ಕೇವಲ ನಾಲ್ಕೂವರೆ ಅಡಿ ಎತ್ತರ ಇರುವ ಹುಡುಗಿಯೂ 6 ಅಡಿ ಎತ್ತರದ ಸುಂದರ ಹಾಗೂ ದೃಢಕಾಯ ವರನನ್ನೇ ವರಿಸಲು ಇಚ್ಛಿಸುತ್ತಾಳೆ. ಇದಕ್ಕೆ ಕಾರಣ ಏನು ಗೊತ್ತೆ? ಎತ್ತರ ಇರುವವರು ಕುಬ್ಜರಿಗಿಂತಲೂ ಹೆಚ್ಚು ಕಾಲ ಬದುಕುತ್ತಾರೆ ಎನ್ನುವ ನಂಬಿಕೆ. ಹಾಗಾದರೆ ಆಳೆತ್ತರದ ವ್ಯಕ್ತಿಗಳು ದೀರ್ಘಾಯುಗಳೆ?
ಹೌದು ಎನ್ನುತ್ತದೆ ಇತ್ತೀಚಿನ ಒಂದು ಅಧ್ಯಯನ. ಈವರೆಗೆ ಹುಡುಗಿಗಿಂತ ಹುಡುಗ ಎತ್ತರ ಇರಬೇಕು ಎಂಬುದು ಕೇವಲ ಸಂಪ್ರದಾವಾಗಿತ್ತು. ಎತ್ತರದ ವ್ಯಕ್ತಿಗಳು ದೀರ್ಘಾಯುಗಳು ಎಂಬ ನಂಬಿಕೆ ಇತ್ತು. ಈ ನಂಬಿಕೆಗೆ ಇತ್ತೀಚೆಗೆ ಬ್ರಿಟನ್‌ನಲ್ಲಿ ನಡೆದ ಅಧ್ಯಯನ ವೈಜ್ಞಾನಿಕ ಪುಷ್ಟಿ ನೀಡಿದೆ ಎಂದು ಕನ್ನಡದ ದಿನಪತ್ರಿಕೆ ವರದಿ ಮಾಡಿದೆ.
ಎಲ್ಲ ಹುಡುಗಿಯರೂ ಎತ್ತರದ ಬಾಳ ಸಂಗಾತಿಯನ್ನೇ ಬಯಸುವುದೇಕೆ ಎಂಬ ಕುತೂಹಲದಿಂದ ಅಧ್ಯಯನ ನಡೆಸಿದ ಬ್ರಿಟನ್‌ನ ಬ್ರಿಸ್ಟಾಲ್ ವಿಶ್ವ ವಿದ್ಯಾಲಯದ ಸಮಾಜ ವೈದ್ಯಕೀಯ ವಿಭಾಗದ ಸಂಶೋಧಕ ಡಿ. ಗನ್‌ನೆಲ್ ಮಾನವನ ಎತ್ತರಕ್ಕೂ ಅವನ ಆಯುಷ್ಯಕ್ಕೂ ನೇರ ಸಂಬಂಧವಿದೆ ಎಂಬುದನ್ನು ಪ್ರಕಟಿಸಿದ್ದಾರೆ.
ಎತ್ತರ ಹಾಗೂ ದೀರ್ಘಾಯುಷ್ಯಕ್ಕೆ ನೇರ ಸಂಬಂಧ ಇದೆ ಎನ್ನುವುದು ಶತಮಾನಗಳಿಂದಲೂ ಕಂಡುಬಂದಿದೆ. ಶತಮಾನಗಳ ಹಿಂದೆ ಜರ್ನಲ್ ಆಫ್ ಎಪಿಡರ್ಮಿಯಾಲಜಿ ಅಂಡ್ ಕಮ್ಯೂನಿಟಿ ಹೆಲ್ತ್ ಮಾಡಿದ್ದ ವರದಿಯಲ್ಲಿ ಕುಬ್ಜತೆ ಅಲ್ಪಾವಧಿಯ ಸಂಕೇತ ಎಂದು ತಿಳಿಸಿತ್ತು ಎಂದೂ ಅವರು ಹೇಳಿದ್ದಾರೆ.
ಇದಕ್ಕಾಗಿ ಮೃತ ಮಾನವರ ಮೂಳೆಗಳ ಅಧ್ಯಯನ ನಡೆಸಿದ ಅವರು, ಕುಳ್ಳರಿಗಿಂತ ಎತ್ತರ ಇರುವವರು ಹೆಚ್ಚು ಕಾಲು ಬದುಕುತ್ತಾರೆ ಎಂಬ ನಿರ್ಣಯಕ್ಕೆ ಬಂದಿದ್ದಾರೆ. ಇದಕ್ಕಾಗಿ ಅವರು ಈಶಾನ್ಯ ಇಂಗ್ಲೆಂಡ್‌ನಲ್ಲಿ ಒಟ್ಟು 490 ಜನ ವಯಸ್ಕ ಶವಗಳ ಮೂಳೆಗಳನ್ನು ಭೂಮಿಯಿಂದ ಅಗೆದು ತೆಗೆದು ಅಧ್ಯಯನ ಮಾಡಿದ್ದಾರೆ.
ಭೂಮಿಯಲ್ಲಿ ದೊರಕಿದ ಮೂಳೆಗಳ ಉದ್ದವನ್ನು ಮಿಲಿ ಮೀಟರ್‌ಗಳಲ್ಲಿ ಅಳೆದು, ಮನುಷ್ಯನ ಶರೀರ ರಚನಾಶಾಸ್ತ್ರದ ಪ್ರಕಾರ ಅವರು ಮರಣ ಹೊಂದಿದ ವಯಸ್ಸು ಮತ್ತು ಲಿಂಗವನ್ನು ಗುರುತಿಸಿ ಅಧ್ಯಯನ ನಡೆಸಿದ್ದಾರೆ. ಈ ಅಧ್ಯಯನದ ಒಟ್ಟು ಸಾರಾಂಶ ಇಷ್ಟು - ಎತ್ತರ ಇರುವವರು ಶೇಕಡಾವಾರು ಲೆಕ್ಕದಲ್ಲಿ ಕುಳ್ಳರಿಗಿಂತ ಹೆಚ್ಚು ಕಾಲ ಬದುಕುತ್ತಾರೆ. ನೀವು ಕುಳ್ಳರಾದರೆ ಚಿಂತಿಸುವ ಅಗತ್ಯ ಇಲ್ಲ. ಆ ಶೇಕಡಾವಾರು ಲೆಕ್ಕಾಚಾರದಲ್ಲಿ ನೀವಿಲ್ಲ ಎಂದು ಕೊಂಡು ಆನಂದವಾಗಿರಿ. ಆನಂದವಾಗಿರುವ ವ್ಯಕ್ತಿಯೂ ಹೆಚ್ಚು ಕಾಲ ಬದುಕುತ್ತಾರೆ ಎನ್ನುವುದು ಮತ್ತೊಂದು ನಂಬಿಕೆ.

ಕೃಪೆ : ಒನ್ ಇಂಡಿಯಾ
No comments:
Post a Comment