Wednesday, July 4, 2012

ಮೊದಲ ರಾಷ್ಟ್ರಪತಿಯ ಬ್ಯಾಂಕ್ ಖಾತೆ ಇನ್ನೂ ಚಾಲ್ತಿಯಲ್ಲಿದೆ !

 1st President Rajendra Prasad Bank Account Still Active
ಪಟ್ನಾ, ಜುಲೈ 4: ಸ್ವತಂತ್ರ ಭಾರತದ ಮೊಟ್ಟಮೊದಲ ಪ್ರಜೆಯ ಬ್ಯಾಂಕ್ ಖಾತೆ ಇನ್ನೂ ಚಾಲ್ತಿಯಲ್ಲಿದೆ! ಯಾವುದಪ್ಪಾ ಆ ಬ್ಯಾಂಕು ಇನ್ನೂ ಅಂಥಾ ಖಾತೆಯನ್ನು ಉಳಿಸಿಕೊಂಡಿರುವುದು ಎಂದು ಆಶ್ಚರ್ಯಪಟ್ಟಿರಾ?
ಅದುವೇ ಇಲ್ಲಿನ ಪಂಜಾಬ್ ನ್ಯಾಷನಲ್ ಬ್ಯಾಂಕ್. ಇನ್ನು ರಾಷ್ಟ್ರದ ಮೊಟ್ಟಮೊದಲ ಪ್ರಜೆ ದಿವಂಗತ ಬಾಬು ರಾಜೇಂದ್ರ ಪ್ರಸಾದ್. ಅದಿರಲಿ ಈ ವಿಷ್ಯಾ ಈಗೇಕೆ ಎಂದರೆ 14ನೇ ರಾಷ್ಟ್ರಪತಿ ಪದಗ್ರಹಣದ ಕಾಲ ಸನ್ನಿಹಿತವಾಗಿದೆ. ಆದ್ದರಿಂದ ಒಂದಷ್ಟು ಹಳೆಯ ಮೆಲುಕುಗಳು...
ಸುಮಾರು 50 ವರ್ಷಗಳ ನಂತರವೂ ಸಾಕ್ಷಾತ್ ರಾಷ್ಟ್ರಪತಿಯೊಬ್ಬರ ಉಳಿತಾಯ ಖಾತೆಯನ್ನು ಉಳಿಸಿಕೊಂಡಿರುವ ಹೆಮ್ಮೆ ಬಿಹಾರದ ಪಟ್ನಾದಲ್ಲಿ Exhibition Road ನಲ್ಲಿರುವ PNB ಶಾಖೆಯದ್ದಾಗಿದೆ. ಬಾಬು ರಾಜೇಂದ್ರ ಪ್ರಸಾದ್ ಅವರು ತಾವು ಅಸುನೀಗುವುದಕ್ಕೆ ಕೆಲವೇ ತಿಂಗಳುಗಳ ಮುನ್ನ, 1962ರ ಅಕ್ಟೋಬರ್ 24ರಂದು ಈ ಖಾತೆಯನ್ನು ತೆರೆದಿದ್ದರು.
'ನಮ್ಮ ಬ್ಯಾಂಕು ಇಂದಿಗೂ ರಾಜೇಂದ್ರ ಪ್ರಸಾದ್ ಅವರ ಖಾತೆಗೆ prime customer status ಸ್ಥಾನಮಾನ ನೀಡಿದೆ. ಅದು ನಮ್ಮ ಹೆಮ್ಮೆಯೂ ಹೌದು' ಎನ್ನುತ್ತಾರೆ ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಎಸ್ಎಲ್ ಗುಪ್ತಾ ಅವರು.
ಶಾಖೆಯ ನೋಟಿಸ್ ಬೋರ್ಡಿನಲ್ಲಿ ಮೊದಲ ರಾಷ್ಟ್ರಪತಿ ರಾಜೇಂದ್ರ ಪ್ರಸಾದ್ ಅವರ ಭಾವಚಿತ್ರವನ್ನು ಹಾಕಿ ಅದರ ಕೆಳಗೆ ಅವರ ಬ್ಯಾಂಕ್ ಖಾತೆಯ ಸಂಖ್ಯೆಯನ್ನು 0380000100030687 ನಮೂದಿಸಿದೆ. ಅಂದಹಾಗೆ ಪ್ರತಿ ಆರು ತಿಂಗಳಿಗೊಮ್ಮೆ ಈ ಖಾತೆಗೆ ಬಡ್ಡಿ ಹಣ ಜಮೆಯಾಗುತ್ತಿರುತ್ತದೆ. ಆದರೆ ಇದುವರೆಗೂ ಯಾರೂ ಈ ಹಣ ತಮಗೆ ಸೇರಬೇಕು ಎಂದು ಕೇಳಿಕೊಂಡು ಬಂದಿಲ್ಲ.

ಸಹಜ ಕುತೂಹಲದಿಂದ ಅವರ ಖಾತೆಯಲ್ಲಿರುವ ಮೊತ್ತ ಎಷ್ಟು ಎಂದು ನೋಡಿದಾಗ ಆ
ಮೊತ್ತ 1,813 ರುಪಾಯಿ. ಎಂಬುದು ಬೆಳಕಿಗೆ ಬರುತ್ತದೆ. ಬಾಬು ರಾಜೇಂದ್ರ ಪ್ರಸಾದ್ ಅವರು ಬಿಹಾರದ ಸಿವಾನ್ ಜಿಲ್ಲೆಯ ಜೆರಾಡಿ ಗ್ರಾಮದಲ್ಲಿ 1884ರ ಡಿಸೆಂಬರ್ 3ರಂದು ಜನಿಸಿದ್ದರು. ಪಟ್ನಾದಲ್ಲಿ 1963ರ ಫೆಬ್ರವರಿ 28ರಂದು ಮೃತಪಟ್ಟಿದ್ದರು. ಅವರು 1952ರಿಂದ 1962ರ ವರೆಗೆ ಭಾರತದ ಮೊದಲ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದ್ದರು.

by:
ಕೃಪೆ : ಒನ್ ಇಂಡಿಯಾ
  

No comments:

Post a Comment