Posted by: Reena : Tuesday, December 11, 2012,
ಪಿತ್ಥಕೋಶದಲ್ಲಿ ಬೆಳೆಯುವ ಕಲ್ಲುಗಳು ಸಣ್ಣದಾಗಿರುತ್ತವೆ ಹಾಗೂ ಇವು ಕಾಲಕಾಲಕ್ಕೆ
ಬೆಳೆಯುತ್ತವೆ. ಇದು ಬೆಳೆಯಲು ತುಂಬಾ ವರ್ಷಗಳೇ ಬೇಕು. ಪಿತ್ಥಕೋಶದಲ್ಲಿ ಕಲ್ಲು
ಬೆಳೆಯುವುದು ಬಹುತೇಕ ಸಾಮಾನ್ಯ ಸಂಗತಿ.
ಬಹುತೇಕವಾಗಿ ಪಿತ್ಥಕೋಶದಲ್ಲಿ ಕಲ್ಲು ಬೆಳೆದಾಗ ಯಾವುದೇ ದೈಹಿಕ ಚಿಹ್ನೆ
ಕಾಣಿಸಿಕೊಳ್ಳುವುದಿಲ್ಲ. ಸರಾಸರಿ ಶೇಕಡಾ ೧೦ರಷ್ಟು ಮಾತ್ರ ಪಿತ್ಥಕೋಶದಲ್ಲಿ ಕಲ್ಲು
ಬೆಳೆದಾಗ ಸಿಸ್ಟಿಕ್‌ನ್ನು ಅಥವಾ ಸಾಮಾನ್ಯ ಪಿತ್ಥರಸ ನಾಳದ ಚಲನೆಯನ್ನು ನಿಲ್ಲಿಸುತ್ತದೆ.
ಇದರಿಂದಾಗಿ ಕಿಬ್ಬೊಟ್ಟೆಯ ನೋವು, ಜಾಂಡಿಸ್, ವಾಕರಿಕೆ ಮತ್ತು ಜ್ವರ ಬರುವ
ಸಾಧ್ಯತೆಗಳಿರುತ್ತವೆ. ಈ ಲಕ್ಷಣಗಳು ಕಂಡುಬಂದಾಗಿ ಪಿತ್ಥಕೋಶದಲ್ಲಿನ ಕಲ್ಲುಗಳನ್ನು
ಸರ್ಜರಿ ಮೂಲಕ ತೆಗೆಯುವುದು ಅಗತ್ಯವಾಗುತ್ತದೆ.
ಬಹುತೇಕ ಜನರಲ್ಲಿ ಕಿಬ್ಬೊಟ್ಟೆಯ ಅಲ್ಟ್ರಾಸೌಂಡ್ ಪರೀಕ್ಷೆ ನಡೆಸಿದಾಗ ಕಲ್ಲುಗಳು
ಕಾಣಿಸಿಬಿಡುತ್ತವೆ. ಹೀಗೆ ತಿಳಿದು ಬಂದಾಗ ಯಾವ ಆಹಾರವನ್ನು ಅವರು ದೂರವಿಡಬೇಕು ಮತ್ತು
ನೈಸರ್ಗಿಕವಾಗಿ ಆಹಾರದಲ್ಲಿ ನಿಯಂತ್ರಣ ಸಾಧಿಸಿ ಪಿತ್ಥಕೋಶದ ಕಲ್ಲನ್ನು
ನಿವಾರಿಸಿಕೊಳ್ಳಬೇಕು ?ಸೂಚನೆಗಳು
1. ಪ್ರಾಣಿಗಳ ಉತ್ಪನ್ನವನ್ನು ತಿನ್ನಬೇಡಿ. ಮಾಂಸ, ಬೆಣ್ಣೆ ಮತ್ತು ಸಂಸ್ಕರಿತ ಕೊಬ್ಬಿನಂಶವನ್ನು ಹೊಂದಿರುವ ಹಾಲಿನ ಎಲ್ಲಾ ಉತ್ಪನ್ನಗಳನ್ನೂ ದೂರವಿಡಿ. ಇದು ಪಿತ್ಥಕೋಶದಲ್ಲಿ ಕಲ್ಲು ಬೆಳೆಯಲು ಮತ್ತು ಪಿತ್ಥಕೋಶದ ಸಮಸ್ಯೆಗೆ ಕಾರಣವಾಗುತ್ತದೆ.
2. ಕೊಬ್ಬಿನಂಶ ಹೊಂದಿರುವ ಆಹಾರವನ್ನು ಮುಟ್ಟಲೂಬೇಡಿ. ಪಿತ್ಥಕೋಶದಲ್ಲಿ ಈಗಾಗಲೇ ಕಲ್ಲುಗಳು ಕುಳಿತಿದ್ದರೆ ಎಣ್ಣೆ ಮೆತ್ತಿದ, ಕರಿದ ಆಹಾರವನ್ನು ಸೇವಿಸಬೇಡಿ. ಇದರಿಂದಾಗಿ ನಿಮ್ಮ ಸಿಸ್ಟಿಕ್ ನಾಳವು ಬಿಗಿದುಕೊಳ್ಳಬಹುದು.
3. ಏಕಪರ್ಯಾಪ್ತ ಕೊಬ್ಬಿನಂಶಗಳಾದ ಕನೋಲಾ ಮತ್ತು ಆಲಿವ್ ಎಣ್ಣೆಯನ್ನು ಬಳಸಿ. ಬೇಳೆಕಾಳುಗಳೂ ಕೂಡಾ ಉತ್ತಮವಾದ ಆಹಾರ. ಈ ಆಹಾರ ಮತ್ತು ಎಣ್ಣೆಯು ಪಿತ್ಥಕೋಶದ ಕಲ್ಲುಗಳನ್ನು ಕರಗಿಸುವ ಸಾಮರ್ಥ್ಯವನ್ನು ಹೊಂದಿವೆ.
4. ನೀವು ಮಾಂಸಾಹಾರಿಯಾಗಿದ್ದರೆ, ಕೋಲ್ಡ್ ವಾಟರ್ ಮೀನುಗಳಾದ ಟ್ಯೂನ, ಬಂಗಡೆ ಮತ್ತು ಸಾಲ್ಮನ್ ಮೀನುಗಳನ್ನು ತಿನ್ನಿ. ಓಮೆಗಾ-೩ ಮೀನೆಣ್ಣೆಯು ಪಿತ್ಥಕೋಶದಲ್ಲಿನ ಕಲ್ಲನ್ನು ಕರಗಿಸಲು ಸಹಾಯ ಮಾಡುತ್ತದೆ.
5. ಸಂಸ್ಕರಿತ ಸಕ್ಕರೆಯನ್ನು ದೂರವಿಡಿ ಮತ್ತು ಗ್ಲೈಸೆಮಿಕ್ ಕಾರ್ಬೋಹೈಡ್ರೇಟ್ಸ್‌ನ್ನು ಮುಟ್ಟಲೂಬೇಡಿ. ಬಟಾಟೆ, ಅಕ್ಕಿ ಮತ್ತು ಇತರ ಪಾಸ್ತಾ ಪದಾರ್ಥಗಳನ್ನು ಸೇವಿಸಿದ ನಂತರ ನಮ್ಮ ದೇಹವು ಅವುಗಳನ್ನು ಸಕ್ಕರೆಯನ್ನಾಗಿ ಪರಿವರ್ತಿಸುತ್ತದೆ. ದೇಹದಲ್ಲಿ ಸಕ್ಕರೆ ಪ್ರಮಾಣದಲ್ಲಿ ಹೆಚ್ಚಳವು ನೇರವಾಗಿ ಡಯಾಬಿಟೀಸ್‌ಗೆ ಮತ್ತು ಪಿತ್ಥಕೋಶದಲ್ಲಿ ಕಲ್ಲು ಬೆಳೆಯುವುದಕ್ಕೆ ಸಂಬಂಧವನ್ನು ಹೊಂದಿರುತ್ತದೆ.
6. ದಿನದಲ್ಲಿ ಒಮ್ಮೆ ಮಾತ್ರ ಸ್ವಲ್ಪವೇ ಕಾಫಿ ಕುಡಿಯಿರಿ. ಇದರಿಂದಾಗಿ ಪಿತ್ಥಕೋಶದಲ್ಲಿನ ಕೊಬ್ಬಿನ ಅಂಶಗಳು ಹೊರಹೋಗುವುದಕ್ಕೆ ಸಹಾಯವಾಗುತ್ತದೆ. ಹೀಗಾಗಿ ಅಲ್ಲಿ ಕಲ್ಲು ರೂಪುಗೊಳ್ಳುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.
7. ಸಿಕ್ಕಷ್ಟೂ ಹಣ್ಣು ಹಂಪಲುಗಳನ್ನು ತಿನ್ನಿ. ಬರಿ ವಿಟಾಮಿನ್‌ಗಳಿಗಷ್ಟೇ ಈ ಹಣ್ಣುಗಳು ಸಹಾಯ ಮಾಡುವುದಿಲ್ಲ ಬದಲಾಗಿ ಪಿತ್ಥಕೋಶದಲ್ಲಿ ಕಲ್ಲು ಬೆಳೆಯವುದನ್ನು ಇವು ತಡೆಯುತ್ತವೆ.
8. ಕಾಳುಗಳು ಮತ್ತು ಸೆರೀಲ್‌ಗಳನ್ನು ಬಳಸಿ ನಿಮ್ಮ ಪಥ್ಯವನ್ನು ಮಾಡಿ. ಇದರಿಂದಾಗಿ ಕೊಲೆಸ್ಟ್ರಾಲ್‌ನ್ನು ದೇಹದಲ್ಲಿ ಕಡಿಮೆ ಮಾಡುವುದಷ್ಟೇ ಅಲ್ಲ, ಪಿತ್ಥಕೋಶದಲ್ಲಿನ ಕಲ್ಲನ್ನು ಕೂಡಾ ಕಡಿಮೆ ಮಾಡುತ್ತದೆ.
ಎಚ್ಚರಿಕೆ ಮತ್ತು ಸಲಹೆಗಳು:
* ಪಿತ್ಥಕೋಶದಲ್ಲಿ ಕಲ್ಲು ಬೆಳೆಯುವುದಕ್ಕೆ ಆನುವಂಶಿಕ ಅಂಶಗಳೂ ಕಾರಣವಾಗಬಹುದು.
* ನಿಮ್ಮ ಸಮಸ್ಯೆಗೆ ಪಿತ್ಥಕೋಶದ ಕಲ್ಲುಗಳು ಕಾರಣವಾಗಿರದಿದ್ದರೆ ಆಗ ಕೆಲವು ವೈದ್ಯಕೀಯ ಸಮಸ್ಯೆಯನ್ನು ಹೊರಗಿಡಬೇಕಾಗಬಹುದು.
* ಬೊಜ್ಜು ತುಂಬಿಕೊಳ್ಳುವುದು ಅಥವಾ ಅತಿವೇಗವಾಗಿ ತೂಕ ಇಳಿಯುವುದು, ನೇರವಾಗಿ ಪಿತ್ಥಕೋಶದಲ್ಲಿನ ಕಲ್ಲು ಬೆಳವಣಿಗೆಗೆ ಸಂಬಂಧಿಸಿದೆ. ತೂಕವನ್ನು ನಿಧಾನವಾಗಿ ಕಡಿಮೆ ಮಾಡಿಕೊಂಡು ಅದೇ ತೂಕವನ್ನು ಆರೋಗ್ಯಯುತವಾಗಿ ಕಾಯ್ದುಕೊಳ್ಳಿ, ಇದು ಪಿತ್ಥಕೋಶದ ಕಲ್ಲಿನ ಸಮಸ್ಯೆಗೆ ಪರಿಹಾರವೂ ಆಗಬಲ್ಲದು.
ಕೃಪೆ : ಒನ್ ಇಂಡಿಯಾ
No comments:
Post a Comment