ಬೆಂಗಳೂರು: ಬಾಲಕನನ್ನು ಗೃಹ ಬಂಧನದಲ್ಲಿಟ್ಟು ಲಿಂಗಪರಿವರ್ತನೆಗೆ ಪ್ರಯತ್ನಿಸಿದ್ದ ಹಿಜಡಾಗಳ ಮನೆ ಮೇಲೆ ಸಾರ್ವಜನಿಕರು ಕಲ್ಲು ತೂರಾಟ ನಡೆಸಿರುವ ಘಟನೆ ಆರ್‌ಪಿಸಿ ಲೇಔಟ್‌ನಲ್ಲಿ ಸೋಮವಾರ ರಾತ್ರಿ ನಡೆದಿದೆ.
ಸಂಜೆ ಮನೆಯ ಬಳಿ ಆಟವಾಡುತ್ತಿದ್ದ ಬಾಲಕನನ್ನು ಹಿಜಡಾಗಳು ಬಲವಂತವಾಗಿ ಎಳೆದೊಯ್ದು ಮನೆಯೊಂದರಲ್ಲಿ ಕೂಡಿ ಹಾಕಿದ್ದರು. ಅಲ್ಲದೇ ಬಾಲಕನನ್ನು ನಗ್ನಗೊಳಿಸಿ ಆ ದೃಶ್ಯಗಳನ್ನು ಮೊಬೈಲ್ ನಲ್ಲಿ ಚಿತ್ರೀಕರಿಸಿಕೊಂಡು ಲಿಂಗ ಪರಿವರ್ತನೆಗೆ ಪ್ರಯತ್ನ ನಡೆಸುತ್ತಿದ್ದರು. ಬಾಲಕನ ಅರಚಾಟದಿಂದ ಸ್ಥಳಕ್ಕೆ ಹೋಗಿ ಕೃತ್ಯದಿಂದ ರಕ್ಷಿಸಲಾಯಿತು ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.
15 ದಿನಗಳ ಹಿಂದೆ ಇದೇ ಹಿಜಡಾಗಳು ಬಾಲಕನೊಬ್ಬನ ಲಿಂಗಪರಿವರ್ತನೆ ಮಾಡಿದ್ದರು. ಮಾನವೀಯತೆಯ ದೃಷ್ಟಿಯಿಂದ ನಾವು ಸುಮ್ಮನಿದ್ದೇವೆ ಆದರೆ ಪ್ರತಿನಿತ್ಯ ರಸ್ತೆಯಲ್ಲಿ ಅಸಭ್ಯವಾಗಿ ವರ್ತಿಸುತ್ತಾ ಪುರುಷರನ್ನು ಹಣಕ್ಕಾಗಿ ಪೀಡಿಸುತ್ತಿದ್ದಾರೆ. ಆದ್ದರಿಂದ ಕೂಡಲೇ ಮನೆಯನ್ನು ಖಾಲಿ ಮಾಡಿಸಿ ಎಂದು ಮನೆ ಮಾಲೀಕರನ್ನು ಒತ್ತಾಯಿಸಿದರು. `ಮಲ್ಲೇಶ್ವರದ ನಿವಾಸಿಯಾದ ಬಾಲಕ ಗೃಹಪ್ರವೇಶದ ಸಲುವಾಗಿ ವಿಜಯನಗರದಲ್ಲಿರುವ ಮಾವನ ಮನೆಗೆ ಬಂದಿದ್ದ. ಈ ಪ್ರದೇಶದಲ್ಲಿ ಹಲವು ಹಿಜಡಾಗಳಿದ್ದು, ಸಂಜೆ ಬಾಲಕ ಆಟವಾಡುತ್ತಿದ್ದಾಗ ಅವನನ್ನು ಕರೆದು ಅಸಭ್ಯವಾಗಿ ವರ್ತಿಸಿದ್ದಾರೆ. ಘಟನೆಯಿಂದ ಆವೇಶಗೊಂಡ ಸ್ಥಳೀಯರು ಅವರ ಮನೆ ಮೇಲೆ ಕಲ್ಲು ತೂರಾಡಿದ್ದಾರೆ. ಯಾರಾದರು ದೂರು ನೀಡಿದರೆ ಆರೋಪಿಗಳನ್ನು ಬಂಧಿಸುತ್ತೇವೆ` ಎಂದು ಪೊಲೀಸರು ತಿಳಿಸಿದರು.

ಕೃಪೆ : ಪ್ರಜಾವಾಣಿ
No comments:
Post a Comment