Saturday, March 3, 2012

ಹದಿಹರೆಯದಲ್ಲಿ ಊಟದತ್ತ ನಿರ್ಲಕ್ಷ್ಯದಿಂದ ಅಪಾಯ !

ಕರ್ಷಕ ಮೈಕಟ್ಟಿನ ಬಗ್ಗೆ ಹದಿಹರೆಯದ ಮಕ್ಕಳಿಗೆ ಅಸಕ್ತಿ. ಅದರ ಪರಿಣಾಮ ಆರೋಗ್ಯಕರವಲ್ಲದ ಡಯಟ್. ಅದೂ ತೂಕದ ವಿಷಯದಲ್ಲಿ ಹೆಣ್ಣು ಮಕ್ಕಳಿಗೆ ಕರೀನಾ ಕಪೂರ್ ರೋಲ್ ಮಾಡಲ್. ಬಳಕುವ ಬಳ್ಳಿ ಆಗುವ ಆಸೆ ಮತ್ತು ತೆಳ್ಳಗಾದರೆ ತಾನು ಹೆಚ್ಚು ಸುಂದರಿಯಾಗಿ ಕಾಣುತ್ತೇನೆ ಎಂಬ ಭ್ರಮೆ. ಈ ಎಲ್ಲಾ ಕಾರಣಗಳಿಂದ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳ ಪೂರೈಕೆಯಾಗುವುದಿಲ್ಲ.

ಮಕ್ಕಳಲ್ಲಿ ತೂಕ ಬಗ್ಗೆ ಇರುವ ಅನಾವಶ್ಯಕ ಚಿಂತೆ ಪೋಷಕರು ನೆಮ್ಮದಿಯನ್ನು ಹಾಳು ಮಾಡುತ್ತಿದೆ. ಮಕ್ಕಳು ಸರಿಯಾದ ರೀತಿಯಲ್ಲಿ ಪೋಷಕಾಂಶ ಇರುವ ಅಹಾರವನ್ನು ಸೇವಿಸುತ್ತಿಲ್ಲ ಹೀಗಾದರೆ ಅವರ ಆರೋಗ್ಯ ಏನಾಗುತ್ತೆ ಎಂಬುದು ಅನೇಕ ಪೋಷಕರ ಕಳವಳವಾಗಿದೆ.

ಮಕ್ಕಳಲ್ಲಿ ತೂಕದ ಬಗ್ಗೆ ಇರುವ ಅಧಿಕ ಚಿಂತೆ ಒಂದು ರೀತಿಯ ಕಾಯಿಲೆ ಆಗಿದ್ದು ಅದನ್ನು 'ಆಹಾರ ಸೇವನೆಯಲ್ಲಿ ಅಸಮತೋಲನೆ' (eating disorder) ಕಾಯಿಲೆ ಎಂದು ಕರೆಯಲಾಗುವುದು.

'ಆಹಾರ ಸೇವನೆಯಲ್ಲಿ ಅಸಮತೋಲನೆ' ಕಾಣಿಸಿಕೊಂಡರೆ ಈ ಕೆಳಗಿನ ಲಕ್ಷಣಗಳು ಕಂಡು ಬರುತ್ತವೆ:

1. ತೂಕ ಹೆಚ್ಚಾಗಬಹುದೆಂದು ಸರಿಯಾಗಿ ತಿನ್ನುವುದಕ್ಕೆ ಭಯಪಡುವುದು ಮತ್ತು ದೇಹದ ತೂಕ ಮಿತಿಮೀರಿ ಕಡಿಮೆಯಾಗುವುದು.
2. ಮುಟ್ಟು ವಿಳಂಬವಾಗುವುದು.
3. ಆಹಾರ ಮತ್ತು ತೂಕದ ಬಗ್ಗೆ ಹೆಚ್ಚಾಗಿ ಮಾಡುವುದು ಅಂದರೆ ಈ ಆಹಾರದಿಂದ ತೂಕ ಹೆಚ್ಚಾಗುವುದು ಅದು ಬೇಡ... ಹೀಗೆ ಬೇಡಗಳ ಪಟ್ಟಿ.
4. ತೂಕದ ಬಗ್ಗೆ ವಿಪರೀತ ಚಿಂತೆ ಮಾಡುವವರು ತಿಂದ ನಂತರ ವಾಂತಿ ಮಾಡಿಕೊಳ್ಳುತ್ತಾರೆ.

ಮಕ್ಕಳಲ್ಲಿ ಈ ರೀತಿಯ ಲಕ್ಷಣಗಳು ಕಂಡುಬಂದರೆ ನಿರ್ಲಕ್ಷ್ಯ ಬೇಡ. ಮಕ್ಕಳಿಗೆ ಸರಿಯಾದ ರೀತಿಯಲ್ಲಿ ಕೌನ್ಸಿಲಿಂಗ್ ನೀಡಿ ಆರೋಗ್ಯಕರ ಆಹಾರ ಕ್ರಮದ ಬಗ್ಗೆ ಮನದಟ್ಟು ಮಾಡಬೇಕಾಗಿದೆ.
ಕೃಪೆ : ಒನ್ ಇಂಡಿಯಾ

No comments:

Post a Comment