ಸಲೀಂ,ಅಮ್ಚಿನಡ್ಕ,ಪುತ್ತೂರು
ಉತ್ತರ ಪ್ರದೇಶ, ಡಿ.1: ಲಂಚ ಕೇಳಿದ ಅಧಿಕಾರಿಯ ಕಚೇರಿಗೆ ಹಾವುಗಳನ್ನು ಬಿಟ್ಟು ವಿಚಿತ್ರ ರೀತಿಯಲ್ಲಿ ಪ್ರತಿಭಟಿಸಿದ ಘಟನೆ ಉತ್ತರ ಪ್ರದೇಶದ ಬಸ್ತಿ ಯಲ್ಲಿ ನಡೆದಿದೆ. ಇತ್ತೀಚೆಗೆ ಭ್ರಷ್ಟಾಚಾರದ ವಿರುದ್ಧ ಮೂಡಿಸಿರುವ ಜನಜಾಗೃತಿ ವ್ಯಾಪಕವಾಗಿದೆ. ಅದೀಗ ಬಸ್ತಿ ಬಸ್ತಿಯಲ್ಲೂ ಕಾಣಿಸಿಕೊಳ್ಳುತ್ತಿದೆ. ಆದರೆ ವಿಚಿತ್ರವಾಗಿ ಹಾವಿನ ರೂಪದಲ್ಲಿ ಕಾಣಿಸಿಕೊಂಡಿದೆ. ಎಲ್ಲೇ ಆಗಲಿ, ಯಾರೇ ಆಗಲಿ ಲಂಚ ಅಂತ ಕೇಳಿದರೆ ಜನ ಬುಸ್ ಬುಸ್ ಎನ್ನುತ್ತಿದ್ದಾರೆ. ಏನಾಯಿತಪ್ಪಾ ಅಂದರೆ
ಲಂಚದಿಂದ ಬೇಸತ್ತ ವ್ಯಕ್ತಿಯೊಬ್ಬರು ಇದನ್ನು ಅಕ್ಷರಶಃ ಮಾಡಿ ತೋರಿಸಿದ್ದಾರೆ. ಸಾಕ್ಷಾತ್ ಹಾವುಗಳನ್ನೇ ತಂದು ಅವುಗಳಿಂದ ಬುಸ್ ಬುಸ್ ಅನಿಸಿದ್ದಾರೆ. ಅದೂ ಲಂಚ ಕೇಳಿದ ಅಧಿಕಾರಿಯ ಕಚೇರಿಯೊಳಕ್ಕೆ ಸರಿಯಾಘಿ ಒಂದು ಡಜನ್ ಹಾವುಗಳನ್ನು ಬಿಟ್ಟುಬಂದಿದ್ದಾರೆ.
ಲಂಚ ವಿರೋಧಿಗೆ ಇದು ಹೇಗೆ ಸಾಧ್ಯವಾಯಿತಪ್ಪಾ ಅಂದರೆ ಆತ ಹಾವು ಹಿಡಿಯುವುದರಲ್ಲೂ ಎತ್ತಿದ ಕೈ. ಅದಕ್ಕೆ ಲಂಚಕ್ಕೆ ಕೈಯೊಡ್ಡಿದ ಅಧಿಕಾರಿಗಳಿಗೆ ತಕ್ಕ ಶಾಸ್ತಿ ಮಾಡಿದ್ದಾರೆ. ಹಕ್ಕುಳು ಎಂಬ ಈ ಹೈಕಳು ಪರಿಸರವಾದಿ. ಆತನಿಗೆ ಸರಕಾರ ಒಂದಷ್ಟು ಜಮೀನು ಮಂಜೂರು ಮಾಡಿತ್ತು. ಆದರೆ ಲಂಚ ನೀಡದಿದ್ದರೆ ಜಮೀನು ಕೊಡೊಲ್ಲ ಎಂದಿದ್ದಾರೆ.
ಇದರಿಂದ ಭ್ರಮನಿರಸನಗೊಂಡ ವ್ಯಕ್ತಿ ಸರಿಯಾಗಿಯೇ ಮಾಡಿದ್ದಾನೆ. ಯಾವ ಹಾವು ಆತನ ಕನಸಿಗೆ ಬಂದು ಇಂತಹ ಐಡಿಯಾ ಕೊಟ್ಟಿತೋ ಅಂತೂ ಆತ ಹಾವುಗಳನ್ನು ಹಿಡಿದುತಂದು ಕಚೇರಿಯೊಳಕ್ಕೆ ಬಿಟ್ಟಿದ್ದಾನೆ.
ಕೃಪೆ : ವಿಶ್ವಕನ್ನಡಿಗ ನ್ಯೂಸ್
No comments:
Post a Comment