ಕಿಂಗ್‌ಸ್ಟನ್ (ಜಮೈಕಾ) (ಎಪಿ): ಜಮೈಕಾದ ಪಶ್ಚಿಮ ಭಾಗದಲ್ಲಿರುವ ನೆಗ್ರಿಲ್ ದ್ವೀಪದ ಕಡಲ ಕಿನಾರೆಯಲ್ಲಿ ವಸ್ತ್ರಗಳ ಬಂಧನದಿಂದ ಮುಕ್ತರಾದ ಒಂಬತ್ತು ಜೋಡಿಗಳು ಸೂರ್ಯ ಸಾಕ್ಷಿಯಾಗಿ ಬುಧವಾರ ವಿವಾಹ ಬಂಧನಕ್ಕೆ ಒಳಗಾದರು.
`ಪ್ರೇಮಿಗಳ ದಿನ`ದ ಹಿನ್ನೆಲೆಯಲ್ಲಿ ಯುವ ಸಮೂಹವನ್ನು ಸೆಳೆಯಲು ಇಲ್ಲಿನ ರೆಸಾರ್ಟ್‌ಗಳು `ನಗ್ನ ಮದುವೆ` ಸ್ಪರ್ಧೆಯನ್ನು ಆಯೋಜಿಸಿದ್ದವು. ಜೊತೆಗೆ ನಾಲ್ಕು ರಾತ್ರಿ ಉಚಿತ ವಾಸ್ತವ್ಯದ ಕೊಡುಗೆ ನೀಡುವುದಾಗಿಯೂ ಪ್ರಚಾರ ಮಾಡಿದ್ದವು.
ಈ ಪ್ರಚಾರಕ್ಕೆ ಮನಸೋತ ಅಮೆರಿಕ ಮತ್ತು ಕೆನಡಾದ ನೂರಕ್ಕೂ ಹೆಚ್ಚು ಜೋಡಿಗಳು ಇಲ್ಲಿಗೆ ಲಗ್ಗೆ ಇಟ್ಟವು. ಆದರೆ, 10 ಜೋಡಿಗಳನ್ನು ಮಾತ್ರ ಈ ಸ್ಪರ್ಧೆಗೆ ಆಯ್ಕೆ ಮಾಡಲಾಯಿತು.
ನಿಯಮ ಉಲ್ಲಂಘಿಸಿದ ಕಾರಣಕ್ಕೆ ಒಂದು ಜೋಡಿ ಮುಹೂರ್ತದ ಹಿಂದಿನ ದಿನ ಸ್ಪರ್ಧೆಯಿಂದ ಹಿಂದೆ ಸರಿಯಬೇಕಾಯಿತು.
`ಇದೊಂದು ಸುಂದರ ಅನುಭವ, ಯಕ್ಷಲೋಕದಂತೆಯೇ ಇತ್ತು` ಎಂಬುದು ನ್ಯೂಜೆರ್ಸಿಯಿಂದ ಆಗಮಿಸಿದ್ದ 39ರ ಹರೆಯದ ಮಿಲ್ಲಿ ಸಾಲ್ಸ್ ಅವರ ಅಭಿಮತ.

ಕೃಪೆ : ಪ್ರಜಾವಾಣಿ
No comments:
Post a Comment