ಮದ್ಯ ಆರೋಗ್ಯವನ್ನು ಹಾಳು ಮಾಡುವುದಾದರೂ, ಕೆಲವೊಂದು ಮದ್ಯ
ಆರೋಗ್ಯವನ್ನು ಹೆಚ್ಚಿಸಲು ಸಹಕಾರಿಯಾಗಿದೆ. ಅದರಲ್ಲೂ ವೈನ್ ಕುಡಿದರೆ ಹೃದಯಕ್ಕೆ ತುಂಬಾ
ಒಳ್ಳೆಯದೆಂದು ವೈಜ್ಞಾನಿಕವಾಗಿ ಸಾಬೀತಾಗಿದೆ. ಬೀರ್ ಅನ್ನು ಮಿತಿಮೀರಿ ಕುಡಿದರೆ ಹೊಟ್ಟೆ
ಬರುತ್ತದೆ, ಆದರೆ ಅದೇ ಬೀರನ್ನು ಮಿತಿಯಲ್ಲಿ ಕುಡಿದರೆ ದೇಹ ಫಿಟ್ ನೆಸ್ ಸಿಗುತ್ತದೆ,
ಮೂಳೆಗಳು ಬಲಿಷ್ಠವಾಗುತ್ತದೆ ಎಂದು ಬೀರ್ ನ ಪ್ರಯೋಜನಗಳ ಬಗ್ಗೆ ಇತ್ತೀಚಿಗೆ ನಡೆಸಿದ
ಸಂಶೋಧನೆಯಲ್ಲಿ ಹೇಳಲಾಗಿದೆ.
ಮಿತಿಮೀರಿ ಬೀರ್ ಕುಡಿದರೆ ದೇಹದ ಮೇಲೆ ನಮ್ಮ
ನಿಯಂತ್ರಣ ತಪ್ಪಿ ತೂರಾಡುವುದು, ವಾಂತಿ ಮಾಡುವುದು ಸಹಜ. ಅದೇ ಬೀರ್ ಅನ್ನು ಸ್ವಲ್ಪ
ಪ್ರಮಾಣದಲ್ಲಿ ಕುಡಿದರೆ ಮೂಳೆ ಬಲವಾಗುತ್ತದೆ! ಬೀರ್ ನಲ್ಲಿ ಸಿಲಿಕಾನ್ ಪೋಷಕಾಂಶವಿದೆ.
ಮೂಳೆಗಳನ್ನು ಬಲಪಡಿಸುವಲ್ಲಿ ಸಿಲಿಕಾನ್ ಅವಶ್ಯಕವಾದ ಪೋಷಕಾಂಶವಾಗಿದೆ. ಆದ್ದರಿಂದ ಬೀರ್
ಕುಡಿದರೆ ಮೂಳೆಗಳು ಬಲವಾಗುತ್ತದೆ.
ಆದರೆ ಎಷ್ಟು ಪ್ರಮಾಣದ ಸಿಲಿಕಾನ್ ಅಂಶ
ದೇಹಕ್ಕೆ ಒಳ್ಳೆಯದು ಎಂಬ ಅಂಶದ ಬಗ್ಗೆ ನಿಖರ ಮಾಹಿತಿ ಇಲ್ಲವಾಗಿದ್ದು , ಇದರ ಬಗ್ಗೆ
ವಿಜ್ಞಾನಿಗಳು ಸಂಶೋಧನೆಯನ್ನು ನಡೆಸುತ್ತಿದ್ದಾರೆ. ಬೀರ್‌ನಲ್ಲಿ ಎಷ್ಟರ ಮಟ್ಟಿಗೆ
ಸಿಲಿಕಾನ್ ಇದೆ ಎಂಬ ಅಂಶ ಅದನ್ನು ತಯಾರಿಸಲು ಬಳಸುವ ವಸ್ತುಗಳನ್ನು ಆಧರಿಸಿದೆ. ಬೀರ್‌ಗಳ
ತಯಾರಿಯಲ್ಲಿ ದವಸ ಧನ್ಯಗಳನ್ನು ಉಪಯೋಗಿಸಲಾಗುವುದು. ಈ ದವಸ ಧಾನ್ಯಗಳಲ್ಲಿ ಸಿಲಿಕಾನ್
ಅಂಶವಿರುವುದರಿಂದ ಇದರಿಂದ ತಯಾರಿಸುವ ಬೀರ್ ಆರೋಗ್ಯಕರವಾಗಿದೆ. ಅಲ್ಲದೆ ಬೀರ್
ಕುಡಿಯುವುದರಿಂದ ಶೇ.31%ರಷ್ಟು ಹೃದಾಯಘಾತವಾಗುವುದನ್ನು ತಪ್ಪಿಸಬಹುದು ಎಂಬ ಅಂಶ ಕೂಡ
ದೃಢಪಟ್ಟಿದೆ.
ಬೀರ್ ಕುಡಿದರೆ ಮೂಳೆ ಬಲವಾಗುತ್ತದೆ, ಆದ್ದರಿಂದ ಒಂದು ಪೆಗ್
ಜಾಸ್ತಿಯೇ ಹಾಕುತ್ತೇನೆ ಎಂದು ಯೋಚಿಸುವ ಮುನ್ನ ಒಂದು ವಿಷಯ ತಿಳಿದುಕೊಳ್ಳಿ, ಬೀರ್
ಅನ್ನು ಮಿತಿಯಲ್ಲಿ ಕುಡಿದರೆ ಮಾತ್ರ ಆರೋಗ್ಯವಾಗಿರಬಹುದು. ಅದೇ ಬಾಟಲಿಗಟ್ಟಲೆ ಬೀರ್
ಕುಡಿದರೆ, ಇದೇ ಬೀರ್ ಆರೋಗ್ಯದ ಮೇಲೆ ತುಂಬಾ ಕೆಟ್ಟ ಪರಿಣಾಮ ಬೀರುವುದು.
ಒಂದು ವೇಳೆ ನಿಮಗೆ ಬೀರ್ ಕುಡಿಯುವ ಅಭ್ಯಾಸವಿದ್ದರೆ ಈ ವೀಕೆಂಡ್ ಪಾರ್ಟಿಯಲ್ಲಿ ಬೀರ್ ಕೈಯಲ್ಲಿ ಹಿಡಿದಾಗ ಇದರಿಂದ ಉಪಯೋಗ ಪಡೆಯಬೇಕೊ, ಬೇಡ್ವಾ? ಅನ್ನುವುದನ್ನು ನೀವೆ ತೀರ್ಮಾನಿಸಿ.
ಕೃಪೆ : ಒನ್ ಇಂಡಿಯಾ
No comments:
Post a Comment