ತಾನು 10 ವರ್ಷಗಳಲ್ಲಿ 70
ಜನರೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ್ದೇನೆ ಎಂದು ಸ್ವತಃ ತಪ್ಪೊಪ್ಪಿಕೊಂಡಿರುವ
ಬ್ರಿಟಿಷ್ ಮಹಿಳೆಯೊಬ್ಬಳು ಲೈಂಗಿಕ ವ್ಯಸನಕ್ಕೊಳಗಾಗಿದ್ದ ತಾನು ಪ್ರತಿ ದಿನಕ್ಕೆ
ನಾಲ್ಕು ಬಾರಿ ಲೈಂಗಿಕ ಸಂಪರ್ಕ ಬಯಸುತ್ತಿದ್ದೆ ಎಂದು ಹೇಳಿದ್ದಾಳೆ.
ಮಾಜಿ ಬ್ಯೂಟಿಷಿಯನ್ 27 ವರ್ಷದ ಶಾನನ್ ಫ್ಲೈನ್ ತಾನು ಲೈಂಗಿಕ ವ್ಯಸನಕ್ಕೊಳಗಾಗಿದ್ದು, ತನ್ನ ಬಾಯ್ ಫ್ರೆಂಡ್ ಮೇಲೆ ಬೆಡ್ ರೂಂನಲ್ಲಿ ಲೈಂಗಿಕ ದೌರ್ಜನ್ಯ ನಡೆಸಿದ್ದಕ್ಕೆ ಕಳೆದ ವರ್ಷ ಬಹಿರಂಗವಾಗಿ ತಪ್ಪೊಪ್ಪಿಕೊಂಡಿದ್ದಳು ಎಂದು ಡೈಲಿ ಮೇಲ್ ಪತ್ರಿಕೆ ವರದಿ ಮಾಡಿತ್ತು.
ಮದ್ಯ ಮತ್ತು ಲೈಂಗಿಕತೆ ವಿರುದ್ಧದ ತನ್ನ ಹೋರಾಟ ಜೀವನವನ್ನೇ ಬದಲಿಸಿತು ಎಂದು ಫ್ಲೈನ್ ತಿಳಿಸಿದ್ದಾಳೆ.
ನನ್ನ ಲೈಂಗಿಕ ವ್ಯಸನವು ಮದ್ಯಪಾನಕ್ಕೆ ಸಂಬಂಧಿಸಿತ್ತು. ನಾನು ಮದ್ಯಪಾನ ಮಾಡಿದಾಗ ಲೈಂಗಿಕ ಸಂಪರ್ಕ ನಡೆಸುವ ಬಯಕೆಯುಂಟಾಗುತ್ತಿತ್ತು ಎಂದು ಹೇಳಿರುವ ಆಕೆ ಈಗ ಅದು ಕಡಿಮೆಯಾಗಿದೆ ಎಂದು ತಿಳಿಸಿದ್ದಾಳೆ.
ಮದ್ಯಪಾನದಿಂದ ಉಂಟಾಗುವ ವ್ಯಸನದಿಂದ ಮುಕ್ತವಾಗಲು ತಾನು ವಾರಕ್ಕೆ ಮೂರು ಬಾರಿ ಮಾತ್ರೆಗಳನ್ನು ತೆಗೆದುಕೊಳ್ಳುತ್ತೇನೆ. ವಾರಕ್ಕೊಂದು ಬಾರಿ ಆಪ್ತ ಸಮಾಲೋಚನೆ (ಕೌನ್ಸೆಲಿಂಗ್)ಗೆ ಹೋಗುತ್ತೇನೆ. ನಾನು ಹೊಸ ಗೆಳೆಯನನ್ನು ಆಯ್ಕೆ ಮಾಡಿಕೊಂಡಿಲ್ಲ. ನಾನು ಗೆಳೆಯನ ಜೊತೆ ಇರುವಾಗ ನಾನೊಬ್ಬಳು ಹುಡುಗಿ ಎಂದು ಅಂದುಕೊಳ್ಳುವುದೇ ಇಲ್ಲ, ನಾನು ಪುರುಷರಿಂದ ದೂರ ಉಳಿದಿದ್ದೇನೆ ಎಂದು ಆಕೆ ವಿವರಿಸಿದ್ದಾಳೆ.
ತನ್ನ ಲೈಂಗಿಕ ವ್ಯಸನದ ಬಗ್ಗೆ ಮಾತನಾಡಿದ ಫ್ಲೈನ್, ಖ್ಯಾತ ಗಾಲ್ಫ್ ಆಟಗಾರ ಟೈಗರ್ ವುಡ್ಸ್ ಲೈಂಗಿಕ ಹಗರಣ ಬಹಿರಂಗವಾದ ನಂತರ ತನಗಿದ್ದ ಲೈಂಗಿಕ ವ್ಯಸನದ ಬಗ್ಗೆ ಬಹಿರಂಗಪಡಿಸಿದ್ದಾಗಿ ತಿಳಿಸಿದ್ದಾಳೆ.
ತನ್ನ ಮಾಜಿ ಪ್ರಿಯಕರನೊಂದಿಗೆ ಬೆಳಗ್ಗೆ ಲೈಂಗಿಕ ಸಂಪರ್ಕ ನಡೆಸಿದ ನಂತರವೂ ಆತ ರಾತ್ರಿ ವೇಳೆ ಮನೆಗೆ ಬಂದಾಗ ಕಾಮತೃಷೆ ಅತ್ಯಧಿಕವಾಗಿರುತ್ತಿತ್ತು. ತನಗೆ ತೃಪ್ತಿಯೇ ಆಗುತ್ತಿರಲಿಲ್ಲ, ಲೈಂಗಿಕ ಸಂಪರ್ಕಕಕ್ಕೆ ನಿರಾಕರಿಸಿದ್ದ ಬಾಯ್ ಫ್ರೆಂಡ್ ಮೇಲೆ ಕುಪಿತಳಾಗಿ ಮೊಬೈಲ್ ಫೋನ್ ಎಸೆದಿದ್ದಾಗಿ ತಿಳಿಸಿದ್ದಾಳೆ.
ನಾನು ಯಾವಾಗಲೂ ಕ್ರೂರಿಯಾಗಿರುತ್ತಿರಲಿಲ್ಲ, ಆದರೆ ಲೈಂಗಿಕ ಬಯಕೆಯಿಂದಾಗಿ ಈ ರೀತಿ ಆಗುತ್ತಿತ್ತು ಎಂದು ತಿಳಿಸಿದ್ದಾಳೆ. ಪ್ರತಿ ದಿನದ ಪ್ರತಿ ಗಂಟೆಯೂ ಲೈಂಗಿಕತೆಯ ಬಗ್ಗೆ ಚಿಂತಿಸುತ್ತಿದ್ದೆ ಎಂದು ಆಕೆ ತಿಳಿಸಿದ್ದಾಳೆ.

No comments:
Post a Comment