ಮರೆಯುವ ಮುನ್ನ ಮೇಲೇರಿಕೆಗೆ ಮೆಟ್ಟಲಾಗಿದ್ದವರ ಒಮ್ಮೆ ನೆನಪಿಸಿಕೊಳ್ಳಿ !
ಮರೆಯಾದವರನ್ನೊಮ್ಮೆ ಕಣ್ತುಂಬಿಕೊಳ್ಳಿ
ಮೆರೆದವರನ್ನೂ ಮುಂದಿಟ್ಟುಕೊಳ್ಳಿ !
ಮರೆತವರನ್ನೂ ಮನಸ್ಸಿನಲ್ಲಿಟ್ಟುಕೊಳ್ಳಿ !
ಆಮೇಲೆ ಎಲ್ಲವನ್ನೂ ಮರೆತು ಬಿಡಿ !
ಮನಸ್ಸು ನಿರಾಳವಾಗುತ್ತದೆ !
ಮರೆಯುವುದು ವಯಸ್ಸು ಮಾಗಿದ ನಂತರ ! ಮೆರೆಯುವುದು ವಯಸ್ಸು ಹದಿ ಇರುವಾಗ ! ಮರೆತು ಮರುಗುವುದು ಕೂಡ ಮುದಿ ವಯಸ್ಸಿನಲ್ಲಿಯೇ ! ಯಾರನ್ನೂ ಮರೆಯುವ ಪ್ರಮೇಯ ಇಲ್ಲ ; ಭೂಮಿಗೆ ಪ್ರಳಯದ ಭೀತಿಯೂ ಇಲ್ಲ ! ಇದು ಮರಾಠಿಯ ದಲಿತ ಕವಿಯೊಬ್ಬರ ಕಾವ್ಯದ ಪ್ರಭಾವದಿಂದ ಹುಟ್ಟಿದ ಮಾತ್ಗವಿತೆ !
ಇಲ್ಲಿದೆ ನೋಡಿ ನನ್ನ ಮಾತ್ಗವಿತೆ : ಮಳೆಯೆಂದರೆ ಬರೀ ಮಳೆಯಲ್ಲ ! ಬೆಳೆ ಹಾಳು ಮಾಡಬೇಕು ! ಕೋಟೆ ಕೊತ್ತಲುಗಳನ್ನು ಕೆಡುವಬೇಕು ! ಪಾಪ-ಪುಣ್ಯ, ಸ್ವರ್ಗ-ನರಕ, ದೇವರು-ದೆವ್ವ ಪೂಜೆ-ಪೂಜಾರಿ, ಎಲ್ಲವನ್ನೂ ಕೊಚ್ಚಿಕೊಂಡು ಹೋಗಬೇಕು ! ಹೆಂಗಸು, ಗಂಡಸು, ಮಕ್ಕಳು, ಮುದುಕರನ್ನದೇ ನೆಲ, ನಾಲೆ, ಗುಡ್ಡ, ಮಡ್ಡಿ, ಕಸ-ಕಡ್ಡಿ ಎನ್ನದೇ ಎಲ್ಲವನ್ನೂ ಎಲ್ಲರನ್ನೂ ಸ್ವಾಹಾ ಮಾಡಬೇಕು ! ಜೀವ ಜಗತ್ತನ್ನು ಬಲಿ ತೆಗೆದುಕೊಳ್ಳಬೇಕು ಮಳೆ ! ಸುರಿಯಬೇಕು ಧೋ ಧೋ ಎಂದು ! ಎಲ್ಲವೂ ಕೊಚ್ಚಿಕೊಂಡು ಭೂಮಿಯ ಮೇಲೆ ಏನೂ ಇಲ್ಲವಾದಾಗ ಹೊಸ ಜೀವಿಗಳ ಉಗಮವಾಗಬೇಕು ! ಅಲ್ಲಿ ಮೇಲು ಕೀಳಿನ ತಿಳಿಗೇಡಿತನಕ್ಕೆ ಅವಕಾಶ ಇರದು ! ಹಾಳುಮೂಳಗಳಿಗೆ ಮೂಲವಿರದು ! ಬದುಕು ಮಾತ್ರ ನಿರ್ಭೀತವಾಗಿರುತ್ತದೆ ! ಮನುಷ್ಯ ಮನುಷ್ಯನನ್ನು ಮನುಷ್ಯನೆಂದೇ ಪರಿಗಣಿಸುತ್ತಾನೆ ! ಬಾಂಧವ್ಯಗಳ ಹೊಸ ಮನ್ವಂತರ ಆರಂಭವಾಗುತ್ತದೆ ! - ಡಾ. ಸಿದ್ರಾಮ ಕಾರಣಿಕ
ಮರೆತವರನ್ನೂ ನೆನಪಿಸಿಕೊಳ್ಳುವುದಿದೆಯಲ್ಲ ಅದು ಒಂದಿಷ್ಟು ಹಿಂಸೆ ಅನ್ನಿಸುತ್ತೆ ಕಣ್ರಿ ! ಮರೆತವರನ್ನು ಮರೆತು ; ಮರೆಯದವರನ್ನು ನೆನಪಿಸಿಕೊಂಡರೆ .... ?
ReplyDeleteಮರೆಯುವುದು ವಯಸ್ಸು ಮಾಗಿದ ನಂತರ ! ಮೆರೆಯುವುದು ವಯಸ್ಸು ಹದಿ ಇರುವಾಗ ! ಮರೆತು ಮರುಗುವುದು ಕೂಡ ಮುದಿ ವಯಸ್ಸಿನಲ್ಲಿಯೇ ! ಯಾರನ್ನೂ ಮರೆಯುವ ಪ್ರಮೇಯ ಇಲ್ಲ ; ಭೂಮಿಗೆ ಪ್ರಳಯದ ಭೀತಿಯೂ ಇಲ್ಲ ! ಇದು ಮರಾಠಿಯ ದಲಿತ ಕವಿಯೊಬ್ಬರ ಕಾವ್ಯದ ಪ್ರಭಾವದಿಂದ ಹುಟ್ಟಿದ ಮಾತ್ಗವಿತೆ !
ReplyDeleteಇಲ್ಲಿದೆ ನೋಡಿ ನನ್ನ ಮಾತ್ಗವಿತೆ :
ReplyDeleteಮಳೆಯೆಂದರೆ ಬರೀ ಮಳೆಯಲ್ಲ !
ಬೆಳೆ ಹಾಳು ಮಾಡಬೇಕು !
ಕೋಟೆ ಕೊತ್ತಲುಗಳನ್ನು ಕೆಡುವಬೇಕು !
ಪಾಪ-ಪುಣ್ಯ, ಸ್ವರ್ಗ-ನರಕ, ದೇವರು-ದೆವ್ವ
ಪೂಜೆ-ಪೂಜಾರಿ, ಎಲ್ಲವನ್ನೂ ಕೊಚ್ಚಿಕೊಂಡು ಹೋಗಬೇಕು !
ಹೆಂಗಸು, ಗಂಡಸು, ಮಕ್ಕಳು, ಮುದುಕರನ್ನದೇ
ನೆಲ, ನಾಲೆ, ಗುಡ್ಡ, ಮಡ್ಡಿ, ಕಸ-ಕಡ್ಡಿ ಎನ್ನದೇ
ಎಲ್ಲವನ್ನೂ ಎಲ್ಲರನ್ನೂ ಸ್ವಾಹಾ ಮಾಡಬೇಕು !
ಜೀವ ಜಗತ್ತನ್ನು ಬಲಿ ತೆಗೆದುಕೊಳ್ಳಬೇಕು ಮಳೆ !
ಸುರಿಯಬೇಕು ಧೋ ಧೋ ಎಂದು !
ಎಲ್ಲವೂ ಕೊಚ್ಚಿಕೊಂಡು
ಭೂಮಿಯ ಮೇಲೆ ಏನೂ ಇಲ್ಲವಾದಾಗ
ಹೊಸ ಜೀವಿಗಳ ಉಗಮವಾಗಬೇಕು !
ಅಲ್ಲಿ ಮೇಲು ಕೀಳಿನ ತಿಳಿಗೇಡಿತನಕ್ಕೆ ಅವಕಾಶ ಇರದು !
ಹಾಳುಮೂಳಗಳಿಗೆ ಮೂಲವಿರದು !
ಬದುಕು ಮಾತ್ರ ನಿರ್ಭೀತವಾಗಿರುತ್ತದೆ !
ಮನುಷ್ಯ ಮನುಷ್ಯನನ್ನು
ಮನುಷ್ಯನೆಂದೇ ಪರಿಗಣಿಸುತ್ತಾನೆ !
ಬಾಂಧವ್ಯಗಳ ಹೊಸ ಮನ್ವಂತರ ಆರಂಭವಾಗುತ್ತದೆ !
- ಡಾ. ಸಿದ್ರಾಮ ಕಾರಣಿಕ