ಸರ್ವರೋಗಕ್ಕೂ ಸಂಪೂರ್ಣ ಸರಳ ಸೆಕ್ಸ್ ಮದ್ದು !
ಸೆಕ್ಸ್ ಆನಂದಮಯವಾಗಿದ್ದಷ್ಟು
ಹೆಚ್ಚಿನ ಆರೋಗ್ಯ ಕೊಡುತ್ತದೆ. ದೇಹಕ್ಕೆ ಅಗತ್ಯವಾದ ಹಾರ್ಮೋನ್ ಗಳು ಸಂಭೋಗ ಮಾತ್ರದಿಂದ
ಲಭ್ಯವಾಗಲಿದೆ ಎಂದು ಐರ್ಲೆಂಡ್ ನ ಸಂಶೋಧಕರು ಹೇಳುತ್ತಾರೆ.
ಆದರೆ, ಅತಿಯಾದರೆ
ಅಮೃತವೂ ವಿಷ ಎಂಬಂತೆ ನಿಯಮಿತವಾಗಿ ಸೆಕ್ಸ್ ಮಾಡುವುದರಿಂದ ನಮ್ಮ ದೇಹದ ರೋಗ ನಿರೋಧಕ
ಶಕ್ತಿ ಹೆಚ್ಚುತ್ತದೆ. ತಲೆ ನೋವು, ಅರೆ ತಲೆನೋವು, ಸ್ಥೂಲಕಾಯ ಸಮಸ್ಯೆ, ಮೂಳೆ ನೋವು,
ಮಾನಸಿಕ ಒತ್ತಡ, ಪ್ರಜ್ಞೆ ಹೆಚ್ಚಳ, ಚುರುಕುತನಕ್ಕೆ ಸಂಭೋಗ ಸಹಕಾರಿ.
* ಹಲವಾರು
ದೈಹಿಕ ಸಮಸ್ಯೆಗಳಿಗೆ ಮಾನಸಿಕ ಒತ್ತಡ ಹಾಗೂ ಅಶಾಂತಿ ಕಾರಣವಾಗಿರುತ್ತದೆ. ವೈಯಕ್ತಿಕ
ಕೀಳರಿಮೆ, ಭಯ, ಹಿಂಜರಿಕೆಯನ್ನು ದೂರಾಗಿಸಲು ಬೇಕಾದ ಹಾರ್ಮೋನ್ ಅನ್ನು ಸೆಕ್ಸ್ ನಂತರ
ಪಡೆಯಬಹುದಾಗಿದೆ.
endorphins ಹಾರ್ಮೋನ್ ಹೊರ ಹಾಕುವ ಮೆದುಳು ಮಾನಸಿಕ
ಒತ್ತಡವನ್ನು ಕಡಿಮೆ ಮಾಡಿ ಮನಸ್ಸು ಉಲ್ಲಾಸವಾಗಿರುವಂತೆ ಮಾಡುತ್ತದೆ. ಇದು ಕೆಲ ಕಾಲದ
ಸ್ಥಿತಿಯಾದರೂ ಇದರಿಂದ ಸಂತೋಷ ಉಲ್ಬಣಿಸುವ ಸಾಧ್ಯತೆ ಹೆಚ್ಚಾಗಿದೆ.
* ಸೆಕ್ಸ್
ನಿಂದ ಸೌಂದರ್ಯ ವರ್ಧನ ಸಾಧ್ಯವೇ? ಖಂಡಿತಾ ಸಾಧ್ಯ. ಸೆಕ್ಸ್ ನಿಂದ ಹೆಚ್ಚಿನ ಲಾಭ
ಪಡೆಯುವುದು ಸ್ತ್ರೀ ಎಂಬುದು ನೆನಪಿರಲಿ. ನಿಯಮಿತ ಸಂಭೋಗದ ನಂತರ ಮಹಿಳೆಯ ದೇಹದಲ್ಲಿ
estrogen ಪ್ರಮಾಣ ಡಬಲ್ ಆಗುತ್ತದೆ. ಕೂದಲು ಮಿರಿ ಮಿರಿ ಮಿಂಚುತ್ತದೆ. ತ್ವಚೆ ಕೂಡಾ
ಹೊಳೆಪು ಪಡೆಯುತ್ತದೆ. ಜೊತೆಗೆ ಅಂಗಾಂಗಗಳು ಕೂಡಾ ಬಿಗಿತ್ವ ಪಡೆಯುತ್ತದೆ.
*
ಸುಮಾರು 1000ಕ್ಕೂ ಅಧಿಕ ಮಧ್ಯವಯಸ್ಕರ ಮೇಲೆ 10 ವರ್ಷಕ್ಕೂ ಅಧಿಕ ಕಾಲ ಸಂಶೋಧನೆ ನಡೆಸಿದ
ಕ್ವೀನ್ಸ್ ವಿವಿಯ ವರದಿ ಪ್ರಕಾರ, ಪುರಷರ ಆಯುಷ್ಯವೃದ್ಧಿಗೆ ಸೆಕ್ಸ್ ಸಹಕಾರಿಯಂತೆ.
ಮಾನಸಿಕ
ಒತ್ತಡ ನಿವಾರಣೆ ಬೇಕಾದ ಹಾರ್ಮೋನ್ ಉತ್ಪಾದನೆಯಿಂದ ಪುರುಷರು ಹೆಚ್ಚು ಲವಲವಿಕೆಯಿಂದ
ಜೀವನ ಸಾಗಿಸಬಹುದಾಗಿದೆ. ಜೀವನ ವಿಕಾಸಕ್ಕೆ ಆಯುಷ್ಯ ವೃದ್ಧಿಗೆ ದೀರ್ಘಕಾಲ ಜೀವಿಸಲು
ಸಂಭೋಗ ಸಹಕಾರಿ ಎನ್ನುತ್ತದೆ ಸಂಶೋಧನೆ.
* ಸೆಕ್ಸ್ ನಿಂದ ಆರಾಮವಾಗಿ ಕ್ಯಾಲೋರಿ ಕರಗಿಸಿ ಸಣ್ಣಗಾಗಬಹುದು. ರೋಮ್ಯಾಂಟಿಕ್ ಡಿನ್ನರ್ ಮೂಲಕ ಮೈಗೆ ತುಂಬಿಕೊಂಡ ಕೊಬ್ಬನ್ನು ಸೆಕ್ಸ್ ಮೂಲಕ ಕರಗಿಸಬಹುದು.
120 ಕಿ.ಮೀ ಜಾಗಿಂಗ್ ಮಾಡುವುದೂ ಒಂದೇ 20 ನಿಮಿಷದ ಹಾರ್ಡ್ ಕೋರ್ ಸಂಭೋಗವೂ ಒಂದೇ. ವಾರ್ಷಿಕವಾಗಿ 7500 ಕ್ಯಾಲೋರಿ ಕಡಿಮೆ ಮಾಡಿಕೊಳ್ಳಬಹುದು.
ಒಂದು ಸೆಕ್ಸ್ ಸೆಷನ್ ನಿಂದ 200 ಕ್ಯಾಲೋರಿ ಸುಡಬಹುದಾದರೆ ಟ್ರೆಡ್ ಮಿಲ್ ಮೇಲೆ 15 ನಿಮಿಷ ಓಡುವುದು ಯಾಕೆ.
*
ನೋವು ನಿವಾರಕವಾಗಿ ಕೂಡಾ ಸೆಕ್ಸ್ ಅನುಕೂಲಕರ. ಪೇನ್ ಕಿಲ್ಲರ್ ಗಳಿಗಿಂತ ಹತ್ತು ಪಟ್ಟು
ನೋವು ನಿವಾರಕ ಗುಣವನ್ನು ಸಂಭೋಗ ಕ್ರಿಯೆ ಹೊಂದಿದೆ. Oxycontin ಹಾರ್ಮೋನ್ ಅಧಿಕಗೊಂಡು
ನೋವು ನಿವಾರಣೆಗೆ ಪೂರಕವಾಗುತ್ತದೆ.
ತಲೆನೋವು, ಆರ್ಥೈಟೀಸ್, ಮೈಗ್ರೇನ್
ನಿವಾರಣೆಗೂ ಸಹಕಾರಿ ಎಂಬುದು ಸಾಬೀತಾಗಿದೆ. ಸೆಕ್ಸ್ ಸಂದರ್ಭದಲ್ಲಿ ರಕ್ತ ಧಮನಿಗಳ ಮೇಲೆ
ಒತ್ತಡ ಕಮ್ಮಿಯಾಗುವುದರಿಂದ ತಲೆನೋವು ಬರುವುದು ಕಮ್ಮಿ.
ಹಾಗಂತ ತಲೆನೋವು
ಬಂದಾಗಲೆಲ್ಲ ಸೆಕ್ಸ್ ಗೆ ಮೊರೆ ಹೋದರೆ ಅಪಾಯ ಕಟ್ಟಿಟ್ಟ ಬುತ್ತಿ. ಒತ್ತಡ ನಿವಾರಣೆಗೆ
ಆನಂದಕ್ಕೆ ರಹದಾರಿ ತೋರುವ ಸೆಕ್ಸ್ ನಿರಂತರವಾಗಿ ಆಚರಿಸಿ, ಆನಂದಿಸಿ !
ಕೃಪೆ : ಒನ್ ಇಂಡಿಯಾ
No comments:
Post a Comment