Tuesday, January 17, 2012

ಮರ್ಮಾಂಗಕ್ಕೆ ಕತ್ತರಿ ಕೇಸ್ !


ಬೆಂಗಳೂರು, ಮಂಗಳವಾರ, 17 ಜನವರಿ 2012

ತನ್ನ ಪ್ರಿಯಕರ ಬೇರೊಂದು ವಿವಾಹವಾಗಲು ಹೊರಟಿದ್ದ ಕಾರಣ. ಅವರ ಮರ್ಮಾಂಗಕ್ಕೇ ಕತ್ತರಿ ಹಾಕಿದ ದಂತ ವೈದ್ಯೆ ವಿರುದ್ಧ ದಾಖಲು ಮಾಡಲಾದ ದೋಷಾರೋಪ ಪಟ್ಟಿ ಪುನರ್ ಪರಿಶೀಲಿಸಿ ಮುಂದಿನ ಕ್ರಮ ತೆಗೆದುಕೊಳ್ಳುವಂತೆ ಹೈಕೋರ್ಟ್ ಇಲ್ಲಿನ ಸೆಷನ್ಸ್ ಕೋರ್ಟ್‌ಗೆ ಸೋಮವಾರ ಆದೇಶಿಸಿದೆ.

ಡಾ.ಹರ್ಷದ್ ಅಲಿ ಅವರ ಮರ್ಮಾಂಗ ಕತ್ತರಿಸಿರುವ ಆರೋಪವನ್ನು ಡಾ.ಸಯೀದಾ ಅಮೀನಾ ನಹೀಮ್ ಎದುರಿಸುತ್ತಿದ್ದಾರೆ. ಹೈಕೋರ್ಟ್ ಆದೇಶದ ನಿಟ್ಟಿನಲ್ಲಿ ವೈದ್ಯೆ ಈಗ ತಾತ್ಕಾಲಿಕವಾಗಿ ನಿರಾಳರಾಗಿದ್ದಾರೆ.

ಘಟನೆ ವಿವರ:ಅಲಿ ಮತ್ತು ಸಯೀದಾ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಹರ್ಷದ್ ಅಲಿ ಬೇರೊಂದು ವಿವಾಹ ಆಗುತ್ತಿದ್ದಾರೆ ಎಂಬ ಸುದ್ದಿ ಸಯೀದಾಗೆ ತಿಳಿಯಿತು. ಇದರಿಂದ ಸಿಟ್ಟುಗೊಂಡ ಆಕೆ ಮದ್ಯದಲ್ಲಿ ಮತ್ತು ಬರಿಸುವ ಔಷಧ ಸೇರಿಸಿ, 2008ರ ನವೆಂಬರ್ 8ರಂದು ಈ ಕೃತ್ಯ ಎಸಗಿದ್ದಾರೆ ಎನ್ನುವುದು ಆರೋಪ.

ಭಾರತೀಯ ದಂಡ ಸಂಹಿತೆ 327(ಗಂಭೀರ ಗಾಯ) ಹಾಗೂ 307 (ಕೊಲೆ ಯತ್ನ) ಅಡಿ ಸಯೀದಾ ವಿರುದ್ಧ ದೂರು ದಾಖಲಾಯಿತು. ದೋಷಾರೋಪ ಪಟ್ಟಿ ದಾಖಲು ಮಾಡಲಾಗಿತ್ತು. ಇದನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.

ಈ ಎರಡು ಕಲಮುಗಳ ಅಡಿ ಒಂದೇ ಬಾರಿ ದೂರು ದಾಖಲು ಮಾಡಿರುವುದು ಕಾನೂನು ಬಾಹಿರ. ಆದುದರಿಂದ ದೋಷಾರೋಪ ಪಟ್ಟಿ ರದ್ದು ಮಾಡಬೇಕು ಎಂದು ಸಹೀದಾ ಪರ ವಕೀಲ ಶಂಕರಪ್ಪ ಕೋರ್ಟ್‌ಗೆ ಮನವಿ ಮಾಡಿಕೊಂಡರು. ಇದನ್ನು ಪುರಷ್ಕರಿಸಿದ ನ್ಯಾ.ವಿ.ಜಗನ್ನಾಥನ್ ಅವರು, ದೋಷಾರೋಪ ಪಟ್ಟಿಗೆ ಸಂಬಂಧಿಸಿದಂತೆ ಮರು ಪರಿಶೀಲನೆ ನಡೆಸುವಂತೆ ಅಧೀನ ನ್ಯಾಯಾಲಯಕ್ಕೆ ಸೂಚಿಸಿದ್ದಾರೆ.

ಕೃಪೆ : Webdunia

No comments:

Post a Comment