Monday, June 17, 2013

36 ವರ್ಷದವಳ ಮಗುವಿಗೆ 11ರ ಬಾಲಕ ತಂದೆ!




ಕಾಲ ಕೆಟ್ಟೋಯ್ತು ಸ್ವಾಮಿ. 36 ವರ್ಷದ ಮಹಿಳೆಯೆಲ್ಲಿ, 11ರ ಬಾಲಕನೆಲ್ಲಿ..? ಇವರಿಬ್ಬರ ಸಂಭೋಗದಿಂದ ಮಗು ಹುಟ್ಟುವುದೆಂದರೇನು..?

ಶಿವ...ಶಿವ... ಕೇಳ್ಳೋದಕ್ಕೆ ಆಗೋಲ್ಲ ಅಂತ ಅಂದರೂ ಇತಂಹದೊಂದು ಘಟನೆ ನ್ಯೂಜಿಲೆಂಡ್‌ನ‌ಲ್ಲಿ ನಡೆದಿದ್ದು ಎಲ್ಲರ ಬಾಯಿಗೂ ಇವರಿಬ್ಬರು ಆಹಾರವಾಗಿಬಿಟ್ಟಿದ್ದಾರೆ.

ಈ 11 ವಯಸ್ಸಿನ ಬಾಲಕನಿಗೆ ಆತನ ಸ್ನೇಹಿತನ ತಾಯಿಯ ಪರಿಚಯವಾಗಿದೆ. ಈ ಪುಟ್ಟ ಬಾಲಕನಲ್ಲಿ ಅದೇನು ಸೆಳೆತವಿತ್ತೋ ಅಥವಾ 36ರ ಈ ಮಹಾತಾಯಿಯ ಮೇಲೆ ಈ ಬಾಲಕನಿಗೆ ಅದೇಗೆ ಮೋಹ ಶುರುವಾಯಿತೋ, ನೋಡು ನೋಡುತ್ತಿದ್ದಂತೆ ಇಬ್ಬರ ಪರಿಚಯ ಪ್ರಣಯಕ್ಕೆ ತಿರುಗಿ ಮಗು ಆಗುವಷ್ಟರ ಮಟ್ಟಿಗೆ ಬಂದುಬಿಟ್ಟಿದೆ.

ಅಪ್ರಾಪ್ತೆಯರ ಮೇಲೆ ಅತ್ಯಾಚಾರವೆಸಗೋ ಪುರುಷರಿಗೆ ಜೈಲು ಶಿಕ್ಷೆಯಾಗುತ್ತದೆ. ಆದ್ರೆ ಏನೋ ಅರಿಯದ ಮುಗ್ಧ ಬಾಲಕನನ್ನು ತಂದೆಯ ಸ್ಥಾನಕ್ಕೇರಿಸಿದ ಮಹಿಳೆಗೆ ಯಾವ ಶಿಕ್ಷೆಯಾಗುತ್ತದೆ ಎಂದು ಎಲ್ಲೆಡೆ ಚರ್ಚೆ ಆರಂಭವಾಗಿದೆಯಂತೆ..!

ಒಟ್ಟಿನಲ್ಲಿ ಕಾಮಕ್ಕೆ ಕಣ್ಣಿಲ್ಲ ಎಂಬುದು ಈ ಘಟನೆಯಿಂದ ಸಾಬೀತಾಗಿದೆ.

ಕೃಪೆ : ಉದಯವಾಣಿ
 

No comments:

Post a Comment