Saturday, March 24, 2012

ಎಕ್ಸಾಂ ಹಾಲ್‌‌ನಲ್ಲಿ ವಿದ್ಯಾರ್ಥಿನಿಯರನ್ನು ನಗ್ನಗೊಳಿಸಿದ ಆಫೀಸರ್ !

10ನೇ ಪರೀಕ್ಷೆಗೆ ಹಾಜರಾಗಿದ್ದ ಇಬ್ಬರು ದಲಿತ ವಿದ್ಯಾರ್ಥಿನಿಯರನ್ನು ಮಹಿಳಾ ಮೇಲ್ವಿಚಾರಕರು 40 ವಿದ್ಯಾರ್ಥಿಗಳ ಸಮ್ಮುಖದಲ್ಲಿಯೇ ಬೆತ್ತಲೆಗೊಳಿಸಿರುವ ಘಟನೆ ಮಧ್ಯಪ್ರದೇಶದ ನರಸಿಂಗ್‌ಪುರ್ ಜಿಲ್ಲೆಯ ಬಾರ್ಹೆಬಾರಾ ಗ್ರಾಮದಲ್ಲಿ ವರದಿಯಾಗಿದೆ.
ಬಾರೆಬರಾ ಗ್ರಾಮದಲ್ಲಿರುವ ಸರಕಾರಿ ಹಿರಿಯ ಪ್ರೌಢ ಶಾಲೆಯಲ್ಲಿ ಇಂತಹ ಹೇಯ ಘಟನೆ ನಡೆದಿದೆ. ಕೆಲವೇ ಕೆಲ ವಿದ್ಯಾರ್ಥಿನಿಯರು ಹಾಗೂ 40 ಮಂದಿ ವಿದ್ಯಾರ್ಥಿಗಳು 10 ನೇ ತರಗತಿಯ ಪರೀಕ್ಷೆಗೆ ಹಾಜರಾಗಿದ್ದರು. ಮಹಿಳಾ ಮೇಲ್ವಿಚಾರಕಿಯರಾದ ಪ್ರೀತಿ ಶರ್ಮಾ ಮತ್ತು ರೆಷ್ಮಾ ಸಿಮೈಯಾ ಕಾಪಿ ಹೊಡೆಯುತ್ತಿದ್ದಾರೆ ಎನ್ನುವ ಸಂಶಯದಿಂದ ಇಬ್ಬರು ದಲಿತ ವಿದ್ಯಾರ್ಥಿನಿಯರ ವಿಚಾರಣೆ ನಡೆಸಿದ್ದಾರೆ.
ಮಹಿಳಾ ಮೇಲ್ವಿಚಾರಕರ ವರ್ತನೆಯಿಂದ ನೊಂದ ದಲಿತ ವಿದ್ಯಾರ್ಥಿನಿಯರು ಮಾತನಾಡಿ, ತಾವು ಯಾವುದೇ ನಕಲು ಮಾಡಿಲ್ಲ ಎಂದು ಹೇಳಿದರೂ ಕೇಳದೆ ಬಟ್ಟೆ ಬಿಚ್ಚದಿದ್ದಲ್ಲಿ ತಾವೇ ಬಿಚ್ಚುವುದಾಗಿ ಹೆದರಿಸಿದ್ದಾರೆ. ವಿದ್ಯಾರ್ಥಿಗಳ ಮುಂದೆ ಸಂಪೂರ್ಣವಾಗಿ ಬೆತ್ತಲೆಗೊಳಿಸಿದ್ದಾರೆ ಎಂದು ತನಿಖಾಧಿಕಾರಿ ಪಿ.ಎನ್.ಯಾದವ್ ಮುಂದೆ ಹೇಳಿಕೆ ನೀಡಿದ್ದಾರೆ.
ವಿದ್ಯಾರ್ಥಿನಿಯರು ಘಟನೆಯ ಬಗ್ಗೆ ಒಂಬತ್ತು ದಿನಗಳವರೆಗೆ ತಂದೆ ತಾಯಿ ಮುಂದೆ ಬಾಯಿ ಬಿಟ್ಟಿರಲಿಲ್ಲ. ಆದರೆ, ಕೊನೆಗೆ ಕುಟುಂಬದ ಸದಸ್ಯರಿಗೆ ತಿಳಿಸಿದ್ದಾರೆ. ಕುಟುಂಬದ ಸದಸ್ಯರು ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದಾರೆ.
ಜಿಲ್ಲಾಧಿಕಾರಿ ಸಂಜಯ್ ಸಿಂಗ್ ಮಾತನಾಡಿ, ಮಹಿಳಾ ಮೇಲ್ವಿಚಾರಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಪ್ರಕರಣದ ತನಿಖೆಗಾಗಿ ತನಿಖಾಧಿಕಾರಿಗಳನ್ನು ನೇಮಿಸಲಾಗಿದೆ. ಶೀಘ್ರದಲ್ಲಿ ವರದಿ ಸಲ್ಲಿಸುವಂತೆ ಆದೇಶಿಸಲಾಗಿದೆ ಎಂದು ತಿಳಿಸಿದ್ದಾರೆ.
ಕೃಪೆ : ವೆಬ್ ದುನಿಯಾ

Saturday, March 3, 2012

Actress Sneha Ullal videoಮಂಗಳೂರು ಮೊಲ್ಲೆ ಸ್ನೇಹಾ ಉಲ್ಲಾಳ್ ರಾಸಲೀಲೆಗಳ ವಿಡಿಯೋ ಲೋಕಾರ್ಪಣೆಗೊಂಡಿದೆ. ಈ ಹಾಟ್ ವಿಡಿಯೋವನ್ನು ಸ್ವತಃ ಸ್ನೇಹಾ ಬಿಡುಗಡೆ ಮಾಡಿದ್ದು ಪಡ್ಡೆಗಳ ಹೃದಯಕ್ಕೆ ನೇರವಾಗಿ ಕಾಮಬಾಣ ಹೂಡಿದ್ದಾರೆ. ಹಾಸಿಗೆ ಮೇಲಿನ ಆಕೆಯ ಉರುಳಾಟ, ಮುಲುಕಾಟದ ದೃಶ್ಯಗಳು ಸಖತ್ ಹಾಟ್ ಆಗಿದ್ದು ಭಾರಿ ಚರ್ಚೆಗೆ ಕಾರಣವಾಗಿದೆ.

ಸಲ್ಮಾನ್ ಖಾನ್ ಜೊತೆಗಿನ 'ಲಕ್ಕಿ: ನೋ ಟೈಮ್ ಫರ್ ಲವ್' ಎಂಬ ಚಿತ್ರ ಬಾಕ್ಸಾಫೀಸಲ್ಲಿ ತಾಚಿಕೊಂಡ ಬಳಿಕ ಸ್ನೇಹಾಳ ಬಾಲಿವುಡ್‌ ಕನಸು ಮುರಿದು ಬಿದ್ದಿತ್ತು. ತನ ಕನಸನ್ನು ನನಸು ಮಾಡಿಕೊಳ್ಳುವ ತವಕದಲ್ಲಿರುವ ಆಕೆ ಈಗ ಹಾಟ್ ವಿಡಿಯೋವನ್ನು ರಿಲೀಸ್ ಮಾಡಿದ್ದಾರೆ.

Vimeo ಎಂಬ ವಿಡಿಯೋಗಳ ಹಂಚಿಕೆ ತಾಣದಲ್ಲಿ ಈ ಶೃಂಗಾರ ವಿಡಿಯೋವನ್ನು ಹಾಕಿ ಪಡ್ಡೆಗಳನ್ನು ಕೆಣಕಿದ್ದಾರೆ. ಒಟ್ಟು 3 ನಿಮಿಷಗಳ ಅವಧಿಯ ವಿಡಿಯೋ ಕ್ಲಿಪ್ಪಿಂಗ್‌ನಲ್ಲಿ ಹಾಸಿಗೆ ಮೇಲೆ ಉರುಳಾಡುತ್ತಾ, ಒಳ್ಳೆ ಬೆದೆಗೆ ಬಂದ ಹಸುವಿನಂತೆ ಹ್ಞೂಕರಿಸಿದ್ದಾಳೆ. ಆಕೆಯ ಮುಲುಕಾಟ, ಕುಲುಕಾಟದ ವಿಡಿಯೋಗೆ 'Lick' ಎಂದು ಹೆಸರಿಟ್ಟಿದ್ದಾರೆ.

ಜೂನಿಯರ್ ಐಶ್ವರ್ಯ ರೈ ಎಂದೇ ಖ್ಯಾತಳಾಗಿರುವ ಈಕೆ ಮಧು ಬಂಗಾರಪ್ಪನವರ 'ದೇವಿ' ಚಿತ್ರದ ಮೂಲಕ ಕನ್ನಡದಲ್ಲಿ ಮೊದಲ ಹೆಜ್ಜೆ ಇಟ್ಟಿದ್ದರು. ಬಾಲಿವುಡ್ ತಾರೆಗಳಾಗ ಪೂನಂ ಪಾಂಡೆ, ಮಲ್ಲಿಕಾ ಶೆರಾವತ್, ಶೆರ್ಲಿನ್ ಚೋಪ್ರಾ ಅವರ ಹಾಟ್ ವಿಡಿಯೋಗಳನ್ನು ಸ್ನೇಹಾ ಮೀರಿಸಿದ್ದಾರೆ.  
ಕೃಪೆ : ಒನ್ ಇಂಡಿಯಾ

ಹದಿಹರೆಯದಲ್ಲಿ ಊಟದತ್ತ ನಿರ್ಲಕ್ಷ್ಯದಿಂದ ಅಪಾಯ !

ಆಕರ್ಷಕ ಮೈಕಟ್ಟಿನ ಬಗ್ಗೆ ಹದಿಹರೆಯದ ಮಕ್ಕಳಿಗೆ ಅಸಕ್ತಿ. ಅದರ ಪರಿಣಾಮ ಆರೋಗ್ಯಕರವಲ್ಲದ ಡಯಟ್. ಅದೂ ತೂಕದ ವಿಷಯದಲ್ಲಿ ಹೆಣ್ಣು ಮಕ್ಕಳಿಗೆ ಕರೀನಾ ಕಪೂರ್ ರೋಲ್ ಮಾಡಲ್. ಬಳಕುವ ಬಳ್ಳಿ ಆಗುವ ಆಸೆ ಮತ್ತು ತೆಳ್ಳಗಾದರೆ ತಾನು ಹೆಚ್ಚು ಸುಂದರಿಯಾಗಿ ಕಾಣುತ್ತೇನೆ ಎಂಬ ಭ್ರಮೆ. ಈ ಎಲ್ಲಾ ಕಾರಣಗಳಿಂದ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳ ಪೂರೈಕೆಯಾಗುವುದಿಲ್ಲ.

ಮಕ್ಕಳಲ್ಲಿ ತೂಕ ಬಗ್ಗೆ ಇರುವ ಅನಾವಶ್ಯಕ ಚಿಂತೆ ಪೋಷಕರು ನೆಮ್ಮದಿಯನ್ನು ಹಾಳು ಮಾಡುತ್ತಿದೆ. ಮಕ್ಕಳು ಸರಿಯಾದ ರೀತಿಯಲ್ಲಿ ಪೋಷಕಾಂಶ ಇರುವ ಅಹಾರವನ್ನು ಸೇವಿಸುತ್ತಿಲ್ಲ ಹೀಗಾದರೆ ಅವರ ಆರೋಗ್ಯ ಏನಾಗುತ್ತೆ ಎಂಬುದು ಅನೇಕ ಪೋಷಕರ ಕಳವಳವಾಗಿದೆ.

ಮಕ್ಕಳಲ್ಲಿ ತೂಕದ ಬಗ್ಗೆ ಇರುವ ಅಧಿಕ ಚಿಂತೆ ಒಂದು ರೀತಿಯ ಕಾಯಿಲೆ ಆಗಿದ್ದು ಅದನ್ನು 'ಆಹಾರ ಸೇವನೆಯಲ್ಲಿ ಅಸಮತೋಲನೆ' (eating disorder) ಕಾಯಿಲೆ ಎಂದು ಕರೆಯಲಾಗುವುದು.

'ಆಹಾರ ಸೇವನೆಯಲ್ಲಿ ಅಸಮತೋಲನೆ' ಕಾಣಿಸಿಕೊಂಡರೆ ಈ ಕೆಳಗಿನ ಲಕ್ಷಣಗಳು ಕಂಡು ಬರುತ್ತವೆ:

1. ತೂಕ ಹೆಚ್ಚಾಗಬಹುದೆಂದು ಸರಿಯಾಗಿ ತಿನ್ನುವುದಕ್ಕೆ ಭಯಪಡುವುದು ಮತ್ತು ದೇಹದ ತೂಕ ಮಿತಿಮೀರಿ ಕಡಿಮೆಯಾಗುವುದು.
2. ಮುಟ್ಟು ವಿಳಂಬವಾಗುವುದು.
3. ಆಹಾರ ಮತ್ತು ತೂಕದ ಬಗ್ಗೆ ಹೆಚ್ಚಾಗಿ ಮಾಡುವುದು ಅಂದರೆ ಈ ಆಹಾರದಿಂದ ತೂಕ ಹೆಚ್ಚಾಗುವುದು ಅದು ಬೇಡ... ಹೀಗೆ ಬೇಡಗಳ ಪಟ್ಟಿ.
4. ತೂಕದ ಬಗ್ಗೆ ವಿಪರೀತ ಚಿಂತೆ ಮಾಡುವವರು ತಿಂದ ನಂತರ ವಾಂತಿ ಮಾಡಿಕೊಳ್ಳುತ್ತಾರೆ.

ಮಕ್ಕಳಲ್ಲಿ ಈ ರೀತಿಯ ಲಕ್ಷಣಗಳು ಕಂಡುಬಂದರೆ ನಿರ್ಲಕ್ಷ್ಯ ಬೇಡ. ಮಕ್ಕಳಿಗೆ ಸರಿಯಾದ ರೀತಿಯಲ್ಲಿ ಕೌನ್ಸಿಲಿಂಗ್ ನೀಡಿ ಆರೋಗ್ಯಕರ ಆಹಾರ ಕ್ರಮದ ಬಗ್ಗೆ ಮನದಟ್ಟು ಮಾಡಬೇಕಾಗಿದೆ.
ಕೃಪೆ : ಒನ್ ಇಂಡಿಯಾ

Tuesday, February 28, 2012

ಸೆಕ್ಸ್ ಅಂದ್ರೆ ಮೂಗು ಮುರಿಯೋ ಕಾಲ ಹೋಗಿದೆ !

ಜಾಗತೀಕರಣದ ಫಲವೋ ಎಂಬಂತೆ ಸೆಕ್ಸ್ - ಲೈಂಗಿಕತೆ ಎಂಬುದು ಇದೀಗ ತನ್ನ 'ಅಶ್ಲೀಲತೆ'ಯನ್ನು ಕಳೆದುಕೊಳ್ಳುತ್ತಿದೆ. ನಗರ ಜೀವನದಲ್ಲಿ ಇದು ಈ ಅಶ್ಲೀಲತೆಯ ಪೊರೆ ಕಳಚಿಕೊಳ್ಳುತ್ತಿದ್ದರೂ, ಭಾರತದ ಗ್ರಾಮೀಣ ಭಾಗದಲ್ಲಿನ್ನೂ ಸೆಕ್ಸ್ ಎಂಬುದು ಹೊಲಸು ಪದವಾಗಿಯೇ ಉಳಿದಿದೆ. ಇದನ್ನು ಹೇಳಿದವರು 'ರಿವೈಸ್ಡ್ ಕಾಮ ಸೂತ್ರ' (ಪರಿಷ್ಕೃತ ಕಾಮಸೂತ್ರ) ಎಂಬ ವಿಶ್ವ ವಿಖ್ಯಾತ ಕೃತಿಯ ಲೇಖಕ, ಮಂಗಳೂರು ಮೂಲದ ರಿಚರ್ಡ್ ಕ್ರಾಸ್ತಾ.
ಹೌದು ಅನ್ನಿಸುವುದಿಲ್ಲವೇ?
ಬಹುತೇಕ ಭಾರತೀಯರಿಗೆ ಸೆಕ್ಸ್ ಅನ್ನೋದು ಈಗಲೂ ಹೊಲಸು ಪದವೇ. ಹೀಗಾಗಿ ಅವರು ಅದರ ಅನುಭವವನ್ನು ಆನಂದಿಸಲು ಮತ್ತು ಅದಕ್ಕೆ ಒಗ್ಗಿಕೊಳ್ಳಲು ಸಮಯ ಹಿಡಿಯುತ್ತದೆ ಎನ್ನುತ್ತಾರವರು. ಇಪ್ಪತ್ತು ವರ್ಷಗಳ ಹಿಂದೆ ಬರೆದಿದ್ದ 'ದಿ ರಿವೈಸ್ಡ್ ಕಾಮ ಸೂತ್ರ' ಕಾದಂಬರಿಯನ್ನು ಅವರೀಗ ಮರು ಮುದ್ರಿಸಿ ಹೊಸ ಅಲೆ ಸೃಷ್ಟಿಸಿದ್ದಾರೆ.
ನಗರ ಪ್ರದೇಶದಲ್ಲಿರುವವರಲ್ಲಿ ಲೈಂಗಿಕ ಸ್ವಾತಂತ್ರ್ಯವು ಗಮನಾರ್ಹವಾಗಿ ಹೆಚ್ಚಿದೆ. ಅವರೆಲ್ಲಾ ಸೆಕ್ಸ್ ಬಗ್ಗೆ ಮಾತುಕತೆಯಲ್ಲಿ ತುಂಬಾ ಲಿಬರಲ್ ಆಗಿರುತ್ತಾರೆ. ಆದರೆ ಕೆಳ ಮಧ್ಯಮ ವರ್ಗದಲ್ಲಿ ಶೇ.95ರಷ್ಟು ಮಂದಿಗೆ ಈ ಕುರಿತು ಹಿಂಜರಿಕೆ ಇದೆ ಎನ್ನುತ್ತಾರೆ ಕ್ರಾಸ್ತಾ.
ಭಾರತೀಯರಿಗೆ ಕನ್ಯತ್ವ ಎಂಬುದು ಅತ್ಯಂತ ಮಹತ್ವದ್ದು. ಆದರೂ ಇಲ್ಲಿ ಆಷಾಢಭೂತಿತನವು ಅತಿದೊಡ್ಡ ಸಮಸ್ಯೆ ಎಂಬುದನ್ನು ಅವರು ಕಂಡುಕೊಂಡಿದ್ದಾರೆ.
ಯುವ ದಂಪತಿಗಳು ಸದ್ಯಕ್ಕೆ ಮಕ್ಕಳು ಬೇಡ ಎನ್ನುತ್ತಾ, ತಮ್ಮ ವೃತ್ತಿಯ ಮೇಲೆ, ಆಸ್ತಿ ಮಾಡುವುದರ ಮೇಲೆಯೇ ಗಮನ ಕೇಂದ್ರೀಕರಿಸುತ್ತಿರುವ ಬಗ್ಗೆ ಅವರು ಹೇಳುವುದು - 'ಅದುಮಿಟ್ಟುಕೊಂಡ ಲೈಂಗಿಕ ತೃಷೆಯ ಸ್ಥಾನದಲ್ಲಿ ಹಣ ಬಂದು ಕೂತಿದೆ!'
ಅತ್ಯಂತ ಹೆಚ್ಚು ಚರ್ಚೆಗೀಡಾದ ಮತ್ತು ವಿನೋದಮಯ ಕಾದಂಬರಿಗಳಲ್ಲೊಂದು ದಿ ರಿವೈಸ್ಡ್ ಕಾಮ ಸೂತ್ರ. ಭಾರತೀಯ ಹುಡುಗನೊಬ್ಬ ಪುರುಷನಾಗಿ ಬೆಳೆಯುವ ಹಂತಗಳ ಉಲ್ಲೇಖವಿರುವ ಈ ಕಾದಂಬರಿಗೆ ಭಾರೀ ಟೀಕೆ, ವಿಮರ್ಶೆಗಳು ಬಂದಿವೆ. ಈಗಾಗಲೇ ಲಾತ್ವಿಯನ್, ಹೀಬ್ರೂ ಸೇರಿದಂತೆ 11 ದೇಶಗಳಲ್ಲಿ 8 ಭಾಷೆಗಳಿಗೆ ಈ ಕಾದಂಬರಿ ಭಾಷಾಂತರಗೊಂಡಿದೆ.
ಪುಟ್ಟ ಪಟ್ಟಣವೊಂದರ ಮಧ್ಯಮ ವರ್ಗದ ಹುಡುಗ ವಿಜಯ್ ಪ್ರಭು ಎಂಬಾತ ಕೆಥೊಲಿಕ್ ಬೋರ್ಡಿಂಗ್ ಶಾಲೆಗಳಲ್ಲಿನ ದೌರ್ಜನ್ಯದ ನಡುವೆ ಬೆಳೆಯುವ, 'ದೌರ್ಜನ್ಯದ ಐದು ಸ್ತಂಭ'ಗಳಾದ ಘಂಟೆ, ಬೆತ್ತ, ಲಿಂಗ ದೌರ್ಜನ್ಯ, ಹುಡುಗಿಯ ದೌರ್ಜನ್ಯ ಮತ್ತು ಕ್ರೀಡೆ - ಇವುಗಳ ಸುತ್ತ ಸುತ್ತುತ್ತದೆ.
ಮಂಗಳೂರಿನ ಸಂಪ್ರದಾಯಸ್ಥ ಕುಟುಂಬದ ಕಟ್ಟುಪಾಡುಗಳಿಂದ ಹೊರಬರುವ ತುಡಿತ ಮತ್ತು ಲೈಂಗಿಕ ಬಯಕೆ ಈಡೇರಿಸಿಕೊಳ್ಳುವ ಬಯಕೆಗಳಿಂದ ತುಂಬಿಹೋಗಿರುವ ವಿಜಯ್ ಪ್ರಭು, ಲೈಂಗಿಕ ಮತ್ತು ಆಧ್ಯಾತ್ಮಿಕತೆಯ ಸುದೀರ್ಘ ಪ್ರಯಾಣಕ್ಕೆ ಹೊರಟು, ಮುಕ್ತ ಲೈಂಗಿಕತೆ, ಮುಕ್ತ ಮಾತುಗಳ ನಾಡಾದ ಅಮೆರಿಕಕ್ಕೆ ತಲುಪುತ್ತಾನೆ. ಭಾರತವು ಕಾಮಸೂತ್ರದ ನಾಡು ಮತ್ತು ನಾವು ಮಹಿಳೆಯರ ಶೀಲಭಂಗದಲ್ಲಿಯೂ ಎತ್ತಿದ ಕೈ. ಕಾದಂಬರಿಯಲ್ಲಿನ ಪಾತ್ರಗಳು ಕಾಮ ಸೂತ್ರವನ್ನು ಅಣಕಿಸುತ್ತವೆ ಎನ್ನುತ್ತಾರೆ ಕ್ರಾಸ್ತಾ.
ಪರಿಷ್ಕೃತ ಆವೃತ್ತಿಯನ್ನು ಹಾರ್ಪರ್‌ಕಾಲಿನ್ಸ್ ಇಂಡಿಯಾ ಪ್ರಕಟಿಸುತ್ತಿದೆ. ಕಥೆ ಹಾಗೆಯೇ ಇದೆ, ಅದರ ನಿರೂಪಣೆ ಮತ್ತು ಗುಣಮಟ್ಟವನ್ನು ಸುಧಾರಿಸಲಾಗಿದೆ.
ಒಟ್ಟಾರೆಯಾಗಿ ಈ ಕೃತಿಯು ಸೆಕ್ಸ್, ಬಾಲ್ಯ, ವಸಾಹತುಶಾಹಿತ್ವ, ಆಕಾಂಕ್ಷೆ, ಬಯಕೆ, ಸ್ತ್ರೀ ಮತ್ತು ಅಮೆರಿಕನ್ ಕನಸುಗಳ ಕುರಿತು ಕನಸು ಕಾಣವು ತೃತೀಯ ವಿಶ್ವದ ಮೇಲೆ ಬೆಳಕು ಚೆಲ್ಲುತ್ತದೆ.
ಕೃಪೆ : ವೆಬ್ ದುನಿಯಾ

Sunday, February 19, 2012

ಶಾಂತ ಚಿತ್ತಕ್ಕೆ ನೀರು ಕುಡಿಯಿರಿ....... !


ಲಂಡನ್ (ಪಿಟಿಐ): ನೀರು ಕುಡಿಯುವುದರಿಂದ ಆಗುವ ಲಾಭಗಳು ಎಲ್ಲರಿಗೂ ತಿಳಿದಿದ್ದೇ. ಈ ಪಟ್ಟಿಗೆ ಇನ್ನೊಂದು ಲಾಭ ಈಗ ಸೇರಿಕೊಂಡಿದೆ.

ವ್ಯಕ್ತಿಯನ್ನು ಶಾಂತಚಿತ್ತದಲ್ಲಿಡಲೂ ನೀರು ಸಹಕಾರಿ ಎಂದು ಕನೆಕ್ಟಿಕಟ್ ವಿಶ್ವವಿದ್ಯಾಲಯದ ತಜ್ಞರು ನಡೆಸಿರು ಹೊಸ ಅಧ್ಯಯನವೊಂದು ಹೇಳಿದೆ.

ಅದರಲ್ಲೂ ಮುಖ್ಯವಾಗಿ ವ್ಯಕ್ತಿಯೊಬ್ಬ ಸಂಯಮವನ್ನು ಕಳೆದುಕೊಳ್ಳುತ್ತಿರುವ ಅನುಭವ ಆಗುವ ಸಂದರ್ಭದಲ್ಲಿ ನೀರು ಕುಡಿದರೆ ಆತನ ಮನಸ್ಸು ಶಾಂತಸ್ಥಿತಿಗೆ ಬರುತ್ತದೆ ಎಂದು ಅಧ್ಯಯನ ಹೇಳಿದೆ.

ಅಧ್ಯಯನಕಾರರು ನಿರ್ಜಲೀಕರಣ (ಡಿ ಹೈಡ್ರೇಷನ್) ಕುರಿತಾಗಿಯೂ ಅಧ್ಯಯನ ನಡೆಸಿದ್ದು, ಅಲ್ಪ ಪ್ರಮಾಣದ ನಿರ್ಜಲೀಕರಣ ಕೂಡ ಮನಷ್ಯರ ಭಾವಸ್ಥಿತಿ (ಮೂಡು) ಮೇಲೆ ಪರಿಣಾಮ ಬೀರಬಹುದು ಎಂಬುದನ್ನು ಪತ್ತೆ ಹಚ್ಚಿದೆ.

ವಿಶೇಷವಾಗಿ ನಿರ್ಜಲೀಕರಣವು ಮಹಿಳೆಯರ ಚಿತ್ತ, ಸಾಮರ್ಥ್ಯದ ಮಟ್ಟ ಮತ್ತು ಸ್ಪಷ್ಟವಾಗಿ ಚಿಂತಿಸುವ ಸಾಮರ್ಥ್ಯಗಳನ್ನು ಬದಲಾಯಿಸಬಹುದು ಎಂದು ಅಧ್ಯಯನದ ವರದಿ ಹೇಳಿರುವುದಾಗಿ `ದಿ ಡೈಲಿ ಮೇಲ್` ವರದಿ ಮಾಡಿದೆ.

`ದೇಹದಲ್ಲಿರುವ ನೀರಿನ ಪ್ರಮಾಣದಲ್ಲಿ ಶೇ 1.5ರಷ್ಟು ನಷ್ಟವಾದರೂ ಅದು ನಮ್ಮ ಮನಸ್ಸಿನ ಭಾವನೆಗಳ ಮೇಲೆ ಪರಿಣಾಮ ಬೀರಬಹುದು. ಅದರಲ್ಲೂ ಮುಖ್ಯವಾಗಿ ಕಡಿಮೆ ಮಟ್ಟದ ನಿರ್ಜಲೀಕರಣವು ಮಹಿಳೆಯರ ಮೇಲೆ ಹೆಚ್ಚಾಗಿ ವ್ಯತಿರಿಕ್ತ ಪರಿಣಾಮಬೀರುತ್ತದೆ` ಎಂದು ಅಧ್ಯಯನಕಾರರ ತಂಡದ ಸದಸ್ಯರಾಗಿರುವ ಹ್ಯಾರಿಸ್ ಲಿಬರ್‌ಮನ್ ಹೇಳಿದ್ದಾರೆ.

ಅಲ್ಪ ಪ್ರಮಾಣದ ನಿರ್ಜಲೀಕರಣ ಯುವತಿಯರಲ್ಲಿ ತಲೆನೋವು, ಏಕಾಗ್ರತೆ ಕೊರತೆ, ಬಳಲಿಕೆಯನ್ನು ತಂದರೆ, ಯುವಕರಲ್ಲಿ ನೆನಪಿನ ಶಕ್ತಿಯ ಮೇಲೆ ಪ್ರಭಾವ ಬೀರುತ್ತದೆ. ಅಲ್ಲದೇ ಒತ್ತಡ, ಆಯಾಸ, ತಳವಳವನ್ನು ಉಂಟು ಮಾಡುತ್ತವೆ ಎಂದು ಅಧ್ಯಯನ ವಿವರಿಸಿದೆ.

ಕೃಪೆ : ಪ್ರಜಾವಾಣಿ
 

Wednesday, February 15, 2012

ಬತ್ತಲೆಯಾಗಿ ಮದುವೆಯಾದ ಜೋಡಿಗಳು !

ಕಿಂಗ್‌ಸ್ಟನ್ (ಜಮೈಕಾ) (ಎಪಿ):   ಜಮೈಕಾದ ಪಶ್ಚಿಮ ಭಾಗದಲ್ಲಿರುವ ನೆಗ್ರಿಲ್ ದ್ವೀಪದ ಕಡಲ ಕಿನಾರೆಯಲ್ಲಿ ವಸ್ತ್ರಗಳ ಬಂಧನದಿಂದ ಮುಕ್ತರಾದ ಒಂಬತ್ತು ಜೋಡಿಗಳು ಸೂರ್ಯ ಸಾಕ್ಷಿಯಾಗಿ ಬುಧವಾರ ವಿವಾಹ ಬಂಧನಕ್ಕೆ ಒಳಗಾದರು.

`ಪ್ರೇಮಿಗಳ ದಿನ`ದ ಹಿನ್ನೆಲೆಯಲ್ಲಿ ಯುವ ಸಮೂಹವನ್ನು ಸೆಳೆಯಲು ಇಲ್ಲಿನ ರೆಸಾರ್ಟ್‌ಗಳು `ನಗ್ನ ಮದುವೆ` ಸ್ಪರ್ಧೆಯನ್ನು ಆಯೋಜಿಸಿದ್ದವು. ಜೊತೆಗೆ ನಾಲ್ಕು ರಾತ್ರಿ ಉಚಿತ ವಾಸ್ತವ್ಯದ ಕೊಡುಗೆ ನೀಡುವುದಾಗಿಯೂ ಪ್ರಚಾರ ಮಾಡಿದ್ದವು.


ಈ ಪ್ರಚಾರಕ್ಕೆ ಮನಸೋತ ಅಮೆರಿಕ ಮತ್ತು ಕೆನಡಾದ ನೂರಕ್ಕೂ ಹೆಚ್ಚು ಜೋಡಿಗಳು ಇಲ್ಲಿಗೆ ಲಗ್ಗೆ ಇಟ್ಟವು. ಆದರೆ, 10 ಜೋಡಿಗಳನ್ನು ಮಾತ್ರ ಈ ಸ್ಪರ್ಧೆಗೆ ಆಯ್ಕೆ ಮಾಡಲಾಯಿತು.


ನಿಯಮ ಉಲ್ಲಂಘಿಸಿದ ಕಾರಣಕ್ಕೆ ಒಂದು ಜೋಡಿ ಮುಹೂರ್ತದ ಹಿಂದಿನ ದಿನ ಸ್ಪರ್ಧೆಯಿಂದ ಹಿಂದೆ ಸರಿಯಬೇಕಾಯಿತು.

`ಇದೊಂದು ಸುಂದರ ಅನುಭವ, ಯಕ್ಷಲೋಕದಂತೆಯೇ ಇತ್ತು` ಎಂಬುದು ನ್ಯೂಜೆರ್ಸಿಯಿಂದ ಆಗಮಿಸಿದ್ದ 39ರ ಹರೆಯದ ಮಿಲ್ಲಿ ಸಾಲ್ಸ್ ಅವರ ಅಭಿಮತ.
                                                             ಕೃಪೆ : ಪ್ರಜಾವಾಣಿ

Tuesday, February 14, 2012

ವಂಚಕಿ, ಮತ್ತೆ ಸಿಕ್ಕಾಗ ನಿನ್ನ ವಂಚನೆ ಬಗ್ಗೆ ಮಾತಾಡೋಣ !

ನಾನು ಕೊಟ್ಟ ಪ್ರೀತಿ ನಾಟಕದ್ದ ಗೆಳತಿ ? ನನ್ನದು ಶುದ್ಧಾನುಶುದ್ಧ ಪ್ರೇಮ ಕಣೆ. ನಿನ್ನನ್ನು ಅತಿಯಾಗಿ ಅಂದ್ರೆ ಸತ್ತು ಹೋಗುವಷ್ಟು ಪ್ರೀತಿಸಿದ್ದೆ. ಆದರೆ ಅಂತಹ ಪ್ರೀತಿಯನ್ನು ನಾಟಕ ಅನ್ನುವ ಬದಲು, ನಿನಗೆ ಇಷ್ಟವಿಲ್ಲ ಅಂದಿದ್ದರೆ ಸಾಕಿತ್ತು. ಆದರೆ ನೀನು ಹಾಗೆ ಅನ್ನಲೇ ಇಲ್ಲವಲ್ಲೇ. ಪ್ರೀತಿಯ ಹೆಸರಿನಲ್ಲಿ ನೀನು ಹೇಳಿದ ಕೆಲವು ಸುಳ್ಳುಗಳ ಬೆನ್ನುಹತ್ತಿ ಹೋದ ನಾನು ಸತ್ಯದ ಜೊತೆ ನಿನ್ನ ಕಣ್ಮುಂದೆ ಕಾಣಿಸಿಕೊಂಡಿದ್ದರೆ, ನೀನು ಮಾತ್ರ ತಪ್ಪು ಮಾಡಿಯೂ ಕ್ಷಮೆ ಕೇಳದೆ ಅದೊಂದು ಕೋಣೆಯಲ್ಲಿ ಅವಿತು ಕುಳಿತು ಬಿಟ್ಟೆಯಲ್ಲೇ.

ನಾ ಅಲ್ಲಿಗೆ ಬಂದಾಗ ತಪ್ಪಾಯ್ತು ಅಂತ ಒಂದು ಮಾತು ಹೇಳಿದ್ದಿದ್ದರೆ ಪ್ರಳಯವಾಗಿ ಬಿಡುತ್ತಿತ್ತೆ? ನನ್ನ ಕಣ್ಣಲಿ ಕಣ್ಣಿಟ್ಟು ಒಂದು ನೋವಿನ ಸಂಕಟ ವ್ಯಕ್ತಪಡಿಸಿದ್ದರೆ ನಾ ನಿನ್ನ ಬಗ್ಗೆ ಒಂದಿಷ್ಟು ಅನುಕಂಪವಿಡುತ್ತಿದ್ದೆ. ಅರ್ಥಮಾಡಿಕೊಳ್ಳದಷ್ಟು ಪೆದ್ದನೇನಲ್ಲ. ಮೊದಮೊದಲು ನಿನ್ನನ್ನು ಜೀವ ಹೋಗುವಷ್ಟು ಪ್ರೀತಿಸಿದೆ. ಮುಂದೆ -ಮುಂದೆ ನೀ ನನ್ನ ಮನ -ಮನಸ್ಸಿನಿಂದ ಜಾರಿ ಹೋಗತೊಡಗುತ್ತಿದ್ದೀಯ ಎಂಬುದು ಅರವಿಗೆ ಬರುತ್ತಿದಂತೆಯೇ ತಾಯಿಯನ್ನು ಕಳೆದುಕೊಂಡ ಮಗು ರೋಧಿಸುವಂತೆ ಮೌನದಲ್ಲೇ ರೋಧಿಸತೊಡಗಿದೆ. ದಿನ ನಿತ್ಯವೆಂಬಂತೆ ನನ್ನ ಮುಗ್ಧ ಪ್ರೀತಿಯ ಜೊತೆ ನೀನು ಆಟವಾಡಿದೆ.

ಕಡೆಗೊಂದು ದಿನ ನೀ ನನ್ನ ಬಿಟ್ಟು ಹೋಗುತ್ತೇನೆಂದು ಹೊರಟು ನಿಂತಾಗ ಮೊಟ್ಟ ಮೊದಲ ಬಾರಿಗೆ ಬಿಟ್ಟು ಹೋಗಬೇಡ ಎಂದು ಕಣ್ಣಿರಿಟ್ಟಿದ್ದೆ. ಎರಡು ಕೈ ಚಾಚಿ ನಿಂತು ನಿನ್ನ ತಬ್ಬಿಕೊಂಡು ಒಂದೇ ಒಂದು ಭರವಸೆಗಾಗಿ ಅಂಗಲಾಚಿದ್ದೆ. ಒಂದು ಸಲವಾದರೂ ನೀ ನನ್ನ ಬಿಟ್ಟು ಹೋಗೋದಿಲ್ಲ, ಎಂದೆಂದೂ ನನ್ನ ಜೊತೆಯಲ್ಲಿರುತ್ತಿ ಎಂಬ ಮಾತನ್ನು ಆಡುತ್ತಿ ಅಂತ ಕಾತುರದಿಂದ ನೋಡಿದೆ. ಆದರೆ ನಾನು ಕಣ್ಣೊರೆಸಿಕೊಂಡು ಇನ್ನೇನು ಅಳು ನಿಲ್ಲಿಸಬೇಕೆಂದುಕೊಂಡಾಗಲೂ ನಿನ್ನ ಬಾಯಿಂದ ಅಂಥದೊಂದು ಮಾತು ಹೊರಬರಲೇ ಇಲ್ಲ.

ಬದುಕಿನ ಮುಂದಿನ ಕನಸಿನ ಬಗ್ಗೆ ಅದೆಷ್ಟು ಬಾರಿ ನಿನ್ನ ಮುಂದೆ ಹೇಳಿಕೊಂಡಿದ್ದೆ. ಆದರೆ ಒಂದೇ ಒಂದು ಮಾತಿಗೂ ನೀ ಭರವಸೆ ನೀಡಲೇ ಇಲ್ಲ. ನಾವು ಒಬ್ಬರನೊಬ್ಬರು ವಂಚಿಸಿಕೊಳ್ಳಲಿಲ್ಲ್ವೇನೋ, ಆದರೆ ನಿನ್ನ ಪ್ರತಿ ಮಾತಿನಲ್ಲಿಯೂ ಆತ್ಮವಂಚನೆ ಇತ್ತು. ಅಸಲಿಗೆ, ನಿನಗೆ ನನ್ನ ಭೇಟಿಯಾಗುವ, ಜೊತೆಸೇರಿ ಹರಟುವ ಸಂಭ್ರಮವೇ ನಿನ್ನಲ್ಲಿ ಇರಲಿಲ್ಲ ಅಲ್ಲವಾ? ದುರಂತವೆಂದರೆ ನಾನು ಕಳೆದುಹೋಗುತಿದ್ದೇನೆಂಬುದು ನೀನಾಡುವ ಪ್ರತಿಯೊಂದು ಮಾತುಗಳಲ್ಲಿ ಹಂತಹಂತವಾಗಿ ಗೊತ್ತಾಗುತ್ತಿತ್ತು. ಆದರೂ ನಾನು ಅಂತಿಮ ಆಘಾತಕ್ಕೆ ಸಿದ್ದನಾಗಲೇ ಇಲ್ಲ. ಯಾಕೆಂದರೆ ನೀನು ಅಷ್ಟು ಸುಲಭದಲ್ಲಿ ನನ್ನನ್ನು ಬಿಟ್ಟು ಹೋಗಲಾರೆ ಎಂದು ನಂಬಿಕೆ ಇತ್ತು.

ಬಿಡು ಅದೆಲ್ಲ ಈಹ ನೆನೆದು ಪ್ರಯೋಜನವಿಲ್ಲ. ನಿನ್ನ ಸಂಕಟಗಳು ಎನಿದ್ದವೋ ಅಲ್ವ? ನಾನು ಸುಮ್ಮನೆ ನಿನ್ನನ್ನು ಅಂದು ಏನು ಪ್ರಯೋಜನ? ಒಂದಿಷ್ಟು ತಿಂಗಳು ಪ್ರೀತಿಸಿದವನ ಕೈಗೆ ಬದುಕಿನ ಇನ್ನುಳಿದ ವರ್ಷಗಳನ್ನು ಒಪ್ಪಿಸಿ ಬಿಡೋದಕ್ಕಾಗುತ್ತ? ಬಿಡು ಇದೆಲ್ಲ ಕೆಲಸಕ್ಕೆ ಬಾರದ ಮಾತು ಅಂತ ನೀನಂದು ಕೊಂಡಿರಬಹುದು. ಪದೇ-ಪದೇ ಇದೆಲ್ಲ ನೆನಪು ಮಾಡಿ ನಿನ್ನ ಕಾಡುವುದಿಲ್ಲ. ಆಗಿ ಹೋದ ಮೋಸದ ಪ್ರೀತಿಗೆ ಹಲುಬಿ ಪ್ರಯೋಜನವಿಲ್ಲ. ಬದುಕು ತೀರ ಚಿಕ್ಕದು, ಜಗತ್ತು ಬಹಳ ದೊಡ್ಡದು. ಮನಸ್ಸನ್ನಂತೂ ಗಟ್ಟಿಮಾಡಿಕೊಂಡಿದ್ದೇನೆ. ಎಲ್ಲಿಯಾದರೂ ಮತ್ತೆ ಸಿಕ್ಕರೆ ನಿನ್ನ ವಂಚನೆ ಮತ್ತು ನನ್ನ ನಂಬಿಕೆಯ ಪ್ರೀತಿಯ ಬಗ್ಗೆ ಮತ್ತೊಮ್ಮೆ ಮಾತಿಗಿಳಿಯೋಣ. ಏನಂತೀಯಾ?
                                                                                                             ಶಿವಕುಮಾರ್, ಹೊಸಂಗಡಿ