Tuesday, March 4, 2014

ಪೊಲೀಸರಿಗೆ ಫೋನು ಮಾಡಿ ಮಂಚಕೆ ಕರೆದಳು !




    •  ಈ ವಿರಹದ ವೇದನೆ ಎಂಬುದು ಬಿಸಿ ತುಪ್ಪವಿದ್ದಂತೆ. ಇತ್ತ ನುಂಗಲು ಆಗದೇ ಅತ್ತ ಉಗುಳಲು ಆಗದೆ ತ್ರಿಶಂಕು ಸ್ಥಿತಿ ಅನುಭವಿಸುವಂತಹ ಯಾತನೆ. ಈ ಯಾತನೆ ಬಂದ್ರೆ ಪುರುಷರು ಬೇಕಾದ್ರೂ ಎಡವಟ್ಟು ಮಾಡಬ ಹುದು. ಆದರೆ ಮಹಿಳೆಯರು ಮಾತ್ರ ಸ್ವಲ್ಪ ಸಾವಧಾನವಾಗಿ ರುತ್ತಾರೆ ಅನ್ನೋದು ಕೆಲವು ಲೈಂಗಿಕ ತಜ್ಞರ ಮಾತು. ಆದರೆ ಕೆಲವೊಮ್ಮೆ ಈ ಮಾತೂ ಉಲ್ಟಾ ಆಗುತ್ತೆ ಅನ್ನೋದಕ್ಕೆ ಫ್ಲೋರಿಡಾದಲ್ಲಿನ ಘಟನೆಯೇ ಸಾಕ್ಷಿ. ಇಲ್ಲಿನ ವಿಧವೆಯೊಬ್ಬಳು ಇದ್ದಕ್ಕಿದ್ದಂತೆ 911 ತುರ್ತು ಸಂಖ್ಯೆಗೆ ಫೋನ್‌ ಮಾಡಿ, 'ನನ್ನ ಕಾರು ಕಳೆದುಹೋಗಿದೆ. ಕೂಡಲೇ ಯಾರನ್ನಾದರೂ ಮನೆಗೆ ಕಳುಹಿಸಿ' ಎಂದಳು. ಅತ್ತಕಡೆಯಿಂದ ಎದ್ದುಬಿದ್ದು ಬಂದ ಪೊಲೀಸಪ್ಪ, ಈಕೆ ಮನೆ ಬಾಗಿಲು ತಟ್ಟಿದ. ಅಷ್ಟೊತ್ತಿಗಾಗಲೇ ಅಮ್ಮೋರು ಫ‌ುಲ್‌ ಟೈಟಾಗಿದ್ರು. ಸರಿ ಮಾಹಿತಿ ಕಲೆ ಹಾಕಲು ಪೊಲೀಸ್‌ ಮುಂದಾಗುತ್ತಿದ್ದಂತೆ 'ಏಯ್‌...ನಾನು ವಿರಹವೇದನೆಯಿಂದ ಬಳಲಿ ಬೆಂಡಾಗಿ ಹೋಗಿದ್ದೇನೆ. ಈಗ ನೀನು ನನ್ನ ಕಾಮದಾಹವನ್ನು ನೀಗಿಸಬೇಕು' ಎಂದು ನಿವೇದಿಸಿದಳಂತೆ! 

      ಕೃಪೆ : Udayavani | Mar 04, 2014

No comments:

Post a Comment