Sunday, December 16, 2012

ಮನಸ್ಸು ದುರ್ಬಲವಾಗುವುದೇಕೆ?



ಮನಸ್ಸಿದ್ದಲ್ಲಿ ಮಾರ್ಗ, ಕನಸಿದ್ದಲ್ಲಿ ಸಾಧನೆ  ಎಂಬ ಹಿತೋಕ್ತಿಯಾಗಲಿ,  ಮನಸ್ಸು ಮಾಡಿದ್ರೆ ಯಾಕಾಗಲ್ಲ? ಎಂತೆಂಥವರು ಏನೆಲ್ಲ ಮಾಡುತ್ತಾರೆ. ನಾವ್ಯಾಕೆ ಮಾಡಬಾರ‌್ದು  ಎಂಬ ಸದೃಢ ಮನಸ್ಸಿನ ನುಡಿಗಳನ್ನಾಗಲಿ ಜೀವನದಲ್ಲಿ ಒಂದು ಸಲವಾದರೂ ಕೇಳಿದ್ದೇವೆಯಲ್ಲವೇ?

ಕಂಕಣಬದ್ಧರಾಗಿ ಕೆಲವೊಮ್ಮೆ ಸಾಧನೆ ಮಾಡಿ ತೋರಿಸಿದ್ದೇವೆ. ಗಾಯದ ಮೇಲೆ ಬರೆ ಎಳೆದಂತೆ, ಕಷ್ಟಗಳ ಮೇಲೆ ಕಷ್ಟಗಳು ಎರಗಿ ಏನೂ ತೋಚದಂತಾಗಿ, ಇನ್ನು ಬದುಕೇ ಸಾಕು ಎನ್ನುವಷ್ಟರ ಮಟ್ಟಿಗೆ ಬಸವಳಿದಿದ್ದೇವೆ. ಜೀವನದಲ್ಲಿ ಜಿಗುಪ್ಸೆ ಹೊಂದಿ ಚಡಪಡಿಸಿದ್ದೇವೆ.


ಆದರೇನಂತೆ ಡಿ.ವಿ.ಗುಂಡಪ್ಪ ಅವರು ಹೇಳಿದಂತೆ  `ಬದುಕು ಜಟಕಾ ಬಂಡಿ ವಿಧಿ ಅದರ ಸಾಹೇಬಾ`  ಎನ್ನುವಂತೆ ಬದುಕು ಸಾಗಿಸುತ್ತಿದ್ದೇವೆ. ನಮ್ಮ ನಿತ್ಯ ಜೀವನದಲ್ಲಿ ಕೆಲವು ವಿಷಯಗಳು ನಮಗೆ ಕ್ಷುಲ್ಲಕ ಎನಿಸಿದರೂ ದುರ್ಬಲ ಮನಸ್ಸಿನವರನ್ನು ಹೇಳ-ಹೆಸರಿಲ್ಲದಂತೆ ಮಾಡುತ್ತವೆ ಎನ್ನಲು ಮುಂಬೈನಲ್ಲಿ ನಡೆದ ಎರಡು ಘಟನೆಗಳು ಸಾಕ್ಷಿ.


ಘಟನೆ 1:
ಪಿಯುಸಿ ಹುಡುಗನೊಬ್ಬ ಟಿವಿಯ ರಿಮೋಟ್ ಕೊಡೆಂದು ಆಗತಾನೆ ಟಿವಿ ನೋಡಲಾರಂಭಿಸಿದ ತಂಗಿಯನ್ನು ಕಾಡಿದ. ಆಕೆ ಕೊಡಲಾರೆನೆಂದು ಹಠ ಹಿಡಿದಾಗ ಸಿಟ್ಟಿನಿಂದ ಅವಳ ಕಪಾಳಕ್ಕೆ ಹೊಡೆದ. ಅದೇ ಕೋಪ ಹತಾಶೆಯಲ್ಲಿ ಕೋಣೆಯೊಳಗೆ ಬಾಗಿಲು ಹಾಕಿ ಫ್ಯಾನ್‌ಗೆ ನೇಣು ಹಾಕಿಕೊಂಡ.

ಘಟನೆ 2:
ಎಂಟನೇ ತರಗತಿ ಬಾಲೆಯೊಬ್ಬಳು ಕಳೆದ ಮಳೆಗಾಲದ ಆರಂಭದಲ್ಲಿ ಮುಂಬೈನಲ್ಲಿ ಮೊದಲ ಮಳೆಯ ಸಿಂಚನವಾದಾಗ ಆಟವಾಡಲು ಉತ್ಸುಕಳಾಗಿದ್ದಳು. ಹೆತ್ತವರು ಮನೆಯಲ್ಲಿರಲಿಲ್ಲ. ಹೊರಹೋಗದಂತೆ ಆಕೆಯ ಅಣ್ಣ ತಾಕೀತು ಮಾಡಿಬಿಟ್ಟ. ಹತಾಶೆಗೊಂಡ ಹುಡುಗಿ ತನ್ನ ದುಪ್ಪಟ್ಟದಿಂದ ನೇಣು ಹಾಕಿಕೊಂಡು ಸಾವನ್ನಪ್ಪಿದಳು.

ಇಂತಹ ಚಿಕ್ಕ ಪುಟ್ಟ ವಿಷಯಗಳಿಗಾಗಿ ಅನಾಹುತಗಳಾದ ಘಟನೆ ಹೆಕ್ಕಿದರೆ ಲೆಕ್ಕವಿಲ್ಲದಷ್ಟು ಸಿಗುತ್ತವೆ. ಇಂಥ ಅನಾಹುತಗಳಿಗೆ ಮುಖ್ಯ ಕಾರಣವೇ ದುರ್ಬಲ ಮನಸ್ಸು.


ಮನಸ್ಸು ದುರ್ಬಲವಾಗುವ ಸಂದರ್ಭಗಳು

*
 ಅತ್ಯಂತ ಪ್ರೀತಿಯ ವಸ್ತು ಕಳೆದುಹೋದಾಗ
*
ನಮ್ಮ ನಾಲಿಗೆಯನ್ನು ನಾವೇ ಹರಿಯಬಿಟ್ಟಾಗ
*
ನಮ್ಮನ್ನು ಪ್ರೀತಿಸುವವರು ಬೇರೊಬ್ಬರನ್ನು ಪ್ರೀತಿಸಲಾರಂಭಿಸಿದಾಗ
*
ಸಹಿಸಿಕೊಳ್ಳಲಾರದಂತಹ ಅವಮಾನವಾದಾಗ
*
ಪ್ರೀತಿಪಾತ್ರರಾದವರನ್ನು ಕಳೆದುಕೊಂಡಾಗ
*
ಮಾನಸಿಕ ಯಾತನೆ, ಕಿರುಕುಳವಾದಾಗ
*
ಯಾರಾದರೂ ನಮ್ಮ ಸ್ವತಂತ್ರಕ್ಕೆ ಅಡ್ಡಿಪಡಿಸಿದಾಗ
*
ದೇಹಕ್ಕೆ (ರೋಗಗಳಿಂದ) ತೊಂದರೆಯಾದಾಗ
*
ಕಲಿಯಬೇಕಾದದ್ದನ್ನು ಬೇಗನೆ ಕಲಿಯಲಾಗದಿದ್ದಾಗ
*
ಸಾಧನೆಯ ಹಾದಿಯಲ್ಲಿ ಯಶ ಕಾಣದಿದ್ದಾಗ
*
ಪ್ರೀತಿಸುವ ವ್ಯಕ್ತಿ ಕೈಕೊಟ್ಟಾಗ
*
ಜನರು ಅನುಕಂಪ ತೋರ್ಪಡಿಸಿದಾಗ
*
  ಭಯವಾದಾಗ, ಜಗಳವಾದಾಗ
*
ಮೌನದಲ್ಲಿಯೇ ಚುಚ್ಚು ಮಾತುಗಳಿಂದ ನೋಯಿಸಿದಾಗ
*
  ನಾವು ಮಾಡಿದ ತಪ್ಪಿನ ಅರಿವು ನಮಗುಂಟಾದಾಗ
ಇಂಥ ನಾನಾ ಸಂದರ್ಭಗಳಲ್ಲಿ ಮನಸ್ಸು ದುರ್ಬಲವಾಗುವುದಿದೆ.

ದುರ್ಬಲ ಮನಸ್ಸನ್ನು ಗುರುತಿಸುವುದೊಂದು ಕೌಶಲ

ನಾನಾ ಘಟನೆಗಳ ಹೊಡೆತಕ್ಕೆ ಸಿಲುಕಿಕೊಂಡ ಮನಸ್ಸು ದುರ್ಬಲಗೊಳ್ಳುತ್ತಿದ್ದಂತೆ ಚಂಚಲತೆ ಹೆಚ್ಚಾಗುತ್ತದೆ. ಏನೂ ತೋಚದಂತಾಗುತ್ತದೆ. ಈಗ  ನಾನು ಏನು ಮಾಡಲಿ  ಎಂಬ ಪ್ರಶ್ನೆ ಕಾಡಲಾರಂಭಿಸುತ್ತದೆ.  ನಕಾರಾತ್ಮಕ(ನೆಗೆಟಿವ್) ಭಾವನೆಗಳು ಜಾಗೃತವಾಗುತ್ತವೆ. ಅಂಜಿಕೆ, ಅಧೈರ್ಯ, ದುರ್ಬಲತೆ, ಏಕಾಂಗಿತನಗಳು ಮಿತ್ರರಾಗಲು ಬಯಸುತ್ತವೆ.

ಧೈರ್ಯ, ನಂಬಿಕೆ, ವಿಶ್ವಾಸಗಳು ಹಿತಶತ್ರುಗಳಾಗಿ ಪರಿಣಮಿಸುತ್ತವೆ. ನಾನಾ ಮಾರ್ಗಗಳು, ನಾನಾ ತೀರ್ಮಾನಗಳು ಮನದಲ್ಲಿ ಕೋಲಾಹಲವೆಬ್ಬಿಸಿ ಒಮ್ಮೆಲೇ ಬಂದೆರಗುವುದರಿಂದ ಉತ್ತರ ಕಂಡುಕೊಳ್ಳಲು ವಿಫಲರಾಗುತ್ತೇವೆ. ಈ ಭೂಮಿ ಮೇಲೆ ಇನ್ನು ಬದುಕು ಸಾಕು ಎಂಬ ಆತುರದ ತೀರ್ಮಾನ ತೆಗೆದುಕೊಳ್ಳುತ್ತೇವೆ. ಇಂತಹ ನಿರ್ಧಾರಗಳಿಗೆ ಕಾರಣವೇ ದುರ್ಬಲ ಮನಸ್ಸು.


ಬೇಕು ಎಚ್ಚರ!

ಸಮಸ್ಯೆಗಳಿಂದ ಮನಸ್ಸು ದುರ್ಬಲವಾಯಿತು. ದುರ್ಬಲಗೊಂಡ ಮನಸ್ಸಿನಲ್ಲಿ ಯಾವ ಬದಲಾವಣೆಗಳಾಗುತ್ತವೆ ಎಂಬುದನ್ನು ಗುರುತಿಸಿಯಾಯಿತು ಎಂದ ಮೇಲೆ, ನಮ್ಮ ಮುಂದಿನ ಗುರುತರ ಜವಾಬ್ದಾರಿ ಮಂಗನ ಕೈಗೆ ಮಾಣಿಕ್ಯ ಕೊಡದಿರುವುದು ಅಂದರೆ ದುರ್ಬಲ ಮನಸ್ಸಿಗೆ ಶರಣಾಗದಿರುವುದು.

ವರ್ತನೆ ಪರಿವರ್ತನೆಗೊಳಿಸಿ

*
ಮನಸ್ಸು ದುರ್ಬಲಗೊಂಡಾಗ ಏಕಾಂಗಿತನ ಒಳ್ಳೆಯದಲ್ಲ. ಬೇಗನೆ ಜನರ ಗುಂಪಿನೊಳಗೊಬ್ಬರಾಗಲು ಪ್ರಯತ್ನಿಸಬೇಕು.
*
ಮನಸ್ಸು ದುರ್ಬಲವಾದ ಸ್ಥಳವನ್ನು ಜಾಣ್ಮೆಯಿಂದ ತ್ಯಜಿಸಬೇಕು.
*
ಗೆಳೆಯ/ತಿಯರನ್ನು ಕರೆದುಕೊಂಡು ಸಿನಿಮಾ ಅಥವಾ ಇತರೆ ಮನರಂಜನೆ ಕಾರ್ಯಕ್ರಮ ನೋಡಲು ಹೋಗಬೇಕು.
*
ಮನಸ್ಸನ್ನು ಕಾರ್ಯಗಳತ್ತ ಹರಿಸಿ. (ಗಿಡಗಳಿಗೆ ನೀರು ಹಾಯಿಸಿ. ಪೇಪರ್ ಕಟಿಂಗ್ ಮಾಡಿ)
*
ಕೈಯನ್ನು ಹಣೆಗೋ, ಗದ್ದಕ್ಕೋ ಹಚ್ಚಿಕೊಂಡು ಕೂರಬಾರದು.
*
ಲೊಚಗುಟ್ಟುವುದನ್ನು ನಿಲ್ಲಿಸಿ. ಮೂಗಿನಿಂದ ದೀರ್ಘ ಉಸಿರೆಳೆದುಕೊಂಡು ಬಾಯಿಂಧ ಬಿಡುವುದು ಉತ್ತಮ.
*
ಒಂದೆಡೆ ಹೋಗಿ, ಕೈಯ ಬೆರಳುಗಳು ಒಂದಕ್ಕೊಂದು ಕೂಡುವಂತೆ ಜೋರಾಗಿ ಚಪ್ಪಾಳೆ ತಟ್ಟುತ್ತಾ, ನರಮಂಡಲಗಳನ್ನು ಎಚ್ಚರಗೊಳಿಸುವುದು.
*
ಆದ ಕಷ್ಟ-ನಷ್ಟಗಳನ್ನು ಆಪ್ತರ ಮುಂದೆ ವಿವರಿಸಿ. ಮನಸ್ಸು ಹಗುರ ಮಾಡಿಕೊಳ್ಳುವುದು.
*
ವ್ಯಕ್ತಿತ್ವ ವಿಕಸನ ಪುಸ್ತಕಗಳು ಅಥವಾ ತಮ್ಮ ಮನೆಯ ಫೋಟೋ ಆಲ್ಬಮ್‌ಗಳನ್ನು  ಒಮ್ಮೆ ತಿರುವಿ ಹಾಕಿ.
 ನಾನು ಹೋದ ಮೇಲಾದರೂ ಅವರು ಎಚ್ಚರವಾಗಲಿ  ಎಂಬ ನೆಗೆಟಿವ್ ಯೋಚನೆ ಬಿಟ್ಟು  ನಾನು ಅವರೊಂದಿಗೆ ಇದ್ದು ಅವರನ್ನು ಪ್ರೀತಿಯಿಂದ ಬದಲಾಯಿಸುತ್ತೇನೆ  ಎಂಬ ಪಾಸಿಟಿವ್ ಯೋಚನೆ ಮಾಡುವುದು.

ಸ್ವಾಮಿ ವಿವೇಕಾನಂದರ  ಹೇಳಿಕೆಯಂತೆ  ಸದೃಢವಾದ ದೇಹದಲ್ಲಿ ಸದೃಢವಾದ ಮನಸ್ಸಿರುತ್ತದೆ.  ಖಂಡಿತ ನಿಜ. ಮನಸ್ಸು ಸದೃಢಗೊಳ್ಳುತ್ತಾ ದೇಹದ ಆರೋಗ್ಯ ಚೆನ್ನಾಗಿರಬೇಕಾದರೆ, ನಮಗೆ ಹಿತ-ಮಿತ ಆಹಾರ, ಕೆಲಸಕ್ಕೆ ತಕ್ಕ ವಿಶ್ರಾಂತಿ, ಯೋಗ, ಪ್ರಾಣಾಯಾಮ ಧ್ಯಾನದ ಅನುಭೂತಿಗಳು ಅವಶ್ಯ.

ಪಿತ್ಥಕೋಶದಲ್ಲಿರುವ ಕಲ್ಲಿನಿಂದ ಮುಕ್ತಿ ಹೇಗೆ ?

 
Posted by: Reena        : Tuesday, December 11, 2012,
 
ಪಿತ್ಥಕೋಶದಲ್ಲಿ ಬೆಳೆಯುವ ಕಲ್ಲುಗಳು ಸಣ್ಣದಾಗಿರುತ್ತವೆ ಹಾಗೂ ಇವು ಕಾಲಕಾಲಕ್ಕೆ ಬೆಳೆಯುತ್ತವೆ. ಇದು ಬೆಳೆಯಲು ತುಂಬಾ ವರ್ಷಗಳೇ ಬೇಕು. ಪಿತ್ಥಕೋಶದಲ್ಲಿ ಕಲ್ಲು ಬೆಳೆಯುವುದು ಬಹುತೇಕ ಸಾಮಾನ್ಯ ಸಂಗತಿ. ಬಹುತೇಕವಾಗಿ ಪಿತ್ಥಕೋಶದಲ್ಲಿ ಕಲ್ಲು ಬೆಳೆದಾಗ ಯಾವುದೇ ದೈಹಿಕ ಚಿಹ್ನೆ ಕಾಣಿಸಿಕೊಳ್ಳುವುದಿಲ್ಲ. ಸರಾಸರಿ ಶೇಕಡಾ ೧೦ರಷ್ಟು ಮಾತ್ರ ಪಿತ್ಥಕೋಶದಲ್ಲಿ ಕಲ್ಲು ಬೆಳೆದಾಗ ಸಿಸ್ಟಿಕ್‌ನ್ನು ಅಥವಾ ಸಾಮಾನ್ಯ ಪಿತ್ಥರಸ ನಾಳದ ಚಲನೆಯನ್ನು ನಿಲ್ಲಿಸುತ್ತದೆ. ಇದರಿಂದಾಗಿ ಕಿಬ್ಬೊಟ್ಟೆಯ ನೋವು, ಜಾಂಡಿಸ್‌, ವಾಕರಿಕೆ ಮತ್ತು ಜ್ವರ ಬರುವ ಸಾಧ್ಯತೆಗಳಿರುತ್ತವೆ. ಈ ಲಕ್ಷಣಗಳು ಕಂಡುಬಂದಾಗಿ ಪಿತ್ಥಕೋಶದಲ್ಲಿನ ಕಲ್ಲುಗಳನ್ನು ಸರ್ಜರಿ ಮೂಲಕ ತೆಗೆಯುವುದು ಅಗತ್ಯವಾಗುತ್ತದೆ.
ಬಹುತೇಕ ಜನರಲ್ಲಿ ಕಿಬ್ಬೊಟ್ಟೆಯ ಅಲ್ಟ್ರಾಸೌಂಡ್‌ ಪರೀಕ್ಷೆ ನಡೆಸಿದಾಗ ಕಲ್ಲುಗಳು ಕಾಣಿಸಿಬಿಡುತ್ತವೆ. ಹೀಗೆ ತಿಳಿದು ಬಂದಾಗ ಯಾವ ಆಹಾರವನ್ನು ಅವರು ದೂರವಿಡಬೇಕು ಮತ್ತು ನೈಸರ್ಗಿಕವಾಗಿ ಆಹಾರದಲ್ಲಿ ನಿಯಂತ್ರಣ ಸಾಧಿಸಿ ಪಿತ್ಥಕೋಶದ ಕಲ್ಲನ್ನು ನಿವಾರಿಸಿಕೊಳ್ಳಬೇಕು ?

ಸೂಚನೆಗಳು

1. ಪ್ರಾಣಿಗಳ ಉತ್ಪನ್ನವನ್ನು ತಿನ್ನಬೇಡಿ. ಮಾಂಸ, ಬೆಣ್ಣೆ ಮತ್ತು ಸಂಸ್ಕರಿತ ಕೊಬ್ಬಿನಂಶವನ್ನು ಹೊಂದಿರುವ ಹಾಲಿನ ಎಲ್ಲಾ ಉತ್ಪನ್ನಗಳನ್ನೂ ದೂರವಿಡಿ. ಇದು ಪಿತ್ಥಕೋಶದಲ್ಲಿ ಕಲ್ಲು ಬೆಳೆಯಲು ಮತ್ತು ಪಿತ್ಥಕೋಶದ ಸಮಸ್ಯೆಗೆ ಕಾರಣವಾಗುತ್ತದೆ.

2. ಕೊಬ್ಬಿನಂಶ ಹೊಂದಿರುವ ಆಹಾರವನ್ನು ಮುಟ್ಟಲೂಬೇಡಿ. ಪಿತ್ಥಕೋಶದಲ್ಲಿ ಈಗಾಗಲೇ ಕಲ್ಲುಗಳು ಕುಳಿತಿದ್ದರೆ ಎಣ್ಣೆ ಮೆತ್ತಿದ, ಕರಿದ ಆಹಾರವನ್ನು ಸೇವಿಸಬೇಡಿ. ಇದರಿಂದಾಗಿ ನಿಮ್ಮ ಸಿಸ್ಟಿಕ್‌ ನಾಳವು ಬಿಗಿದುಕೊಳ್ಳಬಹುದು.

 3. ಏಕಪರ್ಯಾಪ್ತ ಕೊಬ್ಬಿನಂಶಗಳಾದ ಕನೋಲಾ ಮತ್ತು ಆಲಿವ್‌ ಎಣ್ಣೆಯನ್ನು ಬಳಸಿ. ಬೇಳೆಕಾಳುಗಳೂ ಕೂಡಾ ಉತ್ತಮವಾದ ಆಹಾರ. ಈ ಆಹಾರ ಮತ್ತು ಎಣ್ಣೆಯು ಪಿತ್ಥಕೋಶದ ಕಲ್ಲುಗಳನ್ನು ಕರಗಿಸುವ ಸಾಮರ್ಥ್ಯವನ್ನು ಹೊಂದಿವೆ.

4. ನೀವು ಮಾಂಸಾಹಾರಿಯಾಗಿದ್ದರೆ, ಕೋಲ್ಡ್‌ ವಾಟರ್‌ ಮೀನುಗಳಾದ ಟ್ಯೂನ, ಬಂಗಡೆ ಮತ್ತು ಸಾಲ್ಮನ್‌ ಮೀನುಗಳನ್ನು ತಿನ್ನಿ. ಓಮೆಗಾ-೩ ಮೀನೆಣ್ಣೆಯು ಪಿತ್ಥಕೋಶದಲ್ಲಿನ ಕಲ್ಲನ್ನು ಕರಗಿಸಲು ಸಹಾಯ ಮಾಡುತ್ತದೆ.

 5. ಸಂಸ್ಕರಿತ ಸಕ್ಕರೆಯನ್ನು ದೂರವಿಡಿ ಮತ್ತು ಗ್ಲೈಸೆಮಿಕ್‌ ಕಾರ್ಬೋಹೈಡ್ರೇಟ್ಸ್‌ನ್ನು ಮುಟ್ಟಲೂಬೇಡಿ. ಬಟಾಟೆ, ಅಕ್ಕಿ ಮತ್ತು ಇತರ ಪಾಸ್ತಾ ಪದಾರ್ಥಗಳನ್ನು ಸೇವಿಸಿದ ನಂತರ ನಮ್ಮ ದೇಹವು ಅವುಗಳನ್ನು ಸಕ್ಕರೆಯನ್ನಾಗಿ ಪರಿವರ್ತಿಸುತ್ತದೆ. ದೇಹದಲ್ಲಿ ಸಕ್ಕರೆ ಪ್ರಮಾಣದಲ್ಲಿ ಹೆಚ್ಚಳವು ನೇರವಾಗಿ ಡಯಾಬಿಟೀಸ್‌ಗೆ ಮತ್ತು ಪಿತ್ಥಕೋಶದಲ್ಲಿ ಕಲ್ಲು ಬೆಳೆಯುವುದಕ್ಕೆ ಸಂಬಂಧವನ್ನು ಹೊಂದಿರುತ್ತದೆ.

6. ದಿನದಲ್ಲಿ ಒಮ್ಮೆ ಮಾತ್ರ ಸ್ವಲ್ಪವೇ ಕಾಫಿ ಕುಡಿಯಿರಿ. ಇದರಿಂದಾಗಿ ಪಿತ್ಥಕೋಶದಲ್ಲಿನ ಕೊಬ್ಬಿನ ಅಂಶಗಳು ಹೊರಹೋಗುವುದಕ್ಕೆ ಸಹಾಯವಾಗುತ್ತದೆ. ಹೀಗಾಗಿ ಅಲ್ಲಿ ಕಲ್ಲು ರೂಪುಗೊಳ್ಳುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.

7. ಸಿಕ್ಕಷ್ಟೂ ಹಣ್ಣು ಹಂಪಲುಗಳನ್ನು ತಿನ್ನಿ. ಬರಿ ವಿಟಾಮಿನ್‌ಗಳಿಗಷ್ಟೇ ಈ ಹಣ್ಣುಗಳು ಸಹಾಯ ಮಾಡುವುದಿಲ್ಲ ಬದಲಾಗಿ ಪಿತ್ಥಕೋಶದಲ್ಲಿ ಕಲ್ಲು ಬೆಳೆಯವುದನ್ನು ಇವು ತಡೆಯುತ್ತವೆ.

8. ಕಾಳುಗಳು ಮತ್ತು ಸೆರೀಲ್‌ಗಳನ್ನು ಬಳಸಿ ನಿಮ್ಮ ಪಥ್ಯವನ್ನು ಮಾಡಿ. ಇದರಿಂದಾಗಿ ಕೊಲೆಸ್ಟ್ರಾಲ್‌ನ್ನು ದೇಹದಲ್ಲಿ ಕಡಿಮೆ ಮಾಡುವುದಷ್ಟೇ ಅಲ್ಲ, ಪಿತ್ಥಕೋಶದಲ್ಲಿನ ಕಲ್ಲನ್ನು ಕೂಡಾ ಕಡಿಮೆ ಮಾಡುತ್ತದೆ.

ಎಚ್ಚರಿಕೆ ಮತ್ತು ಸಲಹೆಗಳು:

* ಪಿತ್ಥಕೋಶದಲ್ಲಿ ಕಲ್ಲು ಬೆಳೆಯುವುದಕ್ಕೆ ಆನುವಂಶಿಕ ಅಂಶಗಳೂ ಕಾರಣವಾಗಬಹುದು.

* ನಿಮ್ಮ ಸಮಸ್ಯೆಗೆ ಪಿತ್ಥಕೋಶದ ಕಲ್ಲುಗಳು ಕಾರಣವಾಗಿರದಿದ್ದರೆ ಆಗ ಕೆಲವು ವೈದ್ಯಕೀಯ ಸಮಸ್ಯೆಯನ್ನು ಹೊರಗಿಡಬೇಕಾಗಬಹುದು.

* ಬೊಜ್ಜು ತುಂಬಿಕೊಳ್ಳುವುದು ಅಥವಾ ಅತಿವೇಗವಾಗಿ ತೂಕ ಇಳಿಯುವುದು, ನೇರವಾಗಿ ಪಿತ್ಥಕೋಶದಲ್ಲಿನ ಕಲ್ಲು ಬೆಳವಣಿಗೆಗೆ ಸಂಬಂಧಿಸಿದೆ. ತೂಕವನ್ನು ನಿಧಾನವಾಗಿ ಕಡಿಮೆ ಮಾಡಿಕೊಂಡು ಅದೇ ತೂಕವನ್ನು ಆರೋಗ್ಯಯುತವಾಗಿ ಕಾಯ್ದುಕೊಳ್ಳಿ, ಇದು ಪಿತ್ಥಕೋಶದ ಕಲ್ಲಿನ ಸಮಸ್ಯೆಗೆ ಪರಿಹಾರವೂ ಆಗಬಲ್ಲದು.
 
ಕೃಪೆ : ಒನ್ ಇಂಡಿಯಾ


Friday, October 19, 2012

ನಿನ್ನ ಸೋದರಮಾವ ಅತ್ತೆಗೆ ಹಾಯ್ ಹೇಳಿದ್ಯಾ ?

ಎಮ್ಎನ್ಸಿ ಕಂಪನಿಯೊಂದರಲ್ಲಿ ಸಾಫ್ಟ್ ವೇರ್ ಇಂಜಿನಿಯರಾಗಿ ಕೆಲಸ ಮಾಡುತ್ತಿದ್ದ ಸುಬ್ಬಿಗೆ ಭರ್ತಿ ಕೆಲಸ. ಪ್ರತಿದಿನ ಮನೆಗೆ ಬರುವುದು ಲೇಟಾಗತ್ತೆ ಎಂದು ತನ್ನ ಗಂಡ ಸುಬ್ಬುವಿಗೆ ಮೊದಲೇ ಹೇಳಿದ್ದಳು. ಸುಬ್ಬು ಕೂಡ, ಆಗ್ಲಿ ಕಣೆ ವರಿ ಮಾಡ್ಕೋಬೇಡ ಎಂದು ಮುದ್ದಿಸಿ ಕಳಿಸಿರುತ್ತಾನೆ.

ಪ್ರತಿರಾತ್ರಿ ಹನ್ನೆರಡು ಗಂಟೆಗೆ ಬರೋಳು ಒಂದು ದಿನ ಹನ್ನೊಂದು ಗಂಟೆಗೇ ಬಂದುಬಿಡುತ್ತಾಳೆ. ಬೇಗನೆ ಬಂದಿದ್ದಕ್ಕೆ ಗಂಡ ಖುಷಿಪಡಬಹುದು ಎಂದು ಅಂದುಕೊಂಡಿದ್ದ ಸುಬ್ಬಿ, ಗಂಡನಿಗೆ ಗೊತ್ತಾಗಬಾರದು, ಸರ್ಪ್ರೈಸ್ ಕೊಡಬೇಕು ಎಂದುಕೊಂಡು ತಾನೇ ಬಾಗಿಲು ತೆಗೆದು ಮನೆಯೊಳಗೆ ಬರುತ್ತಾಳೆ.

ಇನ್ನೇನು ಬೆಡ್ರೂಮೊಳಗೆ ಕಾಲಿಡಬೇಕು ಅಷ್ಟರಲ್ಲಿ ಹಾಸಿಗೆಯ ಮೇಲೆ ಮುಲುಕಾಟ ಕೇಳುತ್ತದೆ. ಹೊದ್ದುಕೊಂಡಿದ್ದ ಬೆಡ್ಶೀಟ್ನೊಳಗಿನ ಒಂದು ತುದಿಯಲ್ಲಿ ನಾಲ್ಕು ಕಾಲುಗಳು ಹೊರಬಂದಿರುತ್ತವೆ. ತ್ರೀ ಪಿನ್ ಎಲೆಕ್ಟ್ರಿಕ್ ಸಾಕೆಟ್ ಒಳಗೆ ಬೆರಳು ತೂರಿಸಿ ಕರೆಂಟ್ ಹೊಡೆಸಿಕೊಂಡಂತೆ ಆಕೆಗೆ ಭಾಸವಾಗುತ್ತದೆ.

ತಾನು ಮೋಸಹೋದೆ ಎಂದು ಮುಖ ಕೆಂಪೇರಿಸಿಕೊಂಡು, ಮೂಗಿನ ಹೊಳ್ಳೆಗಳನ್ನು ಅರಳಿಸಿಕೊಂಡು, ಹಾಸಿಗೆಯ ಮೇಲೆ ಮಲಗಿದ್ದವರಿಗೆ ಒಂದು ಕ್ಷಣವೂ ಅವಕಾಶ ಸಿಗದಂತೆ, ಮಲಗಿದವರು ಕಮಕ್ ಕಿಮಕ್ ಅನ್ನದಂತೆ, ಕ್ರಿಕೆಟ್ ಬ್ಯಾಟ್ ತೆಗೆದುಕೊಂಡು ರಪರಪ ಅಂತ ಬಾರಿಸಿಬಿಡುತ್ತಾಳೆ. ಕೆಲ ನಿಮಿಷಗಳಲ್ಲಿ ಎಲ್ಲವೂ ಶಾಂತ.

ಸಿಕ್ಕಾಪಟ್ಟೆ ಹೆದರಿಕೊಂಡ ಸುಬ್ಬಿ ಕಿತ್ತುಕೊಂಡು ಬಂದಿದ್ದ ಬೆವರನ್ನು ಒರೆಸಿಕೊಂಡು, ಏನು ಮಾಡಬೇಕೆಂದು ತಿಳಿಯದೆ ನೀರು ಕುಡಿಯಲೆಂದು ಅಡುಗೆಮನೆಗೆ ಬರುತ್ತಾಳೆ. ಗ್ಲಾಸಿಗೆ ನೀರು ಬಿಟ್ಟು ಇನ್ನೇನು ಗಂಟಲಿಗೆ ಇಳಿಬಿಡಬೇಕು, ಅಷ್ಟರಲ್ಲಿ ಕಟ್ಟೆಯ ಮೇಲೆ ಕುಳಿತು ಹಸಿಹಸಿ ಕ್ಯಾರೆಟ್ ತಿನ್ನುತ್ತಿದ್ದ ಸುಬ್ಬು ಕಾಣಿಸುತ್ತಾನೆ. ಸುಬ್ಬಿ ಕೈಯಲ್ಲಿದ್ದ ನೀರಿನ ಗ್ಲಾಸ್ ಫಳ್ಳನೆ ಬಿದ್ದುಹೋಗುತ್ತದೆ.

ಸುಬ್ಬು, "ಏನ್ ಚಿನ್ನಾ, ಯಾಕೆ ಏನಾಯ್ತು? ಯಾವಾಗ ಬಂದಿ? ಅಂದ ಹಾಗೆ, ಈಗಷ್ಟೆ 9 ಗಂಟೆಗೆ ನಿನ್ನ ಸೋದರಮಾವ, ಅತ್ತೆ ಬಂದಿದ್ದಾರೆ. ಅಲ್ಲಿ ಇಲ್ಲಿ ಯಾಕೆ ಮಲಗಲು ಬಿಡಬೇಕೆಂದು ಅವರಿಗೆ ನಮ್ಮ ಬೆಡ್ರೂಮ್ ಬಿಟ್ಟುಕೊಟ್ಟೆ. ಇನ್ನೂ ಮಲಗಿಲ್ಲ ಅಂತ ಕಾಣತ್ತೆ. ಅವರಿಗೆ ಹಾಯ್ ಎಂದು ಹೇಳಿದ್ಯಾ?"

ಕೃಪೆ : ಒನ್ ಇಂಡಿಯಾ

Wednesday, October 3, 2012

ರಸಿಕ ಗಂಡನನ್ನು ಬಾಲ್ಕನಿಯಿಂದ ತಳ್ಳಿದ ಹೆಂಡತಿ !

ಸಿನೆಮಾದಲ್ಲಿ ಕೂಡ ಯಾವ ಕಥೆಗಾರನ ನಿರ್ದೇಶಕನ ಕಲ್ಪನೆಗೆ ನಿಲುಕಲಾಗದ ಘಟನೆಯೊಂದು ಅರುಣಾಚಲ ರಾಜ್ಯದ ಶೇಷಾಚಲ ಜಿಲ್ಲೆಯ ಚಂಚಲ ಗ್ರಾಮದಲ್ಲಿ ನಡೆದಿತ್ತು. ನಿರುಮ್ಮಳವಾಗಿದ್ದ ಆ ಅಮವಾಸ್ಯೆಯ ರಾತ್ರಿಯಂದು ಜರುಗಿದ್ದೇನೆಂದರೆ, ಅರುಳು ಮರುಳು ಸ್ಥಿತಿಯನ್ನು ದಾಟಿದ್ದ 99ರ ಹಲ್ಲುದುರಿದ ಮುದುಕನೊಬ್ಬ 22ರ ಹರೆಯದ ಯುವತಿಯೊಂದಿಗೆ ಹಾಸಿಗೆಯಲ್ಲಿ ಚೆಲ್ಲಾಟವಾಡುತ್ತಿದ್ದ ಸ್ಥಿತಿಯಲ್ಲಿ 87ರ ತನ್ನ ಹೆಂಡತಿಗೆ ರೆಡ್ ಹ್ಯಾಂಡಾಗಿ ಸಿಕ್ಕುಬಿದ್ದಿದ್ದ.


ನಖಶಿಖಾಂತ ಉರಿದುಹೋದ ಮುದುಕಿ, ಸಂಪೂರ್ಣ ವಿವಸ್ತ್ರಳಾಗಿದ್ದ ಆ ಸುಂದರ ಯುವತಿಯನ್ನು ಒದ್ದೋಡಿಸಿ, ದಾಂಪತ್ಯಕ್ಕೆ ಮಸಿಬಳಿದ ತನಗೆ ಮೋಸ ಮಾಡಿದ ಗಂಡನನ್ನು ದರದರ ಎಳೆದುಕೊಂಡು ಹೋಗಿ ಬಾಲ್ಕನಿಯ ಮೇಲಿಂದ ಮುಲಾಜಿಲ್ಲದೆ ತಳ್ಳಿಬಿಟ್ಟಿದ್ದಳು. ತೀವ್ರ ಆಘಾತಕ್ಕೆ ಒಳಗಾದ ರಸಿಕ ಅಜ್ಜ ಸ್ಥಳದಲ್ಲಿಯೇ ಸತ್ತುಹೋದ. ನಂತರ ತಾನೇ ಬಂದು ಪೊಲೀಸರೆದಿರು ಮುದುಕಿ ಶರಣಾಗತಳಾದಳು.

ಅವಳ ಮೇಲೆ ಗಂಡನನ್ನು ಕೊಲೆಗೈದ ಕೇಸನ್ನು ದಾಖಲಿಸಲಾಯಿತು. ಆಕೆ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದರಿಂದ ಆಕೆಯನ್ನು ನ್ಯಾಯಾಧೀಶರ ಮುಂದೆ ಮುಂದಿನ ವಿಚಾರಣೆ ಮತ್ತು ಪ್ರಕ್ರಿಯೆಗಾಗಿ ಕರೆತರಲಾಯಿತು.

ನ್ಯಾಯಾಧೀಶ : ಅಮ್ಮ. ನಿಮ್ಮ ಸ್ಥಿತಿ ನೋಡಿದರೆ ನಿಜಕ್ಕೂ ಬೇಜಾರಾಗುತ್ತದೆ. ನೀವು ತಪ್ಪನ್ನು ಒಪ್ಪಿಕೊಂಡಿದ್ದೀರಿ. ನಿಮ್ಮ ಗಂಡ ಆ ವಯಸ್ಸಲ್ಲಿ ತಪ್ಪೇ ಮಾಡಿರಬಹುದು. ಆದರೆ, ಅಂಥ ವಯಸ್ಸಾದ ವ್ಯಕ್ತಿಯನ್ನು ಬಾಲ್ಕನಿಯಿಂದ ತಳ್ಳುವಂಥ ಕೆಲಸ ಏಕೆ ಮಾಡಿದಿರಿ?

ಮುದುಕಿ : ನ್ಯಾಯಾಧೀಶರೆ, 99ರ ಹರೆಯದಲ್ಲಿ ನನ್ನ ಗಂಡ ಏನು ಬೇಕಾದರೂ ಮಾಡಬಹುದಾದರೆ, ಆತನಿಗೆ ಬಾಲ್ಕನಿ ಮೇಲಿಂದ ಹಾರಲು ಏಕೆ ಸಾಧ್ಯವಿಲ್ಲ ಎಂದು ಅಂದುಕೊಂಡು ಬಾಲ್ಕನಿಯಿಂದ ತಳ್ಳಿಬಿಟ್ಟೆ!
ಕೃಪೆ : ಒನ್ ಇಂಡಿಯಾ

Monday, August 13, 2012

ಜಸ್ಟ್ 5 ಸೆಕೆಂಡ್ಸ್: ಬಿ ಕೂಲ್ ಮ್ಯಾನ್!

 
ಜಸ್ಟ್ 5 ಸೆಕೆಂಡ್ಸ್: ಬಿ ಕೂಲ್ ಮ್ಯಾನ್!
 

                                                                    ಎ. ಕಷ್ಣ ಭಟ್

ನಾವೆಲ್ಲರೂ ಸಿಕ್ಕಾಪಟ್ಟೆ ಟೆನ್ಶನ್ ಪಾರ್ಟಿಗಳಪ್ಪಾ!

ಅಮ್ಮ ಏನೋ ಬೈದರು ಅಂತ ಮಗಳು ಬೇಸರ ಮಾಡ್ಕೊತಾಳೆ, ಮಗಳು ಎದುರುತ್ತರ ಕೊಟ್ಳು ಅಂತ ಅಮ್ಮ ಕಣ್ಣೀರಾಗ್ತಾರೆ. ಅತ್ತೆ-ಸೊಸೆ ನಡುವೆ ಆಗಾಗ ಅಪನಂಬಿಕೆಗಳು ಹುಟ್ಟುತ್ತವೆ.

ಮುಂಜಾನೆದ್ದು ಹೆಂಡತಿ ಸಹಸ್ರ ನಾಮಾರ್ಚನೆ ಮಾಡಿದ್ಲು ಅಂತ, ಮಗಳು ಸುಸ್ಸು ಮಾಡಿದ್ಲು ಅಂತ, ಗಂಡ ಮನೆಯ ಕೆಲಸದಲ್ಲಿ ಹೆಲ್ಪೇ ಮಾಡಿಲ್ಲ ಅಂತ, ರೋಡ್‌ನಲ್ಲಿ ಯಾರೋ ಅಡ್ಡ ಬಂದ ಅಂತ, ಕಂಡಕ್ಟರ್ ಚಿಲ್ಲರೆ ತಕರಾರು ಮಾಡಿದ ಅಂತ, ಆಫೀಸಿನಲ್ಲಿ ಬಾಸ್ ಏನೋ ಕಿರಿಕಿರಿ ಮಾಡಿದರು ಅಂತ, ಸಹೋದ್ಯೋಗಿ ಮುಖಕ್ಕೆ ಹೊಡೆದಂತೆ ಏನೋ ಅಂದ ಅಂತ.. ಟೆನ್ಶನ್ ಮಾಡ್ಕೊಳ್ಳೋಕೆ ನಮ್ಗೆ ಸಾವಿರ ದಾರಿಗಳಿರ್ತವೆ.

ದುರಂತವೆಂದರೆ, ನಾವು ಆ ಟೆನ್ಶನ್‌ಗಳನ್ನು ಅಲ್ಲೇ ಬಿಟ್ಟುಬಿಡೋಲ್ಲ.. ಮನೆಯ ಸಿಟ್ಟನ್ನು ಆಫೀಸಲ್ಲಿ, ಆಫೀಸಿನ ಕಿರಿಕಿರಿಯನ್ನು ಮನೇಲಿ ಎಳೆದಾಡಿ ರಂಪ ಮಾಡಿಕೊಳ್ಳುತ್ತೇವೆ. ಏನೂ ಮಾಡಿಲ್ಲ ಅಂದ್ರೂ ಇಡೀ ದಿನದ ಮೂಡೆಲ್ಲ ಹಾಳಾಯಿತು ಅಂತ ಕತ್ತು ಬಾಗಿಸುತ್ತೇವೆ, ತಲೆ ಮೇಲೆ ಕೈ ಹೊತ್ತು ಕುಳಿತುಕೊಳ್ತೇವೆ. ಇದರಿಂದ ನೆಮ್ಮದಿ ಕೆಡುತ್ತೆ, ಸಂಬಂಧಗಳು ಕಡಿದು ಹೋಗ್ತವೆ. ಸಿಟ್ಟು ಸ್ನೇಹವನ್ನು ಮುರಿಯುತ್ತೆ. ಸಣ್ಣ ಯಾವುದೋ ಕಾರಣದಿಂದ ಆರಂಭವಾದ ವೈಮನಸ್ಸು ಮತ್ತೆ ಸರಿ ಮಾಡಲಾಗದಷ್ಟು ಹಾಳಾಗಿ ಬಿಡುತ್ತದೆ.

ಇದೆಲ್ಲ ಯಾಕಾಗುತ್ತೆ? ಆ ಕ್ಷಣದಲ್ಲೇ ನಿವಾರಿಸಿಕೊಳ್ಳಬಹುದಾದ ಒಂದು ಸಮಸ್ಯೆಯನ್ನು ದೊಡ್ಡದಾಗಿಸಿಕೊಳ್ಳೋದು, ದಿನವಿಡೀ ಅದರ ಬಗ್ಗೆನೇ ಯೋಚನೆ ಮಾಡಿ ಮಂಡೆ ಹಾಳು ಮಾಡಿಕೊಳ್ಳೋದು, ದ್ವೇಷ ಕಟ್ಟಿಕೊಳ್ಳೋದು.. ಹೀಗೆ ಸಣ್ಣ ಸಣ್ಣ ವಿಷಯಗಳು ನಮ್ಮ ಟೈಮ್, ಎನರ್ಜಿ, ಕ್ರಿಯಾಶೀಲತೆ ಎಲ್ಲವನ್ನು ಹಾಳು ಮಾಡಿಬಿಡುತ್ತದೆ.

ಇದನ್ನು ಹೀಗೆ ಹೇಳೋದಕ್ಕಿಂತ ಒಂದು ಕಥೆ ಮೂಲಕ ಹೇಳಿದರೆ ಇನ್ನೂ ಅದ್ಭುತವಾಗಿರುತ್ತೆ.

ಕಥೆ ಶುರು..
ನೀವು ನಿಮ್ಮ ಕುಟುಂಬವರ ಜತೆ ಕೂತ್ಕೊಂಡು ಬೆಳಗ್ಗಿನ ಉಪಾಹಾರ ಮಾಡ್ತಾ ಇದ್ದೀರಿ. ನಿಮ್ಮ ಮಗಳು ಏನೋ ಕಿತಾಪತಿ ಮಾಡಿ ಕಾಫಿ ಕಪ್ಪನ್ನು ನಿಮ್ಮ ಬ್ಯುಸಿನೆಸ್ ಶರ್ಟ್ ಮೇಲೆ ಉರುಳಿಸಿ ಬಿಡ್ತಾಳೆ. ನೀವು ಏನು ಮಾಡ್ತೀರಾ? ಸಿಕ್ಕಾಪಟ್ಟೆ ಸಿಟ್ಟಾಗ್ತೀರಿ.. ಮಗುವನ್ನು ಬಾಯಿಗೆ ಬಂದಂತೆ ಬೈತೀರಿ. ಅವಳು ಜೋರಾಗಿ ಅಳಲು ಶುರು ಮಾಡುತ್ತಾಳೆ. ಅವಳ ಬಳಿಕ ನಿಮ್ಮ ಅರ್ಚನೆ ಹೆಂಡ್ತಿಗೆ. ಟೇಬಲ್‌ನ ಅಂಚಿನಲ್ಲಿ ಯಾಕೆ ಕಾಫಿ ಕಪ್ ಇಟ್ಟಿದ್ದು ಅಂತ ಬೈತೀರಿ. ಅವಳು ಬಿಡ್ತಾಳಾ? ಮಾತಿಗೆ ಮಾತು ಬೆಳೆಯುತ್ತೆ.

ನೀವು ಕೋಣೆಗೆ ಹೋಗಿ ಶರ್ಟ್ ಬದಲಿಸಿಕೊಂಡು ಬರುತ್ತೀರಿ.. ನಿಮ್ಮ ಮಗಳು ಇನ್ನೂ ಅಳುತ್ತಲೇ ಇದ್ದಾಳೆ.. ಬ್ರೇಕ್ ಫಾಸ್ಟ್ ಆಗಿಲ್ಲ. ಅವಳು ಶಾಲೆಗೆ ರೆಡಿ ಆಗಿಲ್ಲ.

ಅಯ್ಯೋ ಸ್ಕೂಲ್ ಬಸ್ ಆಗಲೇ ಹೋಗಿ ಆಗಿದೆ. ನಿಮ್ಮ ಹೆಂಡ್ತಿಗೂ ಕೆಲಸಕ್ಕೆ ಹೋಗಬೇಕು. ನೀವು ಕಾರು ಹಿಡ್ಕೊಂಡು ಮಗಳನ್ನು ಶಾಲೆಗೆ ಬಿಟ್ಟು ಹೋಗಬೇಕು. ಆಗಲೇ ಟೈಮಾಗಿಬಿಟ್ಟಿದೆ. ಟೈಮಿಲ್ಲ ಅಂತ ಗಾಡಿಯನ್ನು ಫಾಸ್ಟಾಗಿ ಓಡಿಸ್ತೀರಿ.. ಆಗ ಪೊಲೀಸರು ನಿಲ್ಲಿಸಿ ದಂಡ ಕಟ್ಟಲು ಸೂಚಿಸ್ತಾರೆ.

ಶಾಲೆ ಆವರಣಕ್ಕೆ ಬಂದಾಗ ಮಗಳು ಬಾಯ್ ಕೂಡಾ ಹೇಳದೆ ಇಳಿದು ಓಡುತ್ತಾಳೆ.. ತಿರುಗಿಯೂ ನೋಡದೆ. ನೀವು ಆಫೀಸಿಗೆ 20 ನಿಮಿಷ ತಡವಾಗಿ ಬಂದಿದ್ದೀರಿ.. ಎಲ್ಲರೂ ಅವರವರ ಸೀಟ್‌ನಲ್ಲಿ ಕೂತು ನಿಮ್ಮನ್ನೇ ನೋಡುತ್ತಿದ್ದಾರೆ.. ಅಯ್ಯೋ.. ನೀವು ಸೂಟ್‌ಕೇಸೇ ಮರೆತು ಬಂದಿದ್ದೀರಿ.. ಅವಸರದಲ್ಲಿ.

ಒಂದಲ್ಲ ಒಂದು ಕಿರಿಕಿರಿಗಳು ಒಂದು ಕ್ಷಣವೂ ನೆಮ್ಮದಿ ಇಲ್ಲದಂತೆ ಮಾಡಿಬಿಡುತ್ತವೆ..

ಸಂಜೆ ಮನೆಗೆ ಬಂದಾಗ ಹೆಂಡ್ತಿ ಮತ್ತು ಮಗಳು ಎಂದಿನಂತೆ ಸ್ವಾಗತಿಸುವುದೂ ಇಲ್ಲ. ಕಾಫಿಯನ್ನು ಕುಕ್ಕಿ ಹೋದ ಸದ್ದು.. ಅವರ ಮನಸ್ಸಿನಲ್ಲೂ ನೋವು.

ಅಷ್ಟಕ್ಕೂ ಈ ಕಿರಿಕಿರಿಗೆ ಏನು ಕಾರಣ?
* ಕಾಫಿ ಕಾರಣವಾ?
* ನಿಮ್ಮ ಮಗಳು ಕಾರಣವಾ?
* ಪೊಲೀಸ್ ದಂಡ ಹಾಕಿದ್ದು ಕಾರಣವಾ?
* ನೀವು ಕಾರಣವಾ?

ಜಸ್ಟ್ ಯೋಚನೆ ಮಾಡಿ..
ಉತ್ತರ: 4.. ನೀವು!

ಯೆಸ್.. ನೀವು ಕಾಫಿ ವಿಷಯದಲ್ಲಿ ಸಣ್ಣಮಟ್ಟದ ತಾಳ್ಮೆಯನ್ನು ವಹಿಸಿದ್ದರೆ ಇಡೀ ದಿನ ಹೀಗಾಗುತ್ತಿರಲಿಲ್ಲ. ಕೇವಲ ಐದು ಸೆಕೆಂಡ್‌ಗಳ ನಿಮ್ಮ ವರ್ತನೆ ಇದೆಲ್ಲದಕ್ಕೂ ಕಾರಣವಾಯಿತು ಎಂದರೆ ನಂಬುತ್ತೀರಾ?

ಘಟನೆಗಳನ್ನು ಮತ್ತೆ ರಿಕಾಲ್ ಮಾಡಿಕೊಳ್ಳಿ.. ಮಗಳ ಕಿತಾಪತಿಯಿಂದ ಕಾಫಿ ಶರಟಿನ ಮೇಲೆ ಚೆಲ್ಲಿತು. ನಿಮ್ಮ ಮಗಳು ಅಳೋದಕ್ಕೆ ಮುಂದಾದಳು. ನೀವು ಮೆತ್ತಗೆ ಹೇಳುತ್ತೀರಿ: ಪರವಾಗಿಲ್ಲ ಮಗಳೇ.. ನೆಕ್ಸ್ಟ್ ಟೈಮ್ ಜಾಗತೆ ಮಾಡ್ಬೇಕು. ಅವಸರ ಮಾಡ್ಬಾರ್ದು'.

ನೀವು ಕೂಡಲೇ ಎದ್ದು ಕೋಣೆಗೆ ಹೋಗಿ ಡ್ರೆಸ್ ಚೇಂಜ್ ಮಾಡಿ, ಸೂಟ್ ಕೇಸ್ ಹಿಡಿದುಕೊಂಡು ಬಂದಿದ್ದರೆ ಅಷ್ಟು ಹೊತ್ತಿಗೆ ಮಗಳು ಬಸ್ ಹತ್ತೋ ಹೊತ್ತಲ್ಲಿ ಬೀಸೋ ಕೈಗಳಿಗೆ ಟಾಟಾ ಹೇಳಬಹುದಿತ್ತು.

ಹೆಂಡತಿಗೊಂದು ಹೂಮುತ್ತು ಕೊಟ್ಟು ಮನೆ ಬಿಡಬಹುದಿತ್ತು. ಟ್ರಾಫಿಕ್ ಪೊಲೀಸ್ ನಿಲ್ಲಿಸ್ತಾನೇ ಇರಲಿಲ್ಲ. ಹತ್ತು ನಿಮಿಷ ಮೊದಲೇ ಆಫೀಸಿಗೆ ಬಂದು ಸಹೋದ್ಯೋಗಿಗಳಿಗೊಂದು ಚಿಯರ್‌ಫುಲ್ ಹಾಯ್ ಹೇಳಬಹುದಿತ್ತು. ಮನೆಗೆ ಹೋದ ಕೂಡಲೇ ಹೆಂಡತಿಯ ಪ್ರೀತಿಯ ಕಾಫಿ ಮತ್ತು ಮಗಳ ತಬ್ಬುಗೆ ನಿಮಗೆ ಕಾಯುತ್ತಿರುತ್ತಿತ್ತು.

ಒಂದು ಕೆಟ್ಟ ಮತ್ತು ಒಳ್ಳೆಯ ದಿನದ ನಡುವಿನ ಡಿಫರೆನ್ಸ್ ಆ 5 ಸೆಕೆಂಡ್‌ಗಳಲ್ಲಿತ್ತು. ನಿಮ್ಮ ಆರಂಭಿಕ ಪ್ರತಿಕ್ರಿಯೆಯಲ್ಲಿತ್ತು... ಅಲ್ಲವೇ?

ಇಂತಹುದೊಂದು ಸೂಪರ್ಬ್ ಸ್ಟೋರಿಯನ್ನು ಹೇಳಿದ್ದು ಸ್ಟೀಫನ್ ಕಾವ್. ಜಗತ್ಪ್ರಸಿದ್ಧ ವ್ಯಕ್ತಿತ್ವ ವಿಕಸನ ತಜ್ಞ. ಕೆಲವು ದಿನಗಳ ಹಿಂದಷ್ಟೇ ತೀರಿ ಹೋದ ಆ ಮಹಾನುಭಾವ ಈ ನಿಜ ಕಥೆಗೆ ಕೊಟ್ಟ ಶೀರ್ಷಿಕೆ: 10/90.

ಇದರರ್ಥ ನಿಜವಾಗಿ ಘಟನೆ ನಡೆಯೋದು 10 ಶೇಕಡಾ ಮಾತ್ರ. ಅದಕ್ಕೆ ನಾವು ಕೊಡುವ ಪ್ರತಿಕ್ರಿಯೆ ಮುಂದಿನ ಶೇ. 90 ಭಾಗವನ್ನು ನಿರ್ಧರಿಸುತ್ತದೆ ಅನ್ನೋದು ಅವರ ಮಾತು.

ಟ್ರಾಫಿಕ್‌ನಲ್ಲಿ ಸಿಕ್ಕಿಹಾಕಿಕೊಂಡರೆ ವಿಪರೀತ ಟೆನ್ಶನ್ ಮಾಡ್ತೇವೆ.. ಯಾರನ್ನೋ ಬೈತೇವೆ, ಬಿಪಿ ರೈಸ್ ಮಾಡಿಕೊಳ್ತೇವೆ, ಫಾಸ್ಟಾಗಿ ಓಡಿಸ್ತೇವೆ.. ನೆನಪಿಡಿ, ಟ್ರಾಫಿಕ್‌ನಲ್ಲಿ ಬೀಳೋ ಕೆಂಪು ಲೈಟನ್ನು ನಿಮಗೆ ಕಂಟ್ರೋಲ್ ಮಾಡೋಕೆ ಆಗೊಲ್ಲ.. ಆದರೆ, ಅದಕ್ಕೆ ತೋರುವ ಪ್ರತಿಕ್ರಿಯೆಯನ್ನು ಕಂಟ್ರೋಲ್ ಮಾಡ್ಕೋಬಹುದು. ಆಫೀಸಿಗೆ ಇವತ್ತೊಂದು ದಿನ 5 ನಿಮಿಷ ತಡವಾಗಿ ಹೋದರೆ ಆಕಾಶವೇನೂ ಉರುಳಿ ಬೀಳೊಲ್ಲ ಅನ್ನುವ ತಾಳ್ಮೆಯನ್ನು, ಕೂಲ್ ನೆಸ್‌ನ್ನು ಕಾಪಾಡಿಕೊಳ್ಳೋದು ನಮ್ಮ ಕೈಯಲ್ಲೇ ಇದೆ.

ಆಫೀಸಿನಲ್ಲಿ ಯಾರೋ ಏನೋ ಅಂದರು ಅಂತ ಪ್ರತಿಕ್ರಿಯೆ ನೀಡಲು ಹೋಗಿ ನಾವೇ ಸಣ್ಣೋರಾಗ್ತೇವೆ, ದೊಡ್ಡ ಸದ್ದು ಮಾಡಿ ಗಲಾಟೆಕೋರರು ಎನಿಸುತ್ತೇವೆ. ಬಾಸ್‌ಗೆ ಎದುರು ಮಾತನಾಡಲು ಹೋಗಿ ಕೆಲವೊಮ್ಮೆ ಕೆಲಸವನ್ನೇ ಕಳೆದುಕೊಳ್ಳಬೇಕಾಗಿ ಬರುತ್ತದೆ.

ಅದರ ಬದಲು, ಯಾರು ಏನೇ ಹೇಳಿದರೂ ಅದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳದೆ ನಿಮ್ಮ ಪಾಡಿಗೆ ನೀವಿದ್ದರೆ, ಕನಿಷ್ಠ ನಿಮ್ಮ ನೆಮ್ಮದಿಯನ್ನಾದರೂ ನೀವು ಉಳಿಸಿಕೊಳ್ಳಬಹುದು ಅಂತಾರೆ ಕಾವ್. ಜಸ್ಟ್ ಒಮ್ಮೆ ಟ್ರೈ ಮಾಡಿ ನೋಡಿ.
 
ಕೃಪೆ : ವಿಜಯ ಕರ್ನಾಟಕ

ಮನಸ್ಸಿನ ಗಾಯ ದೇಹಕ್ಕೆ ಅಪಾಯ

ಮನಸ್ಸಿನ ಗಾಯ ದೇಹಕ್ಕೆ ಅಪಾಯ
                      ಡಾ. ಕೆ. ರಾಮಚಂದ್ರ

ಒತ್ತಡದ ಬದುಕು ಮಾನಸಿಕ ಆರೋಗ್ಯದ ಮೇಲೆ ಮಾರಕ ಪರಿಣಾಮ ಬೀರುತ್ತಿದೆ. ಹಲವು ಮಾನಸಿಕ ಸಮಸ್ಯೆಗಳಿಗೂ ಇದೇ ಒತ್ತಡ ದಾರಿ ಮಾಡುತ್ತದೆ.


ಎಷ್ಟೋ ಬಾರಿ ಮಾನಸಿಕ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸುವುದೇ ಇಲ್ಲ. ಆದರೆ ಇದೇ ದೀರ್ಘಕಾಲದ ರೋಗವಾಗಿ ಕಾಡಬಹುದು. ಮಾನಸಿಕ ಒತ್ತಡದಿಂದ ದೈಹಿಕ ಬದಲಾವಣೆಗಳು ಕೂಡ ಕಾಣಿಸುತ್ತವೆ.


ದೇಹದ ಮೇಲೆ ಪರಿಣಾಮ

ಮಾನಸಿಕ ಒತ್ತಡದಿಂದ ಉಂಟಾಗುವ ಸಮಸ್ಯೆಗಳೆಂದರೆ ಕೂದಲು ಉದುರುವಿಕೆ, ಬಾಯಿ ಒಣಗುವಿಕೆ, ಪದೇ ಪದೇ ಬಾಯಿ ಹುಣ್ಣು, ಕಾರಣವಿಲ್ಲದೆ ಕೆರಳುವಿಕೆ, ಹೆಚ್ಚು ಹೃದಯಬಡಿತ, ರಕ್ತದೊತ್ತಡ ಹೆಚ್ಚುವಿಕೆ, ಅಂಗೈ ಮತ್ತು ಮುಖದಲ್ಲಿ ಬೆವರುವಿಕೆ, ಮಾಂಸಖಂಡಗಳ ಸೆಳೆತ, ಲೈಂಗಿಕ ಆಸಕ್ತಿ ಕುಂದುವಿಕೆ, ಉಸಿರಾಟದ ತೊಂದರೆ, ಮೈಕೈಯಲ್ಲಿ ಹೆಚ್ಚು ನೋವು, ಮಾಂಸಖಂಡಗಳ ಬಿಗುವು, ಜೀರ್ಣಶಕ್ತಿ ಕುಂದುವಿಕೆ, ಹಸಿವಿಲ್ಲದಿರುವುದು, ಕರಳು ಮರುವರ್ತಿಕ, ಜಠರದಲ್ಲಿ ಉರಿ, ಹೆಚ್ಚು ಬೆವರುವಿಕೆ ಉಂಟಾದಾಗ ಎಚ್ಚರ ವಹಿಸುವುದು ಹಾಗೂ ಪರಿಹಾರ ಕಂಡುಕೊಳ್ಳುವುದು ಉತ್ತಮ.

ಪರಿಹಾರ

ದಿನನಿತ್ಯ ಜೀವನವನ್ನು ಯೋಜನಾಬದ್ಧವಾಗಿ ರೂಪಿಸಲು ಪ್ರಯತ್ನಿಸಿ.ಕುಟುಂಬದ ಸದಸ್ಯರ ಜತೆ ನಿಮ್ಮ ಭಾವನೆಗಳನ್ನು ಹಂಚಿಕೊಳ್ಳಿ. ಉತ್ತಮ ಬಾಂಧವ್ಯ ಬೆಳೆಸಲು ಪ್ರಯತ್ನಿಸಿ. ನಿಮ್ಮ ಕೆಲಸದಲ್ಲಿ ಶ್ರದ್ಧೆ ಮತ್ತು ಪ್ರಾಮಾಣಿಕತನವಿರಲಿ. ಮೂಢನಂಬಿಕೆ ಇದ್ದರೆ ಬಿಡಿ, ಭಗವಂತನಲ್ಲಿ ನಂಬಿಕೆ ಇಡಿ. ಬಾಬಾ, ಯೋಗಿಗಳು ಹಾಗೂ ಸ್ವಾಮೀಜಿಗಳ ಸಹವಾಸದಿಂದ ದೂರವಿರಿ.ದಿನನಿತ್ಯ ಯೋಗ, ಧ್ಯಾನ, ಪ್ರಾಣಾಯಾಮ, ದೇವಸ್ಥಾನಗಳಿಗೆ ಭೇಟಿ, ಉತ್ತಮರ ಸಹವಾಸ, ಉತ್ತಮ ಸಂಗೀತ, ಕುಟುಂಬ ಸದಸ್ಯರ ಜತೆ ಪ್ರವಾಸ, ವಿಹಾರ, ಉತ್ತಮ ಸ್ನೇಹಿತರ ಜತೆ ಹರಟೆ, ಹಾಸ್ಯ ಇವುಗಳನ್ನು ರೂಢಿಸಿಕೊಳ್ಳಲು ಪ್ರಯತ್ನಿಸಿ. ಕ್ರಮಬದ್ಧ ಆಹಾರ ಪದ್ಧತಿ, ವ್ಯಾಯಾಮ ಅಳವಡಿಸಿಕೊಳ್ಳಿ.ಅತಿ ಶೀಘ್ರ ಶ್ರೀಮಂತನಾಗಬೇಕೆಂಬ ಹುಚ್ಚು ಹಂಬಲ ಹಾಗೂ ಅಡ್ಡದಾರಿ ಹಿಡಿಯಲು ಪ್ರಯತ್ನಿಸಬೇಡಿ. ನಿಮ್ಮ ಮೇಲೆ ನಂಬಿಕೆ ಹಾಗೂ ಆತ್ಮವಿಶ್ವಾಸ ಬೆಳೆಸಿಕೊಳ್ಳಿ. ಕ್ರಮಬದ್ಧ ಜೀವನದ ಅಳವಡಿಕೆ ಹಾಗೂ ನಿಮ್ಮ ನಂಬಿಕಸ್ಥ ವೈದ್ಯರ ಸಲಹೆ ಪಡೆದು ದೀರ್ಘಕಾಲ ಉತ್ತಮ ಆರೋಗ್ಯದಿಂದ ಬಾಳಲು ಪ್ರಯತ್ನಿಸಿ.
 
ಕೃಪೆ : ವಿಜಯ ಕರ್ನಾಟಕ

Sunday, July 8, 2012

ಬಿಯರ್ ಕುಡಿದವರ ಎಲುಬು ಬಲಿಷ್ಠ !

Beer Helps To Strengthen Bones
ಮದ್ಯ ಆರೋಗ್ಯವನ್ನು ಹಾಳು ಮಾಡುವುದಾದರೂ, ಕೆಲವೊಂದು ಮದ್ಯ ಆರೋಗ್ಯವನ್ನು ಹೆಚ್ಚಿಸಲು ಸಹಕಾರಿಯಾಗಿದೆ. ಅದರಲ್ಲೂ ವೈನ್ ಕುಡಿದರೆ ಹೃದಯಕ್ಕೆ ತುಂಬಾ ಒಳ್ಳೆಯದೆಂದು ವೈಜ್ಞಾನಿಕವಾಗಿ ಸಾಬೀತಾಗಿದೆ. ಬೀರ್ ಅನ್ನು ಮಿತಿಮೀರಿ ಕುಡಿದರೆ ಹೊಟ್ಟೆ ಬರುತ್ತದೆ, ಆದರೆ ಅದೇ ಬೀರನ್ನು ಮಿತಿಯಲ್ಲಿ ಕುಡಿದರೆ ದೇಹ ಫಿಟ್ ನೆಸ್ ಸಿಗುತ್ತದೆ, ಮೂಳೆಗಳು ಬಲಿಷ್ಠವಾಗುತ್ತದೆ ಎಂದು ಬೀರ್ ನ ಪ್ರಯೋಜನಗಳ ಬಗ್ಗೆ ಇತ್ತೀಚಿಗೆ ನಡೆಸಿದ ಸಂಶೋಧನೆಯಲ್ಲಿ ಹೇಳಲಾಗಿದೆ.
ಮಿತಿಮೀರಿ ಬೀರ್ ಕುಡಿದರೆ ದೇಹದ ಮೇಲೆ ನಮ್ಮ ನಿಯಂತ್ರಣ ತಪ್ಪಿ ತೂರಾಡುವುದು, ವಾಂತಿ ಮಾಡುವುದು ಸಹಜ. ಅದೇ ಬೀರ್ ಅನ್ನು ಸ್ವಲ್ಪ ಪ್ರಮಾಣದಲ್ಲಿ ಕುಡಿದರೆ ಮೂಳೆ ಬಲವಾಗುತ್ತದೆ! ಬೀರ್ ನಲ್ಲಿ ಸಿಲಿಕಾನ್ ಪೋಷಕಾಂಶವಿದೆ. ಮೂಳೆಗಳನ್ನು ಬಲಪಡಿಸುವಲ್ಲಿ ಸಿಲಿಕಾನ್ ಅವಶ್ಯಕವಾದ ಪೋಷಕಾಂಶವಾಗಿದೆ. ಆದ್ದರಿಂದ ಬೀರ್ ಕುಡಿದರೆ ಮೂಳೆಗಳು ಬಲವಾಗುತ್ತದೆ.
ಆದರೆ ಎಷ್ಟು ಪ್ರಮಾಣದ ಸಿಲಿಕಾನ್ ಅಂಶ ದೇಹಕ್ಕೆ ಒಳ್ಳೆಯದು ಎಂಬ ಅಂಶದ ಬಗ್ಗೆ ನಿಖರ ಮಾಹಿತಿ ಇಲ್ಲವಾಗಿದ್ದು , ಇದರ ಬಗ್ಗೆ ವಿಜ್ಞಾನಿಗಳು ಸಂಶೋಧನೆಯನ್ನು ನಡೆಸುತ್ತಿದ್ದಾರೆ. ಬೀರ್‌ನಲ್ಲಿ ಎಷ್ಟರ ಮಟ್ಟಿಗೆ ಸಿಲಿಕಾನ್ ಇದೆ ಎಂಬ ಅಂಶ ಅದನ್ನು ತಯಾರಿಸಲು ಬಳಸುವ ವಸ್ತುಗಳನ್ನು ಆಧರಿಸಿದೆ. ಬೀರ್‌ಗಳ ತಯಾರಿಯಲ್ಲಿ ದವಸ ಧನ್ಯಗಳನ್ನು ಉಪಯೋಗಿಸಲಾಗುವುದು. ಈ ದವಸ ಧಾನ್ಯಗಳಲ್ಲಿ ಸಿಲಿಕಾನ್ ಅಂಶವಿರುವುದರಿಂದ ಇದರಿಂದ ತಯಾರಿಸುವ ಬೀರ್ ಆರೋಗ್ಯಕರವಾಗಿದೆ. ಅಲ್ಲದೆ ಬೀರ್ ಕುಡಿಯುವುದರಿಂದ ಶೇ.31%ರಷ್ಟು ಹೃದಾಯಘಾತವಾಗುವುದನ್ನು ತಪ್ಪಿಸಬಹುದು ಎಂಬ ಅಂಶ ಕೂಡ ದೃಢಪಟ್ಟಿದೆ.
ಬೀರ್ ಕುಡಿದರೆ ಮೂಳೆ ಬಲವಾಗುತ್ತದೆ, ಆದ್ದರಿಂದ ಒಂದು ಪೆಗ್ ಜಾಸ್ತಿಯೇ ಹಾಕುತ್ತೇನೆ ಎಂದು ಯೋಚಿಸುವ ಮುನ್ನ ಒಂದು ವಿಷಯ ತಿಳಿದುಕೊಳ್ಳಿ,  ಬೀರ್ ಅನ್ನು ಮಿತಿಯಲ್ಲಿ ಕುಡಿದರೆ ಮಾತ್ರ ಆರೋಗ್ಯವಾಗಿರಬಹುದು. ಅದೇ ಬಾಟಲಿಗಟ್ಟಲೆ ಬೀರ್ ಕುಡಿದರೆ,  ಇದೇ ಬೀರ್  ಆರೋಗ್ಯದ ಮೇಲೆ ತುಂಬಾ ಕೆಟ್ಟ ಪರಿಣಾಮ ಬೀರುವುದು.
ಒಂದು ವೇಳೆ ನಿಮಗೆ ಬೀರ್ ಕುಡಿಯುವ ಅಭ್ಯಾಸವಿದ್ದರೆ ಈ ವೀಕೆಂಡ್ ಪಾರ್ಟಿಯಲ್ಲಿ ಬೀರ್ ಕೈಯಲ್ಲಿ ಹಿಡಿದಾಗ ಇದರಿಂದ ಉಪಯೋಗ ಪಡೆಯಬೇಕೊ, ಬೇಡ್ವಾ? ಅನ್ನುವುದನ್ನು ನೀವೆ ತೀರ್ಮಾನಿಸಿ.

ಕೃಪೆ : ಒನ್ ಇಂಡಿಯಾ

Wednesday, July 4, 2012

ಮೊದಲ ರಾಷ್ಟ್ರಪತಿಯ ಬ್ಯಾಂಕ್ ಖಾತೆ ಇನ್ನೂ ಚಾಲ್ತಿಯಲ್ಲಿದೆ !

 1st President Rajendra Prasad Bank Account Still Active
ಪಟ್ನಾ, ಜುಲೈ 4: ಸ್ವತಂತ್ರ ಭಾರತದ ಮೊಟ್ಟಮೊದಲ ಪ್ರಜೆಯ ಬ್ಯಾಂಕ್ ಖಾತೆ ಇನ್ನೂ ಚಾಲ್ತಿಯಲ್ಲಿದೆ! ಯಾವುದಪ್ಪಾ ಆ ಬ್ಯಾಂಕು ಇನ್ನೂ ಅಂಥಾ ಖಾತೆಯನ್ನು ಉಳಿಸಿಕೊಂಡಿರುವುದು ಎಂದು ಆಶ್ಚರ್ಯಪಟ್ಟಿರಾ?
ಅದುವೇ ಇಲ್ಲಿನ ಪಂಜಾಬ್ ನ್ಯಾಷನಲ್ ಬ್ಯಾಂಕ್. ಇನ್ನು ರಾಷ್ಟ್ರದ ಮೊಟ್ಟಮೊದಲ ಪ್ರಜೆ ದಿವಂಗತ ಬಾಬು ರಾಜೇಂದ್ರ ಪ್ರಸಾದ್. ಅದಿರಲಿ ಈ ವಿಷ್ಯಾ ಈಗೇಕೆ ಎಂದರೆ 14ನೇ ರಾಷ್ಟ್ರಪತಿ ಪದಗ್ರಹಣದ ಕಾಲ ಸನ್ನಿಹಿತವಾಗಿದೆ. ಆದ್ದರಿಂದ ಒಂದಷ್ಟು ಹಳೆಯ ಮೆಲುಕುಗಳು...
ಸುಮಾರು 50 ವರ್ಷಗಳ ನಂತರವೂ ಸಾಕ್ಷಾತ್ ರಾಷ್ಟ್ರಪತಿಯೊಬ್ಬರ ಉಳಿತಾಯ ಖಾತೆಯನ್ನು ಉಳಿಸಿಕೊಂಡಿರುವ ಹೆಮ್ಮೆ ಬಿಹಾರದ ಪಟ್ನಾದಲ್ಲಿ Exhibition Road ನಲ್ಲಿರುವ PNB ಶಾಖೆಯದ್ದಾಗಿದೆ. ಬಾಬು ರಾಜೇಂದ್ರ ಪ್ರಸಾದ್ ಅವರು ತಾವು ಅಸುನೀಗುವುದಕ್ಕೆ ಕೆಲವೇ ತಿಂಗಳುಗಳ ಮುನ್ನ, 1962ರ ಅಕ್ಟೋಬರ್ 24ರಂದು ಈ ಖಾತೆಯನ್ನು ತೆರೆದಿದ್ದರು.
'ನಮ್ಮ ಬ್ಯಾಂಕು ಇಂದಿಗೂ ರಾಜೇಂದ್ರ ಪ್ರಸಾದ್ ಅವರ ಖಾತೆಗೆ prime customer status ಸ್ಥಾನಮಾನ ನೀಡಿದೆ. ಅದು ನಮ್ಮ ಹೆಮ್ಮೆಯೂ ಹೌದು' ಎನ್ನುತ್ತಾರೆ ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಎಸ್ಎಲ್ ಗುಪ್ತಾ ಅವರು.
ಶಾಖೆಯ ನೋಟಿಸ್ ಬೋರ್ಡಿನಲ್ಲಿ ಮೊದಲ ರಾಷ್ಟ್ರಪತಿ ರಾಜೇಂದ್ರ ಪ್ರಸಾದ್ ಅವರ ಭಾವಚಿತ್ರವನ್ನು ಹಾಕಿ ಅದರ ಕೆಳಗೆ ಅವರ ಬ್ಯಾಂಕ್ ಖಾತೆಯ ಸಂಖ್ಯೆಯನ್ನು 0380000100030687 ನಮೂದಿಸಿದೆ. ಅಂದಹಾಗೆ ಪ್ರತಿ ಆರು ತಿಂಗಳಿಗೊಮ್ಮೆ ಈ ಖಾತೆಗೆ ಬಡ್ಡಿ ಹಣ ಜಮೆಯಾಗುತ್ತಿರುತ್ತದೆ. ಆದರೆ ಇದುವರೆಗೂ ಯಾರೂ ಈ ಹಣ ತಮಗೆ ಸೇರಬೇಕು ಎಂದು ಕೇಳಿಕೊಂಡು ಬಂದಿಲ್ಲ.

ಸಹಜ ಕುತೂಹಲದಿಂದ ಅವರ ಖಾತೆಯಲ್ಲಿರುವ ಮೊತ್ತ ಎಷ್ಟು ಎಂದು ನೋಡಿದಾಗ ಆ
ಮೊತ್ತ 1,813 ರುಪಾಯಿ. ಎಂಬುದು ಬೆಳಕಿಗೆ ಬರುತ್ತದೆ. ಬಾಬು ರಾಜೇಂದ್ರ ಪ್ರಸಾದ್ ಅವರು ಬಿಹಾರದ ಸಿವಾನ್ ಜಿಲ್ಲೆಯ ಜೆರಾಡಿ ಗ್ರಾಮದಲ್ಲಿ 1884ರ ಡಿಸೆಂಬರ್ 3ರಂದು ಜನಿಸಿದ್ದರು. ಪಟ್ನಾದಲ್ಲಿ 1963ರ ಫೆಬ್ರವರಿ 28ರಂದು ಮೃತಪಟ್ಟಿದ್ದರು. ಅವರು 1952ರಿಂದ 1962ರ ವರೆಗೆ ಭಾರತದ ಮೊದಲ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದ್ದರು.

by:
ಕೃಪೆ : ಒನ್ ಇಂಡಿಯಾ
  

Friday, June 8, 2012

ಮೂಲವ್ಯಾಧಿ ನಿವಾರಣೆಗೆ 20 ರೀತಿಯ ಮನೆಮದ್ದು


ಮೂಲವ್ಯಾಧಿ ಬಂದರೆ ಆಹಾರಕ್ರಮದಿಂದ ಗುಣಪಡಿಸಬಹುದು. ಅದರಲ್ಲೂ ಈ ಕೆಳಗಿನ ಆಹಾರಗಳನ್ನು ಸೇವಿಸಿದರೆ ಮೂಲವ್ಯಾಧಿ ಗುಣಮುಖವಾಗಲು ಸಹಕಾರಿಯಾಗಿದೆ.
20 home remedies for piles

1. ಲೋಳೆರಸದ ತಿರುಳನ್ನು ಒಂದು ಚಮಚದಷ್ಟು ದಿನಕ್ಕೆ ಮೂರು ಬಾರಿ ಸೇವಿಸಬೇಕು. ಜೇನು ಮತ್ತು ಅದರ ಅರ್ಧದಷ್ಟು ಹರಳೆಣ್ಣೆ ಸೇರಿಸಿ ಸೇವಿಸಿದರೆ ಮೂಲವ್ಯಾಧಿ ಉಪಶಮನವಾಗುವುದು. ನಂತರ ಮಲುಗುವ ಮುನ್ನ ಒಂದು ಚಮಚ ಏಲಕ್ಕಿ ಮತ್ತು ಬಾಳೆ ಹಣ್ಣು ತಿನ್ನಬೇಕು. ಲೋಳೆಸರದ ತಿರುಳಿಗೆ ಹರಳೆಣ್ಣೆ ಬೆರೆಸಿ ರಾತ್ರಿ ಹೊತ್ತು ಮತ್ತು ಬೆಳಿಗ್ಗೆ ಮಲವಿಸರ್ಜನೆಯ ಮುಂಚೆ ಮತ್ತು ನಂತರದ ಸಮಯದಲ್ಲಿ ಹಚ್ಚಿದರೆ ಮಲವಿಸರ್ಜನೆಗೆ ಕಷ್ಟವಾಗುವುದಿಲ್ಲ. ಇದರಿಂದ ನೋವು ಉಂಟಾಗುವುದಿಲ್ಲ.
2. ಹಾಲಿನಲ್ಲಿ ಒಣ ಖರ್ಜೂರ ಅಥವಾ ಉತ್ತುತ್ತೆಯನ್ನು ರಾತ್ರಿಯಲ್ಲಿ ನೆನೆಯಿಟ್ಟು ಬೆಳಗ್ಗೆ ತಿನ್ನಬೇಕು.
3. ಒಂದು ಈರುಳ್ಳಿಯನ್ನು ಪೇಸ್ಟ್ ರೀತಿ ಮಾಡಿ ಅದನ್ನು ಸಿಹಿ ಮಜ್ಜಿಗೆಯಲ್ಲಿ ಬೆರೆಸಿ ಊಟದ ನಂತರ ಕುಡಿಯಬೇಕು.
4. ಮೂಲಂಗಿ ಸೊಪ್ಪಿನ ರಸಕ್ಕೆ ಚಿಟಿಕೆಯಷ್ಟು ಸೈಂಧವ ಲವಣ ಸೇರಿಸಿ ಪ್ರತಿದಿನ ಎರಡು ಬಾರಿಯಂತೆ ಎರಡರಿಂದ ಮೂರು ವಾರ ಕುಡಿದರೆ ಮೂಲವ್ಯಾಧಿ ಗುಣವಾಗುವುದು. ಮೂಲಂಗಿ ರಸವನ್ನು ಮತ್ತು ಮಜ್ಜಿಗೆಯಲ್ಲಿ ಬೆರೆಸಿ ಕುಡಿಯುವುದು ಕೂಡ ಒಳ್ಳೆಯದು.
5. ಸುವರ್ಣ ಗೆಡ್ಡೆಯನ್ನು ಸಿಪ್ಪೆ ತೆಗೆದು ಒಣಗಿಸಿ ಕುಟ್ಟಿ ಪುಡಿ ಮಾಡಿ, ಆ ಪುಡಿಯನ್ನು ಪ್ರತಿ ದಿನ ಒಂದು ಚಮಚದಂತೆ ಜೇನುತುಪ್ಪಬೆರೆಸಿ ತಿನ್ನುವುದು ಒಳ್ಳೆಯದು.
7. ಹುಣಸೆ ಹಣ್ಣಿನ ಮರದ ಚಿಗುರು ಚಿಗುರು ಮತ್ತು ಎಳೆ ಮಾವಿನಕಾಯಿಯನ್ನು ಬೇಯಿಸಿಕೊಂಡು ತಿಂದರೆ ಮೂಲವ್ಯಾಧಿ ಗುಣವಾಗುವುದು.
8. ತುಳಸಿ ಬೀಜದ ಪುಡಿ 10 ಗ್ರಾಂ ಮತ್ತು ಒಂದು ಚಮಚ ಬೆಣ್ಣೆ ಬೆರೆಸಿ ಅದಕ್ಕೆ ಸ್ವಲ್ಪ ಬೆಲ್ಲ ಬೆರೆಸಿ ದಿನಕ್ಕೆರಡು ಬಾರಿ ಸೇವಿಸಬೇಕು.

9. ಈರುಳ್ಳಿಯನ್ನು ಚಿಕ್ಕದಾಗಿ ಕತ್ತರಿಸಿ ಅದನ್ನು ತುಪ್ಪದಲ್ಲಿ ಹುರಿದು ಅನ್ನದೊಂದಿಗೆ ಸೇವಿಸಬೇಕು.
10. ಒಂದು ಚಮಚ ನೆಲ್ಲಿಕಾಯಿ ಪುಡಿಯನ್ನು ಮೊಸರಿನಲ್ಲಿ ಬೆರೆಸಿ ಸೇವಿಸಬೇಕು.
11. ಸೌತೆಕಾಯಿ ರಸವನ್ನು ಮಜ್ಜಿಗೆಯಲ್ಲಿ ಬೆರೆಸಿ ಕುಡಿಯಬೇಕು.
12. 4 ಚಮಚ ಕೊತ್ತಂಬರಿಯನ್ನು 4 ಲೋಟ ನೀರು ಹಾಕಿ ಕುದಿಸಿ ಹಾಲು ಮತ್ತು ಸಕ್ಕರೆ ಹಾಕಿ ಟೀ ಬದಲು ಕುಡಿಯುವುದು ಒಳ್ಳೆಯದು. ಆಗ ತಾನೇ ಕರೆದ ಹಾಲಿಗೆ ಸ್ವಲ್ಪ ನಿಂಬೆ ಹಣ್ಣಿನ ರಸ ಹಾಕಿ ಕುಡಿದರೆ ಮೂಲವ್ಯಾಧಿ ಗುಣಮುಖವಾಗುವುದು.
13. ಮೂಲವ್ಯಾಧಿ ಇರುವವರು ದಿನವೂ ಮಲಗುವ ಮುನ್ನ ಏಲಕ್ಕಿ ಪುಡಿಯೊಂದಿಗೆ ಬಾಳೆಹಣ್ಣನ್ನು ಸೇವಿಸುವುದರಿಂದ ಗುಣವಾಗುತ್ತದೆ.
14. ಮಾವಿನ ಗೊರಟ ಸಂಗ್ರಹಿಸಿ ನೆರಳಲ್ಲಿ ಒಣಗಿಸಿ ಪುಡಿಮಾಡಿ ಇಡುತ್ತಾರೆ. ಈ ಪುಡಿ ಆಯುರ್ವೇದ ಅಂಗಡಿಯಲ್ಲೂ ಸಿಗುತ್ತದೆ. ಅದರ ಪುಡಿಯನ್ನು ದಿನಕ್ಕೆ ಎರಡು ಚಮಚದಂತೆ ಮುಂಜಾನೆ ಮತ್ತು ಸಂಜೆ ಜೇನಿನೊಡನೆ ಸೇವಿಸಿ.
15. ರಕ್ತಸ್ರಾವವಿದ್ದ ಮೂಲವ್ಯಾಧಿಗೆ ನೇರಳೆ ಹಣ್ಣು ಬಹಳ ಒಳ್ಳೆಯದು. ಮೂರು ಅಂಜೂರದ ಹಣ್ಣುಗಳನ್ನು ರಾತ್ರಿ ನೀರಿನಲ್ಲಿ ನೆನೆಸಿಟ್ಟು ಬೆಳಿಗ್ಗೆ ಎದ್ದ ಕೂಡಲೇ ಹಣ್ಣುಗಳನ್ನು ತಿಂದು ಆ ನೀರು ಕುಡಿದರೆ ಮೂಲವ್ಯಾಧಿ ಗುಣವಾಗುವುದು.
16. ಮೂಲಂಗಿಯನ್ನು ತುರಿದು ಮೊಸರಿನಲ್ಲಿ ಕಲೆಸಿ ಸ್ವಲ್ಪ ಉಪ್ಪು ಹಾಗೂ ನಿಂಬೆರಸ ಬೆರೆಸಿ ಒಗ್ಗರಣೆ ಕೊಟ್ಟು, ಈ ಪದಾರ್ಥವನ್ನು ಅನ್ನದ ಜೊತೆ ತಿನ್ನುವುದು ಒಳ್ಳೆಯದು. ಮೂಲಂಗಿಯನ್ನು ಅರೆದು ಪೇಸ್ಟ್ ಮಾಡಿ ಹಾಲಿನಲ್ಲಿ ಮಿಶ್ರ ಮಾಡಿ ಅದನ್ನು ಗುದದ್ವಾರದ ಸುತ್ತಲೂ ಹಚ್ಚಿದರೆ ಊತ ಕಡಿಮೆ ಆಗುತ್ತದೆ.
17. ಮುಟ್ಟಿದರೆ ಮುನಿ (ನಾಚಿಕೆ ಮುಳ್ಳು) ಗಿಡವನ್ನು ಒಣಗಿಸಿ ಪುಡಿ ಮಾಡಿ ಒಂದು ಲೋಟ ನೀರಿಗೆ ಒಂದು ಚಮಚ ಪುಡಿ ಬೆರೆಸಿ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಮೂಲವ್ಯಾಧಿ ಸಮಸ್ಯೆ ನಿವಾರಣೆಗೆ ಒಳ್ಳೆಯದು.
18. ತ್ರಿಫಲಾ ಕಷಾಯ ಮೂಲವ್ಯಾಧಿ ಗುಣಪಡಿಸುವಲ್ಲಿ ತುಂಬಾ ಸಹಕಾರಿಯಾಗಿದೆ.
19. ಎಂಟು ಲೋಟ ನೀರು ದಿನಕ್ಕೆ ಕುಡಿಯುವುದು ಕಡ್ಡಾಯ. ನೀರು ಕಡಿಮೆ ಕುಡಿಯುವವರಿಗೇ ಮಲಬದ್ಧತೆ ಆಗುತ್ತದೆ.
20. ಬಿಲ್ವಪತ್ರದ ರಸವನ್ನು ನಿತ್ಯ ಸೇವಿಸುವುದು ಕೂಡ ಮೂಲವ್ಯಾಧಿಗೆ ಪರಿಣಾಮಕಾರಿಯಾದ ಔಷಧಿಯಾಗಿದೆ. 
by: Reena                         ಕೃಪೆ : ಒನ್ ಇಂಡಿಯಾ

ಸುಖನಿದ್ರೆಯ ಸೂತ್ರಗಳು

ನಾರೋಗ್ಯಕ್ಕೆ ಕಾರಣಗಳನ್ನು ಹುಡುಕುವುದಾದರೆ ನಾವು ಎಲ್ಲವನ್ನೂ ದೂರುತ್ತೇವೆ. ಆಹಾರ ಅಭ್ಯಾಸ, ಕೆಲಸದ ಒತ್ತಡ, ಅನುವಂಶಿಕ ಕಾರಣ, ರಾತ್ರಿ ಪಾಳಿ ಕೆಲಸ... ಹೀಗೆ.
ಆದರೆ ಎಲ್ಲಕ್ಕಿಂತ ಮುಖ್ಯವಾದ ಕಾರಣವನ್ನೇ ಅರಿಯುವುದಿಲ್ಲ. ಅನಾರೋಗ್ಯಕ್ಕೆ ಮೂಲ ಕಾರಣ ಸಮರ್ಪಕ ನಿದ್ದೆಯಾಗದೇ ಇರುವುದು. ಸುಖ ನಿದ್ರೆ ಹಾಗೂ ಸ್ವಾಸ್ಥ್ಯಮಯ ನಿದ್ದೆ. ನಮ್ಮ ಜೀವನದ 1/3ನೇ ಅಂಶವನ್ನು ನಾವು ನಿದ್ದೆಯಲ್ಲಿ ಕಳೆಯುತ್ತೇವೆ. ಆದರೆ ಅದೂ ಸುಖಕರವಾಗಿರದಿದ್ದರೆ ಸ್ವಾಸ್ಥ್ಯ, ದೇಹ ಪ್ರಕೃತಿಯ ಮೇಲೆಯೂ ಪರಿಣಾಮ ಬೀರುತ್ತದೆ ಎಂದು ಪೋಲಿಫ್ಲೆಕ್ಸ್ ಎಂಟರಪ್ರೈಸಸ್‌ನ ಎಂ.ಡಿ. ಆನಂದ್ ನಿಚಾನಿ ಹೇಳುತ್ತಾರೆ.
ಅವರ ಪ್ರಕಾರ ನಮ್ಮ ಹಾಸಿಗೆ ಸೂಕ್ತವಾಗಿ ವಿನ್ಯಾಸಗೊಳಿಸದಿದ್ದಲ್ಲಿ ಸುಖಕರ ಇದ್ದೆ ಬರುವುದಿಲ್ಲ ಎಂಬುದು ಅವರ ಅಭಿಪ್ರಾಯವಾಗಿದೆ. ನಮ್ಮ ದಣಿದ ದೇಹವು ವಿಶ್ರಾಂತಿಗಾಗಿ ಒರಗಿದಾಗ ದೇಹದ ಆಕಾರಕ್ಕೆ ತಕ್ಕಂತೆ ಹಾಸಿಗೆ ಇರಬೇಕು. ನಿಸರ್ಗ ಸ್ನೇಹಿ ಹಾಸಿಗೆ ಇದ್ದರೆ ದೇಹದ ಉಷ್ಣತೆಯನ್ನು ಕಾಪಾಡುವುದು ಸಾಧ್ಯವಾಗುತ್ತದೆ. ದೇಹ ವಿಶ್ರಮಿಸುವಾಗ ಜೀವಕೋಶಗಳ ಪ್ರಕ್ರಿಯೆ ಆರಂಭವಾಗುತ್ತದೆ. ಚರ್ಮದ ಕೋಶಗಳೂ ಉಸಿರಾಡುತ್ತವೆ. ಈ ಉಸಿರಾಟದ ಪ್ರಕ್ರಿಯೆ ಸರಳಗೊಳ್ಳುವಂತೆ ನಮ್ಮ ಹಾಸಿಗೆ ಇರಬೇಕು. ನಾವು ಬಳಸುವ ಮೆಟ್ರಸ್ ಕೇವಲ ಮೆತ್ತೆಯಾಗಿದ್ದರೆ ಸಾಲದು. ಅದು ದಣಿದ ದೇಹವನ್ನು ತಂಪುಗೊಳಿಸುವಂತಿರಬೇಕು. ತಾಜಾತನದ ಅನುಭವ ನೀಡುವಂತಿರಬೇಕು.
ಮೆಟ್ರಸ್‌ಗೆ ಬಳಸುವ ಬಟ್ಟೆಯ ವಿಧ ಅತಿ ಮಹತ್ವದ್ದಾಗಿದೆ. ಇದು ಧೂಳು ಹಿಡಿಯದ, ಬ್ಯಾಕ್ಟೀರಿಯಾಗಳಿಗೆ ನೆಲೆಯಾಗದಂತಿರಬೇಕು. ಉಷ್ಣ ತಡೆಯುವ ಗುಣ ಈ ಬಟ್ಟೆಗಿರಬೇಕು. ಮಲಗಿದಾಗ ನಮ್ಮ ಉಸಿರಾಟದೊಂದಿಗೆ ಯಾವುದೇ ಟಾಕ್ಸಿಕ್ ಅಂಶಗಳು ಸೇರ್ಪಡೆಯಾಗದಂತಿರಬೇಕು. ಹಾನಿಕಾರಕ ರಾಸಾಯನಿಕಗಳಿಂದ ಮ್ಯಾಟ್ರಸ್ ತಯಾರಿಸಲಾಗಿದೆಯೇ ಎಂಬುದನ್ನು ಪರಿಶೀಲಿಸಬೇಕು. ನಿಸರ್ಗ ಸ್ನೇಹಿ ಮೆಟ್ರಸ್ ಆಯ್ಕೆ ಮಾಡಿಕೊಳ್ಳುವುದು ಒಳಿತು.
ನಿದ್ದೆಗಾಗಿ ಸಮಯ ನಿಗದಿಗೊಳಿಸುವುದು ಒಳಿತು. ನಿಗದಿತ ಸಮಯಕ್ಕೆ ಮಲಗಿ ಏಳುವುದು ಅತಿ ಮುಖ್ಯ. ಮಲಗುವ ಮುನ್ನ ತೂಕಡಿಸುವುದು, ನಸು ನಿದ್ರೆ ಮಾಡುವುದು ಸುಖ ನಿದ್ದೆಯನ್ನು ಮುಂದೂಡುತ್ತದೆ.
ಕೆಲವೊಮ್ಮೆ ಸಣ್ಣ ತೂಕಡಿಕೆಗಳು ಪುನಶ್ಚೇತನಗೊಳಿಸಬಹುದು. ಆದರೆ ಸುದೀರ್ಘಾವಧಿಯ ತೂಕಡಿಕೆ, ಮೇಲಿಂದ ಮೇಲೆ ನಿದ್ದೆಗೆ ಜಾರುವುದು ಆರೋಗ್ಯಕ್ಕೆ ಸಮಸ್ಯೆ ತಂದೊಡ್ಡಬಲ್ಲವು.
ತಲೆದಿಂಬಿನ ಆಯ್ಕೆಯೂ ಸುಖನಿದ್ರೆಗೆ ಸಾಧನವಾಗಬಲ್ಲುದು. ಕತ್ತು ಹಾಗೂ ಭುಜಕ್ಕೆ ಆಧಾರವಾಗಿರುವಂತೆ, ತಲೆಗೆ ಆಸರೆ ನೀಡುವ ದಿಂಬುಗಳನ್ನು ಆಯ್ಕೆ ಮಾಡಿಕೊಳ್ಳುವುದು ಒಳಿತು. ಹೆಚ್
ಚು ಆಹಾರ ಸೇವನೆ, ಮಲಗುವ ಮುನ್ನ ಮಾದಕ ಪೇಯಗಳ ಸೇವನೆ, ಮದ್ಯ ಸೇವನೆ ಇವೆಲ್ಲವೂ ಸುಖ ನಿದ್ರೆಗೆ ಮಾರಕವಾಗಿರುತ್ತವೆ ಎನ್ನುತ್ತಾರೆ ಆನಂದ್ ನಿಚಾನಿ.
ತಮ್ಮ ಪೊಲಿಫ್ಲೆಕ್ಸ್ ಉತ್ಪನ್ನಗಳಲ್ಲಿ ಒಂದಾದ ಮ್ಯಾಗ್ನಿಫ್ಲೆಕ್ಸ್ ಸುಖ ನಿದ್ರೆಗಾಗಿ ಪರಿಸರ ಸ್ನೇಹಿ ಮೆಟ್ರೆಸ್‌ಗಳನ್ನು ತಯಾರಿಸುವ ಕಂಪೆನಿಯಾಗಿದೆ. ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಗ್ರಾಹಕರಿಗೆ ಸುಖಕರ ನಿದ್ದೆಯ ಸಂತೃಪ್ತಿಯನ್ನು ನೀಡುವಲ್ಲಿ ಶ್ರಮಿಸುತ್ತಿದೆ.
ಕೃಪೆ : ಪ್ರಜಾವಾಣಿ

Wednesday, June 6, 2012

ನೀಲಿ ಚಿತ್ರಗಳ ಹಿಂದಿನ ಕರಾಳ ವಾಸ್ತವ !


ಸಂತೋಷ್ ನಾಯಕ್.ಆರ್,ಮೈಸೂರು


2002ರಲ್ಲೇ ಅಮೆರಿಕದ ದೇಶದ ನೀಲಿ ಚಿತ್ರಗಳ (ಬ್ಲೂ ಫಿಲಂ) ವಹಿವಾಟು 50 ಸಾವಿರ ಕೋಟಿ ರೂ ದಾಟಿತ್ತು. ಈಗ ಅದು ದುಪ್ಪಟ್ಟಾಗಿರುವ ಸಾಧ್ಯತೆ ಇದೆ. ಇಂದು ಇಂಟರ್‌ನೆಟ್ ಬಳಸುವವರ ಸಂಖ್ಯೆ ಹೆಚ್ಚುತ್ತಿದೆ. ಅದರ ಮೂಲಕ ನೀಲಿ ಚಿತ್ರಗಳ ವಹಿವಾಟು ಬೃಹತ್ತಾಗಿ ಬೆಳೆಯುತ್ತಿದೆ. ಮೀಡಿಯಾ ಮ್ಯೋಟ್ರಿಕ್ಸ್ ಎಂಬ ಸಂಸ್ಥೆ ನಡೆಸಿದ ಸರ್ವೆ ಪ್ರಕಾರ ಶೇ.42.7 ರಷ್ಟು ಜನ ಇಂಟರ್‌ನೆಟ್ಟನ್ನು ನೀಲಿ ಚಿತ್ರಗಳನ್ನು ನೋಡಲು ಬಳಸುತ್ತಾರೆ. ಆತಂಕದ ಸಂಗತಿ ಎಂದರೆ  ಇಂಟರ್‌ನೆಟ್ ಮೂಲಕ ಲೈಂಗಿಕ ಚಿತ್ರಗಳನ್ನು ನೋಡುವವರಲ್ಲಿ ಹೆಚ್ಚಿನವರು 12 ರಿಂದ 17ರ ವಯೋಮಾನದವರು.

ಭಾರತದಲ್ಲೂ ಇಂದು ಕಂಪ್ಯೂಟರ್, ಮೊಬೈಲ್‌ಗಳ ಬಳಕೆ ಗಣನೀಯವಾಗಿ ಹೆಚ್ಚುತ್ತಿದೆ. ನೀಲಿ ಚಿತ್ರಗಳ ತಯಾರಿಕೆಯೂ ಜೋರಾಗಿದೆ. ಅವನ್ನು ಎಲ್ಲಿ, ಯಾರು ತಯಾರಿಸುತ್ತಾರೆ ಇತ್ಯಾದಿ ವಿವರಗಳು ಯಾರಿಗೂ ಗೊತ್ತಾಗುವುದಿಲ್ಲ. ಆದರೂ ಕೋಟಿಗಟ್ಟಲೆ ವ್ಯವಹಾರ ನಡೆಯುತ್ತಿದೆ. ಇಂದು ಮೊಬೈಲ್‌ಗಳಲ್ಲೇ ಇಂಥ ಚಿತ್ರಗಳನ್ನು ಡೌನ್‌ಲೋಡ್ ಮಾಡಿಕೊಂಡು ಎಲ್ಲೆಂದರಲ್ಲಿ ವೀಕ್ಷಿಸಬಹುದು.

ಇದೊಂದು ಕಾಳ ದಂಧೆ. ತನ್ನದೇ ಜಾಲದ ಮೂಲಕ ನಡೆಯುವ ಕಾನೂನುಬಾಹಿರ ಅವ್ಯವಹಾರ. ನೀಲಿ ಚಿತ್ರಗಳನ್ನು  ನೋಡುವವರ ಮಾನಸಿಕ ಸ್ಥಿತಿ ವಿಶೇಷವಾಗಿ ಮಕ್ಕಳ ಮೇಲೆ ಬೀರುವ ಪರಿಣಾಮ ಕುರಿತು ವಿಶೇಷ ಅಧ್ಯಯನ ನಡೆಯಬೇಕಿದೆ.

ನೀಲಿ ಚಿತ್ರಗಳ ನಿರ್ಮಾಣದಲ್ಲಿ ಕಪ್ಪು ಹಣ ಯಥೇಚ್ಛವಾಗಿ ಬಳಕೆಯಾಗುತ್ತದೆ. ಇದರಲ್ಲಿ ಭೂಗತ ಜಗತ್ತಿನ ವ್ಯಕ್ತಿಗಳಿದ್ದಾರೆ. ಇದೊಂದು ವಿಷ ವೃತ್ತ. ಅದನ್ನು ಬೇಧಿಸಲು ಸರ್ಕಾರ, ಸರ್ಕಾರೇತರ ಸಂಸ್ಥೆಗಳು ಗಮನ ನೀಡಬೇಕಿದೆ.

ತೀವ್ರ ಸ್ವರೂಪದ ಕೌಟುಂಬಿಕ ಸಮಸ್ಯೆಗಳು, ಹಣಕಾಸಿನ ಕೊರತೆ, ಸಂಬಂಧಗಳ ಅಭಾವ, ಬಾಲ್ಯದಲ್ಲಿ  ಲೈಂಗಿಕ ಶೋಷಣೆಗೊಳಗಾದವರು ಮತ್ತು ಉತ್ತಮ ಜೀವನ ನಡೆಸಬೇಕೆಂಬ ಆಸೆ ಹೊತ್ತ ಯುವತಿಯರನ್ನು ನೀಲಿ ಚಿತ್ರಗಳ ತಯಾರಿಕೆಯಲ್ಲಿ ಬಳಸಿಕೊಳ್ಳುತ್ತಾರೆ. ಇಂತಹ ಚಿತ್ರಗಳ ತಯಾರಿಕೆಗಾಗಿ ಲೈಂಗಿಕ ಕ್ರಿಯೆಯಲ್ಲಿ ತೊಡಗುವ ಗಂಡಸರು ಮದ್ಯ, ಮಾದಕ ವಸ್ತು ಸೇವನೆಯ ವ್ಯಸನಿಗಳೇ. ಅವರಲ್ಲಿ ಬಹುತೇಕ ಜನರು ಉದ್ದೀಪನ ಔಷಧ ಬಳಸುತ್ತಾರೆ.

ಈ ವೃತ್ತಿಗೆ ಬರಲು ಅನೇಕ ಆಕರ್ಷಣೆಗಳಿವೆ. ಹಾಗೆ ಬಂದ ಯುವತಿಯರು ಕೊನೆ ಕೊನೆಗೆ ಮಾನಸಿಕ ರೋಗಿಗಳಾಗುತ್ತಾರೆ. ಹಲವು ದುಶ್ಚಟಗಳು, ರೋಗಗಳು, ಹತಾಶೆ, ಜಿಗುಪ್ಸೆ, ಒಂಟಿತನ, ಪ್ರೀತಿಯ ಕೊರತೆ ಇತ್ಯಾದಿಗಳಿಂದ ಕೊರಗಿ ಕೊನೆಗೆ ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿ ತಲುಪುತ್ತಾರೆ.  ನೀಲಿ ಚಿತ್ರಗಳಲ್ಲಿ ನಟಿಸುವ ಯುವತಿಯರಿಗೆ ತಮ್ಮದೇ ಆದ ಖಾಸಗಿ ಜೀವನ ಇರುವುದಿಲ್ಲ. ಅವರು ಬದುಕಿರುವವರೆಗೂ ಒಂದಲ್ಲ ಒಂದು ವಿಧದ ದೌರ್ಜನ್ಯ, ಶೋಷಣೆಗೆ ಒಳಗಾಗುತ್ತಾರೆ. ಉತ್ತಮ ಸಾಮಾಜಿಕ ಹಾಗೂ ಕೌಟುಂಬಿಕ ಜೀವನ ಸಿಗದೆ ಕೊನೆಗೆ ಎಲ್ಲಿಯೂ ಸಲ್ಲದವರಾಗುತ್ತಾರೆ.

ಇಷ್ಟೆಲ್ಲಾ ಘೋರ ಪರಿಣಾಮಗಳನ್ನು ಉಂಟು ಮಾಡುವ ಹಿನ್ನೆಲೆ ಇರುವ ನೀಲಿ ಚಿತ್ರಗಳು ನೋಡುಗರ ಮನಸ್ಸಿನ ಮೇಲೆ ಎಂತಹ ಪರಿಣಾಮ ಬೀರುತ್ತವೆ? ಮಾನಸಿಕ ತಜ್ಞರ ಪ್ರಕಾರ ನೀಲಿ ಸಿನಿಮಾಗಳನ್ನು ನೋಡುವವರಿಗೆ ಮೊದಲಿಗೆ ಸ್ತ್ರೀಯರ ಮೇಲಿನ ಗೌರವದ ಭಾವನೆಗಳು ಕಡಿಮೆ ಆಗುತ್ತವೆ. ಎಲ್ಲರನ್ನೂ ವಿಕೃತ ಮನಸ್ಸಿನಿಂದ ನೋಡುವ ಗೀಳು ಬೆಳೆಸಿಕೊಳ್ಳುತ್ತಾರೆ.

ಇಂಟರ್‌ನೆಟ್ ಬಳಸುವ ಯುವಕರು ಹಾಗೂ ಇತರ ವಯೋಮಾನದವರ ಪೈಕಿ ಶೇ 25ರಷ್ಟು ಜನ ಲೈಂಗಿಕತೆಗೆ ಸಂಬಂಧಿಸಿದ ವಿಷಯ, ಚಿತ್ರಗಳಿಗಾಗಿ ಹುಡುಕಾಟ ನಡೆಸುತ್ತಾರೆ ಎಂದು `ಸರ್ಚ್ ಇಂಜಿನ್`ಗಳು ಬಹಿರಂಗಪಡಿಸಿವೆ.

ಇಂತಹ ಗೀಳು ಬೆಳೆಸಿಕೊಂಡವರು ಮನೆಯಲ್ಲಿ ಹೆಂಡತಿ ಜತೆ ಅಮಾನುಷ ವರ್ತನೆ ತೋರುತ್ತಾರೆ. ಅಂಥವರಲ್ಲಿ ಸಹಜ ಭಾವನೆಗಳು ಬತ್ತಿ ಹೋಗುತ್ತವೆ. ಇಂಟರ್‌ನೆಟ್‌ನಲ್ಲಿ ನೋಡಿದ ಲೈಂಗಿಕ ಚಿತ್ರಗಳನ್ನು ಕಲ್ಪಿಸಿಕೊಂಡು ತಮ್ಮ ಸಂಗಾತಿಯೊಂದಿಗೆ ಕೂಡುತ್ತಾರೆ. ಲೈಂಗಿಕ ಚಿತ್ರಗಳನ್ನು ನೋಡುವ ಚಟಕ್ಕೆ ಬಲಿಯಾದ ಮಕ್ಕಳಂತೂ ತಮ್ಮ ಓದು, ಜೀವನ ರೂಪಿಸಿಕೊಳ್ಳುವ ಅವಕಾಶಗಳನ್ನು ತಪ್ಪಿಸಿಕೊಳ್ಳುತ್ತಾರೆ. ಲೈಂಗಿಕ ವಿಕೃತಿಗೊಳಗಾಗುವುದು, ಇತರ ಮಕ್ಕಳ ಮೇಲೆ ದೌರ್ಜನ್ಯವೆಸಗುವುದು ಇತ್ಯಾದಿ ಅಪರಾಧಗಳಲ್ಲಿ ತೊಡಗುತ್ತಾರೆ.

ಅಮೆರಿಕದ  ಕ್ಯಾಲಿಫೋರ್ನಿಯಾದಲ್ಲಿ  ನೀಲಿ ಚಿತ್ರಗಳಲ್ಲಿ ನಟಿಸುವ 1500 ಜನ ನಟ ನಟಿಯರಿದ್ದಾರೆ ಎಂದು ಅಧಿಕೃತ ಮೂಲಗಳಿಂದ ತಿಳಿದುಬಂದಿದೆ. ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಈ ಪೈಕಿ 41 ಮಂದಿ ಕೊಲೆ, ಆತ್ಮಹತ್ಯೆ ಮತ್ತು ಏಡ್ಸ್‌ಗಳಿಂದ ಅಸುನೀಗಿದ್ದಾರೆ. 28 ಜನ ವಿವಿಧ ಕ್ಯಾನ್ಸರ್ ಹಾಗೂ ಮಾದಕ ಔಷಧಿಗಳ ಸೇವನೆ ಕಾರಣದಿಂದ ಸತ್ತಿದ್ದಾರೆ. ಶೇ 66 ರಷ್ಟು ಜನರಿಗೆ ವಿವಿಧ ಲೈಂಗಿಕ ರೋಗಗಳಿವೆ. ಶೇ 7ರಷ್ಟು ಜನರು ಎಚ್‌ಐವಿ ಸೋಂಕಿಗೆ ತುತ್ತಾಗಿದ್ದಾರೆ!

ನೀಲಿ ಚಿತ್ರಗಳ ನಟರನ್ನು ಅವರ ವೃತ್ತಿಯಿಂದ ಹೊರತಂದು ಅವರಿಗೆ ಸಾಮಾನ್ಯ ಜೀವನ ನಡೆಸಲು ಸಹಾಯ ಮಾಡುತ್ತಿರುವ `ಪಿಂಕ್ ಕ್ರಾಸ್ ಫೌಂಡೇಶನ್` ಎಂಬ ಸಂಸ್ಥೆಯ ಸಂಚಾಲಕಿ ಹಾಗೂ ನೀಲಿ ಚಿತ್ರಗಳ ಮಾಜಿ ನಟಿಯೂ ಆದ ಶೆಲ್ಲಿ ಲೂಬೆನ್ ಬರೆದಿರುವ `ಟ್ರೂಥ್ ಬಿಹೈಂಡ್ ದಿ ಫ್ಯಾಂಟಸಿ ಆಫ್ ಪೋರ್ನ್` ಎಂಬ ಪುಸ್ತಕ ಯೂರೋಪ್‌ನಲ್ಲಿ ಬಹಳ ಜನಪ್ರಿಯವಾಗಿದೆ. ನೀಲಿ ಚಿತ್ರಗಳ ಹಿಂದಿನ ಕರಾಳ ಕಥೆಗಳನ್ನು ಅದು ತೆರೆದಿಡುತ್ತದೆ. ಅವಳ ಜೀವನವೂ ದುರಂತಗಳಿಂದ ಕೂಡಿದ್ದರೂ ಈಗ ಆಕೆ ಸಾಮಾನ್ಯ ಗೃಹಸ್ಥ ಜೀವನ ನಡೆಸುತ್ತಿದ್ದಾಳೆ.

ನೀಲಿ ಚಿತ್ರಗಳ ತಯಾರಿಕೆ ಭಾರತದಲ್ಲೂ ನಡೆಯುತ್ತಿದೆ. ಅಮೆರಿಕಾ ಮತ್ತಿತರ ದೇಶಗಳಿಗೆ ಹೋಲಿಸಿದರೆ ನಮ್ಮ ದೇಶದಲ್ಲಿನ ಈ ದಂಧೆ ಅಷ್ಟು ದೊಡ್ಡದಾಗಿ ಬೆಳೆದಿಲ್ಲ.
 ನಿಸರ್ಗದತ್ತ ಲೈಂಗಿಕ ಕ್ರಿಯೆಯನ್ನು ವಿಕೃತವಾಗಿ ತೋರಿಸಿ ಹದಿ ಹರೆಯದವರು ಹಾಗೂ ಯುವ ಜನರನ್ನು ಹಾದಿ ತಪ್ಪಿಸುತ್ತಿರುವ ಈ ಕೃತ್ಯವನ್ನು ತಡೆಯುವ ಹೊಣೆ ಎಲ್ಲರದ್ದು. ಆದರೆ ಅದನ್ನು ಕಾನೂನು ಮೂಲಕ ನಿಯಂತ್ರಿಸುವ ಹೊಣೆ ಸರ್ಕಾರದ್ದು.

ಕೃಪೆ : ಪ್ರಜಾವಾಣಿ

Saturday, May 12, 2012

ಸರ್ವರೋಗಕ್ಕೂ ಸಂಪೂರ್ಣ ಸರಳ ಸೆಕ್ಸ್ ಮದ್ದು !

ಸೆಕ್ಸ್ ಆನಂದಮಯವಾಗಿದ್ದಷ್ಟು ಹೆಚ್ಚಿನ ಆರೋಗ್ಯ ಕೊಡುತ್ತದೆ. ದೇಹಕ್ಕೆ ಅಗತ್ಯವಾದ ಹಾರ್ಮೋನ್ ಗಳು ಸಂಭೋಗ ಮಾತ್ರದಿಂದ ಲಭ್ಯವಾಗಲಿದೆ ಎಂದು ಐರ್ಲೆಂಡ್ ನ ಸಂಶೋಧಕರು ಹೇಳುತ್ತಾರೆ.

ಆದರೆ, ಅತಿಯಾದರೆ ಅಮೃತವೂ ವಿಷ ಎಂಬಂತೆ ನಿಯಮಿತವಾಗಿ ಸೆಕ್ಸ್ ಮಾಡುವುದರಿಂದ ನಮ್ಮ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ತಲೆ ನೋವು, ಅರೆ ತಲೆನೋವು, ಸ್ಥೂಲಕಾಯ ಸಮಸ್ಯೆ, ಮೂಳೆ ನೋವು, ಮಾನಸಿಕ ಒತ್ತಡ, ಪ್ರಜ್ಞೆ ಹೆಚ್ಚಳ, ಚುರುಕುತನಕ್ಕೆ ಸಂಭೋಗ ಸಹಕಾರಿ.


* ಹಲವಾರು ದೈಹಿಕ ಸಮಸ್ಯೆಗಳಿಗೆ ಮಾನಸಿಕ ಒತ್ತಡ ಹಾಗೂ ಅಶಾಂತಿ ಕಾರಣವಾಗಿರುತ್ತದೆ. ವೈಯಕ್ತಿಕ ಕೀಳರಿಮೆ, ಭಯ, ಹಿಂಜರಿಕೆಯನ್ನು ದೂರಾಗಿಸಲು ಬೇಕಾದ ಹಾರ್ಮೋನ್ ಅನ್ನು ಸೆಕ್ಸ್ ನಂತರ ಪಡೆಯಬಹುದಾಗಿದೆ.


endorphins ಹಾರ್ಮೋನ್ ಹೊರ ಹಾಕುವ ಮೆದುಳು ಮಾನಸಿಕ ಒತ್ತಡವನ್ನು ಕಡಿಮೆ ಮಾಡಿ ಮನಸ್ಸು ಉಲ್ಲಾಸವಾಗಿರುವಂತೆ ಮಾಡುತ್ತದೆ. ಇದು ಕೆಲ ಕಾಲದ ಸ್ಥಿತಿಯಾದರೂ ಇದರಿಂದ ಸಂತೋಷ ಉಲ್ಬಣಿಸುವ ಸಾಧ್ಯತೆ ಹೆಚ್ಚಾಗಿದೆ.


* ಸೆಕ್ಸ್ ನಿಂದ ಸೌಂದರ್ಯ ವರ್ಧನ ಸಾಧ್ಯವೇ? ಖಂಡಿತಾ ಸಾಧ್ಯ. ಸೆಕ್ಸ್ ನಿಂದ ಹೆಚ್ಚಿನ ಲಾಭ ಪಡೆಯುವುದು ಸ್ತ್ರೀ ಎಂಬುದು ನೆನಪಿರಲಿ. ನಿಯಮಿತ ಸಂಭೋಗದ ನಂತರ ಮಹಿಳೆಯ ದೇಹದಲ್ಲಿ estrogen ಪ್ರಮಾಣ ಡಬಲ್ ಆಗುತ್ತದೆ. ಕೂದಲು ಮಿರಿ ಮಿರಿ ಮಿಂಚುತ್ತದೆ. ತ್ವಚೆ ಕೂಡಾ ಹೊಳೆಪು ಪಡೆಯುತ್ತದೆ. ಜೊತೆಗೆ ಅಂಗಾಂಗಗಳು ಕೂಡಾ ಬಿಗಿತ್ವ ಪಡೆಯುತ್ತದೆ.


* ಸುಮಾರು 1000ಕ್ಕೂ ಅಧಿಕ ಮಧ್ಯವಯಸ್ಕರ ಮೇಲೆ 10 ವರ್ಷಕ್ಕೂ ಅಧಿಕ ಕಾಲ ಸಂಶೋಧನೆ ನಡೆಸಿದ ಕ್ವೀನ್ಸ್ ವಿವಿಯ ವರದಿ ಪ್ರಕಾರ, ಪುರಷರ ಆಯುಷ್ಯವೃದ್ಧಿಗೆ ಸೆಕ್ಸ್ ಸಹಕಾರಿಯಂತೆ.


ಮಾನಸಿಕ ಒತ್ತಡ ನಿವಾರಣೆ ಬೇಕಾದ ಹಾರ್ಮೋನ್ ಉತ್ಪಾದನೆಯಿಂದ ಪುರುಷರು ಹೆಚ್ಚು ಲವಲವಿಕೆಯಿಂದ ಜೀವನ ಸಾಗಿಸಬಹುದಾಗಿದೆ. ಜೀವನ ವಿಕಾಸಕ್ಕೆ ಆಯುಷ್ಯ ವೃದ್ಧಿಗೆ ದೀರ್ಘಕಾಲ ಜೀವಿಸಲು ಸಂಭೋಗ ಸಹಕಾರಿ ಎನ್ನುತ್ತದೆ ಸಂಶೋಧನೆ.


* ಸೆಕ್ಸ್ ನಿಂದ ಆರಾಮವಾಗಿ ಕ್ಯಾಲೋರಿ ಕರಗಿಸಿ ಸಣ್ಣಗಾಗಬಹುದು. ರೋಮ್ಯಾಂಟಿಕ್ ಡಿನ್ನರ್ ಮೂಲಕ ಮೈಗೆ ತುಂಬಿಕೊಂಡ ಕೊಬ್ಬನ್ನು ಸೆಕ್ಸ್ ಮೂಲಕ ಕರಗಿಸಬಹುದು.


120 ಕಿ.ಮೀ ಜಾಗಿಂಗ್ ಮಾಡುವುದೂ ಒಂದೇ 20 ನಿಮಿಷದ ಹಾರ್ಡ್ ಕೋರ್ ಸಂಭೋಗವೂ ಒಂದೇ. ವಾರ್ಷಿಕವಾಗಿ 7500 ಕ್ಯಾಲೋರಿ ಕಡಿಮೆ ಮಾಡಿಕೊಳ್ಳಬಹುದು.


ಒಂದು ಸೆಕ್ಸ್ ಸೆಷನ್ ನಿಂದ 200 ಕ್ಯಾಲೋರಿ ಸುಡಬಹುದಾದರೆ ಟ್ರೆಡ್ ಮಿಲ್ ಮೇಲೆ 15 ನಿಮಿಷ ಓಡುವುದು ಯಾಕೆ.


* ನೋವು ನಿವಾರಕವಾಗಿ ಕೂಡಾ ಸೆಕ್ಸ್ ಅನುಕೂಲಕರ. ಪೇನ್ ಕಿಲ್ಲರ್ ಗಳಿಗಿಂತ ಹತ್ತು ಪಟ್ಟು ನೋವು ನಿವಾರಕ ಗುಣವನ್ನು ಸಂಭೋಗ ಕ್ರಿಯೆ ಹೊಂದಿದೆ. Oxycontin ಹಾರ್ಮೋನ್ ಅಧಿಕಗೊಂಡು ನೋವು ನಿವಾರಣೆಗೆ ಪೂರಕವಾಗುತ್ತದೆ.


ತಲೆನೋವು, ಆರ್ಥೈಟೀಸ್, ಮೈಗ್ರೇನ್ ನಿವಾರಣೆಗೂ ಸಹಕಾರಿ ಎಂಬುದು ಸಾಬೀತಾಗಿದೆ. ಸೆಕ್ಸ್ ಸಂದರ್ಭದಲ್ಲಿ ರಕ್ತ ಧಮನಿಗಳ ಮೇಲೆ ಒತ್ತಡ ಕಮ್ಮಿಯಾಗುವುದರಿಂದ ತಲೆನೋವು ಬರುವುದು ಕಮ್ಮಿ.


ಹಾಗಂತ ತಲೆನೋವು ಬಂದಾಗಲೆಲ್ಲ ಸೆಕ್ಸ್ ಗೆ ಮೊರೆ ಹೋದರೆ ಅಪಾಯ ಕಟ್ಟಿಟ್ಟ ಬುತ್ತಿ. ಒತ್ತಡ ನಿವಾರಣೆಗೆ ಆನಂದಕ್ಕೆ ರಹದಾರಿ ತೋರುವ ಸೆಕ್ಸ್ ನಿರಂತರವಾಗಿ ಆಚರಿಸಿ, ಆನಂದಿಸಿ !

ಕೃಪೆ : ಒನ್ ಇಂಡಿಯಾ 

ಬೆತ್ತಲಾಗಿ ತಪ್ಪೇನಿಲ್ಲ !


Go Naked Benefits Being Naked

ಮಾನ ಎಷ್ಟೇ ಬದಲಾದರೂ, ಮಿನಿ, ಮೈಕ್ರೋ ಮಿನಿ ಧರಿಸಿ ಓಡಾಡತೊಡಗಿದರೂ ಬೆತ್ತಲಾಗುವುದೆಂದರೆ ಮಹಿಳೆಯರು ಹೆದರಿಕೆ ಇದ್ದೇ ಇದೆ. ಸಂಗಾತಿಯ ಎದುರಲ್ಲೂ ಕೂಡಾ ನಗ್ನಳಾದ ಸಖಿ ಮೈಮೇಲೆ ಬೆಡ್ ಶೀಟೋ ನೀಳ ಕೈಗಳನ್ನು ಅಪ್ಪಿಕೊಂಡು ನಾಚಿಕೆ ಪ್ರದರ್ಶಿಸುವುದು ಮಾಮೂಲಿ ಹಾಗೂ ಸಹಜ ಕ್ರಿಯೆ.

ಆದರೆ, ಪ್ರಾಯಕ್ಕೆ ಬಂದ ಮೇಲೆ ಬೆತ್ತಲೆ ಮೈಯ ಒಮ್ಮೆ ನೋಡಿಕೊಳ್ಳುವುದು ಹೆಣ್ಣು/ಗಂಡಿಗೆ ಸಹಜ ಎನಿಸುತ್ತದೆ. ಕೆಲವರು ಬೆತ್ತಲೆ ಮಲಗುವುದನ್ನು ಇಷ್ಟಪಡುತ್ತಾರೆ. ಆದರೆ, ಹಲವರು ಬೆತ್ತಲಾಗುವುದೆಂದರೆ ಅತ್ತ ಇತ್ತ ನೋಡುತ್ತಾರೆ...ರೂಂನಲ್ಲಿ ಯಾರಿಲ್ಲದಿದ್ದರೆ.. ನಿಮ್ಮವರ ಮುಂದೆ ಬೆತ್ತಲಾಗಿ ತಪ್ಪೇನಿಲ್ಲ. ಬೆತ್ತಲಾದರೇನು ಫಲ, ಎಷ್ಟು ಅನುಕೂಲ ಮುಂದೆ ನೋಡೋಣ...

* ಮೊಟ್ಟಮೊದಲು ದಿನದ 24 ಗಂಟೆಯಲ್ಲಿ ನಿಮ್ಮಿಷ್ಟದ ಅವಧಿಯನ್ನು ಅಯ್ದುಕೊಳ್ಳಿ. ಸಂಪೂರ್ಣ ಬೆತ್ತಲಾಗಿ 30 ನಿಮಿಷಗಳ ವಿಶ್ರಾಂತಿ ಪಡೆಯಿರಿ. ಸಮಯ ಹಾಗೂ ಸ್ಥಳದ ಆಯ್ಕೆ ನಿಮಗೆ ಬಿಟ್ಟಿದ್ದು. ನಿಮ್ಮಲ್ಲಿ ನಿಮ್ಮ ಬಗ್ಗೆ ಆತ್ಮವಿಶ್ವಾಸ ಹೆಚ್ಚಿಸಿ, ಇನ್ನಷ್ಟು ನಿರಾಳ ಮನೋಭಾವ ಬೆಳೆಸಿಕೊಳ್ಳಲು ಇದು ಸಹಕಾರಿ.

* ನಿಮ್ಮ ಬಗ್ಗೆ ನಿಮಗೆ ಆರಿವಿಲ್ಲದೆ ಉಂಟಾಗಿರುವ ಕೀಳರಿಮೆ ತೊಡೆದು ಹಾಕಲು ನಗ್ನರಾಗಿ...ನಿಮ್ಮ ದೇಹವನ್ನು ಒಮ್ಮೆ ಸವರಿಕೊಳ್ಳುತ್ತಾ ಕನ್ನಡಿ ಮುಂದೆ ಕೆಲ ಕಾಲ ಮೈಮರೆಯಿರಿ.. ನಿಮ್ಮಲ್ಲಿರುವ ಪ್ರಣಯಾಕಾಂಕ್ಷೆ ಇದರಿಂದ ಹೆಚ್ಚುವುದು. ನಿಮ್ಮ ಅಂಗಾಂಗಗಳ ಆರೈಕೆ, ಆರೋಗ್ಯ, ಅಳತೆ ಪ್ರಮಾಣ ಅರಿಯಲು ಕೂಡಾ ಇದು ಸಹಕಾರಿ.

* ಬೆತ್ತಲಾಗಿ ಮಲಗುವುದರಿಂದ ದೈಹಿಕವಾಗಿ ಒಂದಷ್ಟು ಉಪಯೋಗಗಳು ಸಿಗುತ್ತದೆ. ರಕ್ತ ಸಂಚಲನೆ ಹೆಚ್ಚುತ್ತದೆ. ಕಿಬ್ಬೊಟ್ಟೆಯಲ್ಲಿನ ಘರ್ಷಣೆ, ನೋವು ಮಾಯವಾಗುತ್ತದೆ. ಬಿಗಿಯಾದ ಒಳ ಉಡುಪು ಧರಿಸುವುದರಿಂದ ಉಂಟಾದ ತೊಂದರೆಗಳು ಪರಿಹಾರವಾಗುತ್ತದೆ. ದೇಹ ಹಗುರವೆನಿಸುತ್ತದೆ. ದೇಹದ ಜೊತೆ ಮನಸ್ಸು ಹಗುರಾದರೆ ಸ್ವರ್ಗದಲ್ಲಿ ತೇಲಾಡಿದ ಅನುಭವವಾಗುತ್ತದೆ. ಸೋ.. ಒಮ್ಮೆ ಟ್ರೈ ಮಾಡಿ ನೋಡಿ...ಮೊದಲಿಗೆ ಬಿಗಿ ಉಡುಪು ಕಳಚಿ ಬೆತ್ತಲಾಗಿ ಮಲಗುವುದು ಕಷ್ಟ ಎನಿಸಿದರೆ.. ಹಗುರವಾದ, ಸಡಿಲವಾದ ಉಡುಪುಗಳನ್ನು ಧರಿಸಿರಿ ನಂತರ ಬೆತ್ತಲೆ ನಿದ್ರೆಗೆ ಜಾರುವ ಯತ್ನ ಮುಂದುವರೆಸಿ.

* ಬೆತ್ತಲಾಗುವುದರಿಂದ ತ್ವಚೆ ಸಂರಕ್ಷಣೆಗೆ ಸಹಕಾರಿ. ಬೆವರು ಗ್ರಂಥಿ ಹಾಗೂ ಸೆಬಾಸಿಯೊಸ್ ಗ್ರಂಥಿ ಕಾರ್ಯ ಕ್ಷಮತೆ ಹೆಚ್ಚಿಸುತ್ತದೆ. ಬೆತ್ತಲಾಗುವುದು ಚರ್ಮಕ್ಕೆ ಒಳ್ಳೆಯದು.

* ನಗ್ನತೆ ಸಂಭೋಗಕ್ಕೆ ದಾರಿ ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ. ಸರಸ ಬಗ್ಗೆ ಆಸಕ್ತಿ ಹೆಚ್ಚಿಸಲು ಬೆತ್ತಲಾಗುವುದು ಸಹಕಾರಿಯಾಗುತ್ತದೆ. ನಿರಾಸಕ್ತ ಸಂಗಾತಿಯನ್ನು ಸೆಳೆಯಲು ಸ್ಟ್ರಿಪ್ಪಿಂಗ್ ಪ್ರಯೋಗ ಅತ್ಯಂತ ಪರಿಣಾಮಕಾರಿಯಾಗಬಲ್ಲುದು.
* ಗುಪ್ತಾಂಗಗಳ ನೋವು, ಕಡಿತ, ಉರಿ ತಪ್ಪಿಸಲು ಬೆತ್ತಲಾಗುವುದು ಒಳ್ಳೆ ವಿಧಾನ. ಎಲ್ಲಾ ಅಂಗಗಳಿಗೂ ಸೂಕ್ತ ಪ್ರಮಾಣದಲ್ಲಿ ಗಾಳಿ ಸಿಗುವುದರಿಂದ ದುರ್ನಾತ, ಗುಪ್ತಾಂಗಗಳಲ್ಲಿ ಕೆರೆತ ಮುಂತಾದ ಮುಜುಗರಗಳು ತಪ್ಪುತ್ತದೆ.

* ಕೊನೆಯದಾಗಿ ಆತ್ಮ ವಿಶ್ವಾಸ ಹೆಚ್ಚಿಸಿ, ಸಂಗಾತಿಯನ್ನು ಅರಿಯಲು ಸಹಕರಿಸುತ್ತದೆ. ಪರಸ್ಪರ ಒಪ್ಪಿಗೆ, ಸಂಬಂಧ ಬೆಸುಗೆಗೆ ನಗ್ನತೆ ಪೂರಕವಾಗುತ್ತದೆ. ಪುರುಷ ಬಯಸುವ ಪ್ರಚೋದನಕಾರಿ ಒಳ ಉಡುಪು ಅಥವ ಯಾವುದೇ ಉಡುಪು ಧರಿಸಲು ಬೇಕಾದ ವಿಶ್ವಾಸ ಮಹಿಳೆಯರಲ್ಲಿ ಬೆಳೆಯುತ್ತದೆ.

* ಬೆತ್ತಲಾಗುವುದು ತೀರಾ ಖಾಸಗಿ ವಿಷಯವಾಗಿದ್ದು, ಸಂಗಾತಿಯ ಇಚ್ಛೆಗನುಸಾರವಾಗಿ ಬಟ್ಟೆ ಕಳಚಿ..ಒಬ್ಬರೆ ಇದ್ದಾಗ ರೂಮ್ ನಲ್ಲಿ ಯಾರೂ ಇಲ್ಲದಿದ್ದಾಗ ಧೈರ್ಯವಾಗಿ ಆರಾಮವಾಗಿ ಬೆತ್ತಲಾಗಿ ಬೆಡ್ ಮೇಲೆ ಬಿದ್ದುಕೊಳ್ಳಿ..ನೋ ಪ್ರಾಬ್ಲಮ್ !

ಕೃಪೆ : ಒನ್ ಇಂಡಿಯಾ

Thursday, May 10, 2012

ಹೃದಯಾಘಾತಕ್ಕೆ ಈರುಳ್ಳಿ ಚಿಕಿತ್ಸೆ!

ಹೃದಯಾಘಾತಕ್ಕೆ ಈರುಳ್ಳಿ ಚಿಕಿತ್ಸೆ!
ಲಂಡನ್: ಪ್ರತಿದಿನ ಸೇಬು, ಕಿತ್ತಳೆ, ಈರುಳ್ಳಿ, ಗ್ರೀನ್ ಆ್ಯಂಡ್ ಬ್ಲ್ಯಾಕ್ ಟಿ ಸೇವನೆ ಕೇವಲ ರಕ್ತ ಹೆಪ್ಪುಗಟ್ಟುವಿಕೆಯನ್ನು ದೂರ ಮಾಡುವುದಲ್ಲದೆ ಅವು ಒಳಗೊಂಡಿರುವ ರಾಸಾಯನಿಕ ಹೃದಯಾಘಾತ, ಪಾರ್ಶ್ವವಾಯುಗಳಲ್ಲಿಯೂ ಪರಿಣಾಮಕಾರಿ ಚಿಕಿತ್ಸೆ ಆಗಬಲ್ಲದು ಎಂದು ಸಂಶೋಧನೆ ಹೇಳಿದೆ.

ಇವುಗಳಲ್ಲಿರುವ ಅಂಶವು ರಕ್ತ ಹೆಪ್ಪುಗಟ್ಟುವ ಪ್ರಕ್ರಿಯೆಯಲ್ಲಿ ಕಿಣ್ವದ ಪಾಲ್ಗೊಳ್ಳುವಿಕೆಗೆ ತಡೆಯೊಡ್ಡುವ ಮೂಲಕ ರಕ್ತ ಹೆಪ್ಪುಗಟ್ಟುವಿಕೆಯ ಸಂಭಾವ್ಯ ಅಪಾಯವನ್ನು ತಪ್ಪಿಸುತ್ತದೆ.

ರಕ್ತ ಹೆಪ್ಪುಗಟ್ಟುವಲ್ಲಿ ಪಿಡಿಐ ಕಿಣ್ವವು ಕ್ಷಿಪ್ರವಾಗಿ ರಕ್ತನಾಳ ಮತ್ತು ಮಲಿನ ರಕ್ತನಾಳಗಳಲ್ಲಿ ರಕ್ತವನ್ನು ಹೆಪ್ಪುಗಟ್ಟಿಸುವ ಗುಣ ಹೊಂದಿದೆ.

ಹಾರ್ವರ್ಡ್ ವೈದ್ಯಕೀಯ ಕಾಲೇಜು ಈ ಸಂಶೋಧನೆ ಕೈಗೊಂಡಿದ್ದು, ಸೇಬು, ಈರುಳ್ಳಿ, ಕಿತ್ತಳೆಗಳಲ್ಲಿ ರಕ್ತ ಹೆಪ್ಪುಗಟ್ಟುವಿಕೆಗೆ ಕಾರಣವಾಗುವ ಕಿಣ್ವವನ್ನು ವಿರೋಧಿಸುವ ಅಂಶಗಳಿರುವುದು ದೃಢಪಟ್ಟಿದೆ ಎಂದು ಪ್ರೊ. ರಾಬರ್ಟ್ ಫ್ಲೌಮೆನ್‌ಹಫ್ತ್ ಹೇಳಿದ್ದಾರೆ.

ಅಧ್ಯಯನದಲ್ಲಿ 500 ನಾನಾ ರಾಸಾಯನಿಕಗಳನ್ನು ಪರೀಕ್ಷೆಗೆ ಒಡ್ಡಲಾಗಿದೆ. ಇದಕ್ಕಾಗಿ ವೈಜ್ಞಾನಿಕ ಕಂಪ್ಯೂಟರ್ ಮಾದರಿಗಳನ್ನು ಕೂಡ ಬಳಸಿಕೊಳ್ಳಲಾಗಿದೆ.

ಕೃಪೆ : ವಿಜಯ ಕರ್ನಾಟಕ

Saturday, April 28, 2012

ಅನೈತಿಕ ಸಂಬಂಧ ಒಂಟಿ ಮಹಿಳೆಯ ಪ್ರಾಣ ನೀಗಿತ್ತು !

illicit-relationship-bangalore-lone-woman-murder-solvedಬೆಂಗಳೂರು,ಮಾ. 25: ಅವನೋ 15 ವರ್ಷದಿಂದ ಆ ಹೆಂಗಸಿನ ಜತೆ ಸಂಬಂಧವಿಟ್ಟುಕೊಂಡಿದ್ದ. ಆದರೂ ಐದು ವರ್ಷದ ಹಿಂದೆ ಬೇರೊಬ್ಬ ಯುವತಿಯನ್ನು ಮದ್ವೆಯಾದ. ಆದರೆ ಆಕೆಗೆ ಗಂಡನ ಪೂರ್ವಾಶ್ರಮದ ವಾಸನೆ ಬಡಿಯಿತು. ಏನೋನೋ ಕಸರತ್ತು ಮಾಡಿ, ಬೇಡ ಕಣ್ರಿ ಅವಳ ಸಹವಾಸ. ನಮ್ಮ ಸಂಸಾರ ನಮಗೆ ಎಂದು ತಿಳಿಹೇಳಿದಳು. ಆ ಹೆಂಗಸಿಗೂ ಹಲವು ಬಾರಿ ಎಚ್ಚರಿಕೆ ನೀಡಿದ್ದಾಳೆ. ಆದರೆ ಅವ, ಅವಳಿಂದ ಬಿಡುಗಡೆ ಬಯಸಲಿಲ್ಲ.

ಸರಿ ಈಕೆಗೂ ರೋಸಿ ಹೋಗಿತ್ತು. ತಮ್ಮನನ್ನು ಕರೆದು ಇಂತೆಂದಳು - ನೋಡು ನಿಮ್ಮ ಭಾವ ಇದಾನಲ್ಲ. ಅವಯ್ಯ ಎಷ್ಟು ಹೇಳಿದರೂ ಕೇಳುತ್ತಿಲ್ಲ. ಅದ್ಯಾರೋ ಹೆಂಗಸಿನೊಂದಿಗೆ ಸಂಬಂಧವಿಟ್ಟುಕೊಂಡಿದ್ದಾನೆ. ಇನ್ನು ನನ್ನ ಕೈಯಲ್ಲಿ ಸಹಿಸೋಕೆ ಆಗೊಲ್ಲ. ಹೇಗಾ
ದರೂ ಮಾಡಿ, ಅವಳನ್ನು ಇಲ್ಲವಾಗಿಸು ಎಂದು ಸುಪಾರಿ ಕೊಟ್ಟೇ ಬಿಟ್ಟಳು. ಮುಂದ... ಪ್ರಕರಣ ಭೇದಿಸಿದ ರಾಮಮೂರ್ತಿ ನಗರ ಪೊಲೀಸರು ಏನು ಹೇಳುತ್ತಾರೋ ಕೇಳಿ...

ವೃತ್ತಿಯಿಂದ ಬ್ಯೂಟಿಷಿಯನ್ ಆಗಿದ್ದ ನಿರ್ಮಲಾ ಎಂಬ ಮಹಿಳೆಯನ್ನು ಕಳೆದ ತಿಂಗಳು (ಫೆ.27) ಮಟಮಟ ಮಧ್ಯಾಹ್ನ ಯರಯ್ಯನಪಾಳ್ಯದ ಆಕೆಯ ಮನೆಯಲ್ಲಿ ಕೊಲೆ ಮಾಡಿ, ಕತ್ತಿನಲ್ಲಿದ್ದ 40 ಗ್ರಾಂ ಚಿನ್ನದ ಸರವನ್ನು ದೋಚಿ ಪರಾರಿಯಾಗಿದ್ದ ಪ್ರಕರಣ ದಾಖಲಾಗಿತ್ತು. ಪ್ರಕರಣದ ಬೆನ್ನು ಹತ್ತಿದಾಗ...

ಆ ಒಂಟಿ ಮಹಿಳೆಯ ಕೊಲೆ ಪ್ರಕರಣ ಸಂಬಂಧ ಹತ್ಯೆಯ ರೂವಾರಿ ಮಹಿಳೆ ಸೇರಿ 13 ಮಂದಿಯನ್ನು ಬಂಧಿಸಲಾಗಿದೆ. ಮಾರತ್‌ಹಳ್ಳಿಯ ಸವಿತಾ (28), ಎಲೆಕ್ಟ್ರಾನಿಕ್‌ ಸಿಟಿಯಲ್ಲಿರುವ ಈಕೆಯ ದೊಡ್ಡಪ್ಪನ ಮಗ ಅನಿಲ್ (29), ಕೃಷ್ಣನಗರದ ಬಸವ (22), ರವಿ (25), ಪ್ರಸನ್ನ (20), ಕೋರಮಂಗಲದ ಮನೋಜ್ (23), ಕೊಳಂದ ವಸು (20), ಮುರುಗ (19), ಸುಬ್ರಮಣಿ (20), ಬಸವಪುರದ ಮುರಳಿ (29), ವಿವೇಕ್‌ನಗರದ ಕಿಶನ್‌ಕುಮಾರ್ (20), ಕೈಕೊಂದ್ರಹಳ್ಳಿಯ ಸುನಿಲ್ (23), ಕಸವನಹಳ್ಳಿಯ ಶಂಕರ್ (24) ಎಂಬವರೇ ಬಂಧಿತ ಆರೋಪಿಗಳಾಗಿದ್ದು, ಸೀನ ಎಂಬಾತ ತಲೆಮರೆಸಿಕೊಂಡಿದ್ದಾನೆ.

ಸವಿತಾರ ಗಂಡ, ಬಾಷ್‌ ಕಂಪನಿಯ ನೌಕರ ರಮೇಶ್ ಎಂಬಾತ ಕೆ.ಆರ್. ಪುರಂ ಯರಯ್ಯನಪಾಳ್ಯದ ಕುಂಬಾರ ಬೀದಿಯಲ್ಲಿ ವನೀಸ್‌ ಬ್ಯೂಟಿ ಪಾರ್ಲರ್‌ ನಡೆಸುತ್ತಿದ್ದ ನಿರ್ಮಲಾ (42) ಜತೆ ಅಕ್ರಮ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಇದರಿಂದ ಕೆರಳಿದ ಸವಿತಾ, ನಿರ್ಮಲಾರನ್ನು ಕೊಲೆಮಾಡಲು ತನ್ನ ಸೋದರ ಸಂಬಂಧಿ ಅನಿಲನಿಗೆ ನಾಲ್ಕು ಲಕ್ಷ ರೂ. ಸುಪಾರಿ ನೀಡಿದ್ದರು ಎನ್ನಲಾಗಿದೆ. ಅನಿಲ ಕೊಲೆ ಆರೋಪಿಗಳಿಗೆ ಎರಡೂವರೆ ಲಕ್ಷ ರೂ. ಸುಪಾರಿ ನೀಡಿದ್ದ.

ಹತ್ಯೆ ಮಾಡಿದ್ದು ಹೀಗೆ: ಆರೋಪಿ ಅನಿಲ್‌ ಕುಮಾರ್‌ ಸುಪಾರಿ ಹಂತಕರೊಂದಿಗೆ ಫೆ. 27 ರಂದು ಮಧ್ಯಾಹ್ನ 2 ಗಂಟೆಗೆ ಶ್ರೀನಿವಾಸರೆಡ್ಡಿ ಲೇಔಟ್‌ನಲ್ಲಿರುವ ಮನೆಗೆ ನುಗ್ಗಿ ನಿರ್ಮಲಾಳ ತಲೆಗೆ ರಾಡ್‌ ಮತ್ತು ದೊಣ್ಣೆಯಿಂದ ಹೊಡೆದು ಹತ್ಯೆಗೈದು ಪರಾರಿಯಾಗಿದ್ದ. ನಿರ್ಮಲಾಳ ಕೊಲೆಯಾಗಿ ಒಂದು ವಾರದ ತನಕ ರಮೇಶ್‌ನಿಗೆ ಯಾವುದೇ ಮಾಹಿತಿ ಇರಲಿಲ್ಲ. ನಿರ್ಮಲಾ ಮತ್ತು ರಮೇಶ್‌ಗೆ ಸಂಬಂಧ ಇರುವ ಮಾಹಿತಿ ಕಲೆಹಾಕಿ ವಿಚಾರಣೆ ನಡೆಸಿದಾಗ ಆರೋಪಿ ಸವಿತಾ ಸುಪಾರಿ ನೀಡಿ ಹತ್ಯೆ ಮಾಡಿಸಿರುವುದು ಬೆಳಕಿಗೆ ಬಂದಿದೆ.

ಪೂರ್ವ ವಿಭಾಗ ಡಿಸಿಪಿ ಚಂದ್ರಶೇಖರ್‌ ಮಾರ್ಗದರ್ಶನದಲ್ಲಿ ಕೆ.ಆರ್‌.ಪುರಂ ಉಪವಿಭಾಗದ ಎಸಿಪಿ ನಾರಾಯಣಸ್ವಾಮಿ ನೇತೃತ್ವದಲ್ಲಿ ರಾಮಮೂರ್ತಿನಗರ ಪೊಲೀಸ್‌ ಠಾಣೆ ಇನ್ಸ್‌ಪೆಕ್ಟರ್‌ ಕೆ.ವಿ.ಶ್ರೀನಿವಾಸ್‌ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Friday, April 27, 2012

ದಿನಕ್ಕೆ ನಾಲ್ಕು ಬಾರಿ ಸೆಕ್ಸ್‌ ಬಯಕೆ !

ತಾನು 10 ವರ್ಷಗಳಲ್ಲಿ 70 ಜನರೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ್ದೇನೆ ಎಂದು ಸ್ವತಃ ತಪ್ಪೊಪ್ಪಿಕೊಂಡಿರುವ ಬ್ರಿಟಿಷ್‌ ಮಹಿಳೆಯೊಬ್ಬಳು ಲೈಂಗಿಕ ವ್ಯಸನಕ್ಕೊಳಗಾಗಿದ್ದ ತಾನು ಪ್ರತಿ ದಿನಕ್ಕೆ ನಾಲ್ಕು ಬಾರಿ ಲೈಂಗಿಕ ಸಂಪರ್ಕ ಬಯಸುತ್ತಿದ್ದೆ ಎಂದು ಹೇಳಿದ್ದಾಳೆ.

ಮಾಜಿ ಬ್ಯೂಟಿಷಿಯನ್‌ 27 ವರ್ಷದ ಶಾನನ್‌ ಫ್ಲೈನ್‌ ತಾನು ಲೈಂಗಿಕ ವ್ಯಸನಕ್ಕೊಳಗಾಗಿದ್ದು, ತನ್ನ ಬಾಯ್‌ ಫ್ರೆಂಡ್‌ ಮೇಲೆ ಬೆಡ್‌ ರೂಂನಲ್ಲಿ ಲೈಂಗಿಕ ದೌರ್ಜನ್ಯ ನಡೆಸಿದ್ದಕ್ಕೆ ಕಳೆದ ವರ್ಷ ಬಹಿರಂಗವಾಗಿ ತಪ್ಪೊಪ್ಪಿಕೊಂಡಿದ್ದಳು ಎಂದು ಡೈಲಿ ಮೇಲ್‌ ಪತ್ರಿಕೆ ವರದಿ ಮಾಡಿತ್ತು.

ಮದ್ಯ ಮತ್ತು ಲೈಂಗಿಕತೆ ವಿರುದ್ಧದ ತನ್ನ ಹೋರಾಟ ಜೀವನವನ್ನೇ ಬದಲಿಸಿತು ಎಂದು ಫ್ಲೈನ್‌ ತಿಳಿಸಿದ್ದಾಳೆ.

ನನ್ನ ಲೈಂಗಿಕ ವ್ಯಸನವು ಮದ್ಯಪಾನಕ್ಕೆ ಸಂಬಂಧಿಸಿತ್ತು. ನಾನು ಮದ್ಯಪಾನ ಮಾಡಿದಾಗ ಲೈಂಗಿಕ ಸಂಪರ್ಕ ನಡೆಸುವ ಬಯಕೆಯುಂಟಾಗುತ್ತಿತ್ತು ಎಂದು ಹೇಳಿರುವ ಆಕೆ ಈಗ ಅದು ಕಡಿಮೆಯಾಗಿದೆ ಎಂದು ತಿಳಿಸಿದ್ದಾಳೆ.

ಮದ್ಯಪಾನದಿಂದ ಉಂಟಾಗುವ ವ್ಯಸನದಿಂದ ಮುಕ್ತವಾಗಲು ತಾನು ವಾರಕ್ಕೆ ಮೂರು ಬಾರಿ ಮಾತ್ರೆಗಳನ್ನು ತೆಗೆದುಕೊಳ್ಳುತ್ತೇನೆ. ವಾರಕ್ಕೊಂದು ಬಾರಿ ಆಪ್ತ ಸಮಾಲೋಚನೆ (ಕೌನ್ಸೆಲಿಂಗ್‌)ಗೆ ಹೋಗುತ್ತೇನೆ. ನಾನು ಹೊಸ ಗೆಳೆಯನನ್ನು ಆಯ್ಕೆ ಮಾಡಿಕೊಂಡಿಲ್ಲ. ನಾನು ಗೆಳೆಯನ ಜೊತೆ ಇರುವಾಗ ನಾನೊಬ್ಬಳು ಹುಡುಗಿ ಎಂದು ಅಂದುಕೊಳ್ಳುವುದೇ ಇಲ್ಲ, ನಾನು ಪುರುಷರಿಂದ ದೂರ ಉಳಿದಿದ್ದೇನೆ ಎಂದು ಆಕೆ ವಿವರಿಸಿದ್ದಾಳೆ.

ತನ್ನ ಲೈಂಗಿಕ ವ್ಯಸನದ ಬಗ್ಗೆ ಮಾತನಾಡಿದ ಫ್ಲೈನ್‌, ಖ್ಯಾತ ಗಾಲ್ಫ್‌ ಆಟಗಾರ ಟೈಗರ್‌ ವುಡ್ಸ್‌ ಲೈಂಗಿಕ ಹಗರಣ ಬಹಿರಂಗವಾದ ನಂತರ ತನಗಿದ್ದ ಲೈಂಗಿಕ ವ್ಯಸನದ ಬಗ್ಗೆ ಬಹಿರಂಗಪಡಿಸಿದ್ದಾಗಿ ತಿಳಿಸಿದ್ದಾಳೆ.

ತನ್ನ ಮಾಜಿ ಪ್ರಿಯಕರನೊಂದಿಗೆ ಬೆಳಗ್ಗೆ ಲೈಂಗಿಕ ಸಂಪರ್ಕ ನಡೆಸಿದ ನಂತರವೂ ಆತ ರಾತ್ರಿ ವೇಳೆ ಮನೆಗೆ ಬಂದಾಗ ಕಾಮತೃಷೆ ಅತ್ಯಧಿಕವಾಗಿರುತ್ತಿತ್ತು. ತನಗೆ ತೃಪ್ತಿಯೇ ಆಗುತ್ತಿರಲಿಲ್ಲ, ಲೈಂಗಿಕ ಸಂಪರ್ಕಕಕ್ಕೆ ನಿರಾಕರಿಸಿದ್ದ ಬಾಯ್‌ ಫ್ರೆಂಡ್‌ ಮೇಲೆ ಕುಪಿತಳಾಗಿ ಮೊಬೈಲ್‌ ಫೋನ್‌ ಎಸೆದಿದ್ದಾಗಿ ತಿಳಿಸಿದ್ದಾಳೆ.

ನಾನು ಯಾವಾಗಲೂ ಕ್ರೂರಿಯಾಗಿರುತ್ತಿರಲಿಲ್ಲ, ಆದರೆ ಲೈಂಗಿಕ ಬಯಕೆಯಿಂದಾಗಿ ಈ ರೀತಿ ಆಗುತ್ತಿತ್ತು ಎಂದು ತಿಳಿಸಿದ್ದಾಳೆ. ಪ್ರತಿ ದಿನದ ಪ್ರತಿ ಗಂಟೆಯೂ ಲೈಂಗಿಕತೆಯ ಬಗ್ಗೆ ಚಿಂತಿಸುತ್ತಿದ್ದೆ ಎಂದು ಆಕೆ ತಿಳಿಸಿದ್ದಾಳೆ.

Saturday, March 24, 2012

ಬಿಯರ್ ಸೇವನೆ ಹೃದಯಕ್ಕೆ ಒಳ್ಳೆಯದು !

ದ್ಯಪಾನ ಆರೋಗ್ಯಕ್ಕೆ ಹಾನಿಕರ ಎಂದೇ ಎಲ್ಲರೂ ಭಾವಿಸಿದ್ದಾರೆ. ಆದರೆ ಬಿಯರ್‌ ಸೇವನೆಯಿಂದ ಹೃದಯಕ್ಕೆ ಪೂರಕವಾಗಿದೆ ಎಂದು ಸಂಶೋಧನೆಯಿಂದ ಸಾಬೀತಾಗಿದೆ.

ಬಿಯರ್‌ ಕೊಬ್ಬಿನಾಂಶದಿಂದ ಮುಕ್ತವಾಗಿದ್ದು ಪ್ರೋಟೀನ್‌ ಒಳಗೊಂಡಿರುವ ಬಿಯರ್‌ ಸೇವನೆಯಿಂದ ಕಾರ್ಬೋ ಹೈಡ್ರೇಟ್‌, ಪೊಟ್ಯಾಶಿಯಂ, ಮ್ಯಾಗ್ನೀಶಿಯಂ ಹಾಗೂ ಬಿ ವಿಟಮಿನ್‌ ಹಾಗೂ ಫೋಲಿಕ್‌ ಆಸಿಡ್‌ ದೊರೆಯುತ್ತದೆ ಹಾಗೂ ಅಮಿನೋ ಆಸಿಡ್‌ ಪ್ರಮಾಣ ಕಡಿಮೆಯಾಗುವ ಮೂಲಕ ಹೃದಯ ಬೇನೆ ಸಮಸ್ಯೆಗೆ ಕಡಿವಾಣ ಹಾಕಲಿದೆ ಎಂದು ಹೃದ್ರೋಗ ತಜ್ಞ ಡಾ. ಹಸ್‌ಮುಖ್‌ ರಾವತ್‌ ತಿಳಿಸಿದ್ದಾರೆ.
ರೆಡ್‌ವೈನ್‌ ಮಾದರಿಯಲ್ಲೇ ಬಿಯರ್‌ನಲ್ಲಿಯೂ ತೈಲ ಮತ್ತು ಕೊಬ್ಬಿನಂಶ ರಕ್ಷಕಗಳಿರುತ್ತವೆ. ಬಾರ್ಲಿ ಅಥವಾ ಮಾಲ್ಟನ್ನು ಬಿಸಿಮಾಡಿದಾಗ ಬಿಯರ್‌ಗೆ ಬಣ್ಣ ಮತ್ತು ವಾಸನೆಯನ್ನು ನೀಡುತ್ತದೆ ಎಂದು ಡಾ. ಹಸ್‌ಮುಖ್‌ ತಿಳಿಸಿದ್ದಾರೆ. ಬಿಯರ್‌ ಅಥವಾ ಕೆಂಪು ವೈನ್‌ನಲ್ಲಿರುವ ಅಂಶಗಳ ಕುರಿತು ನಡೆದ ಸರಣಿ ಸಂಶೋಧನೆಯಲ್ಲಿರುವ ಪೋಲಿಫೋನಿಕ್‌ ಕಾಂಪೋಂಡ್‌ಗಳು ಹೃದಯಾಘಾತವನ್ನು ತಡೆಗಟ್ಟುತ್ತವೆ ಎಂದು ಡಾ. ಹಸ್‌ಮುಖ್‌ ತಿಳಿಸಿದ್ದಾರೆ.
ಕೃಪೆ : ವೆಬ್ ದುನಿಯಾ