರಿಟನ್‌ನಲ್ಲಿ ನಡೆದ ಅಧ್ಯಯನ ವೈಜ್ಞಾನಿಕ ಪುಷ್ಟಿ ನೀಡಿದೆ ಎಂದು ಕನ್ನಡದ ದಿನಪತ್ರಿಕೆ ವರದಿ ಮಾಡಿದೆ.

ಎಲ್ಲ ಹುಡುಗಿಯರೂ ಎತ್ತರದ ಬಾಳ ಸಂಗಾತಿಯನ್ನೇ ಬಯಸುವುದೇಕೆ ಎಂಬ ಕುತೂಹಲದಿಂದ ಅಧ್ಯಯನ ನಡೆಸಿದ ಬ್ರಿಟನ್‌ನ ಬ್ರಿಸ್ಟಾಲ್‌ ವಿಶ್ವ ವಿದ್ಯಾಲಯದ ಸಮಾಜ ವೈದ್ಯಕೀಯ ವಿಭಾಗದ ಸಂಶೋಧಕ ಡಿ. ಗನ್‌ನೆಲ್‌ ಮಾನವನ ಎತ್ತರಕ್ಕೂ ಅವನ ಆಯುಷ್ಯಕ್ಕೂ ನೇರ ಸಂಬಂಧವಿದೆ ಎಂಬುದನ್ನು ಪ್ರಕಟಿಸಿದ್ದಾರೆ.

ಎತ್ತರ ಹಾಗೂ ದೀರ್ಘಾಯುಷ್ಯಕ್ಕೆ ನೇರ ಸಂಬಂಧ ಇದೆ ಎನ್ನುವುದು ಶತಮಾನಗಳಿಂದಲೂ ಕಂಡುಬಂದಿದೆ. ಶತಮಾನಗಳ ಹಿಂದೆ ಜರ್ನಲ್‌ ಆಫ್‌ ಎಪಿಡರ್ಮಿಯಾಲಜಿ ಅಂಡ್‌ ಕಮ್ಯೂನಿಟಿ ಹೆಲ್ತ್‌ ಮಾಡಿದ್ದ ವರದಿಯಲ್ಲಿ ಕುಬ್ಜತೆ ಅಲ್ಪಾವಧಿಯ ಸಂಕೇತ ಎಂದು ತಿಳಿಸಿತ್ತು ಎಂದೂ ಅವರು ಹೇಳಿದ್ದಾರೆ.

ಇದಕ್ಕಾಗಿ ಮೃತ ಮಾನವರ ಮೂಳೆಗಳ ಅಧ್ಯಯನ ನಡೆಸಿದ ಅವರು, ಕುಳ್ಳರಿಗಿಂತ ಎತ್ತರ ಇರುವವರು ಹೆಚ್ಚು ಕಾಲು ಬದುಕುತ್ತಾರೆ ಎಂಬ ನಿರ್ಣಯಕ್ಕೆ ಬಂದಿದ್ದಾರೆ. ಇದಕ್ಕಾಗಿ ಅವರು ಈಶಾನ್ಯ ಇಂಗ್ಲೆಂಡ್‌ನಲ್ಲಿ ಒಟ್ಟು 490 ಜನ ವಯಸ್ಕ ಶವಗಳ ಮೂಳೆಗಳನ್ನು ಭೂಮಿಯಿಂದ ಅಗೆದು ತೆಗೆದು ಅಧ್ಯಯನ ಮಾಡಿದ್ದಾರೆ.

ಭೂಮಿಯಲ್ಲಿ ದೊರಕಿದ ಮೂಳೆಗಳ ಉದ್ದವನ್ನು ಮಿಲಿ ಮೀಟರ್‌ಗಳಲ್ಲಿ ಅಳೆದು, ಮನುಷ್ಯನ ಶರೀರ ರಚನಾಶಾಸ್ತ್ರದ ಪ್ರಕಾರ ಅವರು ಮರಣ ಹೊಂದಿದ ವಯಸ್ಸು ಮತ್ತು ಲಿಂಗವನ್ನು ಗುರುತಿಸಿ ಅಧ್ಯಯನ ನಡೆಸಿದ್ದಾರೆ. ಈ ಅಧ್ಯಯನದ ಒಟ್ಟು ಸಾರಾಂಶ ಇಷ್ಟು - ಎತ್ತರ ಇರುವವರು ಶೇಕಡಾವಾರು ಲೆಕ್ಕದಲ್ಲಿ ಕುಳ್ಳರಿಗಿಂತ ಹೆಚ್ಚು ಕಾಲ ಬದುಕುತ್ತಾರೆ. ನೀವು ಕುಳ್ಳರಾದರೆ ಚಿಂತಿಸುವ ಅಗತ್ಯ ಇಲ್ಲ. ಆ ಶೇಕಡಾವಾರು ಲೆಕ್ಕಾಚಾರದಲ್ಲಿ ನೀವಿಲ್ಲ ಎಂದು ಕೊಂಡು ಆನಂದವಾಗಿರಿ. ಆನಂದವಾಗಿರುವ ವ್ಯಕ್ತಿಯೂ ಹೆಚ್ಚು ಕಾಲ ಬದುಕುತ್ತಾರೆ ಎನ್ನುವುದು ಮತ್ತೊಂದು ನಂಬಿಕೆ.
ಕೃಪೆ : ಒನ್ ಇಂಡಿಯಾ 

ಗುಜರಿ ಅಂಗಡಿಯ ಅವಾಂತರ !

ಬೆಂಗಳೂರು : ಗುಜರಿ ಅಂಗಡಿಯೊಂದರಲ್ಲಿ ಶಂಕಾಸ್ಪದ ವಸ್ತು ನ್ಪೋಟಗೊಂಡು ವ್ಯಕ್ತಿಯೊಬ್ಬ ಸಾವನ್ನಪ್ಪಿ, ಮೂರು ಮಂದಿ ಗಾಯಗೊಂಡಿರುವ ಘಟನೆ ಹುಳಿಮಾವು ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ನಡೆದಿದೆ.

ಈ ದುರಂತದಲ್ಲಿ ಮೃತಪಟ್ಟ ವ್ಯಕ್ತಿಯ ಹೆಸರು ತಿಳಿದುಬಂದಿಲ್ಲ. ಈ ಘಟನೆಯಲ್ಲಿ ಹುಳಿಮಾವು ನಿವಾಸಿ ಸೆಲ್ವಿ, ಪುತ್ರ ಸರವಣ ಹಾಗೂ ಸುರೇಶ್‌ ತೀವ್ರವಾಗಿ ಗಾಯಗೊಂಡಿದ್ದು, ಇವರ ಪೈಕಿ ಸೆಲ್ವಿ ವಿಕ್ಟೋರಿಯಾ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದಲ್ಲಿ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.

ಘಟನೆ ಹಿನ್ನೆಲೆ

ಹುಳಿಮಾವಿನ ಶ್ರೀ ರಾಮದೇವರ ದೇವಾಲಯ ರಸ್ತೆಯ ಬಾಲಕೃಷ್ಣ ಅವರ ಗುಜರಿ ಅಂಗಡಿಗೆ ಮೃತ ಅಪರಿಚಿತ ವ್ಯಕ್ತಿಯು ಬೆಳಗ್ಗೆ 11 ಗಂಟೆಯಲ್ಲಿ ನಿರುಪಯೋಗಿ ವಸ್ತು ಮಾರಾಟ ಮಾಡುವ ಸಲುವಾಗಿ ಬಂದಿದ್ದಾನೆ. ಆಗ ಗ್ರಾಹಕನಿಗೆ ಕಾಪರ್‌ ವೈರ್‌ ಬೇರ್ಪಡಿಸಿ ಕೊಡುವಂತೆ ಅಂಗಡಿ ಮಾಲೀಕರೂ ಆಗಿರುವ ಸೆಲ್ವಿ ಸೂಚಿಸಿದ್ದಾರೆ. ಅದರಂತೆ ಆ ವಸ್ತುವಿನಿಂದ ತಾಮ್ರದ ವೈರ್‌ ಬೇರ್ಪಡಿಸಲು ಕಲ್ಲಿನಿಂದ ಹೊಡೆದಾಗ ಹಠಾತ್‌ ಸ್ಫೋಟ ಉಂಟಾಗಿದೆ.

ಈ ನ್ಪೋಟದಿಂದ ಅಪರಿಚಿತ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಸೆಲ್ವಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಇನ್ನೂ ಅಂಗಡಿಯಲ್ಲಿದ್ದ ಸರವಣ ಹಾಗೂ ದಾರಿಯಲ್ಲಿ ಹೋಗುತ್ತಿದ್ದ ಸತೀಶ್‌ ಕೂಡ ಗಾಯಗೊಂಡಿದ್ದಾರೆ. ಗಾಯಾಳುಗಳು ಪ್ರಾಣಾಪಾಯದಿಂದ ಪರಾಗಿದ್ದಾರೆ.

ಈ ನ್ಪೋಟದ ತೀವ್ರತೆಗೆ ಅಕ್ಕಪಕ್ಕದ ಅಂಗಡಿಗಳ ಗಾಜುಗಳು ಪುಡಿ ಪುಡಿಯಾಗಿದ್ದು, ಕೆಲ ಹೊತ್ತು ಸಾರ್ವಜನಿಕರು ಭಯಭೀತರಾಗಿದ್ದರು. ಈ ಘಟನಾ ಸ್ಥಳಕ್ಕೆ ಶ್ವಾನ ದಳ, ವಿಧಿ ವಿಜ್ಞಾನ ತಜ್ಞರು ಹಾಗೂ ಬಾಂಬ್‌ ನಿಷ್ಕ್ರಿಯ ದಳದ ಅಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸಿದರು.

ಜಿಲೇಟಿನ್‌ ಕಡ್ಡಿಗಳು?

ಪೊಲೀಸರು ಈ ಶಂಕಾಸ್ಪದ ವಸ್ತುವಿನಿನಲ್ಲಿ ಜಿಲೆಟಿನ್‌ ಇದ್ದಿರಬಹುದು ಎಂದು ಶಂಕಿಸಿದ್ದಾರೆ. ಆದರೆ, ಸಾಮಾನ್ಯವಾಗಿ ಜಿಲೆಟಿನ್‌ಗೆ ತಾಮ್ರದ ತಂತಿ ಸುತ್ತಲಾಗುವುದಿಲ್ಲ. ಆದರೆ, ಉಂಡೆ ರೂಪದಲ್ಲಿದ್ದ ಈ ಶಂಕಾಸ್ಪದ ವಸ್ತುವಿನಲ್ಲಿ ಜಿಲೆಟಿನ್‌ ಹಾಗೂ ತಾಮ್ರದ ವೈಯರ್‌ ಇದ್ದಿರಬಹುದು. ಅದನ್ನು ಬೇರ್ಪಡಿಸಲು ಹೋದಾಗ ಸ್ಫೋಟ ಸಂಭವಿಸಿರಬಹುದು ಎಂಬುದು ಪೊಲೀಸರ ಅಂದಾಜು.

ಅನೇಕಲ್‌ ತಾಲೂಕು ವ್ಯಾಪ್ತಿಯ ಜಲ್ಲಿ ಕ್ರಷರ್‌ ಹಾಗೂ ಕಲ್ಲು ಗಣಿಗಾರಿಕೆಯಲ್ಲಿ ದೊಡ್ಡ ದೊಡ್ಡ ಕಲ್ಲು ಬಂಡೆಗಳ ನ್ಪೋಟಕಕ್ಕೆ ಬಳಸಿದ್ದ ನಿರ್ಜೀವ ಜಿಲೇಟಿನ್‌ ಕಡ್ಡಿಗಳನ್ನು ಗುಜರಿ ಅಂಗಡಿಯಲ್ಲಿ ಮಾರಾಟ ಮಾಡಲು ಬಂದಿರಬಹುದು ಎನ್ನಲಾಗಿದೆ.

ಈ ದುರಂತದಲ್ಲಿ ಮೃತಪಟ್ಟ ವ್ಯಕ್ತಿಯ ಪೂರ್ವಾಪರ ಮಾಹಿತಿ ಪೊಲೀಸರಿಗೆ ಲಭ್ಯವಾದ ಬಳಿಕ ಎಲ್ಲಿಂದ ಗುಜರಿಗೆ ಅಂಗಡಿಗೆ ನಿರುಪ ಯುಕ್ತ ವಸ್ತು ಸರಬರಾಜಾಗಿದೆ ಎಂಬ ಬಗ್ಗೆ ಸುಳಿವು ಸಿಗಲಿದೆ. ಅಲ್ಲದೆ ಘಟನಾ ಸ್ಥಳದಲ್ಲಿ ಸಿಕ್ಕಿದ ವಸ್ತುಗಳನ್ನು ಬಾಂಬ್‌ ನಿಷ್ಕ್ರಿಯ ದಳವು ಸಂಗ್ರಹಿಸಿದ್ದು, ಇದನ್ನು ಪರೀಕ್ಷೆಗೊಳಪಡಿಸಿದೆ. ಬಾಂಬ್‌ ನಿಷ್ಕ್ರಿಯ ದಳದ ಪರೀಕ್ಷೆಯಲ್ಲಿ ನ್ಪೋಟಕ ನಿಖರ ಕಾರಣ ತಿಳಿದು ಬರಲಿದೆ.

ಈ ಘಟನಾ ಸ್ಥಳಕ್ಕೆ ಅಗ್ನೇಯ ವಿಭಾಗದ ಡಿಸಿಪಿ ಡಾ.ಹರ್ಷ ಹಾಗೂ ಎಸಿಪಿ ರಾಚಪ್ಪ ಸೇರಿದಂತೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. ಈ ಸಂಬಂಧ ಹುಳಿಮಾವು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸ್ಫೋಟ ದಾರಿ ತಪ್ಪಿಸಲು ಪೊಲೀಸರ ಯತ್ನ?

ಹುಳಿಮಾವು ನ್ಪೋಟ ಪ್ರಕರಣದಲ್ಲಿ ತಪ್ಪಿತಸ್ಥರ ರಕ್ಷಣೆಗೆ ಕೆಲ ಪೊಲೀಸ್‌ ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ ಎನ್ನಲಾಗುತ್ತದೆ. ಕ್ರಷರ್‌ ಹಾಗೂ ಕಲ್ಲು ಗಣಿಗಾರಿಕೆಯಲ್ಲಿ ನ್ಪೋಟಕ ವಸ್ತು ಬಳಕೆಗೆ ಪೊಲೀಸರ ಅನುಮತಿ ಪಡೆಯಬೇಕಿದೆ. ಹಾಗಾಗಿ ಪ್ರಭಾವಿ ಗಣಿ ಉದ್ಯಮಿಗಳ ಕೊರಳಿಗೆ ಈ ಗುಜರಿ ಅಂಗಡಿ ನ್ಪೋಟ ಪ್ರಕರಣ ಸುತ್ತಿಕೊಳ್ಳುವ ಸಾಧ್ಯತೆ ಅರಿತು ತನಿಖೆ ದಿಕ್ಕು ತಪ್ಪಿಸುವ ಯತ್ನ ನಡೆದಿದೆ ಎನ್ನಲಾಗುತ್ತದೆ.

ಮೃತಪಟ್ಟ ವ್ಯಕ್ತಿಯ ಮಾಹಿತಿ ಲಭ್ಯವಿದ್ದರು ಸಹ ಬಹಿರಂಗಗೊಳಿಸದೆ ಗೌಪ್ಯವಾಗಿರಿಸಲಾಗಿದೆ ಎಂದು ತಿಳಿದು ಬಂದಿದೆ.

ಹುಳಿಮಾವು ಗುಜರಿ ಅಂಗಡಿ ನ್ಪೋಟ ಪ್ರಕರಣ ಸಂಬಂಧ ಬಾಂಬ್‌ ನಿಷ್ಕ್ರಿಯ ದಳ ಹಾಗೂ ವಿಧಿ ವಿಜ್ಞಾನ ಪ್ರಯೋಗಾಲಯ ನೀಡುವ ವರದಿಯಿಂದ ನ್ಪೋಟಕಕ್ಕೆ ನಿಖರ ಕಾರಣ ತಿಳಿದು ಬರಲಿದೆ. ಈ ವರದಿ ಬಂದ ನಂತರವೇ ತಪ್ಪಿತಸ್ಥರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತದೆ. ಅಲ್ಲದೆ ಮೃತ ವ್ಯಕ್ತಿಯ ಪೂರ್ವಾಪರ ಮಾಹಿತಿಗೆ ತನಿಖೆ ನಡೆಸಲಾಗುತ್ತಿದೆ.
                                                                                              -ಡಾ.ಹರ್ಷ, ಡಿಸಿಪಿ, ಅಗ್ನೇಯ ವಿಭಾಗ

Friday, February 3, 2012

ಕೆಸರಗದ್ದೆಯಲ್ಲಿ ಹೆಂಡತಿಯ ಹೊತ್ತೋಡುವ ಪಂಥ !


  • ಕಳೆದ ಬಾರಿ ಸುಮಾರು ಹತ್ತು ಜೋಡಿಗಳು ಈ ಗಮ್ಮತ್ತಿನ ಓಟದಲ್ಲಿ ಪಾಲ್ಗೊಂಡಿದ್ದವು. (ಫೈಲ್‌ ಚಿತ್ರ)

    •                                        Udayavani | Jan 31, 2012

       ಕೆಸರು ಗದ್ದೆ, ಹೆಂಡತಿಯನ್ನು ಬೆನ್ನು, ಹೆಗಲ ಮೇಲೆ ಹೊತ್ತುಕೊಂಡ ಗಂಡುಗಲಿಗಳು, ಸುತ್ತಲೂ ಈ ಗಮ್ಮತ್ತನ್ನು ನೋಡುವ ಸಹಸ್ರಾರು ಕಣ್ಣುಗಳು, ಅವರ ತಮಾಶೆ, ಬೊಬ್ಬೆ, ಹರ್ಷೋದ್ಗಾರಗಳ ನಡುವೆ ಈ ಗಂಡ ತನ್ನ ಹೆಂಡತಿಯನ್ನು ಹೊತ್ತುಕೊಂಡು ಕೆಸರ ಗದ್ದೆಯಲ್ಲಿ ಓಡಬೇಕು!

          ಇಂಥ ಒಂದು ಸ್ಪರ್ಧೆ ತೀರಾ ಅಪರೂಪದ್ದು. ಪಶ್ಚಿಮ ಕರಾವಳಿಗಂತೂ ಹೊಸದೇ. ಪ್ರಾಯ: ದೇಶಕ್ಕೂ.

          ದ.ಕ. ಜಿಲ್ಲೆಯ ಮಂಗಳೂರು ತಾಲೂಕಿನ ಎಡಪದವು ಗ್ರಾಮದ ಶಾಸ್ತಾವು ಶ್ರೀ ಭೂತನಾಥೇಶ್ವರ ದೇವಳದ ಆಶ್ರಯದಲ್ಲಿ ಕಳೆದ ವರ್ಷ ಏರ್ಪಡಿಸಲಾಗಿದ್ದ ವಿಶಿಷ್ಟ , ಮೋಜಿನ ಸ್ಪರ್ಧೆಯಿದು. ಈ ಬಾರಿಯೂ (ಫೆ.17,18,19) ಈ ಸ್ಪರ್ಧೆ ನಡೆಯಲಿದೆ.

          ಸಾಮಾನ್ಯವಾಗಿ ಗಂಡು ಹೆಣ್ಣಿಗಿಂತ ಬಲಶಾಲಿ ಎಂಬ ಅಂಬೋಣವಿದೆ. ಹಾಗಾಗಿ ಹೆಣ್ಣನ್ನು ಗಂಡು ಹೊತ್ತು ಕೊಂಡು ಓಡುವುದೇನು ಮಹಾ ಎನ್ನಬಹುದು. ಆದರೆ ಗಂಡಿಗಿಂತ ಸ್ಥೂಲ ಶರೀರಿಯಾಗಿರುವ ಹೆಣ್ಣನ್ನು ಹೊರುವುದೇ ಕಷ್ಟ; ಇನ್ನು ಹೊತ್ತುಕೊಂಡು

          ಓಡುವುದಂತೂ ತ್ರಾಸದಾಯಕವೇ.

          ಶತಮಾನಗಳ ಹಿನ್ನೆಲೆಯಿರುವ ಶಾಸ್ತಾವು ದೇವಳವು ಕ್ಷೇತ್ರದ ಆಡಳಿತ ಮೊಕ್ತೇಸರ, ಉದ್ಯಮಿ ವಿಜಯನಾಥ ವಿಠಲ ಶೆಟ್ಟಿ ಅವರ ಚಿಂತನೆ, ಪರಿಶ್ರಮಗಳ ಕಾರಣದಿಂದ ಪುರಾತನ ಶೈಲಿಯ ದೇಗುಲವಾಗಿ ವರುಷಗಳ ಹಿಂದೆ ಜೀರ್ಣೋದ್ಧಾರಗೊಂಡಿತು. ದೇವಳವನ್ನು ಜನ ಮನದ ಆರಾಧನಾಕೇಂದ್ರವಾಗಿಸಬೇಕು ಎಂಬ ಆಶಯ ಹೊತ್ತ ವಿಜಯನಾಥ ಶೆಟ್ಟಿ ಅವರು ಈ ದಿಸೆಯಲ್ಲಿ ದೇವಳದ ಅವರಣದಲ್ಲಿ ನಿತ್ಯ ನಿರಂತರವೆಂಬಂತೆ ಜನ ಮನ ಸೆಳೆಯುವ ಆದರೆ ಸಾಂಸ್ಕೃತಿಕ ಮೌಲ್ಯಗಳೂ ಬೆಸೆದುಕೊಂಡಿರುವ ಚಟುವಟಿಕೆಗಳನ್ನು ನಡೆಸುತ್ತಾ ಬರುತ್ತಿದ್ದಾರೆ. ಅವುಗಳಲ್ಲಿ ಕಳೆದ ಸಾಲಿನಲ್ಲಿ ನಡೆಸಿದ ಗ್ರಾಮೀಣ ಸ್ಪರ್ಧೆಗಳಂತೂ ಗ್ರಾಮದ ಮಾತ್ರವಲ್ಲ ನಾಡಿನ ಉದ್ದಗಲಕ್ಕೂ ಪ್ರಚಾರ ಪಡೆದುಕೊಂಡವು. ಮರೆತು ಹೋಗುತ್ತಿರುವ ಗ್ರಾಮೀಣ ಆಟೋಟಗಳೆಲ್ಲ ಶಾಸ್ತಾವು ದೇವಳದ ಆವರಣದಲ್ಲಿ ಮರು ಜೀವ, ಮರು ಹುಟ್ಟು ಪಡೆದವು. ಹೀಗೂ ಇತ್ತಲ್ಲ ನಮ್ಮ ಜಾನಪದ ಆಟ, ವಿನೋದಗಳ ಸೊಗಸು ಎಂದು ಆಧುನಿಕರು ಅಚ್ಚರಿ ಅಭಿಮಾನಗಳಿಂದ ಅವುಗಳಲ್ಲಿ ಪಾಲ್ಗೊಳ್ಳಲು ಮುಂದೆ ಬಂದರು. ಅಂಥ ಆಟೋಟಗಳಲ್ಲಿ ಬಹಳ ಮೋಜು, ಒಂದಿಷ್ಟು ದೈಹಿಕ ಪರಿಶ್ರಮದ ಆಟವಾಗಿ ಜನರನ್ನು ರಂಜಿಸಿದ್ದೇ ' ಕೆಸರುಗದ್ದೆಯಲ್ಲಿ ಜೋಡಿ ಓಟ'

          ಕಳೆದ ಬಾರಿ ಸುಮಾರು ಹತ್ತು ಜೋಡಿಗಳು ಈ ಗಮ್ಮತ್ತಿನ ಓಟದಲ್ಲಿ ಪಾಲ್ಗೊಂಡಿದ್ದವು. ಗಂಡಸರಂತೂ ಅರೆ ಮುಜುಗರ, ಒಂದಿನಿತು ಖುಷಿಯಿಂದ ಛಲದಂಕ ಮಲ್ಲರಾಗಿ ಹೆಂಡತಿಯನ್ನು ಹೊತ್ತುಕೊಂಡು ಸುಮಾರು 75 ಮೀಟರ್‌ ಉದ್ದದ ಕೆಸರುಗದ್ದೆಯ ಟ್ರಾಕ್‌ನಲ್ಲಿ ಓಡಿದರು. ಗಂಡನ ಬೆನ್ನೇರಿ ತಮ್ಮ ತೋಳುಗಳಿಂದ ಗಂಡನಿಗೆ ತೋಳಬಂದಿ ತೊಡಿಸಿದ ಮಡದಿಯರನೇಕರು, ಶೀಟಿ ಹೊಡೆಯುತ್ತ, ತಮಾಶೆಯಿಂದ ಬೊಬ್ಬೆ ಹಾಕುತ್ತ ಇದ್ದ ವೀಕ್ಷಕರರತ್ತ ನೋಡಲೇ ಇಲ್ಲ! ಕೆಲವರಷ್ಟೇ ಜನರ ಖುಷಿಯೊಂದಿಗೆ ತಾವೂ ಖುಷಿಯಿಂದ ನಸುನಗುತ್ತ ಜತೆಗಾರ ಗಂಡ ಗುರಿ ತಲುಪುವವರೆಗೂ ಸ್ಪರ್ಧೆಗೆ ರಂಗೇರಿಸಿದರು. ಈ ಖುಷಿಯಲ್ಲಿ ತಮ್ಮ ಸೀರೆ, ಗಂಡನ ಕಚ್ಚೆ ಪಂಚೆ ಕೆಸರು ಮಣ್ಣು ಅಂಟಿಸಿಕೊಂಡದ್ದು ಗೊತ್ತೇ ಆಗಲಿಲ್ಲ.

          ಹೀಗೆ ನಡೆದ ಸ್ಪರ್ಧೆಯಲ್ಲಿ ಗೆದ್ದವರಿಗೆ ಚಿನ್ನದ ಪದಕ, ನಗದು ಬಹುಮಾನ ಎಲ್ಲಕ್ಕಿಂತ ಮುಖ್ಯವಾಗಿ ಜನರನ್ನು ರಂಜಿಸಿದ ಸಂತೋಷ ಎಲ್ಲವೂ ಪ್ರಾಪ್ತಿಯಾಗಿತ್ತು. ಏಕೆಂದರೆ ಈ 'ಶ್ರೀ ಭೂತನಾಥೇಶ್ವರ ಕ್ರೀಡೋತ್ಸವ' ಉಪ ಶೀರ್ಷಿಕೆಯೇ ಹೀಗಿದೆ-

          ' ಮನಸ್‌Õದ ಉಲ್ಲಾಸೊಗು ಬೋಡಾದ್‌ ಎಂಚಿನಲಾ ಮಲ್ಪುವ'!

          ಪ್ರಾರಂಭದ ವರುಷವಾದುದರಿಂದ ಎಡಪದವು, ಮಿಜಾರು, ಗಂಜಿಮಠ ಮೊದಲಾದ ಪರಿಸರದಿಂದ ಕೆಲವೇ ಜೋಡಿಗಳು ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಮನಸ್ಸು ಮಾಡಿದ್ದಿರಬೇಕು. ಈ ಬಾರಿ ಇತರ 40 ಬಹುವರ್ಣ ರಂಜಿತ ಸ್ಪರ್ಧೆಗಳ ಜತೆಗೆ ಈ ' ಜೋಡಿ ಓಟ ಅಥವಾ ದಂಪತಿ ಒಟ'ದ ಸ್ಪರ್ಧೆಯನ್ನೂ ಹಮ್ಮಿಕೊಳ್ಳಲಾಗಿದೆ.



Thursday, February 2, 2012

ಬಾಲಕನ ಮೇಲೆ ಹಿಜಡಾಗಳ ದೌರ್ಜನ್ಯ !

ಬೆಂಗಳೂರು: ಬಾಲಕನನ್ನು ಗೃಹ ಬಂಧನದಲ್ಲಿಟ್ಟು ಲಿಂಗಪರಿವರ್ತನೆಗೆ ಪ್ರಯತ್ನಿಸಿದ್ದ ಹಿಜಡಾಗಳ ಮನೆ ಮೇಲೆ ಸಾರ್ವಜನಿಕರು ಕಲ್ಲು ತೂರಾಟ ನಡೆಸಿರುವ ಘಟನೆ ಆರ್‌ಪಿಸಿ ಲೇಔಟ್‌ನಲ್ಲಿ ಸೋಮವಾರ ರಾತ್ರಿ ನಡೆದಿದೆ.

ಸಂಜೆ ಮನೆಯ ಬಳಿ ಆಟವಾಡುತ್ತಿದ್ದ ಬಾಲಕನನ್ನು ಹಿಜಡಾಗಳು ಬಲವಂತವಾಗಿ ಎಳೆದೊಯ್ದು ಮನೆಯೊಂದರಲ್ಲಿ ಕೂಡಿ ಹಾಕಿದ್ದರು. ಅಲ್ಲದೇ ಬಾಲಕನನ್ನು ನಗ್ನಗೊಳಿಸಿ ಆ ದೃಶ್ಯಗಳನ್ನು ಮೊಬೈಲ್ ನಲ್ಲಿ ಚಿತ್ರೀಕರಿಸಿಕೊಂಡು ಲಿಂಗ ಪರಿವರ್ತನೆಗೆ ಪ್ರಯತ್ನ ನಡೆಸುತ್ತಿದ್ದರು. ಬಾಲಕನ ಅರಚಾಟದಿಂದ ಸ್ಥಳಕ್ಕೆ ಹೋಗಿ ಕೃತ್ಯದಿಂದ ರಕ್ಷಿಸಲಾಯಿತು ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.

15 ದಿನಗಳ ಹಿಂದೆ ಇದೇ ಹಿಜಡಾಗಳು ಬಾಲಕನೊಬ್ಬನ ಲಿಂಗಪರಿವರ್ತನೆ ಮಾಡಿದ್ದರು. ಮಾನವೀಯತೆಯ ದೃಷ್ಟಿಯಿಂದ ನಾವು ಸುಮ್ಮನಿದ್ದೇವೆ ಆದರೆ ಪ್ರತಿನಿತ್ಯ ರಸ್ತೆಯಲ್ಲಿ ಅಸಭ್ಯವಾಗಿ ವರ್ತಿಸುತ್ತಾ ಪುರುಷರನ್ನು ಹಣಕ್ಕಾಗಿ ಪೀಡಿಸುತ್ತಿದ್ದಾರೆ. ಆದ್ದರಿಂದ ಕೂಡಲೇ ಮನೆಯನ್ನು ಖಾಲಿ ಮಾಡಿಸಿ ಎಂದು ಮನೆ ಮಾಲೀಕರನ್ನು ಒತ್ತಾಯಿಸಿದರು. `ಮಲ್ಲೇಶ್ವರದ ನಿವಾಸಿಯಾದ ಬಾಲಕ ಗೃಹಪ್ರವೇಶದ ಸಲುವಾಗಿ ವಿಜಯನಗರದಲ್ಲಿರುವ ಮಾವನ ಮನೆಗೆ ಬಂದಿದ್ದ. ಈ ಪ್ರದೇಶದಲ್ಲಿ ಹಲವು  ಹಿಜಡಾಗಳಿದ್ದು, ಸಂಜೆ ಬಾಲಕ ಆಟವಾಡುತ್ತಿದ್ದಾಗ ಅವನನ್ನು ಕರೆದು ಅಸಭ್ಯವಾಗಿ ವರ್ತಿಸಿದ್ದಾರೆ. ಘಟನೆಯಿಂದ ಆವೇಶಗೊಂಡ ಸ್ಥಳೀಯರು ಅವರ ಮನೆ ಮೇಲೆ ಕಲ್ಲು ತೂರಾಡಿದ್ದಾರೆ. ಯಾರಾದರು ದೂರು ನೀಡಿದರೆ ಆರೋಪಿಗಳನ್ನು ಬಂಧಿಸುತ್ತೇವೆ` ಎಂದು ಪೊಲೀಸರು ತಿಳಿಸಿದರು.
ಕೃಪೆ : ಪ್ರಜಾವಾಣಿ

ಡೇಟಿಂಗ್‌ಗೆ ವಯಸ್ಸಿನ ಹಂಗೇಕೆ ?



 
`ನ ಉಮ್ರ ಕಿ ಸೀಮಾ ಹೋ, ನ ಜನ್ಮ್ ಕಾ ಹೋ ಬಂಧನ್`
ಜೆನ್ನಿಫರ್ ಲೋಪೆಜ್‌ನೊಂದಿಗೆ ಡೇಟ್‌ನಲ್ಲಿ ನಿರತನಾಗಿರುವ 24ರ ಹುಡುಗ ಕ್ಯಾಸ್ಪರ್ ಸ್ಮಾರ್ಟ್ ಸದ್ಯ ಇದೇ ಹಾಡನ್ನು ಗುನುಗುವಂತಿದೆ. 42ರ ಹರೆಯದ ಜೆನ್ನಿಫರ್ ಜೊತೆಗಿನ ಬಾಂಧವ್ಯಕ್ಕೆ ವಯಸ್ಸು ತೊಡಕಲ್ಲವೇ ಅಲ್ಲ ಎಂದು ಅವನು ಟ್ವೀಟ್ ಮಾಡಿದ್ದಾನೆ. ಇವರಿಬ್ಬರ ವಯಸ್ಸಿನ ಅಂತರದ ಬಗ್ಗೆ ಸ್ಮಾರ್ಟ್‌ಗೆ ಅನೇಕ ಟೀಕೆಗಳು ಬಂದೆರಗಿವೆ. `ನಮ್ಮಿಬ್ಬರ ಪ್ರೀತಿಗೆ ವಯಸ್ಸು, ಅಂತಸ್ತು ಹಾಗೂ ಇತರರ ಅಭಿಪ್ರಾಯಗಳ ಹಂಗಿಲ್ಲ. ಆತ್ಮ ಸಾಂಗತ್ಯದಲ್ಲಿ ನಮ್ಮ ಹೃದಯಗಳು ಒಂದಾಗಿವೆ` ಎಂದು ಕ್ಯಾಸ್ಪರ್ ಅಂಥ ಟೀಕೆಗಳಿಗೆಲ್ಲಾ ಸ್ಮಾರ್ಟಾಗಿ ಪ್ರತಿಕ್ರಿಯಿಸಿದ್ದಾನೆ.
ಕೃಪೆ : ಪ್ರಜಾವಾಣಿ