ಎಮ್ಎನ್ಸಿ ಕಂಪನಿಯೊಂದರಲ್ಲಿ ಸಾಫ್ಟ್ ವೇರ್ ಇಂಜಿನಿಯರಾಗಿ ಕೆಲಸ ಮಾಡುತ್ತಿದ್ದ
ಸುಬ್ಬಿಗೆ ಭರ್ತಿ ಕೆಲಸ. ಪ್ರತಿದಿನ ಮನೆಗೆ ಬರುವುದು ಲೇಟಾಗತ್ತೆ ಎಂದು ತನ್ನ ಗಂಡ
ಸುಬ್ಬುವಿಗೆ ಮೊದಲೇ ಹೇಳಿದ್ದಳು. ಸುಬ್ಬು ಕೂಡ, ಆಗ್ಲಿ ಕಣೆ ವರಿ ಮಾಡ್ಕೋಬೇಡ ಎಂದು
ಮುದ್ದಿಸಿ ಕಳಿಸಿರುತ್ತಾನೆ.
ಪ್ರತಿರಾತ್ರಿ ಹನ್ನೆರಡು ಗಂಟೆಗೆ ಬರೋಳು ಒಂದು ದಿನ ಹನ್ನೊಂದು ಗಂಟೆಗೇ ಬಂದುಬಿಡುತ್ತಾಳೆ. ಬೇಗನೆ ಬಂದಿದ್ದಕ್ಕೆ ಗಂಡ ಖುಷಿಪಡಬಹುದು ಎಂದು ಅಂದುಕೊಂಡಿದ್ದ ಸುಬ್ಬಿ, ಗಂಡನಿಗೆ ಗೊತ್ತಾಗಬಾರದು, ಸರ್ಪ್ರೈಸ್ ಕೊಡಬೇಕು ಎಂದುಕೊಂಡು ತಾನೇ ಬಾಗಿಲು ತೆಗೆದು ಮನೆಯೊಳಗೆ ಬರುತ್ತಾಳೆ.
ಇನ್ನೇನು ಬೆಡ್ರೂಮೊಳಗೆ ಕಾಲಿಡಬೇಕು ಅಷ್ಟರಲ್ಲಿ ಹಾಸಿಗೆಯ ಮೇಲೆ ಮುಲುಕಾಟ ಕೇಳುತ್ತದೆ. ಹೊದ್ದುಕೊಂಡಿದ್ದ ಬೆಡ್ಶೀಟ್ನೊಳಗಿನ ಒಂದು ತುದಿಯಲ್ಲಿ ನಾಲ್ಕು ಕಾಲುಗಳು ಹೊರಬಂದಿರುತ್ತವೆ. ತ್ರೀ ಪಿನ್ ಎಲೆಕ್ಟ್ರಿಕ್ ಸಾಕೆಟ್ ಒಳಗೆ ಬೆರಳು ತೂರಿಸಿ ಕರೆಂಟ್ ಹೊಡೆಸಿಕೊಂಡಂತೆ ಆಕೆಗೆ ಭಾಸವಾಗುತ್ತದೆ.
ತಾನು ಮೋಸಹೋದೆ ಎಂದು ಮುಖ ಕೆಂಪೇರಿಸಿಕೊಂಡು, ಮೂಗಿನ ಹೊಳ್ಳೆಗಳನ್ನು ಅರಳಿಸಿಕೊಂಡು, ಹಾಸಿಗೆಯ ಮೇಲೆ ಮಲಗಿದ್ದವರಿಗೆ ಒಂದು ಕ್ಷಣವೂ ಅವಕಾಶ ಸಿಗದಂತೆ, ಮಲಗಿದವರು ಕಮಕ್ ಕಿಮಕ್ ಅನ್ನದಂತೆ, ಕ್ರಿಕೆಟ್ ಬ್ಯಾಟ್ ತೆಗೆದುಕೊಂಡು ರಪರಪ ಅಂತ ಬಾರಿಸಿಬಿಡುತ್ತಾಳೆ. ಕೆಲ ನಿಮಿಷಗಳಲ್ಲಿ ಎಲ್ಲವೂ ಶಾಂತ.
ಸಿಕ್ಕಾಪಟ್ಟೆ ಹೆದರಿಕೊಂಡ ಸುಬ್ಬಿ ಕಿತ್ತುಕೊಂಡು ಬಂದಿದ್ದ ಬೆವರನ್ನು ಒರೆಸಿಕೊಂಡು, ಏನು ಮಾಡಬೇಕೆಂದು ತಿಳಿಯದೆ ನೀರು ಕುಡಿಯಲೆಂದು ಅಡುಗೆಮನೆಗೆ ಬರುತ್ತಾಳೆ. ಗ್ಲಾಸಿಗೆ ನೀರು ಬಿಟ್ಟು ಇನ್ನೇನು ಗಂಟಲಿಗೆ ಇಳಿಬಿಡಬೇಕು, ಅಷ್ಟರಲ್ಲಿ ಕಟ್ಟೆಯ ಮೇಲೆ ಕುಳಿತು ಹಸಿಹಸಿ ಕ್ಯಾರೆಟ್ ತಿನ್ನುತ್ತಿದ್ದ ಸುಬ್ಬು ಕಾಣಿಸುತ್ತಾನೆ. ಸುಬ್ಬಿ ಕೈಯಲ್ಲಿದ್ದ ನೀರಿನ ಗ್ಲಾಸ್ ಫಳ್ಳನೆ ಬಿದ್ದುಹೋಗುತ್ತದೆ.
ಸುಬ್ಬು, "ಏನ್ ಚಿನ್ನಾ, ಯಾಕೆ ಏನಾಯ್ತು? ಯಾವಾಗ ಬಂದಿ? ಅಂದ ಹಾಗೆ, ಈಗಷ್ಟೆ 9 ಗಂಟೆಗೆ ನಿನ್ನ ಸೋದರಮಾವ, ಅತ್ತೆ ಬಂದಿದ್ದಾರೆ. ಅಲ್ಲಿ ಇಲ್ಲಿ ಯಾಕೆ ಮಲಗಲು ಬಿಡಬೇಕೆಂದು ಅವರಿಗೆ ನಮ್ಮ ಬೆಡ್ರೂಮ್ ಬಿಟ್ಟುಕೊಟ್ಟೆ. ಇನ್ನೂ ಮಲಗಿಲ್ಲ ಅಂತ ಕಾಣತ್ತೆ. ಅವರಿಗೆ ಹಾಯ್ ಎಂದು ಹೇಳಿದ್ಯಾ?"

ಕೃಪೆ : ಒನ್ ಇಂಡಿಯಾ
No comments:
Post a Comment