- ಬ್ರೆಜಿಲ್ :ಕಳೆದ ವರ್ಷ ತನ್ನ ಕನ್ಯತ್ವವನ್ನು ಹರಾಜಿಗೆ ಇಟ್ಟಿದ್ದ ಬ್ರೆಜಿಲ್ ಮೂಲದ ವಿದ್ಯಾರ್ಥಿನಿ ಮಿಗ್ಲಿಯೋರೋನಿ ಮತ್ತೆ ಈ ವರ್ಷ ಅದನ್ನು ಹರಾಜಿಗೆ ಇಡಲು ನಿರ್ಧರಿಸಿದ್ದಾಳೆ. ಅದೇನು ಈಕೆ ಎರಡು ಬಾರಿ ಕನ್ಯತ್ವ ಕಳೆದುಕೊಳ್ಳಲು ಸಾಧ್ಯವೇ ಎಂದು ಅಚ್ಚರಿ ಪಡಬೇಡಿ. ಕಳೆದ ಬಾರಿ ಹರಾಜು ಪ್ರಕ್ರಿಯೆ ನಡೆಸಿದ್ದ ಆಸ್ಟ್ರೇಲಿಯಾ ಮೂಲದ ವ್ಯಕ್ತಿಯೊಬ್ಬ ಈಕೆಗೆ ಮತ್ತು ಹರಾಜು ಗೆದ್ದ ವ್ಯಕ್ತಿಗೆ ವಂಚಿಸಿದ್ದನಂತೆ. ಹೀಗಾಗಿ ಹರಾಜು ನಡೆದರೂ, ಈಕೆಗೆ ಹಣವೂ ಸಿಕ್ಕಿರಲಿಲ್ಲ, ಜೊತೆಗೆ ಕನ್ಯತ್ವವೂ ನಷ್ಟವಾಗಿರಲಿಲ್ಲ. ಹೀಗಾಗಿ ಈ ಯುವತಿ ಮತ್ತೂಮ್ಮೆ ಆನ್‌ಲೈನ್‌ನಲ್ಲಿ ತನ್ನ ಕನ್ಯತ್ವವನ್ನು ಹರಾಜಿಗೆ ಇಡಲು ನಿರ್ಧರಿಸಿದ್ದಾಳೆ. ಇನ್ನು ಈ ಬಾರಿಯ ವಿಶೇಷವೆಂದರೆ ಹರಾಜು ದರ ದುಪ್ಪಟ್ಟಾಗಿದೆ. ಕಳೆದ ವರ್ಷ ಅಂದಾಜು 5 ಕೋಟಿ ರೂ. ಇದ್ದ ಬೆಲೆ ಈ ವರ್ಷ 10 ಕೋಟಿ ರೂ.ಗೆ ಏರಿದೆ.
- ಕೃಪೆ : Udayavani | Nov 23, 2013
Saturday, November 23, 2013
2ನೇ ಬಾರಿ 10 ಕೋಟಿಗೆ ಕನ್ಯತ್ವ ಹರಾಜು !
Monday, October 21, 2013
ಗಂಡನ ಗೆಳೆಯನೊಂದಿಗೆ ಮೊದಲರಾತ್ರಿ !
ಈ ಘಟನೆ ನಡೆದಿದ್ದು ಆಸ್ಟ್ರೇಲಿಯಾದ ಮೆಲ್ಬೋರ್ನ್ನಲ್ಲಿ. ಹುಯಾಂಗ್ ಎನ್ನುವ ಅಡ್ಡಹೆಸರಿನ ವಧು, ತನ್ನ ಮೊದಲರಾತ್ರಿಯ ವೇಳೆ ದಾರಿತಪ್ಪಿ ಗಂಡನ ಗೆಳೆಯನಿದ್ದ ಮಲಗುವ ಕೋಣೆಗೆ ತೆರಳಿದ್ದಾರೆ. ಬಯಸದೇ ಬಂದ ಭಾಗ್ಯವನ್ನು ಆತ ಸರಿಯಾಗಿಯೇ ಬಳಸಿಕೊಂಡ. ಬೆಳಗ್ಗೆ ಎಚ್ಚರವಾದಾಗ ಆಕೆಗೆ ಬೇರೆಯವರಿಂದ ತನ್ನ ಶೀಲಹೋಗಿದ್ದು ಅರಿವಾಗಿ ಸಹಾಯಕ್ಕಾಗಿ ಕೂಗಿಕೊಂಡಿದ್ದಾಳೆ. ಬಳಿಕ ಗೆಳೆಯನ ಹೆಂಡತಿಯನ್ನು ಅನುಭವಿಸಿದ ವ್ಯಕ್ತಿಗೆ ದಂಡ ಕಟ್ಟುವಂತೆ ಮನೆಮಂದಿಯೆಲ್ಲಾ ತೀರ್ಮಾನಿಸಿದರು. ಇಷ್ಟಕ್ಕೇ ಸುಮ್ಮನಾಗದ ಆ ದಂಪತಿ ಕೊರ್ಟ್‌ಗೆ ಈ ಪ್ರಕರಣ ಒಯ್ದರು. ಇದರಲ್ಲಿ ವರನ ಗೆಳೆಯನದ್ದೇನು ತಪ್ಪಿಲ್ಲ. ತಪ್ಪೆಲ್ಲಾ ವಧುವಿನದ್ದೇ ಎಂದು ಕೋರ್ಟ್ ಹೇಳಿದೆಯಂತೆ.
ಕೃಪೆ : Udayavani | Oct 20, 2013
Saturday, August 10, 2013
ಸೆಕ್ಸ್‌ಗಾಗಿ ಏನು ಬೇಕಾದರೂ ಮಾಡಲು ಪುರುಷರು ಸಿದ್ಧ !
ಹೆಂಗಸರ
ವಾಸನೆ ಬಂದರೆ ಸಾಕು, ಪುರುಷರ ಮನಸ್ಸು ಅಲ್ಲೋಲ ಕಲ್ಲೋಲವಾಗುತ್ತದೆ, ತಲೆ
ತಿರುಗಿದವರಂತೆ ಆಡುತ್ತಾರೆ ಎನ್ನುವುದು ಪುರುಷರ ಮೇಲಿನ ಸಾಮಾನ್ಯ ಆರೋಪ. ಇದು ಸತ್ಯವೂ
ಹೌದು. ಅದೇ ಪುರುಷರು ಸೆಕ್ಸ್‌ಗಾಗಿ ಏನು ಮಾಡಲೂ ಸಿದ್ಧವಾಗಿರುತ್ತಾರೆ ಎಂದು
ಸಮೀಕ್ಷೆಯೊಂದು ಹೇಳಿದೆ.
-
ಲಂಡನ್ ಮೂಲದ ವೆಬ್‌ಸೈಟ್ ಈ ಸಮೀಕ್ಷೆ ನಡೆಸಿದ್ದು, ಮಿಲನ ಮಹೋತ್ಸವಕ್ಕೆ ಹಾತೊರೆಯುವ ಪುರುಷರನ ಮನಸ್ಥಿತಿಯನ್ನು ಬಿಚ್ಚಿಟ್ಟಿದೆ. ಈ ವಿಚಾರದಲ್ಲಿ ಸಮೀಕ್ಷೆ ನಡೆಸುವಾಗ ಮಹಿಳೆಯರನ್ನೂ ಗಣನೆಗೆ ತೆಗೆದುಕೊಳ್ಳಲಾಗಿದೆ. ಆ ಪ್ರಕಾರ ಪುರುಷರು ಮಹಿಳೆಗಾಗಿ, ಏನನ್ನೂ ಮಾಡಲು ಸಿದ್ಧರಿದ್ದರೆ, ಅಂತಹ ಪುರುಷರ ಸಂಬಂಧ ಮುರಿದುಬೀಳುವುದು ಕಡಿಮೆ. ಆದರೆ ಮಹಿಳೆಯರು ಹಾಗಿಲ್ಲ. ತನಗೆ ನಿರ್ದಿಷ್ಟ ಪುರುಷನ ಸಾಮೀಪ್ಯ ಸಮಾಗಮ ಬೇಕೆಂದರೆ, ಪುರುಷರಷ್ಟು ಹೋರಾಟಕ್ಕೆ, ಪರಿಸ್ಥಿತಿ ನಿಭಾಯಿಸಲು ಸಜ್ಜಾಗುವುದಿಲ್ಲವಂತೆ. ಪ್ರಮುಖವಾಗಿ ಪುರುಷರು ಮಹಿಳೆಯರನ್ನು ಒಲಿಸಿ ಕೊಳ್ಳಲು ಏನು ಬೇಕಾದರೂ ಎದುರು ಹಾಕಿಕೊಳ್ಳುಲು ಸಿದ್ದರಿರುತ್ತಾರೆ. ಇದು ಅವರ ಮನಸ್ಥಿತಿಯಲ್ಲೇ ಅಡಕವಾಗಿರುತ್ತದೆ. ಇಂಥವರನ್ನೇ ಮಹಿಳೆಯರೂ ಹೆಚ್ಚು ಇಷ್ಟ ಪಡುತ್ತಾರೆ.ಸೆಕ್ಸ್‌ನಲ್ಲೂ ಪುರುಷರು, ಇದೇ ಜಾಯಮಾನ ಹೊಂದಿರುತ್ತಾರೆ. ಇದಕ್ಕಾಗಿ ಯಾವುದೇ ಅಡೆತಡೆಗಳನ್ನು ಭೇದಿಸಲೂ ಪುರುಷರು ಸಿದ್ಧರಿರುತ್ತಾರೆ. ಮುಂದುವರಿದ ರಾಷ್ಟ್ರಗಳಲ್ಲಿ ಇದು ಹೆಚ್ಚು ಎಂದು ಸಮೀಕ್ಷೆ ಹೇಳಿದೆ.
ಫಲಿತಗಳು...
* ಸೆಕ್ಸ್‌ಗಾಗಿ ಯಾವುದೇ ಅಡೆತಡೆಗಳನ್ನು ಎದುರಿಸಲು ಪುರುಷರು ಸಿದ್ಧ
* ಮಹಿಳೆಯರನ್ನು ಒಲಿಸಿಕೊಳ್ಳಲು ಕಷ್ಟಗಳನ್ನು ಎದುರುಹಾಕಿಕೊಳ್ಳುವ ಪುರುಷರದು
* ನಮಗಾಗಿ ಏನು ಬೇಕಾದರೂ ಮಾಡಬಲ್ಲ ಪುರುಷರೆಂದರೆ ನಮಗೆ ಇಷ್ಟ - ಮಹಿಳೆಯರು
ಕೃಪೆ : Udayavani | Aug 10, 2013
Saturday, July 6, 2013
ಒಪ್ಪಿಗೆ ಎಂಬ ಕೆಟ್ಟ ಚಟಕ್ಕೆ ಬಲಿಯಾಗಿದ್ದೀರಾ?
Written by: ಮಾಧವ, ಮೈಸೂರು
ಕೆಲವರಿರುತ್ತಾರೆ. ತಮ್ಮ ಇಡೀ ಜೀವನವನ್ನು ಮೂರು ಅಕ್ಷರಗಳ
ಸೆರೆಮನೆಯಲ್ಲಿ ಕಳೆದಿರುತ್ತಾರೆ. ಆ ಸೆರೆಮನೆಯೇ ಒಪ್ಪಿಗೆ! ನಮ್ಮ ಸಮಾಜದಲ್ಲಿ ನಾವು
ಸ್ವಾಭಾವಿಕವಾಗಿ ಸಂತೋಷವಾಗಿರುವ ಪುಟಾಣಿಗಳನ್ನು ಮೆಚ್ಚುಗೆಗಾಗಿ ಚಡಪಡಿಸುವ
ಯಂತ್ರಗಳನ್ನಾಗಿ ಸಾಕುತ್ತೇವೆ. ಇಂತಹ ಮಕ್ಕಳು ದೊಡ್ಡವರಾದ ಮೇಲೆ ಈ ಮೆಚ್ಚುಗೆಯ ಚಪಲ
ವಿಕಾರವಾದ ರೂಪವನ್ನು ತೆಗೆದುಕೊಳ್ಳುತ್ತದೆ.
ರಾಜೇಶನಿಗೆ ಭೂಮಿಯ ಮೇಲಿರುವ ಎಲ್ಲಾ
ವಿಷಯಗಳ ಬಗ್ಗೆ ಒಂದು ಅಭಿಪ್ರಾಯವಿದೆ. ಆದರೆ ಭಿನ್ನಾಭಿಪ್ರಾಯವಿರುವ ಒಬ್ಬ ವ್ಯಕ್ತಿ
ಅವನಿಗೆ ಸಿಗಲಿ! ಥಟ್ಟನೆ ತನ್ನ ಅಭಿಪ್ರಾಯವನ್ನು, ಅವರನ್ನು ಸಮಾಧಾನಗೊಳಿಸುವುದಕ್ಕಾಗಿ,
ಬದಲಿಸುತ್ತಾನೆ. ಅಂದರೆ ರಾಜೇಶನೆಂಬ ವ್ಯಕ್ತಿಯು ಇಲ್ಲವೇ ಇಲ್ಲ. ಇರುವುದು ಅನ್ಯರ
ಕ್ಷಣಿಕ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವ ಕನ್ನಡಿ ಮಾತ್ರ! ರಾಜೇಶನು
ಸಂತೋಷವಾಗಿರುವನೆ? ಊಹುಂ. ಭಯ, ನಾಚಿಕೆ ಮತ್ತು ಹೇಡಿತನ ಅವನ ಶಾಶ್ವತ ಸ್ನೇಹಿತರು.
ಸುಮಂತನು
ಯಾವ ಕೆಲಸವನ್ನೂ ಅದರಿಂದ ಸಿಗುವ ಸಂತೋಷಕ್ಕಾಗಿ ಮಾಡುವುದಿಲ್ಲ. ಒಂದು ಕೆಲಸದಿಂದ ತನಗೆ
ಪರರಿಂದ ಎಷ್ಟು ಒಪ್ಪಿಗೆ ಅಂಕಗಳು ಸಿಗುತ್ತವೆ ಎಂದು ಲೆಕ್ಕ ಹಾಕಿಕೊಂಡು
ಕೆಲಸಕ್ಕಿಳಿಯುತ್ತಾನೆ. ವೈಯಕ್ತಿಕ ಜೀವನದಲ್ಲಂತೂ ಸುಮಂತನು ಮೆಚ್ಚುಗೆ ಚಟದ ಅರಸ.
ತಂದೆ-ತಾಯಿಗೆ ಅವನು ಶರಣಪುತ್ರ, ಗೆಳತಿಗೆ ಶ್ರೀರಾಮಚಂದ್ರ, ಮತ್ತು ಬಂಧುಗಳಿಗೆ
ಧರ್ಮರಾಜ! ಇವುಗಳು ನಟನಾ ಭಯಂಕರ ಸುಮಂತನು ಒಪ್ಪಿಗೆಗಾಗಿ ನಿರ್ವಹಿಸುವ ಪಾತ್ರಗಳೇ
ಹೊರತು, ಹೃದಯಪೂರ್ವಕ ಸಂಬಂಧಗಳಲ್ಲ. ಸುಮಂತನಿಗೆ ಮನಸ್ಸಿನಲ್ಲಿ ಅಶಾಂತಿ ಮತ್ತು
ಮೆಚ್ಚುಗೆ ಸಿಗದಿದ್ದಾಗ ಅಗಾಧವಾದ ಹತಾಶೆ ಅನುಭವಿಸುತ್ತಾನೆ.
ಸ್ನೇಹಿತರೇ, ನೀವೂ ಕೂಡ ಒಪ್ಪಿಗೆ ಎಂಬ ಕೆಟ್ಟ ಚಟಕ್ಕೆ ಬಲಿಯಾಗಿದ್ದೀರಾ? ಹಾಗಾದರೆ ಎಚ್ಚೆತ್ತುಕೊಳ್ಳಿ. ಈ ಕೆಳಗಿನ ತಂತ್ರಗಳು ನಿಮ್ಮನ್ನು ಮಂಜೂರಾತಿಯ ಚಕ್ರವ್ಯೂಹದಿಂದ ಹೊರಬರುವ ವಿಧಾನವನ್ನು ತೋರುತ್ತವೆ:
* ಮೊದಲನೆಯದಾಗಿ, ಕೂತಲ್ಲಿ ನಿಂತಲ್ಲಿ
ಕ್ಷಮಾಪಣೆ ಕೇಳುವುದನ್ನು ಬಿಟ್ಟು ಬಿಡಿ. ಅತಿಯಾದ ಕ್ಷಮೆಯಾಚಿಸುವಿಕೆ ಒಪ್ಪಿಗೆ ಚಟದ
ನೀಚಾವತಾರ. ಕೆಲವು ಸಂದರ್ಭಗಳಲ್ಲಿ ನಿಮ್ಮ ವರ್ತನೆ ನಿಮಗೇ ಹಿಡಿಸದಿರಬಹುದು. ಆಗ, "ನನ್ನ
ನಡವಳಿಕೆ ಸರಿಯಾಗಿರಲಿಲ್ಲ. ನನ್ನ ವರ್ತನೆಯನ್ನು ನಾನು ಸರಿಪಡಿಸುತ್ತೇನೆ" ಎಂದು
ಘೋಷಿಸಿ, ಆ ದಿಕ್ಕಿನಲ್ಲಿ ಕ್ರಮ ತೆಗೆದುಕೊಳ್ಳಿ.
* ಮುಂದಿನ ಬಾರಿ ಯಾರಾದರು
ನಿಮ್ಮನ್ನು ವೈಯಕ್ತಿಕವಾಗಿ ನಿಂದಿಸಿದಲ್ಲಿ, "ಏನೊಲೈ.... ", ಎಂದು ಪಂಚೆ ಕಟ್ಟಿಕೊಂಡು
ಜಗಳಕ್ಕಿಳಿಯುವ ಮುನ್ನ, ಏನೂ ಹೇಳದೆ ಸುಮ್ಮನ್ನಿರುವುದನ್ನು ಪ್ರಯತ್ನಿಸಿ ನೋಡಿ.
ನಿಂದನೆಯ ಸಮ್ಮುಖದಲ್ಲಿ ನೀವು ವಾಗ್ಯುದ್ಧಕ್ಕೆ ಇಳಿದರೆ, ನೀವು ನಿಮ್ಮ ಅಭಿಪ್ರಾಯಕ್ಕಿಂತ
ಅನ್ಯರ ಅನಿಸಿಕೆಗಳಿಗೆ ಹೆಚ್ಚು ಪ್ರಾಮುಖ್ಯತೆ ಕೊಡಿತ್ತೀರಿ ಎಂದರ್ಥ.
* ಕೆಲವು
ಕುಟುಂಬ ಸದಸ್ಯರು ಶುಭಕಾರ್ಯಗಳಿಗೆ ಬರುವವರ "ಅಟೆಂಡೆನ್ಸ್" ಹಾಕುವುದರಲ್ಲಿ ನಿಸ್ಸೀಮರು.
ನೀವು ಹೋಗದಿದ್ದರೆ, ನಿಮ್ಮ ಆಯ್ಕೆ-ಸಂದರ್ಭಗಳನ್ನು ಲೆಕ್ಕಿಸದೆ, ಕೊಂಕಾಗಿ
ಮಾತಾಡುತ್ತಾರೆ. ಇಂತಹ ಜನರ ಸಂಬಂಧ ನಿಮಗೆ ನಿಜವಾಗಿಯೂ ಬೇಕಾ? ಯೋಚಿಸಿ.
* ಉಡುಪು
ಅಥವಾ ಇತರ ಖಾಸಗಿ ವಸ್ತುಗಳನ್ನು ಖರೀದಿಸುವ ಮುನ್ನ ಸರ್ವಾಧಿಕಾರಿಗಳನ್ನು ಕೇಳಬೇಡಿ.
ನಿಮ್ಮ ಆಯ್ಕೆಯ ವಸ್ತುವನ್ನು ಜಯ್ ಎಂದು ಬುಟ್ಟಿಗೆ ಹಾಕಿಕೊಳ್ಳಿ. ಆರ್ಥಿಕ ಅವಲಂಬನದಿಂದ
ನೀವು ಇದನ್ನು ಮಾಡಲಾಗದಿದ್ದರೆ, ನಿಮಗೆ ಇಷ್ಟವಾದ ಒಂದು ಸೃಜನಾತ್ಮಕ ವೃತ್ತಿಯ ಮೂಲಕ ಹಣ
ಸಂಪಾದನೆ ಪ್ರಾರಂಭಿಸಿ. ಇದಲ್ಲದೆ, ಯೋಚಿಸೋಕೆ, ಮಾತನಾಡೋಕೆ, ಕುಳಿತುಕೊಳ್ಳೋಕೆಲ್ಲಾ
ಅನುಮತಿ ಕೇಳಬೇಡಿ. ಮಾನವೀಯ ಹಕ್ಕುಗಳನ್ನು ತ್ಯಜಿಸಿದ ಗುಲಾಮರು ಮಾತ್ರ ಹಣಕ್ಕೆ ಮತ್ತು
ಅನುಮತಿಗೆ ಬೇಡಬೇಕು.
* ಮುಂದಿನ ಬಾರಿ ಒಂದು ಸಂವಾದದಲ್ಲಿ ನೀವು ಎಷ್ಟು ಬಾರಿ
ಬಡಾಯಿ ಕೊಚ್ಚಿಕೊಳ್ಳುತ್ತೀರಿ ಎಂಬುದನ್ನು ಪರಿಶೀಲಿಸಿ. ಹೆಮ್ಮೆಯಾಗುವ ನಿಮ್ಮ ಒಂದು
ಸಾಧನೆಯ ಅನುಭವವನ್ನು ಬೇರೆಯವರೊಂದಿಗೆ ಹಂಚಿಕೊಳ್ಳಬೇಕೆಂದರೆ, ಖಂಡಿತ ಅದನ್ನು
ಹಂಚಿಕೊಳ್ಳಿ. ಆದರೆ, ಒಮ್ಮೊಮ್ಮೆ ನಿಮ್ಮ ಸಾಧನೆಯನ್ನು ಬೇರೆಯವರು ಹೊಗಳಬೇಕೆಂಬ ಕೆಟ್ಟ
ಚಡಪಡಿಕೆ ಮೈಮೇಲೆ ಬಂದುಬಿಡುತ್ತದೆ. ಇಂತಹ ಸಂದರ್ಭದಲ್ಲಿ, ನೀವು ಅನಿವಾರ್ಯವಾಗಿ
ಕೊಚ್ಚಿಕೊಳ್ಳಲೇಬೇಕಾದ ವಿಷಯವನ್ನು ಅರ್ಧ ಗಂಟೆ ಯಾರಿಗೂ ಹೇಳಬೇಡಿ. ದೇಹದ ಬಡಾಯಿಯ ಅಬ್ಬರ
ಸಾಮಾನ್ಯವಾಗಿ ಸ್ವಲ್ಪ ಸಮಯದ ನಂತರ ಕ್ಷೀಣಿಸುತ್ತದೆ.
* "ವಿಶ್ವದಲ್ಲಿರುವ
ಎಲ್ಲಾ ಜೀವಿಗಳೂ ನನ್ನನ್ನು ಅರ್ಥ ಮಾಡಿಕೊಳ್ಳಬೇಕು!" ಎಂಬ ಹಾಸ್ಯಾಸ್ಪದ ಆಸೆಗೆ ಇಂದೇ
ವಿದಾಯ ಹೇಳಿ ಹೊರಗೋಡಿಸಿ. ಒಂದು ಸರಳ ಸತ್ಯವೆಂದರೆ ಅನೇಕ ಜನರು ನಿಮ್ಮ ಭಾವನೆ, ವರ್ತನೆ,
ಕಲ್ಪನೆಗಳನ್ನು ಅರ್ಥ ಮಾಡಿಕೊಳ್ಳುವುದಿಲ್ಲ. ಪ್ರತ್ಯೇಕ ಅಸ್ತಿತ್ವವನ್ನು ಅನುಭವಿಸುವ
ಮಾನವ ಜಾತಿಯಲ್ಲಿ ಇದು ಸಹಜ. ಈ ಸತ್ಯವನ್ನು ನೀವು ಎಷ್ಟು ಬೇಗ ಅರ್ಥ ಮಾಡಿಕೊಳ್ಳುವಿರೋ,
ಅಷ್ಟು ಪ್ರಮಾಣದ ನೆಮ್ಮದಿ ನಿಮ್ಮದಾಗುವುದು.
ಹೀಗೆಲ್ಲಾ ಅಂದ ಮಾತ್ರಕ್ಕೆ
ನಿಮ್ಮೆಡೆಗೆ ಬರುವ ಮೆಚ್ಚುಗೆಯನ್ನು ನೀವು ತಿರಸ್ಕರಿಸಬೇಕು ಎಂದರ್ಥವಲ್ಲ. ಹಿತೈಷಿಗಳ
ಪ್ರಶಂಸೆಗೆ ನೀವು ಒಳಗಾದಾಗ ಒಂದು ಪುಟ್ಟ ಧನ್ಯವಾದದ ಮೂಲಕ ಅವರ ಪ್ರೀತಿಯ ಮಾತುಗಳನ್ನೂ
ಸ್ವೀಕರಿಸಿ. ಸಂತೋಷ ಪಡಿ. ಒಪ್ಪಿಗೆ ಮತ್ತು ಮೆಚ್ಚುಗೆ ಜೀವನದ ಸಿಹಿತಿಂಡಿಗಳು
ಎಂಬುದನ್ನು ಇಲ್ಲಿ ನಿರಾಕರಿಸಲಾಗಿಲ್ಲ. ಆದರೆ, ಇವುಗಳು ನಿಮ್ಮ ಜೀವನದ ಸ್ತಂಭಗಳಾಗಿ
ಬಿಟ್ಟರೆ, ನಿಮ್ಮ ಆತ್ಮಶಕ್ತಿ ಬಹುಬೇಗ ಕುಸಿದು ಬೀಳುತ್ತದೆ. ಆತ್ಮವಿಶ್ವಾಸಿಗಳಾದ ನೀವು
ಇದಕ್ಕೆ ಅವಕಾಶ ಮಾಡಿಕೊಡುವುದಿಲ್ಲ, ಅಲ್ಲವೇ?
ಕೃಪೆ : ಒನ್ ಇಂಡಿಯಾ Monday, June 17, 2013
36 ವರ್ಷದವಳ ಮಗುವಿಗೆ 11ರ ಬಾಲಕ ತಂದೆ!
ಕಾಲ ಕೆಟ್ಟೋಯ್ತು ಸ್ವಾಮಿ. 36 ವರ್ಷದ ಮಹಿಳೆಯೆಲ್ಲಿ, 11ರ ಬಾಲಕನೆಲ್ಲಿ..? ಇವರಿಬ್ಬರ ಸಂಭೋಗದಿಂದ ಮಗು ಹುಟ್ಟುವುದೆಂದರೇನು..?
ಶಿವ...ಶಿವ... ಕೇಳ್ಳೋದಕ್ಕೆ ಆಗೋಲ್ಲ ಅಂತ ಅಂದರೂ ಇತಂಹದೊಂದು ಘಟನೆ ನ್ಯೂಜಿಲೆಂಡ್‌ನಲ್ಲಿ ನಡೆದಿದ್ದು ಎಲ್ಲರ ಬಾಯಿಗೂ ಇವರಿಬ್ಬರು ಆಹಾರವಾಗಿಬಿಟ್ಟಿದ್ದಾರೆ.
ಈ 11 ವಯಸ್ಸಿನ ಬಾಲಕನಿಗೆ ಆತನ ಸ್ನೇಹಿತನ ತಾಯಿಯ ಪರಿಚಯವಾಗಿದೆ. ಈ ಪುಟ್ಟ ಬಾಲಕನಲ್ಲಿ ಅದೇನು ಸೆಳೆತವಿತ್ತೋ ಅಥವಾ 36ರ ಈ ಮಹಾತಾಯಿಯ ಮೇಲೆ ಈ ಬಾಲಕನಿಗೆ ಅದೇಗೆ ಮೋಹ ಶುರುವಾಯಿತೋ, ನೋಡು ನೋಡುತ್ತಿದ್ದಂತೆ ಇಬ್ಬರ ಪರಿಚಯ ಪ್ರಣಯಕ್ಕೆ ತಿರುಗಿ ಮಗು ಆಗುವಷ್ಟರ ಮಟ್ಟಿಗೆ ಬಂದುಬಿಟ್ಟಿದೆ.
ಅಪ್ರಾಪ್ತೆಯರ
ಮೇಲೆ ಅತ್ಯಾಚಾರವೆಸಗೋ ಪುರುಷರಿಗೆ ಜೈಲು ಶಿಕ್ಷೆಯಾಗುತ್ತದೆ. ಆದ್ರೆ ಏನೋ ಅರಿಯದ
ಮುಗ್ಧ ಬಾಲಕನನ್ನು ತಂದೆಯ ಸ್ಥಾನಕ್ಕೇರಿಸಿದ ಮಹಿಳೆಗೆ ಯಾವ ಶಿಕ್ಷೆಯಾಗುತ್ತದೆ ಎಂದು
ಎಲ್ಲೆಡೆ ಚರ್ಚೆ ಆರಂಭವಾಗಿದೆಯಂತೆ..!
ಒಟ್ಟಿನಲ್ಲಿ ಕಾಮಕ್ಕೆ ಕಣ್ಣಿಲ್ಲ ಎಂಬುದು ಈ ಘಟನೆಯಿಂದ ಸಾಬೀತಾಗಿದೆ.
ಒಟ್ಟಿನಲ್ಲಿ ಕಾಮಕ್ಕೆ ಕಣ್ಣಿಲ್ಲ ಎಂಬುದು ಈ ಘಟನೆಯಿಂದ ಸಾಬೀತಾಗಿದೆ.
ಕೃಪೆ : ಉದಯವಾಣಿ
Subscribe to:
Posts (Atom)