ಸಿನೆಮಾದಲ್ಲಿ ಕೂಡ ಯಾವ ಕಥೆಗಾರನ ನಿರ್ದೇಶಕನ ಕಲ್ಪನೆಗೆ ನಿಲುಕಲಾಗದ ಘಟನೆಯೊಂದು ಅರುಣಾಚಲ ರಾಜ್ಯದ ಶೇಷಾಚಲ ಜಿಲ್ಲೆಯ ಚಂಚಲ ಗ್ರಾಮದಲ್ಲಿ ನಡೆದಿತ್ತು. ನಿರುಮ್ಮಳವಾಗಿದ್ದ ಆ ಅಮವಾಸ್ಯೆಯ ರಾತ್ರಿಯಂದು ಜರುಗಿದ್ದೇನೆಂದರೆ, ಅರುಳು ಮರುಳು ಸ್ಥಿತಿಯನ್ನು ದಾಟಿದ್ದ 99ರ ಹಲ್ಲುದುರಿದ ಮುದುಕನೊಬ್ಬ 22ರ ಹರೆಯದ ಯುವತಿಯೊಂದಿಗೆ ಹಾಸಿಗೆಯಲ್ಲಿ ಚೆಲ್ಲಾಟವಾಡುತ್ತಿದ್ದ ಸ್ಥಿತಿಯಲ್ಲಿ 87ರ ತನ್ನ ಹೆಂಡತಿಗೆ ರೆಡ್ ಹ್ಯಾಂಡಾಗಿ ಸಿಕ್ಕುಬಿದ್ದಿದ್ದ.
ನಖಶಿಖಾಂತ ಉರಿದುಹೋದ ಮುದುಕಿ, ಸಂಪೂರ್ಣ
ವಿವಸ್ತ್ರಳಾಗಿದ್ದ ಆ ಸುಂದರ ಯುವತಿಯನ್ನು ಒದ್ದೋಡಿಸಿ, ದಾಂಪತ್ಯಕ್ಕೆ ಮಸಿಬಳಿದ ತನಗೆ
ಮೋಸ ಮಾಡಿದ ಗಂಡನನ್ನು ದರದರ ಎಳೆದುಕೊಂಡು ಹೋಗಿ ಬಾಲ್ಕನಿಯ ಮೇಲಿಂದ ಮುಲಾಜಿಲ್ಲದೆ
ತಳ್ಳಿಬಿಟ್ಟಿದ್ದಳು. ತೀವ್ರ ಆಘಾತಕ್ಕೆ ಒಳಗಾದ ರಸಿಕ ಅಜ್ಜ ಸ್ಥಳದಲ್ಲಿಯೇ ಸತ್ತುಹೋದ.
ನಂತರ ತಾನೇ ಬಂದು ಪೊಲೀಸರೆದಿರು ಮುದುಕಿ ಶರಣಾಗತಳಾದಳು.
ಅವಳ ಮೇಲೆ ಗಂಡನನ್ನು
ಕೊಲೆಗೈದ ಕೇಸನ್ನು ದಾಖಲಿಸಲಾಯಿತು. ಆಕೆ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದರಿಂದ
ಆಕೆಯನ್ನು ನ್ಯಾಯಾಧೀಶರ ಮುಂದೆ ಮುಂದಿನ ವಿಚಾರಣೆ ಮತ್ತು ಪ್ರಕ್ರಿಯೆಗಾಗಿ
ಕರೆತರಲಾಯಿತು.
ನ್ಯಾಯಾಧೀಶ : ಅಮ್ಮ. ನಿಮ್ಮ ಸ್ಥಿತಿ ನೋಡಿದರೆ ನಿಜಕ್ಕೂ ಬೇಜಾರಾಗುತ್ತದೆ. ನೀವು ತಪ್ಪನ್ನು ಒಪ್ಪಿಕೊಂಡಿದ್ದೀರಿ. ನಿಮ್ಮ ಗಂಡ ಆ ವಯಸ್ಸಲ್ಲಿ ತಪ್ಪೇ ಮಾಡಿರಬಹುದು. ಆದರೆ, ಅಂಥ ವಯಸ್ಸಾದ ವ್ಯಕ್ತಿಯನ್ನು ಬಾಲ್ಕನಿಯಿಂದ ತಳ್ಳುವಂಥ ಕೆಲಸ ಏಕೆ ಮಾಡಿದಿರಿ?
ನ್ಯಾಯಾಧೀಶ : ಅಮ್ಮ. ನಿಮ್ಮ ಸ್ಥಿತಿ ನೋಡಿದರೆ ನಿಜಕ್ಕೂ ಬೇಜಾರಾಗುತ್ತದೆ. ನೀವು ತಪ್ಪನ್ನು ಒಪ್ಪಿಕೊಂಡಿದ್ದೀರಿ. ನಿಮ್ಮ ಗಂಡ ಆ ವಯಸ್ಸಲ್ಲಿ ತಪ್ಪೇ ಮಾಡಿರಬಹುದು. ಆದರೆ, ಅಂಥ ವಯಸ್ಸಾದ ವ್ಯಕ್ತಿಯನ್ನು ಬಾಲ್ಕನಿಯಿಂದ ತಳ್ಳುವಂಥ ಕೆಲಸ ಏಕೆ ಮಾಡಿದಿರಿ?
ಮುದುಕಿ : ನ್ಯಾಯಾಧೀಶರೆ,
99ರ ಹರೆಯದಲ್ಲಿ ನನ್ನ ಗಂಡ ಏನು ಬೇಕಾದರೂ ಮಾಡಬಹುದಾದರೆ, ಆತನಿಗೆ ಬಾಲ್ಕನಿ ಮೇಲಿಂದ
ಹಾರಲು ಏಕೆ ಸಾಧ್ಯವಿಲ್ಲ ಎಂದು ಅಂದುಕೊಂಡು ಬಾಲ್ಕನಿಯಿಂದ ತಳ್ಳಿಬಿಟ್ಟೆ!
ಕೃಪೆ : ಒನ್ ಇಂಡಿಯಾ
ಕೃಪೆ : ಒನ್ ಇಂಡಿಯಾ
No comments:
Post a Comment