- ಇಲಿ ಕಚ್ಚಿದ ಪರಿಣಾಮ ಗಾಯಗೊಂಡಿರುವ ಮಹಿಳೆಯ ಪಾದ.
- ಮುಂಬಯಿ-ಮಂಗಳೂರು ಮತ್ಸ éಗಂಧಾ ರೈಲಿನ ಹವಾನಿಯಂತ್ರಿತ ಬೋಗಿಯಲ್ಲಿದ್ದ ಪ್ರಯಾಣಿಕರಿಗೆ ರವಿವಾರ ಮಂಗಳೂರಿನಲ್ಲಿ ಇಳಿದಾಗ ವಿಚಿತ್ರವಾದ ಅನುಭವ. 15ಕ್ಕೂ ಅಧಿಕ ಪ್ರಯಾಣಿಕರ ಬ್ಯಾಗ್‌ಗಳಿಗೆ ಇಲಿಗಳು ಕತ್ತರಿ ಹಾಕಿದ್ದವು. ಇಬ್ಬರು ಮಹಿಳಾ ಪ್ರಯಾಣಿಕರ ಕೈ ಮತ್ತು ಕಾಲಿನ ಪಾದಕ್ಕೂ ಕಚ್ಚಿ ಗಾಯಗೊಳಿಸಿವೆ.
3 ಟೈರ್ ಎಸಿ ಬೋಗಿಯಲ್ಲಿ ಸುಮಾರು 65 ಮಂದಿ ಪ್ರಯಾಣಿಕರಿದ್ದು, ಅವರಲ್ಲಿ 15ಕ್ಕೂ ಅಧಿಕ ಮಂದಿಯ ಬ್ಯಾಗ್‌ಗಳನ್ನು ಇಲಿಗಳು ಕತ್ತರಿಸಿ ಹಾಕಿದ್ದವು. ಬ್ಯಾಗುಗಳಲ್ಲಿದ್ದ ಆಹಾರ ವಸ್ತುಗಳನ್ನು ಮತ್ತು ಹಣ್ಣು ಹಂಪಲುಗಳನ್ನು ಇಲಿಗಳು ಆಪೋಶನ ತೆಗೆದುಕೊಂಡಿದ್ದವು. ಚಪ್ಪಲಿ, ಶೂ, ಪ್ಲಾಸ್ಟಿಕ್ ವಸ್ತುಗಳನ್ನು ತಿಂದಿದ್ದವು. ಬಟ್ಟೆ, ಬರೆ, ಹಾಸು ಕಂಬಳಿಗಳನ್ನು ಇಲಿಗಳು ಕತ್ತರಿಸಿ ಹಾಕಿದ್ದವು. ಕೆಲವರಿಗೆ ಬ್ಯಾಗ್‌ಗಳನ್ನು ಮೇಲೆತ್ತುವಾಗ ಹ್ಯಾಂಡಲ್ ಮಾತ್ರ ಕೈಯಲ್ಲಿ ಬಂದಿದೆ. ಶೌಚಾಲಯದ ಬಳಿ ಇದ್ದ ಬ್ಯಾಗ್‌ಗಳು ಹೆಚ್ಚು ಹಾನಿಯಾಗಿವೆ.
ಆರಾಮವಾಗಿ ಮತ್ತು ನಿರ್ಭಯವಾಗಿ ಪ್ರಯಾಣಿಸ ಬೇಕೆಂದುಕೊಂಡು 1,010 ರೂ. ಟಿಕೆಟ್ ಹಣ ಪಾವತಿಸಿ ಎ.ಸಿ. ಕೋಚ್‌ನಲ್ಲಿ ಪ್ರಯಾಣವನ್ನು ಆಯ್ಕೆ ಮಾಡಿಕೊಳ್ಳುವ ಪ್ರಯಾಣಿಕರು ಈ ರೀತಿ ತಮ್ಮ ಅಮೂಲ್ಯ ಸೊತ್ತುಗಳು ಇಲಿಗಳ ಹಾವಳಿಗೆ ತುತ್ತಾಗುತ್ತಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಲಿಖೀತ ದೂರು
ಮಂಗಳೂರಿನ ಫಳ್ನೀರ್‌ನ ಡಾ| ಜೀವನ್ ಶೆಟ್ಟಿ ಅವರು ಈ ಕುರಿತು ಮಂಗಳೂರು ಜಂಕ್ಷನ್ (ಕಂಕನಾಡಿ) ರೈಲು ನಿಲ್ದಾಣದ ಸ್ಟೇಶನ್ ಮಾಸ್ಟರ್ ಅವರಿಗೆ ಲಿಖೀತ ದೂರು ಸಲ್ಲಿಸಿದ್ದಾರೆ.
ಕಳೆದ 15 ವರ್ಷಗಳಿಂದ ತಾನು ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದೇನೆ; ಇದೇ ಪ್ರಥಮವಾಗಿ ಇಲಿಗಳ ಕಾಟ ಕಂಡುಬಂದಿದೆ ಎಂದು ಇನ್ನೋರ್ವ ಪ್ರಯಾಣಿಕ ಪಿ.ಕೆ. ರೈ ತಿಳಿಸಿದ್ದಾರೆ. ಪಿ.ಕೆ. ರೈ ಅವರ ಪತ್ನಿಯ ಕಾಲಿಗೆ ಇಲಿ ಕಚ್ಚಿದ್ದು, ಗಾಯಗಳಾಗಿವೆ. ಅವರು ಮಂಗಳೂರಿನ ಆಸ್ಪತ್ರೆಗೆ ತೆರಳಿ ಚುಚ್ಚುಮದ್ದು ಹಾಕಿಸಿಕೊಂಡಿದ್ದಾರೆ. ಇನ್ನೋರ್ವ ಮಹಿಳೆಯ ಕೈಗೆ ಇಲಿ ಕಚ್ಚಿದ್ದು, ಅವರು ಕೂಡಾ ಚುಚ್ಚುಮದ್ದು ತೆಗೆದುಕೊಂಡಿದ್ದಾರೆ.
ರೈಲಿನ ಬೋಗಿಯ ಹವಾನಿಯಂತ್ರಣ ವ್ಯವಸ್ಥೆಯ ಡಕ್ಟ್‌ನಲ್ಲಿ ಇಲಿಗಳು ಸೇರಿ ಕೊಂಡಿದ್ದು, ರಾತ್ರಿ ವೇಳೆ ಪ್ರಯಾಣಿಕರ 'ಲೂಟಿ ಕಾರ್ಯ'ದಲ್ಲಿ ನಿರತವಾಗುತ್ತವೆ ಎಂದು ತಿಳಿದು ರೈಲು ಸಿಬಂದಿ ಹೇಳುತ್ತಾರೆ.
ಕೃಪೆ : Udayavani | Jan 15, 2012
Tuesday, January 17, 2012
ಎ.ಸಿ. ಬೋಗಿಯಲ್ಲಿ ಇಲಿ ಕಾಟ
Subscribe to:
Post Comments (Atom)
No comments:
Post a Comment