10ನೇ ಪರೀಕ್ಷೆಗೆ ಹಾಜರಾಗಿದ್ದ ಇಬ್ಬರು ದಲಿತ ವಿದ್ಯಾರ್ಥಿನಿಯರನ್ನು ಮಹಿಳಾ ಮೇಲ್ವಿಚಾರಕರು 40 ವಿದ್ಯಾರ್ಥಿಗಳ ಸಮ್ಮುಖದಲ್ಲಿಯೇ ಬೆತ್ತಲೆಗೊಳಿಸಿರುವ ಘಟನೆ ಮಧ್ಯಪ್ರದೇಶದ ನರಸಿಂಗ್‌ಪುರ್ ಜಿಲ್ಲೆಯ ಬಾರ್ಹೆಬಾರಾ ಗ್ರಾಮದಲ್ಲಿ ವರದಿಯಾಗಿದೆ.
ಬಾರೆಬರಾ ಗ್ರಾಮದಲ್ಲಿರುವ ಸರಕಾರಿ ಹಿರಿಯ ಪ್ರೌಢ ಶಾಲೆಯಲ್ಲಿ ಇಂತಹ ಹೇಯ ಘಟನೆ ನಡೆದಿದೆ. ಕೆಲವೇ ಕೆಲ ವಿದ್ಯಾರ್ಥಿನಿಯರು ಹಾಗೂ 40 ಮಂದಿ ವಿದ್ಯಾರ್ಥಿಗಳು 10 ನೇ ತರಗತಿಯ ಪರೀಕ್ಷೆಗೆ ಹಾಜರಾಗಿದ್ದರು. ಮಹಿಳಾ ಮೇಲ್ವಿಚಾರಕಿಯರಾದ ಪ್ರೀತಿ ಶರ್ಮಾ ಮತ್ತು ರೆಷ್ಮಾ ಸಿಮೈಯಾ ಕಾಪಿ ಹೊಡೆಯುತ್ತಿದ್ದಾರೆ ಎನ್ನುವ ಸಂಶಯದಿಂದ ಇಬ್ಬರು ದಲಿತ ವಿದ್ಯಾರ್ಥಿನಿಯರ ವಿಚಾರಣೆ ನಡೆಸಿದ್ದಾರೆ.
ಮಹಿಳಾ ಮೇಲ್ವಿಚಾರಕರ ವರ್ತನೆಯಿಂದ ನೊಂದ ದಲಿತ ವಿದ್ಯಾರ್ಥಿನಿಯರು ಮಾತನಾಡಿ, ತಾವು ಯಾವುದೇ ನಕಲು ಮಾಡಿಲ್ಲ ಎಂದು ಹೇಳಿದರೂ ಕೇಳದೆ ಬಟ್ಟೆ ಬಿಚ್ಚದಿದ್ದಲ್ಲಿ ತಾವೇ ಬಿಚ್ಚುವುದಾಗಿ ಹೆದರಿಸಿದ್ದಾರೆ. ವಿದ್ಯಾರ್ಥಿಗಳ ಮುಂದೆ ಸಂಪೂರ್ಣವಾಗಿ ಬೆತ್ತಲೆಗೊಳಿಸಿದ್ದಾರೆ ಎಂದು ತನಿಖಾಧಿಕಾರಿ ಪಿ.ಎನ್.ಯಾದವ್ ಮುಂದೆ ಹೇಳಿಕೆ ನೀಡಿದ್ದಾರೆ.
ವಿದ್ಯಾರ್ಥಿನಿಯರು ಘಟನೆಯ ಬಗ್ಗೆ ಒಂಬತ್ತು ದಿನಗಳವರೆಗೆ ತಂದೆ ತಾಯಿ ಮುಂದೆ ಬಾಯಿ ಬಿಟ್ಟಿರಲಿಲ್ಲ. ಆದರೆ, ಕೊನೆಗೆ ಕುಟುಂಬದ ಸದಸ್ಯರಿಗೆ ತಿಳಿಸಿದ್ದಾರೆ. ಕುಟುಂಬದ ಸದಸ್ಯರು ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದಾರೆ.
ಜಿಲ್ಲಾಧಿಕಾರಿ ಸಂಜಯ್ ಸಿಂಗ್ ಮಾತನಾಡಿ, ಮಹಿಳಾ ಮೇಲ್ವಿಚಾರಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಪ್ರಕರಣದ ತನಿಖೆಗಾಗಿ ತನಿಖಾಧಿಕಾರಿಗಳನ್ನು ನೇಮಿಸಲಾಗಿದೆ. ಶೀಘ್ರದಲ್ಲಿ ವರದಿ ಸಲ್ಲಿಸುವಂತೆ ಆದೇಶಿಸಲಾಗಿದೆ ಎಂದು ತಿಳಿಸಿದ್ದಾರೆ.

ಕೃಪೆ : ವೆಬ್ ದುನಿಯಾ
No comments:
Post a Comment